ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಆನೇಕಲ್‌ನಲ್ಲಿ ಭೀಕರ ಕೃತ್ಯ, ಹೆಂಡತಿಯ ತಲೆ ಕಡಿದು ಪೊಲೀಸ್‌ ಠಾಣೆಗೆ ತಂದ ಗಂಡ!

Murder Case: ರಾತ್ರಿ ಕೆಲಸ ನಿಮಿತ್ತ ತೆರಳಿದ್ದ ಶಂಕರ್, ಪತ್ನಿಗೆ ಬೆಳಗ್ಗೆ ಬರುವುದಾಗಿ ಹೇಳಿ ಹೋಗಿದ್ದ. ಆದರೆ ತಡರಾತ್ರಿಯೇ ಮನೆಗೆ ಬಂದಿದ್ದಾನೆ. ಈ ವೇಳೆ ಹೆಂಡತಿಯ ಕಳ್ಳಾಟ ಬಯಲಾಗಿದೆ.‌ ಆಕ್ರೋಶಗೊಂಡು ಆಕೆಯನ್ನು ಪ್ರಿಯಕರನ ಜೊತೆಯೇ ಕಳುಹಿಸಿದ್ದರೂ ಆಕೆ ಮತ್ತೆ ಬಂದು ರಗಳೆ ತೆಗೆದಿದ್ದಳು.

ಆನೇಕಲ್‌ನಲ್ಲಿ ಭೀಕರ ಕೃತ್ಯ, ಹೆಂಡತಿಯ ತಲೆ ಕಡಿದು ಪೊಲೀಸ್‌ ಠಾಣೆಗೆ ತಂದ ಗಂಡ

ಮೃತ ಮಾನಸ, ಆರೋಪಿ ಶಂಕರ್

ಹರೀಶ್‌ ಕೇರ ಹರೀಶ್‌ ಕೇರ Jun 7, 2025 10:16 AM

ಆನೇಕಲ್​: ಬೆಂಗಳೂರು (Bengaluru) ಹೊರವಲಯದ ಆನೇಕಲ್​ (Anekal) ಬಳಿ ಪೊಲೀಸರೇ ಬೆಚ್ಚಿಬೀಳುವ ಕೊಲೆ (Murder case) ಕೃತ್ಯವೊಂದು ನಡೆದಿದೆ. ಹೆಂಡತಿಯ (Wife) ಕತ್ತು ಕತ್ತರಿಸಿದ ಗಂಡ (Husband) ಆಕೆಯ ರುಂಡವನ್ನು ಕೈಯಲ್ಲಿ ಹಿಡಿದುಕೊಂಡು ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ. ಆನೇಕಲ್ ತಾಲೂಕಿನ ಹೀಲಲಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೆನ್ನಾಗರ ನಿವಾಸಿ 28 ವರ್ಷದ ಶಂಕರ್ ಎಂಬಾತ ಪತ್ನಿಯ ರುಂಡ ಕಡಿದು ಬೈಕ್​ನಲ್ಲೇ ಹಿಡಿದುಕೊಂಡು ಸೂರ್ಯನಗರ ಠಾಣೆಗೆ ಬಂದಿದ್ದಾನೆ. ಹೆಬ್ಬಗೋಡಿ ನಿವಾಸಿ ಮಾನಸ (26) ಮೃತ ಮಹಿಳೆ. ಹತ್ಯೆಗೆ ಆಕೆಯ ಅಕ್ರಮ ಸಂಬಂಧವೇ (illegal relationship) ಕಾರಣ ಎನ್ನಲಾಗುತ್ತಿದೆ.

ಶಂಕರ್ ಹಾಗೂ ಮಾನಸ ಇಬ್ಬರೂ ಪ್ರೀತಿಸಿ 5 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿ ತಿಂಗಳ ಹಿಂದಷ್ಟೇ ಹೀಲಲಿಗೆ ಗ್ರಾಮದ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು ಇದೇ ತಿಂಗಳು 3ನೇ ತಾರೀಕು ರಾತ್ರಿ ಕೆಲಸ ನಿಮಿತ್ತ ತೆರಳಿದ್ದ ಶಂಕರ್, ಪತ್ನಿಗೆ ಬೆಳಗ್ಗೆ ಬರುವುದಾಗಿ ಹೇಳಿ ಹೋಗಿದ್ದ. ಆದರೆ ತಡರಾತ್ರಿಯೇ ಮನೆಗೆ ಬಂದಿದ್ದಾನೆ. ಈ ವೇಳೆ ಹೆಂಡತಿಯ ಕಳ್ಳಾಟ ಬಯಲಾಗಿದೆ.

ಈ ವೇಳೆ ಪತ್ನಿ ತನ್ನ ಪ್ರಿಯಕರನ ಜೊತೆ ಚಕ್ಕಂದವಾಡುತ್ತಿದ್ದುದು ಆತನಿಗೆ ಕಂಡುಬಂದಿದೆ. ಮಹಿಳೆ ರೆಡ್ ಹ್ಯಾಂಡ್ ಆಗಿ ಪ್ರಿಯಕರನ ಜೊತೆ ಸಿಕ್ಕಿಬಿದ್ದಿದ್ದಾಳೆ. ಇದನ್ನು ಕಂಡು ಆಕ್ರೋಶಗೊಂಡ ಶಂಕರ್​ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾನೆ. ಪತ್ನಿಯ ಸಹವಾಸ ಬೇಡ ಎಂದು ಆಕೆಯನ್ನು ಪ್ರಿಯಕರನ ಜೊತೆಯೇ ಕಳುಹಿಸಿದ್ದಾನೆ. ಆದರೆ ಪತ್ನಿ ಮಾನಸ ಮಾತ್ರ ಪದೇ ಪದೆ ಮನೆಗೆ ಬಂದು ಗಂಡ ಶಂಕರ್​ಗೆ ಹಿಂಸೆ ನೀಡುತ್ತಿದ್ದಳು.

ನಿನ್ನೆ ರಾತ್ರಿ ಸಹ ಮನೆಗೆ ಬಂದು ಗಲಾಟೆ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಶಂಕರ್ ಆಕೆಯ ತಲೆ ಕಡಿದು ಪೊಲೀಸ್‌​ ಠಾಣೆಗೆ ತಂದಿದ್ದಾನೆ. ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Self Harming: ಶಾಲೆ ಸೇರಿಸುವ ವಿಷಯಕ್ಕೆ ಪತಿಯೊಂದಿಗೆ ಜಗಳ, ಮಕ್ಕಳೊಂದಿಗೆ ಕೆರೆಗೆ ಹಾರಿದ ತಾಯಿ