#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಪಿಎಲ್‌ಡಿ ಬ್ಯಾಂಕ್ ಅಧಿಕಾರದ ಚುಕ್ಕಾಣಿ : ಎನ್‌ಡಿಎ ಮೈತ್ರಿಕೂಟದ ಬೆಂಬಲಿತರು ಮೇಲುಗೈ

ಬ್ಯಾಂಕ್‌ನ ಆಡಳಿತ ಮಂಡಳಿಯ ಒಟ್ಟು 12 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ನಾಮಪತ್ರಗಳನ್ನು ವಾಪಸ್ ಪಡೆಯಲು ಅಂತಿಮ ದಿನವಾದ ಶುಕ್ರವಾರ 5 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಈ ಪೈಕಿ ೪ ಸ್ಥಾನಗಳಲ್ಲಿ ಎನ್‌ಡಿಎ ಬೆಂಬಲಿತರು ಅವಿರೋಧ ಆಯ್ಕೆಯಾದರೆ, ಒಂದು ಸ್ಥಾನದಲ್ಲಿ ಕಾಂಗ್ರೆಸ್ ಬೆಂಬಲಿತೆ ಆಯ್ಕೆಯಾಗಿದ್ದಾರೆ

ಸಂಸದ ಡಾ.ಕೆ.ಸುಧಾಕರ್ ನೇತೃತ್ವದ ಎನ್‌ಡಿಎ ಮೈತ್ರಿ ಕೂಟದ ಬೆಂಬಲಿತರು ಮೇಲುಗೈ

ಸಹಕಾರ ಕ್ಷೇತ್ರ ರಾಜಕೀಯ ರಹಿತವಾಗಿದ್ದರೂ ಚಿಕ್ಕಬಳ್ಳಾಪುರ ಪಿಎಲ್‌ಡಿ ಬ್ಯಾಂಕ್ ಚುನಾವಣೆಯು ರಾಜಕೀಯ ರಂಗು ಪಡೆದಿದ್ದು, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೂ ಮುನ್ನವೇ ಸಂಸದ ಡಾ.ಕೆ.ಸುಧಾಕರ್ ನೇತೃತ್ವದ ಎನ್‌ಡಿಎ ಮೈತ್ರಿ ಕೂಟದ ಬೆಂಬಲಿತರು ಮೇಲುಗೈ ಸಾಧಿಸಿದ್ದಾರೆ.

Profile Ashok Nayak Feb 8, 2025 11:21 PM

ಚಿಕ್ಕಬಳ್ಳಾಪುರ : ಸಹಕಾರ ಕ್ಷೇತ್ರ ರಾಜಕೀಯ ರಹಿತವಾಗಿದ್ದರೂ ಚಿಕ್ಕಬಳ್ಳಾಪುರ ಪಿಎಲ್‌ಡಿ ಬ್ಯಾಂಕ್ ಚುನಾವಣೆಯು ರಾಜಕೀಯ ರಂಗು ಪಡೆದಿದ್ದು, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೂ ಮುನ್ನವೇ ಸಂಸದ ಡಾ.ಕೆ.ಸುಧಾಕರ್ ನೇತೃತ್ವದ ಎನ್‌ಡಿಎ ಮೈತ್ರಿ ಕೂಟದ ಬೆಂಬಲಿತರು ಮೇಲುಗೈ ಸಾಧಿಸಿದ್ದಾರೆ. ಬ್ಯಾಂಕ್‌ನ ಆಡಳಿತ ಮಂಡಳಿಯ ಒಟ್ಟು 12 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ನಾಮಪತ್ರಗಳನ್ನು ವಾಪಸ್ ಪಡೆಯಲು ಅಂತಿಮ ದಿನವಾದ ಶುಕ್ರವಾರ 5 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಈ ಪೈಕಿ ೪ ಸ್ಥಾನಗಳಲ್ಲಿ ಎನ್‌ಡಿಎ ಬೆಂಬಲಿತರು ಅವಿರೋಧ ಆಯ್ಕೆಯಾದರೆ, ಒಂದು ಸ್ಥಾನದಲ್ಲಿ ಕಾಂಗ್ರೆಸ್ ಬೆಂಬಲಿತೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: Chikkaballapur News: ಚಿಂತಾಮಣಿಯ ಅತಿಥಿ ಉಪನ್ಯಾಸಕ ಎಂ.ನರಸಿಂಹಪ್ಪ ಸಾವು: ಜಿಲ್ಲಾ ಸಂಘ ತೀವ್ರ ಸಂತಾಪ

