Viral Video: ನಿಮ್ಮ ಶಾಂತಿಗಾಗಿ ನಾವು ಯುದ್ಧಕ್ಕೆ ಹೋಗಲು ಆಗಲ್ಲ: ಪಾಕ್ ಟಿವಿ ಆ್ಯಂಕರ್ ಫುಲ್ ಟ್ರೋಲ್!
India-Pak War: ರಾವಲ್ಪಿಂಡಿ ಕ್ರೀಡಾಂಗಣದ ಕೆಲವು ಭಾಗಗಳು ಹಾನಿಗೊಳಗಾದ ಕಾರಣ ಪಾಕಿಸ್ತಾನ ಸೂಪರ್ ಲೀಗ್ ನ ಪೇಶಾವರ್ ಝಲ್ಮಿಮತ್ತು ಕರಾಚಿ ಕಿಂಗ್ಸ್ ನಡುವಿನ ಪಂದ್ಯವನ್ನು ಮುಂದೂಡಲಾಗಿದೆ. ಕ್ರೀಡಾಂಗಣದ ಮೇಲಿನ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರದ ಅಧಿಕೃತ ಹೇಳಿಕೆ ಇನ್ನೂ ಬರಬೇಕಿದೆ. ಆದರೆ, ಈ ಘಟನೆಯು ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಒಂದು ವೈರಲ್ ವಿಡಿಯೋದಲ್ಲಿ ಪಾಕಿಸ್ತಾನದ ಸುದ್ದಿ ವಾಹಿನಿಯ ಆ್ಯಂಕರ್‌ಗಳು ಭಾರತದಿಂದ ಸಂಭವನೀಯ ದಾಳಿಯ ಬಗ್ಗೆ ಚರ್ಚಿಸುತ್ತಿರುವುದು ಕಂಡುಬಂದಿದೆ.


ಇಸ್ಲಾಮಾಬಾದ್: ರಾವಲ್ಪಿಂಡಿ ಕ್ರೀಡಾಂಗಣದ (Rawalpindi Cricket Stadium) ಕೆಲವು ಭಾಗಗಳು ಹಾನಿಗೊಳಗಾದ ಕಾರಣ ಪಾಕಿಸ್ತಾನ ಸೂಪರ್ ಲೀಗ್ (Pakistan Super League)ನ ಪೇಶಾವರ್ ಝಲ್ಮಿ (Peshawar Zalmi) ಮತ್ತು ಕರಾಚಿ ಕಿಂಗ್ಸ್ (Karachi Kings) ನಡುವಿನ ಪಂದ್ಯವನ್ನು ಮುಂದೂಡಲಾಗಿದೆ. ಈ ಹಾನಿಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ನಡುವೆ ಡ್ರೋನ್ ಪತನವೇ ಕಾರಣವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕ್ರೀಡಾಂಗಣದ ಮೇಲಿನ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರದ ಅಧಿಕೃತ ಹೇಳಿಕೆ ಇನ್ನೂ ಬರಬೇಕಿದೆ. ಆದರೆ, ಈ ಘಟನೆಯು ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಒಂದು ವೈರಲ್ ವಿಡಿಯೋ(Viral Video)ದಲ್ಲಿ ಪಾಕಿಸ್ತಾನದ ಸುದ್ದಿ ವಾಹಿನಿಯ ಆ್ಯಂಕರ್(Pakistan News Anchors) ಗಳು ಭಾರತದಿಂದ ಸಂಭವನೀಯ ದಾಳಿಯ ಬಗ್ಗೆ ಚರ್ಚಿಸುತ್ತಿರುವುದು ಕಂಡುಬಂದಿದೆ.
