ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Maharashtra Horror: ಚಲಿಸುತ್ತಿದ್ದ ಬಸ್‌ನಲ್ಲೇ ಹೆತ್ತ ಮಹಿಳೆ ಮಗುವನ್ನು ಕಿಟಿಕಿ ಮೂಲಕ ಎಸೆದು ಕೊಂದಿದ್ದೇಕೆ?

ಮಹಾರಾಷ್ಟ್ರದಲ್ಲಿ ಇಡೀ ದೇಶವೇ ಬೆಚ್ಚಿ ಬೀಳುವ ಘಟನೆಯೊಂದು ನಡೆದಿದೆ. ಚಲಿಸುವ ಬಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ ಬಳಿಕ ಅದನ್ನು ಕಿಟಕಿಯಿಂದ ಹೊರಗೆಸೆದು ಕೊಂದು ಹಾಕಿದ್ದಾಳೆ. ತನ್ನ ಸಂಗಾತಿ ಅಲ್ತಫ್‌ ಶೇಖ್‌ನೊಂದಿಗೆ ಪ್ರಯಾಣಿಸುತ್ತಿದ್ದ ರಿತಿಕಾ ಧೇರೆ ಈ ಕೃತ್ಯ ಎಸಗಿದ್ದಾಳೆ.

ಬಸ್‌ನಲ್ಲಿ ಹೆತ್ತ ಮಹಿಳೆ ಮಗುವನ್ನು ಕೊಂದಿದ್ದೇಕೆ?

ಸಾಂದರ್ಭಿಕ ಚಿತ್ರ.

Profile Ramesh B Jul 16, 2025 9:15 PM

ಮುಂಬೈ: ಮಹಾರಾಷ್ಟ್ರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಚಲಿಸುತ್ತಿದ್ದ ಬಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ ಬಳಿಕ ಮಗುವನ್ನು ಪತಿಯ ಸಹಾಯದಿಂದ ಕಿಟಕಿಯಿಂದ ಹೊರಗೆಸೆದಿದ್ದಾಳೆ. ರಸ್ತೆಗೆ ಬಿದ್ದ ನವಜಾತ ಶಿಶು ಸ್ಥಳದಲ್ಲೇ ಸಾವನ್ನಪ್ಪಿದೆ (Crime News). ಪರ್ಭಾನಿಯಲ್ಲಿ ಈ ಘಟನೆ ನಡೆದಿದೆ (Maharashtra Horror). ಚಲಿಸುತ್ತಿದ್ದ ಸ್ಲೀಪರ್‌ ಕೋಚ್‌ ಬಸ್‌ನಲ್ಲಿ ಹೆತ್ತ ಬಳಿಕ 19 ವರ್ಷದ ಮಹಿಳೆ ಮಗುವನ್ನು ನಿರ್ದಾಕ್ಷಿಣ್ಯವಾಗಿ ಹೊರಗೆಸೆದಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಜು. 15ರ ಬೆಳಗ್ಗೆ 6:30ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಬಸ್‌ ಪಥ್ರಿ-ಸೇಲು ರಸ್ತೆಯಲ್ಲಿ ಸಂಚರಿಸುತ್ತಿತ್ತು. ʼʼಮಹಿಳೆ ಮತ್ತು ಆಕೆಯ ಸಂಗಾತಿ ಸಂತ್‌ ಪ್ರಯಾಗ್‌ ಟ್ರಾವೆಲ್ಸ್‌ನ ಸ್ಲೀಪರ್‌ ಕೋಚ್‌ ಬಸ್‌ನಲ್ಲಿ ಪುಣೆಯಿಂದ ಪರ್ಭಾನಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಹಿಳೆಯನ್ನು ರಿತಿಕಾ ಧೇರೆ ಮತ್ತು ಆಕೆಯ ಸಂಗಾತಿಯನ್ನು ಅಲ್ತಫ್‌ ಶೇಖ್‌ ಎಂದು ಗುರುತಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Mumbai Crime: 4 ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂದು ಸಮುದ್ರಕ್ಕೆ ಎಸೆದ ಪರಮಪಾಪಿ

