#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Rapper Abhinav Singh: ಪತ್ನಿಯ ಕಿರುಕುಳಕ್ಕೆ ಮತ್ತೊಂದು ಬಲಿ? ರ‍್ಯಾಪರ್ ಅಭಿನವ್‌ ಸಿಂಗ್‌ ಆತ್ಮಹತ್ಯೆಗೆ ಕಾರಣವೇನು?

ಒಡಿಶಾ ಮೂಲದ ರ‍್ಯಾಪರ್‌ ಅಭಿನವ್‌ ಸಿಂಗ್‌ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಪತ್ನಿಯ ಮಾನಸಿಕ ಕಿರುಕುಳದಿಂದಲೇ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬೆಂಗಳೂರಿನ ಕಾಡುಬೀಸನಹಳ್ಳಿಯ ಅಪಾರ್ಟ್​​ಮೆಂಟ್​ನಲ್ಲಿ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿದ್ದಾರೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.

ಪತ್ನಿಯ ಕಿರುಕುಳದಿಂದ ರ‍್ಯಾಪರ್ ಅಭಿನವ್‌ ಸಿಂಗ್‌ ಆತ್ಮಹತ್ಯೆ?

ರ‍್ಯಾಪರ್‌ ಅಭಿನವ್‌ ಸಿಂಗ್‌.

Profile Ramesh B Feb 12, 2025 8:31 PM

ಬೆಂಗಳೂರು: ಕೆಲವು ತಿಂಗಳ ಹಿಂದೆ ಪತ್ನಿಯ ಕಿರುಕುಳದಿಂದ ಬೇಸತ್ತು ಉತ್ತರ ಪ್ರದೇಶ ಮೂಲದ ಎಂಜಿನಿಯರ್‌ ಅತುಲ್‌ ಸುಭಾಷ್‌ (Atul Subhash) ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೇಶಾದ್ಯಂತ ವ್ಯಾಪಕ ಚರ್ಚೆ ಹುಟ್ಟು ಹಾಕಿತ್ತು. ಈ ಘಟನೆ ಮಾಸುವ ಮುನ್ನ ಇಂತಹದ್ದೇ ಮತ್ತೊಂದು ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಒಡಿಶಾ ಮೂಲದ ರ‍್ಯಾಪರ್‌ ಅಭಿನವ್‌ ಸಿಂಗ್‌ (Rapper Abhinav Singh) ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಪತ್ನಿಯ ಮಾನಸಿಕ ಕಿರುಕುಳದಿಂದಲೇ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬೆಂಗಳೂರಿನ ಕಾಡುಬೀಸನಹಳ್ಳಿಯ ಅಪಾರ್ಟ್​​ಮೆಂಟ್​ನಲ್ಲಿ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುಟುಂಬಸ್ಥರಿಂದ ಆರೋಪ

ಅಭಿನವ್‌ ಅವರ ತಂದೆ ಬಿಜಯ್‌ ನಂದ ಸಿಂಗ್‌ ಈ ಬಗ್ಗೆ ಲಾಲ್‌ಬಾಗ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದು, ಪತ್ನಿ ಮತ್ತು ಇತರರ ಮಾನಸಿಕ ಕಿರುಕುಳದಿಂತ ತಮ್ಮ ಪುತ್ರ ಆತ್ಯಹತ್ಯೆ ಮಾಡಿಕೊಂಡಿದ್ದಾಗಿ ದೂರಿದ್ದಾರೆ. ದೂರಿನಲ್ಲಿ ಅವರು 8-10 ಮಂದಿಯ ಹೆಸರು ಉಲ್ಲೇಖಿಸಿದ್ದು, ಅವರ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ. ಅದರಲ್ಲಿಯೂ ಪತ್ನಿ ಕೆಲವು ದಿನಗಳಿಂದ ನಿರಂತರವಾಗಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಕಟಕ್‌ನ ಕಲಿಗಲಿ ಮೂಲದ ಅಭಿನವ್‌ ಸಿಂಗ್‌ ವೃತ್ತಿಯಲ್ಲಿ ಎಂಜಿನಿಯರ್‌ ಆಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು. 'ಜಗ್ಗರ್ನಾಟ್' ಎಂದು ಪ್ರಸಿದ್ಧಿ ಪಡೆದಿದ್ದ ಅಭಿನವ್ ಸಿಂಗ್, ರ‍್ಯಾಪ್ ರಂಗದಲ್ಲಿ ಬಹಳಷ್ಟು ಜನಪ್ರಿಯತೆ ಪಡೆದಿದ್ದಾರೆ.