Pak Anchor- Jab tak IPL bharat se bahar nahi jata mujhe sukoon nahi milega
— Ankur Singh (@iAnkurSingh) May 8, 2025
2nd Anchor- aapke sukoon ke liye jung thodi ladenge
😂😂😂😂😂😂 pic.twitter.com/QS9kyCz0Gm
ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡ ಈ ವಿಡಿಯೋದಲ್ಲಿ ಆ್ಯಂಕರ್‌ಗಳು ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ದಾಳಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಪಿಎಸ್‌ಎಲ್‌ನ ಪಂದ್ಯಾವಳಿಯನ್ನು ದುಬೈಗೆ ಸ್ಥಳಾಂತರಿಸಿರುವುದನ್ನೂ ಉಲ್ಲೇಖಿಸಿದ್ದಾರೆ. ಒಬ್ಬ ಮಹಿಳಾ ಆ್ಯಂಕರ್ “ಐಪಿಎಲ್ ದುಬೈಗೆ ಶಿಫ್ಟ್ ಆಯ್ತಾ? ನಿಮ್ಮ ಪಿಎಸ್‌ಎಲ್‌ಗೆ ತೊಂದರೆಯಾಗಿದೆಯೇ? ನಿಮ್ಮ ಕ್ರಿಕೆಟ್‌ಗೆ ಯಾರು ಅಡ್ಡಿಪಡಿಸಿದ್ದಾರೆ? ಭಾರತ. ಆರ್ಥಿಕ ಹೊರೆಯನ್ನು ಯಾರು ನೀಡಿದ್ದಾರೆ? ಭಾರತ. ಎಷ್ಟು ಕಾಲ ಈ ರೀತಿಯ ಕಿರಿಕಿರಿಯನ್ನು ಸಹಿಸಬೇಕು? ಭಾರತ ಕಿರಿಕಿರಿ ನೀಡುವ ದೇಶ. ಪಾಕಿಸ್ತಾನಿಗಳ ಭಾವನೆಗಳನ್ನು ಎಷ್ಟು ಕಾಲ ತಡೆಯುವಿರಿ? ನಮ್ಮ ಪಿಎಸ್‌ಎಲ್‌ಗೆ ಅವರ ಡ್ರೋನ್‌ನಿಂದ ದಾಳಿಯಾಗಿದೆ” ಎಂದು ಆರೋಪಿಸಿದ್ದಾರೆ.
ಈ ಸುದ್ದಿಯನ್ನು ಓದಿ: Operation Sindoor: ಶ್ರೀನಗರದಲ್ಲಿ ಭಾರೀ ಸ್ಫೋಟ; ಬೆಚ್ಚಿ ಬಿದ್ದ ಜನ
ಐಪಿಎಲ್ ಭಾರತದಿಂದ ಬೇರೆ ಕಡೆಗೆ ಸ್ಥಳಾಂತರಗೊಳ್ಳದಿದ್ದರೆ ತನಗೆ ಶಾಂತಿ ಇಲ್ಲ ಎಂದು ಮಹಿಳಾ ಆ್ಯಂಕರ್ ಹೇಳುತ್ತಾಳೆ. ಆಗ ಪ್ಯಾನಲ್‌ನಲ್ಲಿ ಚರ್ಚೆಗೆ ಕುಳಿತಿದ್ದ ವ್ಯಕ್ತಿಯೊಬ್ಬರು “ನಿಮ್ಮ ಶಾಂತಿಗಾಗಿ ನಾವು ಯುದ್ಧಕ್ಕೆ ಹೋಗಲು ಆಗಲ್ಲ. ಇದು ಪಾಕಿಸ್ತಾನದ ಶಾಂತಿ ಮತ್ತು ಸಾಮರಸ್ಯಕ್ಕೆ ಸಂಬಂಧಿಸಿದ್ದು” ಎಂದು ಹೇಳಿದರು.ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಹಿಳಾ ಆ್ಯಂಕರ್ ಅನ್ನು ಟ್ರೋಲ್ ಮಾಡುತ್ತಿದ್ದಾರೆ
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಸ್ತುತ ಪಿಎಸ್‌ಎಲ್ ಸೀಸನ್‌ನ ಸ್ಥಳಾಂತರಕ್ಕೆ ಅನಿರೀಕ್ಷಿತ ಸಂದರ್ಭಗಳು ಕಾರಣ ಎಂದಿದೆ. ಗಡಿಯಾಚೆಗಿನ ಡ್ರೋನ್ ದಾಳಿಗಳು ಮತ್ತು ಫಿರಂಗಿ ದಾಳಿಗಳು ಹೆಚ್ಚಾದ ಕಾರಣ ಆಟಗಾರರು ಮತ್ತು ಅಭಿಮಾನಿಗಳ ಸುರಕ್ಷತೆಗೆ ಆತಂಕ ಉಂಟಾಗಿದೆ. ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಹ ತನ್ನದೇ ಆದ ಸವಾಲುಗಳನ್ನು ಎದುರಿಸುತ್ತಿದೆ. ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ರದ್ದುಗೊಳಿಸಿತ್ತು. ಸದ್ಯ ಒಂದು ವಾರದ ವೆರೆಗೆ ಐಪಿಎಲ್ ಅನ್ನು ಸ್ಥಗಿತಗೊಳಿಸಲಾಗಿದೆ.