ಅಂತರ್ಜಲ, ವಾತಾವರಣದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಜೌಗುಪ್ರದೇಶದ ಸಂರಕ್ಷಣೆ ಅಗತ್ಯ: ವಿಶ್ವ ಪ್ರಸಿದ್ಧ ಪರಿಸರ ತಜ್ಞೆ ಡಾ.ಮುಸೊಂಡ ಮುಂಬಾ ಅಭಿಮತ
ಜೌಗು ಪ್ರದೇಶಗಳು ಸ್ಪಂಜುಗಳಂತೆ ಕಾರ್ಯನಿರ್ವಹಿಸಿ, ಪ್ರವಾಹ ಆಗುವುದನ್ನು ತಡೆಯಲಿದೆ, ಹೆಚ್ಚುವರಿ ಮಳೆನೀರನ್ನು ಹೀರಿಕೊಂಡು, ಬೇಸಿಗೆ ಸಂದರ್ಭದಲ್ಲಿ ಭೂಮಿಯನ್ನು ತಂಪಾಗಿಡಲು ನೆರವಾಗು ತ್ತದೆ, ಜೌಗು ಪ್ರದೇಶ ಕೊಳಕು ಮತ್ತು ರಾಸಾಯನಿಕಗಳನ್ನು ಶೋಧಿಸಿ, ನಮಗೆ ಶುದ್ಧ ನೀರನ್ನು ನೀಡುತ್ತವೆ. ಇಷ್ಟೆಲ್ಲಾ ಪ್ರಯೋಜನಕಾರಿ ಇರುವ ಜೌಗು ಪ್ರದೇಶವನ್ನು ಸಂರಕ್ಷಿಸು ಕೆಲಸವನ್ನು ಮಕ್ಕಳಿಂದಲೇ ಪ್ರಾರಂಭಿಸಿ


ಬೆಂಗಳೂರು: ಅಂತರ್ಜಲ ಹೆಚ್ಚಿಸಲು ಸಹಕಾರಿಯಾಗಿರುವ ಜೌಗುಪ್ರದೇಶಗಳಲ್ಲಿ ಕಸ ತುಂಬು ವಂತಹ ಸ್ಥಳವಾಗಿ ಪರಿವರ್ತನೆಯಾಗುತ್ತಿದ್ದು, ಈ ಬಗ್ಗೆ ಸರ್ಕಾರ ಹಾಗೂ ಜನಸಾಮಾನ್ಯರು ಜಾಗೃತಿ ವಹಿಸಬೇಕು ಎಂದು ವಿಶ್ವ ಪ್ರಸಿದ್ಧ ಪರಿಸರ ತಜ್ಞೆ ಹಾಗೂ ಪ್ರತಿಷ್ಠಿತ ರಾಮ್ಸರ್ ಜೌಗು ಪ್ರದೇಶ ಪ್ರಧಾನ ಕಾರ್ಯದರ್ಶಿ ಡಾ. ಮುಸೊಂಡ ಮುಂಬಾ ಅಭಿಪ್ರಾಯಪಟ್ಟರು. ಭಾನುವಾರ ಸಿನ್ಹಾಸಿ ಸಂಸ್ಥೆ ವತಿಯಿಂದ ಕೃಷ್ಣ ವೆಲ್ನೆಸ್ ಯೋಗ ಕೇಂದ್ರದಲ್ಲಿ ಆಯೋಜಿಸಿದ್ದ “ಜೌಗುಭೂಮಿ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆ” ಕುರಿತು ಸಮ್ಮೇಳನದಲ್ಲಿ ಮಾತನಾಡಿ ದರು.
ಜೌಗುಪ್ರದೇಶ ಹವಾಮಾನದ ಬದಲಾವಣೆಯಲ್ಲಿ ನೇರ ಸಂಪರ್ಕ ಹೊಂದಿದೆ. ಪ್ರಸ್ತುತ ವಿಶ್ವದಲ್ಲಿ ೨೫೭ ಮಿಲಿಯನ್ ಹೆಕ್ಟೆರ್ ಜೌಗುಪ್ರದೇಶವಿದೆ, ಭಾರತದಲ್ಲಿ ಈ ಪ್ರಮಾಣ ಹೆಚ್ಚು. ಜೌಗುಪ್ರದೇಶ ಗಳನ್ನು ಸಂರಕ್ಷಿಸುವುದರಿಂದ ಸರೋವರ, ಕೊಳ ಮತ್ತು ಭೂಗತ ನೀರಿನ ಟ್ಯಾಂಕ್‌ಗಳನ್ನು ತುಂಬಲು ಸಹಾಯ ಮಾಡುತ್ತವೆ. ಇದರಿಂದ ಕುಡಿಯಲು, ಕೃಷಿ ಮಾಡಲು ಮತ್ತು ದೈನಂದಿನ ಬಳಕೆಗೆ ಹೆಚ್ಚಿನ ನೀರು ಲಭ್ಯವಾಗಲಿದೆ.
