ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunil Pal: ಇದು ಕಾಮಿಡಿ ಅಲ್ಲಾ..‌ಸೀರಿಯಸ್..!: ಸುನಿಲ್ ಪಾಲ್ ಕಿಡ್ನಾಪರ್ಸ್ ಭಾರೀ ಮೊತ್ತದ ಚಿನ್ನ ಖರೀದಿಸುವ ವಿಡಿಯೊ ವೈರಲ್

Sunil Pal: ಬಾಲಿವುಡ್‌(Bollywood) ನ ಖ್ಯಾತ ಹಾಸ್ಯನಟ ಸುನಿಲ್‌ ಪಾಲ್(‌Sunil Pal) ನಾಪತ್ತೆಯಾಗಿದ್ದರು ಎಂದು ಮುಂಬೈನ ಸಂತಕ್ರುಜ್‌ ಪೊಲೀಸ್‌ (Santacruz Police Station) ಠಾಣೆಯಲ್ಲಿ ಮಿಸ್ಸಿಂಗ್‌(‌Missing) ಕೇಸ್‌ ದಾಖಲಾಗಿತ್ತು. 24 ಗಂಟೆ ಯಾರ ಸಂಪರ್ಕಕ್ಕೂ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಗಾಬರಿಗೊಂಡಿದ್ದರು. ಅವರ ಪತ್ನಿ ಸರಿತಾ ಪಾಲ್ ಪೊಲೀಸರಿಗೆ ದೂರು ನೀಡಿದ್ದರು.

Profile Sushmitha Jain Dec 9, 2024 3:15 PM
ಮುಂಬೈ: ಬಾಲಿವುಡ್‌(Bollywood) ನ ಖ್ಯಾತ ಹಾಸ್ಯನಟ ಸುನಿಲ್‌ ಪಾಲ್(‌Sunil Pal) ನಾಪತ್ತೆಯಾಗಿದ್ದರು ಎಂದು ಮುಂಬೈನ ಸಂತಕ್ರುಜ್‌ ಪೊಲೀಸ್‌ (Santacruz Police Station) ಠಾಣೆಯಲ್ಲಿ ಮಿಸ್ಸಿಂಗ್‌(‌Missing) ಕೇಸ್‌ ದಾಖಲಾಗಿತ್ತು. 24 ಗಂಟೆ ಯಾರ ಸಂಪರ್ಕಕ್ಕೂ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಗಾಬರಿಗೊಂಡಿದ್ದರು. ಅವರ ಪತ್ನಿ ಸರಿತಾ ಪಾಲ್ ಪೊಲೀಸರಿಗೂ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಸುನಿಲ್‌ ಪಾಲ್‌ ಅವರನ್ನು ಪತ್ತೆ ಹಚ್ಚುವಲ್ಲಿ ಯುಶಸ್ವಿಯಾಗಿದ್ದು,ಅವರನ್ನು ಸುರಕ್ಷಿತವಾಗಿ‌ ಮಂಗಳವಾರ(ಡಿ.3) ರಾತ್ರಿ ಮನೆಗೆ ತಲುಪಿಸಿದರು. ಸುನಿಲ್‌ ಪಾಲ್ ಅವರ ಕಿಡ್ನಾಪ್ ಕಹಾನಿಗೆ ಸಂಬಂಧಪಟ್ಟಂತೆ ಮತ್ತೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪಾಲ್‌ ಅವರನ್ನು ಅಪಹರಿಸಿದವರು ಅಪಹರಣಕಾರರು ಆಭರಣದ ಅಂಗಡಿಯಲ್ಲಿ ಪಾಲ್ ನೀಡಿದ ಮೊತ್ತದಿಂದ ಬಂಗಾರ ಖರೀದಿಸುವ ದೃಶ್ಯ ಕಂಡು ಬಂದಿದೆ.