ಅಭಿನವ್‌ ತಾಯಿ ಹೇಳಿದ್ದೇನು?

"ನಾನು ಪ್ರತಿದಿನ ಬೆಳಗ್ಗೆ 8 ಗಂಟೆಗೆ ಅವನಿಗೆ ಕರೆ ಮಾಡುತ್ತಿದ್ದೆ. ಅವನು ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನ ರಾತ್ರಿ ತನ್ನ ತಂದೆಯೊಂದಿಗೆ ಮಾತನಾಡಿದ್ದ. ಆ ದಿನ ಆತ ಬೆಳಗ್ಗೆ 8ರ ಬದಲು 9 ಗಂಟೆಗೆ ಎಬ್ಬಿಸಲು ಹೇಳಿದ್ದ. ಹೀಗಾಗಿ ನಾನು ಬೆಳಗ್ಗೆ 8:15ರಿಂದ ಆತನಿಗೆ ಕರೆ ಮಾಡಲು ಪ್ರಾರಂಭಿಸಿದೆ. ಕರೆ ಸ್ವೀಕರಿಸದಿದ್ದಾಗ ಆತನ ಸ್ನೇಹಿತ ತನ್ಮಯ್‌ಗೆ ವಿಷಯ ತಿಳಿಸಿದೆ. ತನ್ಮಯ್ ತನ್ನ ಇನ್ನೊಬ್ಬ ಸ್ನೇಹಿತನೊಂದಿಗೆ ಅಭಿನವ್‌ ಮನೆಗೆ ತೆರಳಿ ಪರಿಶೀಲಿಸಿದ ವೇಳೆ ಅಭಿನವ್‌ ಮೃತಪಟ್ಟಿರುವುದು ಕಂಡುಬಂದಿತ್ತುʼʼ ಎಂದು ಅವರ ತಾಯಿ ತಿಳಿಸಿದ್ದಾರೆ.

ಅಭಿನವ್ ಮತ್ತು ಆತನ ಪತ್ನಿ ನಡುವೆ ಸಾಕಷ್ಟು ಭಿನ್ನಾಭಿಪ್ರಾಯವಿತ್ತು ಎಂದೂ ಅವರು ಹೇಳಿದ್ದಾರೆ. "ಅವರಿಬ್ಬರೂ ಆಗಾಗ್ಗೆ ಜಗಳವಾಡುವುದನ್ನು ನಾನು ನೋಡಿದ್ದೇನೆʼʼ ಎಂದಿದ್ದಾರೆ. ಅಲ್ಲದೆ ಆಕೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎನ್ನವ ಮಾಹಿತಿಯನ್ನೂ ಬಹಿರಂಗ ಪಡಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Bengaluru Techie: ಅತುಲ್‌ ಆತ್ಮಹತ್ಯೆ ಪ್ರಕರಣ; ಪತ್ನಿಯ ಚಿಕ್ಕಪ್ಪನಿಗೆ ಜಾಮೀನು

ಏನಿದು ಅತುಲ್‌ ಸುಭಾಷ್‌ ಕೇಸ್‌?

ಪತ್ನಿ ಮತ್ತು ಆಕೆಯ ಮನೆಯವರು ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು 24 ಪುಟಗಳ ಡೆತ್‌ನೋಟ್‌ ಬರೆದಿಟ್ಟು ಕೆಲವು ದಿನಗಳ ಹಿಂದೆ ಅತುಲ್‌ ಸುಭಾಷ್‌ ಆತ್ಮಹತ್ಯೆಗೆ ಶರಣಾಗಿದ್ದರು. ಜತೆಗೆ ವಿಡಿಯೊ ಮಾಡಿ ಪತ್ನಿಯ ಕೃತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಇದು ಮಹಿಳಾ ಪರ ಕಾನೂನಿನ ದುರುಪಯೋಗದ ಕುರಿತು ಇದು ಚರ್ಚೆ ಹುಟ್ಟು ಹಾಕಿತ್ತು.