ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗುರುಗಳನ್ನು ಆಧರಿಸುವುದು ಭಾರತೀಯ ಸಂಸ್ಕೃತಿಯ ರೂಪವಾಗಿದೆ : ಶಾಸಕ ಪ್ರದೀಪ್ ಈಶ್ವರ್

ನಗರದ ಕಂದವಾರ ಬಾಗಿಲು ಕೆ.ವಿ.ಕನ್ನಡ ಮಾಧ್ಯಮ ಶಾಲೆಯಲ್ಲಿ 44 ವರ್ಷಗಳ ಕಾಲ ಸಹಶಿಕ್ಷಕಿ ಯಾಗಿ ಸೇವೆ ಸಲ್ಲಿಸಿ ಸಾವಿರಾರು ಮಂದಿ ವಿದ್ಯಾರ್ಥಿಗ ಬಾಳಿಗೆ ಬೆಳಕು ತೋರಿದ ಪಿ.ವಿ.ವೀಣಾ ಅವರಿಗೆ ತಮ್ಮ ಏಕೈಕಪುತ್ರ ನಂದಕಿಶೋರ್ ನಿವೃತ್ತಿಯ ನಂತರದ ಬಾಳಿಗೆ ಶುಭಕೋರುವ ಸಲುವಾಗಿ ಅಭಿನಂದನ ಸಮಾರಂಭ ಏರ್ಪಡಿಸಿ ಏರ್ಪಡಿಸಿ ವಿದ್ಯಾರ್ಥಿಗಳು,ಶಿಕ್ಷಣ ತಜ್ಞರು, ಉದ್ಯೋಗ ನೀಡಿದ ಶಿಕ್ಷಣ ಸಂಸ್ಥೆಯ ಮಾಲಿಕರು,ತಮ್ಮ ಜತೆಗೆ ಕೆಲಸ ಮಾಡಿದ ಸಹೋದ್ಯೋಗಿಗಳು ಸೇರಿದಂತೆ ಅಪಾರ ಬಂಧುಬಳಗವನ್ನು ಆಹ್ವಾನಿಸಿ ಅವರ ಸಮ್ಮುಖದಲ್ಲಿ ಅಭಿನಂದನೆ ಸಲ್ಲಿಸಿ ತಾಯಿಯ ಋಣವನ್ನು ತೀರಿಸಿಕೊಳ್ಳುತ್ತಿರುವುದು ಸಂತೋಷ ತಂದಿದೆ

ಗುರುಗಳನ್ನು ಆಧರಿಸುವುದು ಭಾರತೀಯ ಸಂಸ್ಕೃತಿಯ ರೂಪವಾಗಿದೆ

ನನ್ನ ಬಾಲ್ಯದ ಸಹಪಾಠಿ ನಂದಕಿಶೋರ್ ತನ್ನ ತಾಯಿಗಾಗಿ ಏರ್ಪಡಿಸಿರುವ ಆತ್ಮೀಯ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ನನ್ನ ಸೌಭಾಗ್ಯ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

Profile Ashok Nayak Apr 30, 2025 12:05 PM

ಚಿಕ್ಕಬಳ್ಳಾಪುರ : ಗುರುಗಳನ್ನು ಪೂಜ್ಯಭಾವದಿಂದ ನೋಡಬೇಕು ಎಂಬುದನ್ನು ಬಾಲ್ಯದಿಂದಲೇ ಕಲಿಸುವ ಸಂಸ್ಕೃತಿ ಭಾರತೀಯ ಜೀವನಕ್ರಮದಲ್ಲಿ ಹಾಸುಹೊಕ್ಕಾಗಿದೆ. ನನ್ನ ಬಾಲ್ಯದ ಸಹಪಾಠಿ ನಂದಕಿಶೋರ್ ತನ್ನ ತಾಯಿಗಾಗಿ ಏರ್ಪಡಿಸಿರುವ ಆತ್ಮೀಯ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ನನ್ನ ಸೌಭಾಗ್ಯ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಜರ್ಮನಿಯಲ್ಲಿ ಉದ್ಯೋಗದಲ್ಲಿರುವ ಮಗ ನಂದಕಿಶೋರ್ ತಮ್ಮ ತಾಯಿಗಾಗಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.