ಕಿಡ್ನಾಪ್ ವೇಳೆ ಅಪಹರಣಕಾರರು ಪಾಲ್ ಅವರಿಂದ 7.5-8 ಲಕ್ಷ ಹಣ ಪಡೆದಿದ್ದು, ಇದೀಗ ಅದೇ ಮೊತ್ತದಿಂದ ಇಬ್ಬರು ವ್ಯಕ್ತಿಗಳು ಮೀರತ್‌ನಲ್ಲಿನ ಆಭರಣದ ಅಂಗಡಿಯಲ್ಲಿ ಬಂಗಾರ ಖರೀದಿಸಿದ್ದಾರೆ. ಸದರ್ ಬಜಾರ್‌ನ ಒಂದು ಅಂಗಡಿಯಲ್ಲಿ 4 ಲಕ್ಷ ರೂ., ಲಾಲ್ ಕುರ್ತಿ ಪ್ರದೇಶದ ಮತ್ತೊಂದು ಅಂಗಡಿಯಲ್ಲಿ 2.25 ಲಕ್ಷ ರೂ. ಜ್ಯುವೆಲರ್ಸ್ ಅಲ್ಲಿ ಗೋಲ್ಡ್ ಖರೀದಿಸಿದ್ದು, ಪಾಲ್ ಅವರ ಹೆಸರಿನಲ್ಲಿ ಬಿಲ್ ಮಾಡುವಂತೆ ಅಂಗಡಿ ಮಾಲೀಕರಲ್ಲಿ ಬೇಡಿಕೆ ಇಟ್ಟಿದ್ದಾರೆ.
ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಮುಂಬೈ ಪೊಲೀಸರು ಎರಡೂ ಆಭರಣ ಅಂಗಡಿಗಳ ಮಾಲೀಕರ ಬ್ಯಾಂಕ್ ಖಾತೆಗಳನ್ನು ಹೋಲ್ಡ್ ಮಾಡಿದ್ದಾರೆ. ಹಾಗೇ ಪ್ರಕರಣಕ್ಕೆ ಸಂಬಂಧಿಸಿದಂತೆ 5-6 ಮಂದಿಯನ್ನು ವಶಕ್ಕೆ ಪಡೆದಿದ್ದು, ಸಿಸಿಟಿವಿ ಫುಟೇಜ್ ಆಧಾರದ ಮೇಲೆ ಅಪಹರಣಕಾರರ ಬಗ್ಗೆ ಹೆಚ್ಚಿನ ಸುಳಿವುಗಳನ್ನು ಹುಡುಕುತ್ತಿದ್ದಾರೆ.
https://twitter.com/hindipatrakar/status/1865946026336760055
ಏನಿದು ಪ್ರಕರಣ..?ಸುನಿಲ್ ಪಾಲ್ ಅವರು ಒಂದು ಕಾರ್ಯಕ್ರಮದ ನಿಮಿತ್ತ ಮುಂಬೈನಿಂದ ಹೊರ ಹೋಗುವುದಾಗಿ ತಮ್ಮ ಪತ್ನಿಗೆ ತಿಳಿಸಿದ್ದರು. ಕಾರ್ಯಕ್ರಮ ಮುಗಿದ ಕೂಡಲೇ ಮನೆಗೆ ವಾಪಸ್ ಬರುವುದಾಗಿ ತಿಳಿಸಿ ಹೊರಟಿದ್ದರು. ಆದರೆ ಸುನಿಲ್‌ ಪಾಲ್‌ ತಡ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಕಂಗಾಲಾದ ಅವರ ಪತ್ನಿ ಫೋನ್ ಮೂಲಕ ಅವರನ್ನು ಸಂಪರ್ಕಿಸಲು ಪ್ರಯತ್ನ ಮಾಡಿದ್ದರು. ಸಂಪರ್ಕಕ್ಕೆ ಸಿಗದ ಕಾರಣ ಪೊಲೀಸರಿಗೆ ದೂರು ನೀಡಿ ಸಹಾಯ ಕೇಳಿದ್ದಾರೆ. ಪ್ರಕರಣದ ಗಂಭೀರತೆ ಅರಿತ ಪೊಲೀಸರು, ತಕ್ಷಣವೇ ತನಿಖೆ ಆರಂಭಿಸಿದ್ದರು. ಕೊನೆಗೂ ಪೊಲೀಸರು ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು.
ಘಟನೆ ಕುರಿತ ವಿವರಣೆ ನೀಡಿದ ಪಾಲ್..!