ಅವಿರೋಧ ಆಯ್ಕೆಯಾದವರು
ಎನ್‌ಡಿಎ ಬೆಂಬಲಿತ ಅಭ್ಯರ್ಥಿಗಳಾದ ಹೊಸಹುಡ್ಯ ಸಾಲಗಾರರ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಎಲೇಹಳ್ಳಿ ಗ್ರಾಮದ ವೈ.ಎನ್.ಮಂಜುನಾಥ, ಕಳವಾರ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಬಾಲಕುಂಟಹಳ್ಳಿ ಬಿ.ಎನ್.ಮುನಿಯಪ್ಪ, ದಿಬ್ಬೂರು ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಗಂಗಾರೇಕಾಲುವೆಯ ಎನ್.ಪ್ರಸಾದ್ ಮಂಡಿಕಲ್ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಕಮ್ಮಗು ಟ್ಟಹಳ್ಳಿ ನಾರಾಯಣಸ್ವಾಮಿ, ಕಾಂಗ್ರೆಸ್ ಬೆಂಬಲಿತೆ ಕುಪ್ಪಹಳ್ಳಿ ಸಾಲಗಾರರ ಮಹಿಳಾ ಮೀಸಲು ಕ್ಷೇತ್ರದಿಂದ ಸಾವಿತ್ರಮ್ಮ ಅವಿರೋಧ ಆಯ್ಕೆಯಾಗಿದ್ದಾರೆ.

ಉಳಿದ ೭ ಕ್ಷೇತ್ರಗಳಿಗೆ ಚುನಾವಣೆ
೧೨ ಸ್ಥಾನಗಳ ಪೈಕಿ ೫ ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ನಡೆದ ಹಿನ್ನಲೆಯಲ್ಲಿ ೭ ಕ್ಷೇತ್ರಗಳಿಗೆ ಫೆ.೧೩ ರಂದು ಚುನಾವಣೆ ನಡೆಯಲಿದ್ದು, ಕೊಳವನಹಳ್ಳಿಯ ಸಾಲಗಾರರ ಸಾಮಾನ್ಯ ಕ್ಷೇತ್ರದಲ್ಲಿ ಬಿ.ಮುನಿಕೃಷ್ಣಪ್ಪ ಹಾಗೂ ಬಿ.ಎಂ.ರಾಮಸ್ವಾಮಿ, ಸಾಲಗಾರರಲ್ಲದ ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಲ್ಲಿ ಚಿಕ್ಕರಾಜಪ್ಪ ಹಾಗೂ ಡಿ.ಎನ್.ನಾರಾಯಣಸ್ವಾಮಿ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಮಂಚನಬಲೆ ಸಾಲಗಾರರ ಸಾಮಾನ್ಯ ಕ್ಷೇತ್ರದಲ್ಲಿ ವಿ.ಆನಂದಮೂರ್ತಿ ಹಾಗೂ ವೆಂಕಟ ನಾರಾ ಯಣಪ್ಪ, ಪೆರೇಸಂದ್ರ ಸಾಲಗಾರರ ಪ.ಜಾ ಮೀಸಲು ಕ್ಷೇತ್ರದಲ್ಲಿ ಎಚ್.ವಿ.ನಾರಾಯಣಪ್ಪ, ಹಾಗೂ ಪಿ.ಎನ್.ರಾಮಪ್ಪ, ಅಗಲಗುರ್ಕಿ ಸಾಲಗಾರರ ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಲ್ಲಿ ಆರ್. ಚಂದ್ರಶೇಖರ್ ಹಾಗೂ ಮುದ್ದುಕೃಷ್ಣಪ್ಪ ನಡುವೆ ಚುನಾವಣೆ ನಡೆಯಲಿದೆ.

ನಂದಿ ಸಾಲಗಾರರ ಸಾಮಾನ್ಯ ಕ್ಷೇತ್ರದಲ್ಲಿ ವೈ.ಮಂಜುನಾಥ್, ಜಿ.ಆರ್.ಶ್ರೀನಿವಾಸನ್, ಹಾರೋ ಬಂಡೆ ಸಾಲಗಾರರ ಮಹಿಳಾ ಸಮೀಲು ಕ್ಷೇತ್ರದಲ್ಲಿ ಬಿ.ಎನ್.ಮಂಜುಳಮ್ಮ ಹಾಗೂ ಕೆ.ಸಿ.ರತ್ನಮ್ಮ ನಡುವೆ ಗೆಲುವಿಗೆ ಪೈಪೋಟಿ ನಡೆಯಲಿದೆ.

ಒಟ್ಟಿನಲ್ಲಿ ಪಿಎಲ್‌ಡಿ ಬ್ಯಾಂಕ್ ಚುನಾವಣೆಯು ಪ್ರಸ್ತುತ ಕಾಂಗ್ರೆಸ್ ಹಾಗೂ ಮೈತ್ರಿ ಕೂಟದ ಪಾಲಿಗೆ ಪ್ರತಿಷ್ಟೆಯ ಕಣವಾಗಿ ಮಾರ್ಪಟ್ಟಿದ್ದು, ಅಂತಿಮವಾಗಿ ಯಾರು ಅಧಿಕಾರ ಪಡೆಯಲಿದ್ದಾರೆ ಎಂಬುದು ಫೆ.೧೩ ರಂದು ತಿಳಿಯಲಿದೆ.

ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಆಡಳಿತ ಮಂಡಳಿ ನಿರ್ದೇಶ ಕರ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದ ಎನ್‌ಡಿಎ ಬೆಂಬಲಿತ ಅಭ್ಯರ್ಥಿಗಳಾದ ವೈ.ಎನ್. ಮಂಜುನಾಥ, ಬಿ.ಎನ್.ಮುನಿಯಪ್ಪ, ಎನ್.ಪ್ರಸಾದ್, ನಾರಾಯಣಸ್ವಾಮಿ ಅವರು ಸಂಸದ ಡಾ.ಕೆ. ಸುಧಾಕರ್ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಜಿ.ಪಂ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಮಾವು ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಕೆ.ಆರ್.ರೆಡ್ಡಿ ಇದ್ದರು.

*
ಈಗಾಗಲೇ ಕಳೆದ ಲೋಕಸಭೆ, ನಗರಸಭೆಯ ಅಧ್ಯಕ್ಷೀಯ ಚುನಾವಣೆಯಲ್ಲಿ ತೀವ್ರ ಹಿನ್ನಡೆಯನ್ನು ಅನುಭವಿಸಿರುವ ಕ್ಷೇತ್ರದ ಶಾಸಕ ಪ್ರದೀಪ್‌ಈಶ್ವರ್ ಅವರ ನಡೆಯು ತೀವ್ರ ಕುತೂಹಲ ಕೆರಳಿಸಿದ್ದು, ಪ್ರಸ್ತುತ ನಡೆಯುತ್ತಿರುವ ಪಿಎಲ್‌ಡಿ ಬ್ಯಾಂಕ್ ಆಡಳಿತವನ್ನು ಹಿಂದಿನ ಚುನಾವಣೆಗಳಂತೆ ಕೈಚೆಲ್ಲುವರೋ ಅಥವಾ ಪಕ್ಷದ ತೆಕ್ಕೆಗೆ ಪಡೆಯಲು ಪ್ರಯತ್ನಿಸುವರೋ ಎಂಬ ಕುತೂಹಲ ನಾಗರಿಕರಲ್ಲಿ ಮನೆ ಮಾಡಿದೆ.