ನಗರದ ಕಂದವಾರ ಬಾಗಿಲು ಕೆ.ವಿ.ಕನ್ನಡ ಮಾಧ್ಯಮ ಶಾಲೆಯಲ್ಲಿ 44 ವರ್ಷಗಳ ಕಾಲ ಸಹಶಿಕ್ಷಕಿ ಯಾಗಿ ಸೇವೆ ಸಲ್ಲಿಸಿ ಸಾವಿರಾರು ಮಂದಿ ವಿದ್ಯಾರ್ಥಿಗ ಬಾಳಿಗೆ ಬೆಳಕು ತೋರಿದ ಪಿ.ವಿ.ವೀಣಾ ಅವರಿಗೆ ತಮ್ಮ ಏಕೈಕಪುತ್ರ ನಂದಕಿಶೋರ್ ನಿವೃತ್ತಿಯ ನಂತರದ ಬಾಳಿಗೆ ಶುಭಕೋರುವ ಸಲುವಾಗಿ ಅಭಿನಂದನ ಸಮಾರಂಭ ಏರ್ಪಡಿಸಿ ಏರ್ಪಡಿಸಿ ವಿದ್ಯಾರ್ಥಿಗಳು,ಶಿಕ್ಷಣ ತಜ್ಞರು, ಉದ್ಯೋಗ ನೀಡಿದ ಶಿಕ್ಷಣ ಸಂಸ್ಥೆಯ ಮಾಲಿಕರು,ತಮ್ಮ ಜತೆಗೆ ಕೆಲಸ ಮಾಡಿದ ಸಹೋದ್ಯೋಗಿಗಳು ಸೇರಿದಂತೆ ಅಪಾರ ಬಂಧುಬಳಗವನ್ನು ಆಹ್ವಾನಿಸಿ ಅವರ ಸಮ್ಮುಖದಲ್ಲಿ ಅಭಿನಂದನೆ ಸಲ್ಲಿಸಿ ತಾಯಿಯ ಋಣವನ್ನು ತೀರಿಸಿಕೊಳ್ಳುತ್ತಿರುವುದು ಸಂತೋಷ ತಂದಿದೆ ಎಂದರು.

ಇದನ್ನೂ ಓದಿ: Chikkaballapur News: ರೈತರ ಮೇಲೆ ಹಾರಿದೆ ಗುಂಡಿನ ದಾಳಿ

ಶಿಕ್ಷಕ ವೃತ್ತಿಗೆ ತನ್ನದೇ ಆದ ಮಹತ್ವವಿದೆ.ಕನ್ನಡ ಎಂದರೆ ಗದ್ಯಪದ್ಯ ವ್ಯಾಕರಣ ಮಾತ್ರವಲ್ಲ ಅದನ್ನೂ ಮೀರಿದ ತಾಯಿ ಪ್ರೀತಿ ಎಂದು ಹೇಳಿಕೊಟ್ಟ ಕನ್ನಡ ಶಿಕ್ಷಕರು,ಇಂಗ್ಲೀಷ್ ಹೊಟ್ಟೆ ಪಾಡಿಗೆ ಬದುಕಿಗೆ ಕನ್ನಡವಿದೆ ಎಂದು ಹೇಳಿಕೊಟ್ಟ ಇಂಗ್ಲೀಷ್ ಟೀಚರ್,sಸೈಲೆಂಟ್ ಆಗಿ ಪಾಠ ಆಲಿಸಿದರೆ ಅರ್ಥವಾಗಲಿದೆ ಎಂದು ಹೇಳಿದ ಹಿಂದಿ ಶಿಕ್ಷಕಿಗೆ, ಮ್ಯಾಥ್ಸ್ ಎಂದರೆ ಸಂತೋಷವನ್ನು ಆಡ್ ಮಾಡಬೇಕು, ದು:ಖವನ್ನು ಕಳೆಯಬೇಕು ಎಂದು ಹೇಳಿಕೊಟ್ಟ ಗಣಿತ ಟೀಚರ್ ಹೀಗಿ ಪ್ರತಿಯೊ ಬ್ಬರೂ ನೆನಪಾಗುತ್ತಾರೆ. ನಿವೃತ್ತಿಯ ಕೊನೆಯ ದಿನ ಶಾಲೆಯನ್ನು ವಿದ್ಯಾರ್ಥಿಗಳನ್ನು ಬಿಟ್ಟು ಬರಲು ಸಂಕಟಪಡುವ ಸಮರ್ಪಣಾ ಭಾವದ ಶಿಕ್ಷಕಿಗೆ ಇಂತಹ ಅಭಿನಂದನೆಯನ್ನು ಮಗ ಕೊಡುತ್ತಿರುವುದು ಅಪರೂಪದಲ್ಲಿ ಅಪರೂಪ.ನನ್ನ ಕ್ಲಾಸ್‌ಮೇಟ್ ನಂದಕಿಶೋರ್ ಇಂದು ಫಾರಿನ್‌ನಲ್ಲಿ ಕೆಲಸ ಮಾಡುತ್ತಾ ಅಲ್ಲಿಂದ ಬಂದು ಈ ಕಾರ್ಯಕ್ರಮ ಮುಖೇನ ನಮ್ಮನ್ನೆಲ್ಲಾ ಒಟ್ಟಿಗೆ ಸೇರಿಸಿದ್ದಾನೆ.ಇಂತಹ ಸಾರ್ಥಕ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಲಿ ಎಂದು ಹಾರೈಸಿದರು.