ಸುನಿಲ್ ಪಾಲ್ ಅವರು ಪರಿಸ್ಥಿತಿಯ ಬಗ್ಗೆ ಮಾಧ್ಯಮವೊಂದರಲ್ಲಿ ತೆರೆದಿಟ್ಟಿದ್ದರು. “ಇದು ಪ್ರೀ ಪ್ಲ್ಯಾನ್ ಕಿಡ್ನಾಪಿಂಗ್ ಆಗಿದೆ. ಡಿಸೆಂಬರ್ 2ರಂದು ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಿತ್ತು. ಅವರು ನನಗೆ 50 ಪ್ರತಿಶತದಷ್ಟು ಅಡ್ವಾನ್ಸ್ ಕೂಡ ನೀಡಿದ್ದರು. ಅವರು ವಿಮಾನ ನಿಲ್ದಾಣದಲ್ಲಿ ಪಿಕ್ ಅಪ್‌ಗಾಗಿ ಕಾರನ್ನು ಕಳುಹಿಸಿದ್ದಾರೆ. ಆದರೆ ಒಂದು ಗಂಟೆಯ ನಂತರ ನನ್ನನ್ನು ಮತ್ತೊಂದು ವಾಹನಕ್ಕೆ ಸ್ಥಳಾಂತರಿಸಲಾಯಿತು. ಆಗ ನನಗೆ ಕೆಟ್ಟ ಸಮಯ ಪ್ರಾರಂಭವಾಗಿತ್ತು. ಅವರು ನನ್ನನ್ನು ಅಪಹರಿಸಿದ್ದಾರೆ, ನನ್ನ ಕಣ್ಣುಗಳನ್ನು ಕಟ್ಟಿ ಒಂದು ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ನನಗೆ ತಿಳಿಯಿತು. ಅವರು ತಮ್ಮ ಬಳಿ ಶಸ್ತ್ರಾಸ್ತ್ರಗಳಿವೆ. ಹಾಗಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಲ್ಲಿ 7-8 ಜನರಿದ್ದರು, ಕೆಲವರು ಕುಡಿದ ಮತ್ತಿನಲ್ಲಿ ನನ್ನ ಮೇಲೆ ಕೂಗಾಡುತ್ತಿದ್ದರು.” ಎಂದು ಅವರು ಹೇಳಿದ್ದರು.
ಮಾತು ಮುಂದುವರಿಸಿದ ಅವರು, “ಅಪಹರಣಕಾರರು 20 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ನಾನು ಮುಂಬೈನಲ್ಲಿರುವ ಅನೇಕ ಸ್ನೇಹಿತರಿಗೆ ಹಣವನ್ನು ಸಂಗ್ರಹಿಸಲು ಕರೆ ಮಾಡಿದೆ ಮತ್ತು ತನ್ನನ್ನು ಬಿಡುಗಡೆ ಮಾಡಲು 7.5-8 ಲಕ್ಷ ರೂ. ನೀಡುವುದಾಗಿ ಮನವೊಲಿಸಿದೆ. ಇದಕ್ಕೆ ಒಪ್ಪಿದ ಅಪಹರಣಕಾರರು ಹಣ ವರ್ಗಾಯಿಸಿದಾಗ ಅವರು ನನ್ನನ್ನು ಸಂಜೆಯ ವೇಳೆ ಬಿಡುಗಡೆ ಮಾಡಿದ್ದಾರೆ” ಎಂದು ತಿಳಿಸಿದ್ದರು.
ಸುನಿಲ್‌ ಪಾಲ್‌ ಬಾಲಿವುಡ್‌ ಚಿತ್ರರಂಗದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಹಾಸ್ಯ ನಟ ಮತ್ತು ಕಂಠದಾನ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಸುನಿಲ್‌ ಪಾಲ್‌ ಕಳೆದ ಎರಡು ದಶಕಗಳಲ್ಲಿ ಸಾಕಷ್ಟು ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಯಶಸ್ವಿಯಾಗಿದ್ದಾರೆ. ಹಮ್‌ ತುಮ್‌, ಫಿರ್‌ ಹೇರಾ ಫೇರಿ,ಅಪ್ನಾ ಸಪ್ನಾ ಮನಿ ಮನಿ, ಕಿಕ್‌, ಮನಿ ಬ್ಯಾಕ್‌ ಗ್ಯಾರಂಟಿ, ಡರ್ಟಿ ಪಾಲಿಟಿಕ್ಸ್‌ ಇವರು ನಟಿಸಿರುವ ಪ್ರಮುಖ ಚಿತ್ರಗಳು.
ಈ ಸುದ್ದಿಯನ್ನೂ ಓದಿ: Viral Video: ಸಿಕ್ಕಾಪಟ್ಟೆ ವೈರಲ್‌ ಆಯ್ತು ಚಾಕೋಲೆಟ್‌-ಆಲೂಗೆಡ್ಡೆ ರೆಸಿಪಿ; ನೆಟ್ಟಿಗರು ಹೇಳಿದ್ದೇನು?