#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Bengaluru Techie: ಅತುಲ್‌ ಆತ್ಮಹತ್ಯೆ ಪ್ರಕರಣ; ಪತ್ನಿಯ ಚಿಕ್ಕಪ್ಪನಿಗೆ ಜಾಮೀನು

Bengaluru Techie : ಅತುಲ್‌ ಪತ್ನಿ ನಿಖಿತಾ ಸಿಂಘಾನಿಯಾ ಚಿಕ್ಕಪ್ಪ ಸುಶೀಲ್‌ ಸಿಂಘಾನಿಯಾಗೆ ಅಲಹಾಬಾದ್ ಹೈಕೋರ್ಟ್ ಸೋಮವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ

Profile Vishakha Bhat Dec 17, 2024 11:20 AM
ಬೆಂಗಳೂರು: ಟೆಕ್ಕಿ ಅತುಲ್‌ ಸುಭಾಷ್‌ (Bengaluru Techie) ಆತ್ಮಹತ್ಯೆ (Self Harming) ಪ್ರಕರಣಕ್ಕೆ ಸಂಬಂಧಿಸಿದಂತೆ ಅತುಲ್‌ ಪತ್ನಿ ನಿಖಿತಾ ಸಿಂಘಾನಿಯಾ ಚಿಕ್ಕಪ್ಪ ಸುಶೀಲ್‌ ಸಿಂಘಾನಿಯಾಗೆ ಅಲಹಾಬಾದ್ ಹೈಕೋರ್ಟ್ (Allahabad High Court) ಸೋಮವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶುತೋಷ್ ಶ್ರೀವಾಸ್ತವ ಅವರು ಈ ಆದೇಶ ನೀಡಿದ್ದಾರೆ.
ಸುಶೀಲ್‌ ಸಿಂಘಾನಿಯಾ ಪರ ಹಿರಿಯ ವಕೀಲ ಮನೀಶ್ ತಿವಾರಿ ಅವರು ವಾದ ಮಂಡಿಸಿದ್ದರು. ಸುಶೀಲ್‌ ಅವರಿಗೆ 69 ವರ್ಷ ವಯಸ್ಸಾಗಿದ್ದು, ದೀರ್ಘಕಾಲದ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹಾಗಾಗಿ ಅವರು ಅತುಲ್‌ ಆತ್ಮಹತ್ಯೆಗೆ ಪ್ರಚೋದಿಸಿಲ್ಲ‌ ಎಂದು ವಾದ ಮಾಡಿದ್ದರು.
ನ್ಯಾಯಾಧೀಶರು 50 ಸಾವಿರ ರೂ. ದಂಡ ಹಾಗೂ ಕೆಲ ಷರತ್ತನ್ನು ವಿಧಿಸಿ ಜಾಮೀನು ಮಂಜೂರು ಮಾಡಿದ್ದು, ಪೊಲೀಸ್‌ ತನಿಖೆಗೆ ಸಹಕರಿಸಬೇಕು. ಯಾವುದೇ ರೀತಿಯ ಪ್ರಚೋದನೆ ಹಾಗೂ ಬೆದರಿಕೆ ಹಾಕಬಾರದು ಎಂದು ತಿಳಿಸಲಾಗಿದೆ ಹಾಗೂ ಪೊಲೀಸರು ಯಾವುದೇ ಕ್ಷಣದಲ್ಲಿ ತನಿಖೆಗೆ ಆದೇಶಿಸಿದರೂ ಸಹಕರಿಸಬೇಕು, ಭಾರತ ಬಿಟ್ಟು ತೆರಳಬಾರದು ಎಂಬ ಷರತ್ತನ್ನು ವಿಧಿಸಲಾಗಿದೆ.
ಉತ್ತರ ಪ್ರದೇಶದ ಮೂಲದ ಟೆಕ್ಕಿ ಅತುಲ್‌ ಸುಭಾಷ್‌  ಡಿಸೆಂಬರ್ 9ರಂದು ಬೆಂಗಳೂರಿನ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಸುದೀರ್ಘ 24 ಪುಟಗಳ ಡೆತ್‌ ನೋಟ್‌ ಬರೆದಿದ್ದು, ಪತ್ನಿಯಿಂದ ಆದ ಮಾನಸಿಕ ಕಿರುಕುಳದ ಬಗ್ಗೆ ವಿವರಿಸಿದ್ದರು.
ಅತುಲ್‌ ಸಾವಿನ ಬಳಿಕ ಆತನ ಸಹೋದರ ವಿಕಾಸ್‌ ನಿಖಿತಾ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದು, ಪತಿ ಆತ್ಮಹತ್ಯೆ ಬಳಿಕ ನಿಖಿತಾ ಪರಾರಿಯಾಗಿದ್ದಳು. ಹುಡುಕಾಟ ಆರಂಭಿಸಿದ್ದ ಮಾರತ್ತಹಳ್ಳಿ ಪೊಲೀಸರು ಮೂರು ದಿನದ ಒಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿದ್ದರು. ಇದೀಗ ಪೊಲೀಸರು ಪತ್ನಿ, ಆಕೆಯ ತಾಯಿ, ಸಹೋದರ ಹಾಗೂ ಆಕೆಯ ಚಿಕ್ಕಪ್ಪನನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ(Uttarpradesh) ಅತುಲ್‌ ಅತ್ತೆ ನಿಶಾ ಸಿಂಘಾನಿಯಾ ಮತ್ತು ಬಾಮೈದ ಅನುರಾಗ್‌ ಸಿಂಘಾನಿಯಾ ಹಾಗೂ ಚಿಕ್ಕಪ್ಪ ಸುಶೀಲ್‌ ಸಿಂಘಾನಿಯಾ ಅರೆಸ್ಟ್‌ ಆಗಿದ್ದು, ಕೆಲವೇ ಗಂಟೆಗಳಲ್ಲಿ ಹರಿಯಾಣದ ಗುರುಗ್ರಾಮದಲ್ಲಿ(Gurugram) ಅತುಲ್‌ ಪತ್ನಿ ನಿಖಿತಾ ಕೂಡ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಳು. ಮೂವರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.
ಈ ಸುದ್ದಿಯನ್ನೂಓದಿ : Self harming : ಅತುಲ್‌ ಪ್ರಕರಣ ಬೆನ್ನಲ್ಲೇ ಮತ್ತೊಂದು ಕೇಸ್‌- ಪತ್ನಿಯ ಕಿರುಕುಳಕ್ಕೆ ಬೇಸತ್ತು ಕುಟುಂಬ ಸಮೇತ ನವವಿವಾಹಿತ ಆತ್ಮಹತ್ಯೆ
https://youtu.be/T5m4kEPlOCA?si=lSY9zUenhLPobyOT