ಜನ್ಮನೀಡಿದ ತಾಯಿಗೆ ಮಗನಾಗಿ ನಾನು ತೋರುತ್ತಿರುವ ಸಣ್ಣ ಗೌರವ ಇದಾಗಿದೆ. ಸಣ್ಣವಯಸ್ಸಿಗೆ ತಂದೆಯನ್ನು ಕಳೆದುಕೊಂಡ ನನಗೆ ತಾಯಿಯೇ ತಂದೆಸ್ಥಾನವನ್ನು ತುಂಬಿ ಎಲ್ಲವನ್ನೂ ಕೊಟ್ಟಿದ್ದಾರೆ. ಬಾಲ್ಯದಿಂದಲೇ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಿದ ಕಾರಣ ನಾನು ಜರ್ಮನಿ ಯಲ್ಲಿ ಉದ್ಯೋಗಕ್ಕೆ ಸೇರುವಂತೆ ಆಗಿದೆ.ನನ್ನ ತಾಯಿ ಶಿಕ್ಷಕಿಯಾಗಿ ನನ್ನ ಬದುಕನ್ನು ಮಾತ್ರ ರೂಪಿಸಿಲ್ಲ ಬದಲಿಗೆ ನನ್ನಂತ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿ ತೋರಿದ್ದಾರೆ.ನನ್ನ ಬಹುದಿನಗಳ ಕನಸು ತಾಯಿಗೆ ಸಾರ್ವಜನಿಕ ವೇದಿಕೆಯಲ್ಲಿ ಸತ್ಕಾರ ಮಾಡಬೇಕು ಎಂಬುದಾಗಿತ್ತು. ಅದನ್ನು ಪೂರೈಸಿದ ತೃಪ್ತಭಾವ ನನಗಿದೆ ಎಂದರು.

ಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ದತ್ತಿ ಸಂಸ್ಥೆಗಳ ಅಧ್ಯಕ್ಷ ಕೆ.ವಿ.ನವೀನ್‌ಕಿರಣ್ ಮಾತನಾಡಿ ನಮ್ಮ ಶಾಲೆಯಲ್ಲಿ ಕೆಲಸಕ್ಕೆ ಸೇರಿ ೪೪ ವರ್ಷಗಳ ಕಾಲ ಸೇವೆ ಸಲ್ಲಿಸಿ ನಮ್ಮ ಶಾಲೆಯಲ್ಲಿಯೇ ನಿವೃತ್ತಿ ಆಗುತ್ತಿರುವುದು ಸಂತೋಷತAದಿದೆ.ಅಧಿಕಾರಕ್ಕಾಗಿ ಹಾತೊರೆಯುವ ಈ ದಿನಗಳಲ್ಲಿ ಸೇವಾ ಹಿರಿತನದಲ್ಲಿ ಮುಖ್ಯಶಿಕ್ಷಕಿಯಾಗುವ ಅವಕಾಶ ಒದಗಿ ಬಂದರೂ ಕೂಡ ನಯವಾಗಿ ಅದನ್ನು ತಿರಸ್ಕರಿಸಿ ಸಹಶಿಕ್ಷಕಿಯಾಗಿ ಮುಂದುರೆದ ಮಹಾತಾಯಿ ಇವರು.ಆರೋಗ್ಯವಂತೆ ಸಮಾಜ ಕಟ್ಟಲು ಇಂತಹ ಶಿಕ್ಷಕರ ಸಂತಾನ ಹೆಚ್ಚಾಗಬೇಕಿದೆ.ನಿವೃತ್ತಿಯ ನಂತರ ಮಗ ನಂದಕಿಶೋರ್ ತಾಯಿಗೆ ಅಭಿನಂದನೆ ಸಮಾರಂಭ ಏರ್ಪಡಿಸಿರುವುದು ಮಾದರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಕೋಡಿರಂಗಪ್ಪ,ಬಿಇಒ ಮುನಿವೆಂಕಟರಾಮಾಚಾರಿ,ನೆಲಮAಗಲ ಸರ್ಕಲ್ ಇನ್ಸ್ಪೆಕ್ಟರ್ ನರೇಂದ್ರಬಾಬು,ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ನಿವೃತ್ತ ಶಿಕ್ಷಕ ಮಲ್ಲಣ್ಣ, ಮೈಮ್ಯಾಕ್ಸ್ ಸಿಇಒ ಸಿಂಗಪುರದ ಮುರಳಿಧರ ಮತ್ತಿತರರು ಇದ್ದರು.