ಇದನ್ನೂ ಓದಿ: Bangalore To Mangalore Train: ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು; ಇಲ್ಲಿದೆ ವೇಳಾಪಟ್ಟಿ
ಜೊತೆಗೆ, ಜೌಗು ಪ್ರದೇಶಗಳು ಗಾಳಿಗೆ ತೇವಾಂಶ ಒದಗಿಸಿ, ಮಳೆ ಪ್ರಮಾಣ ಹೆಚ್ಚಿಸಲಿದೆ. ಜೌಗು ಪ್ರದೇಶಗಳು ಸ್ಪಂಜುಗಳಂತೆ ಕಾರ್ಯನಿರ್ವಹಿಸಿ, ಪ್ರವಾಹ ಆಗುವುದನ್ನು ತಡೆಯಲಿದೆ, ಹೆಚ್ಚುವರಿ ಮಳೆನೀರನ್ನು ಹೀರಿಕೊಂಡು, ಬೇಸಿಗೆ ಸಂದರ್ಭದಲ್ಲಿ ಭೂಮಿಯನ್ನು ತಂಪಾಗಿಡಲು ನೆರವಾಗು ತ್ತದೆ, ಜೌಗು ಪ್ರದೇಶ ಕೊಳಕು ಮತ್ತು ರಾಸಾಯನಿಕಗಳನ್ನು ಶೋಧಿಸಿ, ನಮಗೆ ಶುದ್ಧ ನೀರನ್ನು ನೀಡುತ್ತವೆ. ಇಷ್ಟೆಲ್ಲಾ ಪ್ರಯೋಜನಕಾರಿ ಇರುವ ಜೌಗು ಪ್ರದೇಶವನ್ನು ಸಂರಕ್ಷಿಸು ಕೆಲಸವನ್ನು ಮಕ್ಕಳಿಂದಲೇ ಪ್ರಾರಂಭಿಸಿ. ಶಾಲೆಗಳಲ್ಲಿಯೇ ನಮ್ಮ ಪರಿಸರವನ್ನು ಸಂರಕ್ಷಿಸಲು ಜೌಗುಪ್ರದೇಶದ ಪ್ರಾಮುಖ್ಯತೆಯನ್ನು ಅರ್ಥ ಮಾಡಿಸಿದರೆ, ಜೌಗುಪ್ರದೇಶದ ನೈರ್ಮಲ್ಯ ಕಾಪಾಡಲಿದ್ದಾರೆ
ಪ್ರತಿ ವರ್ಷ ಫೆಬ್ರವರಿ ೨ರಂದು ವಿಶ್ವ ಜೌಗುಪ್ರದೇಶ ದಿನವನ್ನಾಗಿ ಆಚರಿಸಲಾಗುತ್ತದೆ, ಈ ವೇಳೆ ನಡೆಯುವ ಬೃಹತ್ ಸಮಾವೇಶದಲ್ಲಿ ಭಾರತದಿಂದಲೂ ಸಾಕಷ್ಟು ಸ್ವಯಂ ಸೇವಕರು ಆಗಮಿಸು ತ್ತಾರೆ ಎಂದರು.
