Chikkaballapur News: ಮಹಾಶಿವರಾತ್ರಿ ಶಿವನಾಮಸ್ಮರಣೆಯಲ್ಲಿ ಮಿಂದೆದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆ
ಈಶಾ ಕೇಂದ್ರದಲ್ಲಿ ದೊಡ್ಡ ಎಲ್‌ಇಡಿ ಪರದೆ ಗಳನ್ನು ಅಳವಡಿಸಿ ಅದರ ಮೂಲಕ ಕೊಯ ಮುತ್ತೂರಿನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮಹಾಶಿವ ರಾತ್ರಿ ಹಬ್ಬದ ಧಾರ್ಮಿಕ ಪೂಜಾದಿ ಕಾರ್ಯಕ್ರಮಗಳ ನೇರಪ್ರಸಾರ ವೀಕ್ಷಣೆಗೆ ಬೇಕಾದ ಸಿದ್ಧತೆ ಮಾಡಿದ್ದು ಸಂಜೆ 4ರ ವೇಳೆ ಗಾಗಲೇ ಎಲ್ಲಾ ಕುರ್ಚಿಗಳು ಭರ್ತಿಯಾಗಿರುವುದು ಕಂಡು ಬಂದಿತು


ಚಿಕ್ಕಬಳ್ಳಾಪುರ : ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಬುಧವಾರ ನಂದಿಯ ಭೋಗ ನಂದೀಶ್ವರ ದೇವಾಲಯ ಸೇರಿದಂತೆ ಜಿಲ್ಲೆಯ ನಾನಾ ದೇವಾಲಯಗಳಿಗೆ ಉಪವಾಸ ದಲ್ಲಿಯೇ ತೆರಳಿದ ಭಕ್ತರು ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿ ಕೃತಾರ್ಥರಾದರು. ನಗರದ ಮರಳುಸಿದ್ದೇಶ್ವರ ದೇವಾಲಯ, ಗವಿ ಗಂಗಾಧರೇಶ್ವರ ದೇವಾಲಯ,ಆಲವಗುರ್ಕಿ ಬಳಿಯ ಈಶಾ ಧ್ಯಾನಕೇಂದ್ರ ಸೇರಿ ಶಿವನ ದೇವಾಲಯಗಳಿಗೆ ಜನಸಾಗರವೇ ಹರಿದು ಬಂದು ಪೂಜೆ ಸಲ್ಲಿಸಿ ಶಿವನಾಮಸ್ಮರಣೆ ಮಾಡಿ ಪುನೀತರಾಗುತ್ತಿದ್ದ ದೃಶ್ಯಗಳು ಸಾಮಾನ್ಯ ವಾಗಿದ್ದವು. ಶಿವರಾತ್ರಿ ಹಬ್ಬದ ಜಾಗರಣೆಗಾಗಿ ಜಿಲ್ಲೆಯ ಬಹುತೇಕ ದೇವಾಲಯಗಳ ಆವರ ಣದಲ್ಲಿ ಪೂಜೆಗೆ ವ್ಯವಸ್ಥೆ ಮಾಡಿದಂತೆ ಭಜನೆ, ಹರಿಕತೆ, ಶಿವನಾಮಸ್ಮರಣೆಗೆ ಬೇಕಾದ ವ್ಯವಸ್ಥೆಯನ್ನು ಕೂಡ ವ್ಯವಸ್ಥಿತವಾಗಿ ಮಾಡಿದ್ದರು.
ಇದನ್ನೂ ಓದಿ: Chikkanayakanalli News: ಕೋಟ್ಯಾಂತರ ಜನ ಸ್ನಾನ ಮಾಡಿರುವುದರಿಂದ ಗಂಗಾನದಿ ಮಲಿನವಾಗಿದೆ
ಈಶಾ ಕೇಂದ್ರದಲ್ಲಿ ದೊಡ್ಡ ಎಲ್‌ಇಡಿ ಪರದೆ ಗಳನ್ನು ಅಳವಡಿಸಿ ಅದರ ಮೂಲಕ ಕೊಯಮುತ್ತೂರಿನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಹಬ್ಬದ ಧಾರ್ಮಿಕ ಪೂಜಾದಿ ಕಾರ್ಯಕ್ರಮಗಳ ನೇರಪ್ರಸಾರ ವೀಕ್ಷಣೆಗೆ ಬೇಕಾದ ಸಿದ್ಧತೆ ಮಾಡಿದ್ದು ಸಂಜೆ 4ರ ವೇಳೆಗಾಗಲೇ ಎಲ್ಲಾ ಕುರ್ಚಿಗಳು ಭರ್ತಿಯಾಗಿರು ವುದು ಕಂಡು ಬಂದಿತು.

ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾಗಿರುವ ನಂದಿಯ ಭೋಗನಂದೀಶ್ವರನ ದೇವಾಲಯಕ್ಕೆ ಬ್ರಹ್ಮಾಂಡ ಗುರೂಜಿ ಭೇಟಿ ನೀಡಿ ದೇವರ ದರ್ಶನ ಪಡೆದು ಇಲ್ಲಿನ ಸ್ಥಳಮಹಿಮೆಯ ಬಗ್ಗೆ ಜನತೆಗೆ ತಿಳಿಸಿದ್ದು ವಿಶೇಷವಾಗಿತ್ತು.ಶಿವರಾತ್ರಿ ದಿನದಲ್ಲಿ ಮಾತ್ರ ಇಲ್ಲಿಗೆ ಭೇಟಿ ನೀಡುವ ಪರಿಪಾಠವನ್ನು ಬಿಟ್ಟು ವರ್ಷದ ಎಲ್ಲಾ ದಿನಗಳಲ್ಲಿ ಇಲ್ಲಿಗೆ ಬಂದು ಉಮಾಮಹೇಶ್ವರನ ಜತೆ ಗಣಪತಿ,ನಂದಿ ಮತ್ತು ಭೃಂಗಿಯ ದರ್ಶನ ಪಡೆದರೆ ಪಾಪ ಕರ್ಮಗಳು ಕಳೆಯಲಿವೆ. ಈ ಬಾರಿ ಶನಿ ಮೀನರಾಶಿಗೆ ಬರುತ್ತಾನೆ.ಗುರು ಮಿಥುನ ರಾಶಿಗೆ ಪ್ರಯಾಣ ಮಾಡುತ್ತಾನೆ. ಇದು ಅನಾರೋಗ್ಯದ ಸಂಕೇತವಾಗಿದೆ.ರೋಗರುಜಿನಗಳು ದೇಶವನ್ನು ಜನರನ್ನು ಕಾಡ ಲಿವೆ. ಇದರಿಂದ ಬಿಡುಗಡೆ ಪಡೆಯಲು ಇರುವ ಮಾರ್ಗವೆಂದರೆ ಸ್ವಾಮಿಯ ದರ್ಶನ ಮಾತ್ರ ಎಂದು ಹೇಳುತ್ತಾ ಭಕ್ತರಲ್ಲಿ ಆಶ್ಚರ್ಯಕ್ಕೆ ಕಾರಣವಾದರು.
ತಾಲೂಕಿನ ಆವಲಗುರ್ಕಿ ಸಮೀಪ ಸದ್ಗುರು ಜಗ್ಗಿ ವಾಸುದೇವ್ ನಿರ್ಮಿಸಿರುವ 112 ಅಡಿ ಈಶನ ಮೂರ್ತಿಯ ದರ್ಶನಕ್ಕೆ ಜಿಲ್ಲೆಯ ಜನತೆಯಷ್ಟೇ ಅಲ್ಲದೆ ಬೆಂಗಳೂರು ಆಂದ್ರ ಪ್ರದೇಶದಿಂದಲೂ ಕೂಡ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ದರ್ಶನ ಪಡೆಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.ಶಿವರಾತ್ರಿಯ ಜಾಗರಣೆ ಕಳೆಯಲು ಕೊಯಮತ್ತೂರಿನ ಈಶಾ ಕೇಂದ್ರದ ಕಾರ್ಯಕ್ರಮಗಳನ್ನು ಆಸ್ತಿಕ ಜನತೆಗೆ ತೋರಿಸುವ ವ್ಯವಸ್ಥೆ ಮಾಡಲಾ ಗಿದ್ದು,ಕುಳಿತು ಕಾರ್ಯಕ್ರಮ ವೀಕ್ಷಿಸಲು ಬೇಕಾದ ಆಸನ ವ್ಯವಸ್ಥೆ ಮಾಡಿದ್ದರು. ಈಶಾ ಕೇಂದ್ರಕ್ಕೆ ಹೆಚ್ಚಿನಸ ಸಂಖ್ಯೆಯಲ್ಲಿ ಜನತೆ ಭೇಟಿ ನೀಡುತ್ತಿರುವ ಕಾರಣ ರಾಷ್ಟೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ತನಕ ಟ್ರಾಫಿಕ್ ಜಾಮ್ ಆಗಿತ್ತು.
ಇಂದು ನಂದಿ ರಥೋತ್ಸವ
ಮಹಾಶಿವರಾತ್ರಿ ಹಬ್ಬದ ಮಾರನೇ ದಿನ ನಡೆಯುವ ಜೋಡಿ ರಥೋತ್ಸವಕ್ಕೆ ನಂದಿ ಗ್ರಾಮ ಸಜ್ಜುಗೊಂಡಿದ್ದು ರಥಗಳನ್ನು ಸಿಂಗಾರಗೊಳಿಸುವ ಕೆಲಸ ಬಹುತೇಕ ಪೂರ್ಣಗೊಂಡಿದೆ. ಶಿವರಾತ್ರಿ ಹಬ್ಬದ ದಿನ ದೇವಾಲಯಕ್ಕೆ ಬಂದಿದ್ದ ಜನತೆ ರಥಗಳಿಗೂ ಕೈಮುಗಿದು ತೆರಳು ತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.ಗುರುವಾರ ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಚಾಲನೆ ನೀಡಲಿದ್ದು ಲಕ್ಷಾಂತರ ಮಂದಿ ರಥೋತ್ಸವಕ್ಕೆ ಸಾಕ್ಷಿ ಯಾಗಲಿದ್ದಾರೆ.