Two-ball rule in ODIs: ಏಕದಿನ ಕ್ರಿಕೆಟ್‌ನಲ್ಲಿ ಎರಡು ಚೆಂಡುಗಳ ನಿಯಮ ರದ್ದು!
ಪ್ರಸಕ್ತ ಏಕದಿನ ಮಾದರಿಯಲ್ಲಿ ನಡೆಯುತ್ತಿರುವ 19 ವಯೋಮಿತಿ ಪುರುಷರ ವಿಶ್ವಕಪ್ ಅನ್ನು ಟಿ20 ಕ್ರಿಕೆಟ್ ಪ್ರಕಾರಕ್ಕೆ ಬದಲಾಯಿಸಲು ಕೂಡ ಐಸಿಸಿ ಚಿಂತನೆ ನಡೆಸಿದೆ. ಆದರೆ ಇದು ಹಾಲಿ ಪ್ರಸಾರ ಹಕ್ಕು ಒಪ್ಪಂದ ಮುಗಿದ ಬಳಿಕ ಅಂದರೆ 2028ರ ನಂತರವಷ್ಟೇ ಜಾರಿಗೆ ಬರುವ ನಿರೀಕ್ಷೆ ಇದೆ.


ದುಬೈ: ಏಕದಿನ ಕ್ರಿಕೆಟ್‌ನ 2 ಚೆಂಡುಗಳ(Two-ball rule in ODIs) ಬಳಕೆ ನಿಯಮವನ್ನು ರದ್ದುಗೊಳಿಸಲು ಐಸಿಸಿ(ICC) ಚಿಂತನೆ ನಡೆಸುತ್ತಿದೆ. ಈ ಮೂಲಕ ಬ್ಯಾಟರ್‌ಗಳಿಗೆ ಅನುಕೂಲಕರವಾಗಿದೆ ಎಂಬ ದೀರ್ಘಕಾಲದ ಕಳವಳಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ಈ ಬಗ್ಗೆ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ(Sourav Ganguly) ಮುಂದಾಳತ್ವದ ಕ್ರಿಕೆಟ್ ಸಮಿತಿ ಈಗಾಗಲೇ ಐಸಿಸಿಗೆ ಶಿಫಾರಸು ಮಾಡಿದೆ ಎನ್ನಲಾಗುತ್ತಿದೆ. ಐಸಿಸಿ ಮಂಡಳಿಯು ಹರಾರೆಯಲ್ಲಿ (ಜಿಂಬಾಬ್ವೆ) ಈ ವಿಷಯದ ಮೇಲೆ ಭಾನುವಾರ ಚರ್ಚೆ ನಡೆಸಲಿದೆ. ಏಕದಿನ ಪಂದ್ಯಗಳಲ್ಲಿ ಎರಡು ಹೊಸ ಚೆಂಡುಗಳ ಬಳಕೆ ದಶಕಕ್ಕೂ ಹೆಚ್ಚು ಸಮಯದಿಂದ ಚಾಲ್ತಿಯಲ್ಲಿದೆ.
ಪ್ರಸಕ್ತ ಏಕದಿನ ಕ್ರಿಕೆಟ್‌ನಲ್ಲಿ ಪಂದ್ಯದ ಆರಂಭದಿಂದಲೇ ಪ್ರತಿ ಓವರ್ ನಂತರ ಬ್ಯಾಟರ್‌ಗಳು ಪಿಚ್‌ನ ಬದಿಯನ್ನು ಬದಲಾಯಿಸುವ ವೇಳೆ ಚೆಂಡು ಕೂಡ ಬದಲಾಗುತ್ತಿದೆ. ಚೆಂಡು ತನ್ನ ಹೊಳಪು ಉಳಿಸಿಕೊಂಡು ಬ್ಯಾಟರ್‌ಗಳಿಗೆ ಸರಾಗವಾಗಿ ರನ್ ಗಳಿಸಲು ಅನುಕೂಲವಾಗುತ್ತದೆ. ಕ್ಷೇತ್ರರಕ್ಷಣೆ ಮಿತಿಯೂ ಇರುವುದರಿಂದ ಬ್ಯಾಟರ್‌ಗಳಿಗೆ ಚೆಂಡನ್ನು ಹೊಡೆದಟ್ಟಲು ಹೆಚ್ಚು ಅವಕಾಶವಾಗುತ್ತದೆ.
ಇದನ್ನೂ ಓದಿ IPL 2025: ಶತಕದ ಬಳಿಕ ಅಭಿಷೇಕ್ ಶರ್ಮಾ ಪ್ರದರ್ಶಿಸಿದ ಚೀಟಿಯಲ್ಲಿ ಬರೆದಿದ್ದೇನು?
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸಹಿತ ಕೆಲ ಮಾಜಿ ಕ್ರಿಕೆಟಿಗರು ಏಕದಿನ ಕ್ರಿಕೆಟ್‌ನಲ್ಲಿ 2 ಚೆಂಡು ಬಳಸುವುದನ್ನು ಟೀಕಿಸಿದ್ದರು. ಇದರಿಂದಾಗಿ ಏಕದಿನ ಕ್ರಿಕೆಟ್‌ನಲ್ಲಿ ರಿವರ್ಸ್ ಸ್ವಿಂಗ್ ಮಾಯವಾಗುತ್ತಿದೆ ಎಂದು ದೂರಿದ್ದರು.
ಪ್ರಸಕ್ತ ಏಕದಿನ ಮಾದರಿಯಲ್ಲಿ ನಡೆಯುತ್ತಿರುವ 19 ವಯೋಮಿತಿ ಪುರುಷರ ವಿಶ್ವಕಪ್ ಅನ್ನು ಟಿ20 ಕ್ರಿಕೆಟ್ ಪ್ರಕಾರಕ್ಕೆ ಬದಲಾಯಿಸಲು ಕೂಡ ಐಸಿಸಿ ಚಿಂತನೆ ನಡೆಸಿದೆ. ಆದರೆ ಇದು ಹಾಲಿ ಪ್ರಸಾರ ಹಕ್ಕು ಒಪ್ಪಂದ ಮುಗಿದ ಬಳಿಕ ಅಂದರೆ 2028ರ ನಂತರವಷ್ಟೇ ಜಾರಿಗೆ ಬರುವ ನಿರೀಕ್ಷೆ ಇದೆ.