Vishwavani Editorial: ವಿಷವೃಕ್ಷದ ಬೇರನ್ನು ಕತ್ತರಿಸಬೇಕಿದೆ
ಕೆಲ ವರ್ಷಗಳ ಹಿಂದೆ, ಮುಂಬೈನ ವಿವಿಧ ನೆಲೆಗಳ ಮೇಲೆ ನಡೆದ ಭಯೋತ್ಪಾದಕರ ಭೀಕರ ದಾಳಿಯನ್ನು ಈಗಲೂ ಮರೆಯಲಾಗದು. ಆ ವೇಳೆ ಸಿಕ್ಕಿಬಿದ್ದಿದ್ದ ಕಸಬ್ ಎಂಬ ಉಗ್ರ ಕೂಡ ಇದೇ ವಯಸ್ಸಿನ ಆಸುಪಾಸಿನವನು. ಭಾರತ-ವಿರೋಧಿ ಭಾವನೆಗಳನ್ನು ಇಂಥವರ ತಲೆಯಲ್ಲಿ ಎಷ್ಟು ವ್ಯವಸ್ಥಿತವಾಗಿ ತುಂಬಲಾಗುತ್ತಿದೆ


ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಮೇಲೆ ದಾಳಿ ನಡೆಸಿ ಸ್ಫೋಟಿ ಸಲೆಂದು ಸಂಚುಹೂಡಿದ್ದ ಅಬ್ದುಲ್ ರೆಹಮಾನ್ (19) ಎಂಬ ಉಗ್ರನನ್ನು ಹರಿಯಾಣದ ಫರಿದಾಬಾದ್‌ನಲ್ಲಿ ಭಾನುವಾರ ತಡರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ ವಿಷಯ ಈಗಾಗಲೇ ಜಗಜ್ಜಾಹೀರು. ತೀವ್ರ ವಿಚಾರಣೆ ನಡೆಸಿದಾಗ ನಿಷೇಧಿತ ಉಗ್ರ ಸಂಘ ಟನೆಗಳ ಜತೆಗೆ ಈತನಿಗೆ ನಂಟಿದ್ದುದು, ಸಾಮಾಜಿಕ ಮಾಧ್ಯಮಗಳ ಮೂಲಕ ಈತ ಅವು ಗಳೊಂದಿಗೆ ಸಂಪರ್ಕ ಸಾಧಿಸಿದ್ದ ಎಂಬುದು ತಿಳಿದು ಬಂದಿದೆ. ವಶಕ್ಕೆ ತೆಗೆದುಕೊಳ್ಳುವಾಗ ಈತನ ಬಳಿ ಒಂದಷ್ಟು ಗ್ರೆನೇಡುಗಳು, ಅನುಮಾನಾಸ್ಪದ ವಿಡಿಯೋಗಳೂ ಇದ್ದ ವೆಂಬುದು ಗಮನಿಸಬೇಕಾದ ಸಂಗತಿ.
ಇದನ್ನೂ ಓದಿ: Vishwavani Editorial: ಇನ್ನೂ ತೀರಿಲ್ಲವೇ ರಕ್ತದಾಹ?
ಕೆಲ ವರ್ಷಗಳ ಹಿಂದೆ, ಮುಂಬೈನ ವಿವಿಧ ನೆಲೆಗಳ ಮೇಲೆ ನಡೆದ ಭಯೋತ್ಪಾದಕರ ಭೀಕರ ದಾಳಿಯನ್ನು ಈಗಲೂ ಮರೆಯಲಾಗದು. ಆ ವೇಳೆ ಸಿಕ್ಕಿಬಿದ್ದಿದ್ದ ಕಸಬ್ ಎಂಬ ಉಗ್ರ ಕೂಡ ಇದೇ ವಯಸ್ಸಿನ ಆಸುಪಾಸಿನವನು. ಭಾರತ-ವಿರೋಧಿ ಭಾವನೆಗಳನ್ನು ಇಂಥವರ ತಲೆಯಲ್ಲಿ ಎಷ್ಟು ವ್ಯವಸ್ಥಿತವಾಗಿ ತುಂಬಲಾಗುತ್ತಿದೆ ಮತ್ತು ಇದಕ್ಕೆಂದೇ ಮೀಸ ಲಾದ ಸಕ್ರಿಯ ಜಾಲವೊಂದಿದೆ ಎಂಬುದನ್ನು ಇಂಥ ಘಟನೆಗಳು ಸಾಬೀತುಪಡಿಸುತ್ತವೆ.
ಜತೆಗೆ, ಭಯೋತ್ಪಾದನೆಯೆಂಬ ವಿಷವೃಕ್ಷವನ್ನು ಬೇರು ಸಮೇತ ಉರುಳಿಸದೆ, ಕೇವಲ ಅದರ ರೆಂಬೆ-ಕೊಂಬೆಗಳನ್ನು ಕತ್ತರಿಸಿದರೆ ಪರಿಣಾಮ ಏನಾಗುತ್ತದೆ ಎಂಬುದನ್ನೂ ಇಂಥ ಘಟನೆಗಳು ಒತ್ತಿಹೇಳಬಲ್ಲವು. ಇಲ್ಲಿ ಗಂಭೀರವಾಗಿ ಪರಿಗಣಿಸಬೇಕಾದ ಮತ್ತೊಂದು ಅಂಶ ವೆಂದರೆ, ಹರಿಯಾಣದಲ್ಲಿ ಹೀಗೆ ಬಂಽತನಾದ ಉಗ್ರ ಅಬ್ದುಲ್ ರೆಹಮಾನ್, ಪಾಲಿ ಗ್ರಾಮ ದಲ್ಲಿ ನಕಲಿ ಹೆಸರು ಮತ್ತು ಗುರುತು ಹೇಳಿಕೊಂಡು ನೆಲೆಸಿದ್ದ ಎಂಬುದು.
ಹುಡುಕುತ್ತ ಹೋದರೆ ಇಂಥ ಸಂಚುಕೋರರು ದೇಶದ ವಿವಿಧೆಡೆಗಳಲ್ಲಿ ಬೇರುಬಿಟ್ಟಿರ ಲಿಕ್ಕೂ ಸಾಕು. ಇಂಥವರನ್ನು ಹೆಕ್ಕಿ ಹೆಕ್ಕಿ ತೆಗೆದು ಹೆಡೆಮುರಿ ಕಟ್ಟುವ ಕೆಲಸಕ್ಕೆ ಆದ್ಯತೆ ನೀಡಬೇಕಾದ ಕಾಲ ಸನ್ನಿಹಿತವಾಗಿದೆ. ಕಾರಣ, ಜನದಟ್ಟಣೆಯಿರುವ ಅಯೋಧ್ಯೆಯ ರಾಮಮಂದಿರದ ಮೇಲೆ ದಾಳಿಮಾಡುವ ಸಂಚನ್ನು ಬಂಽತ ಉಗ್ರ ರೂಪಿಸಿದ್ದ ಎಂದಾ ದರೆ, ಇಂಥ ಜಾಯಮಾನದ ಮಿಕ್ಕವರೂ ಬಗೆಬಗೆಯ ಕುಕೃತ್ಯಗಳ ಕುರಿತು ಆಲೋಚನೆ ಹೊಂದಿರುವುದನ್ನು ತಳ್ಳಿಹಾಕಲಾಗದು.