ಅರಣ್ಯ ಇಲಾಖೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಮಾತನಾಡಿ, ಕರ್ನಾಟಕದಲ್ಲಿ ೧೪,೯೩೬ ಅಂದರೆ ೦.೭೯ ಮಿಲಿಯನ್ ಹೆಕ್ಟೆರ್ ಜೌಗುಪ್ರದೇಶವಿದೆ. ಬಹುತೇಕ ಜೌಗುಪ್ರದೇಶವನ್ನು ರಾಜ್ಯದಲ್ಲಿ ಉತ್ತಮ ಸ್ಥಿತಿಯಲ್ಲೇ ಇದೆ. ಒಂದಷ್ಟು ಜೌಗುಪ್ರದೇಶ ಗಳಷ್ಟೇ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡಲಿದೆ. ಇದರ ನಿರ್ವಹಣೆ ಸಹ ಸೂಕ್ತ ರೀತಿಯಲ್ಲಿ ಇದೆ. ಇನ್ನು, ಅರಣ್ಯ ಹಾಗೂ ಕಾಡುಪ್ರಾಣಿಗಳನ್ನು ಸಂರಕ್ಷಿಸುವತ್ತ ಸಾಕಷ್ಟು ಕ್ರಮವನ್ನು ಅರಣ್ಯ ಇಲಾಖೆ ತೆಗೆದುಕೊಳ್ಳುತ್ತಿದೆ.
ಪ್ರಸ್ತುತ ರಾಜ್ಯದಲ್ಲಿ ೫೬೩ ಹುಲಿ, ೬೩೯೫ ಆನೆಗಳು ಹಾಗೂ ೧೮೭೯ ಚಿರತೆಯನ್ನು ಹೊಂದಲಾಗಿದೆ. ಆದರೆ, ಅರಣ್ಯವನ್ನು ಹೊರತುಪಡಿಸಿ ಪ್ರಾಣಿಗಳು ರೈತರ ಸ್ಥಳಗಳಿಗೆ ದಾಳಿ ಮಾಡಿ, ರೈತರ ಫಸಲು ಹಾಳು ಮಾಡುವುದು, ಮನುಷ್ಯನ ಮೇಲೆ ದಾಳಿ ಮಾಡುವುದು ನಡೆಯುತ್ತಿದೆ. ಇದನ್ನು ತಪ್ಪಿಸಲು ಸಾಕಷ್ಟು ಅತ್ಯಾಧುನಿಕ ಕ್ರಮಗಳನ್ನು ಅರಣ್ಯ ಇಲಾಖೆ ಅಳವಡಿಸಿಕೊಂಡಿದೆ. ಇದಕ್ಕಾ ನಾವು ಸ್ಮಾರ್ಟ್ ಸೋಲಾರ್ ಫೆನ್ಸಿಂಗ್ ಅಳವಡಿಸಿದ್ದು, ಅರಣ್ಯ ಸಿಬ್ಬಂದಿ ತಮ್ಮ ಮೊಬೈಲ್‌ನಲ್ಲಿಯೇ ಇದರ ಓಲ್ಟೇಜ್‌ನನ್ನು ನಿಯಂತ್ರಿಸಬಹುದು.
ಅರಣ್ಯ ಇಲಾಖೆ ಹಳೇ ಕಾಲದ ಸಿಸ್ಟಮ್‌ನನ್ನೇ ಬಳಸುತ್ತಿಲ್ಲ, ಪ್ರತಿಯೊಂದರಲ್ಲೂ ಅಪ್‌ಗ್ರೇಡ್ ಆಗಿದ್ದು, ಪ್ರಾಣಿಗಳ ಪ್ರತಿಚಲನವಲನವನ್ನು ಟ್ರಾಕ್ ಮಾಡುವ ಸಿಸ್ಟಮ್‌ನನ್ನು ಅಳವಡಿಸಿ ಕೊಂಡಿದೆ. ರೇಡಿಯೋ ಕಾಲರ್‌ನನ್ನು ಇತ್ತೀಚೆಗೆ ಅಳವಡಿಸಿಕೊಂಡಿದ್ದು, ಪ್ರಸ್ತುತ ಹುಲಿಗಳಿಗೆ ಟ್ರಾಕ್ ಮಾಡಲು ಬಳಸಲಾಗುತ್ತಿದೆ, ಮುಂದಿನ ದಿನಗಳಲ್ಲಿ ಚಿರತೆ ಟ್ರಾಕ್ ಮಾಡಲು ಬಳಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಪ್ರಸಿದ್ಧ ಪರಿಸರವಾದಿ ರೇವತಿ ಕಾಮತ್, ಸಿನ್ಹಾಸಿ ಸಂಸ್ಥೆಯ ಸಂಸ್ಥಾಪಕಿ ಮಿಮಿ ಪಾರ್ಥ ಸಾರಥಿ ಉಪಸ್ಥಿತರಿದ್ದರು.