ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Basava Jayanti: ಮೊದಲ ಬಾರಿಗೆ ಸಂಸತ್‌ ಆವರಣದಲ್ಲಿ ಬಸವ ಜಯಂತಿ ಆಚರಣೆ

Basava Jayanti in Parliament: ಸಂಸತ್‌ ಭವನದ ಎದುರು ಮೊದಲ ಬಾರಿಗೆ ಬಸವ ಜಯಂತಿಯನ್ನು ಆಚರಿಸಲಾಗಿದೆ. ಕೇಂದ್ರ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಿದ್ದು, ನೂರಾರು ಅಭಿಮಾನಿಗಳು ಭಾಗಿಯಾಗಿದ್ದಾರೆ. ಸಂಸತ್ ಭವನದ ಎದುರಿರುವ ಬಸವ ಪ್ರತಿಮೆ ಬಳಿ ಕಾರ್ಯಕ್ರಮ ನಡೆದಿದೆ.

ಸಂಸತ್‌ ಆವರಣದಲ್ಲಿ ಬಸವ ಜಯಂತಿ ಆಚರಣೆ

Profile Rakshita Karkera Apr 30, 2025 10:23 AM

ನವದೆಹಲಿ: ಇಂದು ನಾಡಿನೆಲ್ಲೆಡೆ ಬಸವ ಜಯಂತಿ(Basava Jayanti) ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮೊಟ್ಟಮೊದಲ ಬಾರಿಗೆ ಸಂಸತ್ ಆವರಣದಲ್ಲಿ ಬಸವ ಜಯಂತಿ ಆಚರಣೆಗೊಂಡಿದೆ. ಕೇಂದ್ರ ಸಚಿವ ವಿ. ಸೋಮಣ್ಣ(Minister V.Somanna) ನೇತೃತ್ವದಲ್ಲಿ ಬಸವ ಜಯಂತಿ ಕಾರ್ಯಕ್ರಮ ನೆರವೇರಿದೆ. ಸಂಸತ್ ಭವನದ ಎದುರಿರುವ ಬಸವ ಪ್ರತಿಮೆ ಬಳಿ ಕಾರ್ಯಕ್ರಮ ನಡೆದಿದ್ದು, ಬಸವಣ್ಣನವರ ನೂರಾರು ಅಭಿಮಾನಿಗಳು ಭಾಗಿಯಾಗಿದ್ದಾರೆ. ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಕಿರಣ್ ರಿಜಿಜು, ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಸಂಸತ್ತಿನಲ್ಲಿ ಗುರು ಬಸವೇಶ್ವರರಿಗೆ ಪುಷ್ಪ ನಮನ ಸಲ್ಲಿಸಿದರು.

basava

ಕೆಲವು ದಿನಗಳ ಹಿಂದೆಯಷ್ಟೇ ತುಮಕೂರಿನಲ್ಲಿ ಕೇಂದ್ರ ರೈಲ್ವೇ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದರು. ರಾಷ್ಟ್ರ ರಾಜಧಾನಿಯಲ್ಲಿ ಬಸವಣ್ಣನವರ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದಿದ್ದರು.

ಬಸವ ಜಯಂತಿ ಆಚರಣೆಯ ವಿಡಿಯೊ ಇಲ್ಲಿದೆ



ಶುಭಕೋರಿದ ಪ್ರಧಾನಿ ಮೋದಿ

ಇನ್ನು ಬಸವಜಯಂತಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಬಸವ ಜಯಂತಿಯ ಶುಭ ಸಂದರ್ಭದಲ್ಲಿ, ಜಗದ್ಗುರು ಬಸವೇಶ್ವರರ ಆಳವಾದ ಜ್ಞಾನವನ್ನು ನಾವು ಸ್ಮರಿಸುತ್ತೇವೆ. ಸಮಾಜಕ್ಕಾಗಿ ಅವರ ದೃಷ್ಟಿಕೋನ ಮತ್ತು ವಂಚಿತರನ್ನು ಮೇಲೆತ್ತಲು ಅವರ ಅವಿಶ್ರಾಂತ ಪ್ರಯತ್ನಗಳು ನಮಗೆ ಸದಾ ಮಾರ್ಗದರ್ಶನ ನೀಡುತ್ತಿರುತ್ತವೆ ಎಂದಿದ್ದಾರೆ. ಈ ಪೋಸ್ಟ್‌ ಜೊತೆಗೆ ವಿಡಿಯೊವೊಂದನ್ನು ಹಂಚಿಕೊಂಡು ಸಮಾಜಕ್ಕೆ ಬಸವಣ್ಣನವರ ಕೊಡುಗೆಯನ್ನು ಸ್ಮರಿಸಿದರು.



ಈ ಸುದ್ದಿಯನ್ನೂ ಓದು: Ravi Hunj Column: ಬಸವಣ್ಣ ಜಾಗತಿಕ ಸಾಂಸ್ಕೃತಿಕ ನಾಯಕನೇ ವಿನಾ, ಧರ್ಮಭಂಜಕ ಮತಸ್ಥಾಪಕನಲ್ಲ

ಮಲ್ಲಿಕಾರ್ಜುನ ಖರ್ಗೆ ಶುಭಾಶಯ

ಎಐಸಿಸಿ​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಬಸವ ಜಯಂತಿ ಶುಭಾಶಯ ತಿಳಿಸಿದ್ದು, ''ಮಾನವನ ಘನತೆಯನ್ನು ಅಪಮೌಲ್ಯಗೊಳಿಸುತ್ತಿದ್ದ ಸಂದರ್ಭದಲ್ಲಿ ಜಡ್ಡಾದ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿ, ಸರಳವಾದ ವಚನಗಳ ಮೂಲಕ ಸಾಮಾನ್ಯ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿ ಸಮಾನತೆಯ ಕ್ರಾಂತಿ ಬಿತ್ತಿದ್ದ ಬಸವೇಶ್ವರರು ಇಡೀ ವಿಶ್ವಕ್ಕೆ ಶ್ರೇಷ್ಠ ಕೊಡುಗೆ ನೀಡಿದರು. ಸಮಾಜ ಸುಧಾರಕ ಶ್ರೀ ಜಗಜ್ಯೋತಿ ಬಸವೇಶ್ವರರ ತತ್ವ, ಆದರ್ಶಗಳು ನಮ್ಮ ಬೆಳಕಾಗಲಿ. ಬಸವ ಜಯಂತಿ ಶುಭಾಶಯಗಳು'' ಎಂದು ತಿಳಿಸಿದ್ದಾರೆ.