ಘಟನೆ ವಿವರ

ತುಂಬು ಗರ್ಭಿಣಿಯಾಗಿದ್ದ ರಿತಿಕಾ ತನ್ನ ಸಂಗಾತಿ ಅಲ್ತಫ್‌ ಶೇಖ್‌ನೊಂದಿಗೆ ಬಸ್‌ ಹತ್ತಿದ್ದಳು. ಬಸ್‌ ಚಲಿಸುತ್ತಿದ್ದಂತೆ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಬಳಿಕ ಬಸ್‌ನಲ್ಲೇ ಮಗುವಿಗೆ ಜನ್ಮ ನೀಡಿದಳು. ಅದೇನಾಯ್ತೊ ಗೊತ್ತಿಲ್ಲ ಸ್ವಲ್ಪ ಹೊತ್ತಿನಲ್ಲೇ ಈ ಜೋಡಿ ಬಟ್ಟೆಯಲ್ಲಿ ಸುತ್ತಿ ಮಗುವನ್ನು ಕಿಟಿಕಿ ಮೂಲಕ ಹೊರಗೆಸೆಯಿತು. ಚಾಲಕ ಮತ್ತು ಸಹ ಪ್ರಯಾಣಿಕರು ಸಂಶಯಗೊಡು ಕೇಳಿದ್ದಕ್ಕೆ ಮಹಿಳೆ, ತಾನು ವಾಂತಿ ಮಾಡಿಕೊಂಡಿದ್ದಾಗಿ ತಿಳಿಸಿದ್ದಳು.

ಬಸ್‌ನ ಹಿಂದೆ ಬರುತ್ತಿದ್ದ ಬೈಕ್‌ ಸವಾರನಿಗೆ ದಂಪತಿ ಕಿಟಕಿಯಿಂದ ಏನೋ ಎಸೆದಿರುವುದು ಕಾಣಿಸಿತು. ಹೀಗಾಗಿ ಈತ ಬೈಕ್‌ ನಿಲ್ಲಿಸಿ ಪರಿಶೀಲನೆ ನಡೆಸಿದ ವೇಳೆ ಬಟ್ಟೆಯಲ್ಲಿ ಸುತ್ತಿದ ನವಜಾತ ಶಿಶು ಕಂಡು ಬಂದಿತ್ತು. ಕೂಡಲೇ ಆತ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಈ ಐಷಾರಾಮಿ ಬಸ್‌ ಅನ್ನು ತಡೆದು ನಿಲ್ಲಿಸಿದರು. ಬಳಿಕ ಪ್ರಾಥಮಿಕ ವಿಚಾರಣೆ ನಡೆಸಿ ಜೋಡಿಯನ್ನು ವಶಕ್ಕೆ ಪಡೆದುಕೊಂಡರು. ಮಗುವನ್ನು ತಮ್ಮಿಂದ ಸಾಕಲು ಸಾಧ್ಯವಿಲ್ಲವೆಂದು ಹೊರಗೆಸೆದಿದ್ದಾಗಿ ಜೋಡಿ ತಪ್ಪೊಪ್ಪಿಕೊಂಡಿದೆ. ಚಲಿಸುವ ಬಸ್‌ನಿಂದ ಎಸೆಯಲ್ಪಟ್ಟ ಶಿಶು ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿ-ಪತ್ನಿ ಎಂದು ಹೇಳಿಕೊಂಡಿರುವ ಈ ಜೋಡಿ ಕಳೆದ 1.5 ವರ್ಷದಿಂದ ಪುಣೆಯಲ್ಲಿ ವಾಸಿಸುತ್ತಿದೆಯಂತೆ. ಅದಾಗ್ಯೂ ಇವರು ಮದುವೆಯಾಗಿರುವ ಬಗ್ಗೆ ಸಾಕ್ಷಿ, ಪುರಾವೆ ಒದಗಿಸಲು ವಿಫಲವಾಗಿದ್ದಾರೆ. ಅಕ್ರಮ ಸಂಬಂಧಕ್ಕೆ ಹುಟ್ಟಿರುವ ಮಗು ಇದಾಗಿರಬಹುದು ಎನ್ನುವ ಸಂಶಯವೂ ವ್ಯಕ್ತವಾಗಿದೆ. ಮಹಿಳೆಯ ಆರೋಗ್ಯ ಪರೀಕ್ಷೆಗಾಗಿ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಇಬ್ಬರ ಮೇಲೂ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ʼʼಈ ಜೋಡಿಯ ನಡವಳಿಕೆ ಸಂಶಯಾಸ್ಪದವಾಗಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಈಗಾಗಲೇ ತನಿಖೆ ಆರಂಭವಾಗಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ.