PM Narendra Modi Address: ಪಾಕ್ ಜತೆ ಮಾತುಕತೆ ಇನ್ನೇನಿದ್ದರೂ ಭಯೋತ್ಪಾದನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ: ಮೋದಿ ಕಠಿಣ ಸಂದೇಶ
PM Modi Speech On Operation Sindoor:ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್ ಬಳಿಕ ಇದೇ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ನ್ಯೂಕ್ಲಿಯರ್ ದಾಳಿ ಬ್ಲ್ಯಾಕ್‌ಮೇಲ್‌ಗೆ ಭಾರತ ಬಗ್ಗೋ ಮಾತೇ ಇಲ್ಲ ಎಂದು ಪಾಕ್‌ಗೆ ಎಚ್ಚರಿಕೆ ನೀಡಿದ್ದಾರೆ.


ನವದೆಹಲಿ:ಪಹಲ್ಗಾಮ್‌ನಲ್ಲಿ ಹೆಂಡತಿ ಮಕ್ಕಳ ಎದುರೇ ಜನರನ್ನು ಉಗ್ರರು ಕೊಂದು ಹಾಕಿದ್ದರು. ಉಗ್ರರು ನಮ್ಮ ಸಹೋದರಿಯರ ಸಿಂದೂರವನ್ನು ಅಳಿಸಿ ಹಾಕಿದ್ದರು. ಇದಕ್ಕೆ ಪ್ರತಿಯಾಗಿ ಉಗ್ರರು ಊಹಿಸದಂತಹ ಪ್ರತೀಕಾರವನ್ನು ಭಾರತ ತೀರಿಸಿಕೊಂಡಿದೆ. ಪಹಲ್ಗಾಮ್‌ಗೆ ಪ್ರತಿಯಾಗಿ ಒಂದೇ ದಾಳಿ ನೂರಕ್ಕೂ ಹೆಚ್ಚು ಉಗ್ರರನ್ನು ಸದೆಬಡಿದ್ದೇವೆ. ಉಗ್ರರನ್ನು ಮಟ್ಟಹಾಕಲು ಸಂಪೂರ್ಣ ಬೆಂಬಲ ನೀಡಿದ್ದೇವೆ. ಒಂದೇ ಏಟಿಗೆ ಖತಂಗೊಳಿಸಿದ್ದೇವೆ. ಆಪರೇಷನ್ ಸಿಂದೂರ್ ದೇಶದ ಮಹಿಳೆಯರಿಗೆ ಅರ್ಪಣೆ. ಇನ್ನು ಪಾಕ್ ಜತೆ ಮಾತುಕತೆ ಏನಿದ್ದರೂ ಭಯೋತ್ಪಾದನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವ ಪ್ರಧಾನಿ ಮೋದಿ ಪಾಕ್‌ಗೆ ಕಠಿಣ ಸಂದೇಶ ರವಾನಿಸಿದ್ದಾರೆ. ಹೇಳಿದ್ದಾರೆ.
ಆಪರೇಷನ್ ಸಿಂದೂರ್ ಬಳಿಕ ಇದೇ ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ದಾಳಿಯಿಂದ ಪಾಕಿಸ್ತಾನ ಹತಾಶೆಗೊಂಡಿದೆ.ಉಗ್ರರನ್ನು ಮಟ್ಟ ಹಾಕಲು ಭಾರತಕ್ಕೆ ಬೆಂಬಲ ಕೊಡುವ ಬದಲು ನಮ್ಮ ಮೇಲೆಯೇ ದಾಳಿಗೆ ಪಾಕಿಸ್ತಾನ ಯತ್ನಿಸಿತ್ತು. ಪಾಕಿಸ್ತಾನ ಗಡಿಯಲ್ಲಿ ಯುದ್ಧಕ್ಕೆ ಸಜ್ಜಾಗಿತ್ತು. ಆದರೆ ಭಾರತ ಅವರ ತಲೆಯ ಮೇಲೆಯೇ ಹೊಡೆದಿದೆ. ಪಹಲ್ಗಾಮ್ ದಾಳಿ ಉಗ್ರರು , ಮಾಸ್ಟರ್‌ಮೈಂಡ್‌ಗಳು ಖುಲ್ಲಾಂ ಖುಲ್ಲಾ ಓಡಾಡುತ್ತಿದ್ದರು. ಅವರನ್ನು ಹುಡುಕಿ ಹುಡುಕಿ ಕೊಂದು ಹಾಕಿದ್ದೇವೆ. ನಮ್ಮ ದಾಳಿಗೆ ಹೆದರಿದ ಪಾಕಿಸ್ತಾನ ಜಗತ್ತಿನ ಮುಂದೆ ಕಣ್ಣೀರಿಟ್ಟಿತು ಎಂದು ತಿಳಿಸಿದ್ದಾರೆ.
ಭಾರತಕ್ಕೆ ನ್ಯೂಕ್ಲಿಯರ್ ದಾಳಿಯ ಬ್ಲ್ಯಾಕ್‌ಮೇಲ್‌ಗೆ ಭಾರತ ಬಗ್ಗೋದಿಲ್ಲ. ಆಪರೇಷನ್ ಸಿಂದೂರ್ ನಿಂತಿಲ್ಲ. ಕೇವಲ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಉಗ್ರರ ದಾಳಿಗೆ ಯುದ್ಧದ ಮೂಲಕವೇ ಉತ್ತರಿಸಲಾಗುತ್ತದೆ. ಭಯೋತ್ಪಾದನೆ ಸಹಿಸುವ ಮಾತೇ ಇಲ್ಲ. ಉಗ್ರರನ್ನು ಅನ್ನ ಆಹಾರ, ಆಶ್ರಯ ನೀಡಿ ಉಗ್ರರನ್ನು ಪೋಷಣೆ ನೀಡುತ್ತಿರುವ ಪಾಕಿಸ್ತಾನ ಒಂದು ದಿನ ಭಯೋತ್ಪಾದನೆಯಿಂದಲೇ ಸರ್ವನಾಶ ಆಗುತ್ತದೆ. ರಣರಂಗದಲ್ಲಿ ಭಾರತ ಎಂದಿಗೂ ಸೋತಿಲ್ಲ. ಇದು ಯುದ್ಧದ ಸಮಯ ಅಲ್ಲ.. ಅಂತೆಯೇ ಭಯೋತ್ಪಾದನೆಯ ಸಮಯವೂ ಅಲ್ಲ. ಇಂದು ಬುದ್ಧ ಪೂರ್ಣಿಮೆ. ಬುದ್ಧ ನಮಗೆ ಶಾಂತಿಯನ್ನು ಬೋಧಿಸಿದ್ದಾನೆ. ಪ್ರತಿಯೊಬ್ಬ ಭಾರತೀಯ ಶಾಂತಿಯಿಂದ ಬದುಕಲು ಶಕ್ತಿಯ ಉಪಯೋಗವೂ ಮುಖ್ಯ. ನೀರು ಮತ್ತು ರಕ್ತ ಜೊತೆ ಜೊತೆಗೆ ಹರಿಯಲು ಸಾಧ್ಯವಿಲ್ಲ. ಅಂತೆಯೇ ವ್ಯಾಪಾರ ಮತ್ತು ಉಗ್ರವಾದ ಜೊತೆಗಿರಲು ಸಾಧ್ಯವಿಲ್ಲ. ಪಾಕಿಸ್ತಾನ ಉಗ್ರರನ್ನು ನಿರ್ಣಾಮ ಮಾಡಲೇಬೇಕು ಎಂದು ಪಾಕ್‌ಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಅವರು ಸೇನೆಯ ಬಲವನ್ನು ಶ್ಲಾಘಿಸಿದ್ದಾರೆ.