ರಾಯಚೂರಿನಲ್ಲಿ ಸಿಎಸ್‌ಆರ್ ಕಾರ್ಯಕ್ರಮದಡಿ ಶಿಕ್ಷಣ ಮತ್ತು ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಗೊಳಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್
ರಾಯಚೂರು ಜಿಲ್ಲೆಯು ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗೆ ಸೀಮಿತ ಸೌಕರ್ಯ ಹೊಂದಿ ದ್ದು, ಈ ನಿಟ್ಟಿನಲ್ಲಿ ಕೊರತೆಯನ್ನು ಎದುರಿಸುತ್ತಿದೆ. ಈ ಕೊರತೆಯನ್ನು ನೀಗಿಸಲು ಟಿಕೆಎಂ ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ವಾತಾವರಣವನ್ನು ಉತ್ತಮಗೊಳಿಸುವ ಮತ್ತು ತಾಯಿ ಹಾಗೂ ಮಗುವಿಗೆ ಉತ್ತಮ ಆರೋಗ್ಯ ಸೇವೆ ದೊರಕಿಸುವ ಉದ್ದೇಶದಿಂದ ಹಲವು ಯೋಜನೆಗಳನ್ನು ಕೈಗೊಂಡಿದೆ.


ಬೆಂಗಳೂರು: ಗುಣಮಟ್ಟದ ಶಿಕ್ಷಣ ಒದಗಿಸಲು ಮತ್ತು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆಯು ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ಮಹತ್ವದ ಸಮಾಜಾಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಕಾರ್ಯಕ್ರಮದ ಭಾಗವಾಗಿ ಸಂಸ್ಥೆಯು ರಾಯಚೂರಿನಲ್ಲಿ ಶಿಕ್ಷಣ ಮತ್ತು ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ ಮುಂದಾಗಿದೆ.
ರಾಯಚೂರು ಜಿಲ್ಲೆಯು ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗೆ ಸೀಮಿತ ಸೌಕರ್ಯ ಹೊಂದಿದ್ದು, ಈ ನಿಟ್ಟಿನಲ್ಲಿ ಕೊರತೆಯನ್ನು ಎದುರಿಸುತ್ತಿದೆ. ಈ ಕೊರತೆಯನ್ನು ನೀಗಿಸಲು ಟಿಕೆಎಂ ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ವಾತಾವರಣವನ್ನು ಉತ್ತಮಗೊಳಿಸುವ ಮತ್ತು ತಾಯಿ ಹಾಗೂ ಮಗುವಿಗೆ ಉತ್ತಮ ಆರೋಗ್ಯ ಸೇವೆ ದೊರಕಿಸುವ ಉದ್ದೇಶದಿಂದ ಹಲವು ಯೋಜನೆಗಳನ್ನು ಕೈಗೊಂಡಿದೆ.
ಟಿಕೆಎಂ ರಾಯಚೂರಿನ ಶಾಲೆಗಳಿಗೆ ತರಗತಿ ಪೀಠೋಪಕರಣಗಳು, ನೀರಿನ ವ್ಯವಸ್ಥೆ, ಮತ್ತು ಅಡುಗೆ ಸಾಮಗ್ರಿಗಳನ್ನು ಒದಗಿಸಿದ್ದು, ಶಾಲೆಯನ್ನು ಆಕರ್ಷಕ ಕಲಿಕಾ ಸ್ಥಳಗಳನ್ನಾಗಿ ರೂಪಿಸಿದೆ. ಈ ವರ್ಷ ರಾಯಚೂರಿನ 66,342 ವಿದ್ಯಾರ್ಥಿಗಳು ಈ ಯೋಜನೆಗಳಿಂದ ನೇರ ಪ್ರಯೋಜನ ಪಡೆದಿದ್ದಾರೆ. ಇಲ್ಲಿಯವರಿಗೆ ವಿವಿಧ ಸ್ಥಳಗಳಲ್ಲಿ ಒಟ್ಟು 2,63,373 ವಿದ್ಯಾರ್ಥಿಗಳಿಗೆ ಈ ಯೋಜನೆಯಿಂದ ಪ್ರಯೋಜನ ಉಂಟಾಗಿದೆ.
ಇದನ್ನೂ ಓದಿ: Dr Sadhanashree Column: ನಿಮ್ಮ ನೇತ್ರಗಳ ಶತ್ರು- ಮಿತ್ರರ ಬಗ್ಗೆ ಬಲ್ಲಿರಾ... ?
ವೈದ್ಯಕೀಯ ಕ್ಷೇತ್ರದಲ್ಲಿಯೂ ಉತ್ತಮ ಕೆಲಸಗಳನ್ನು ಮಾಡುತ್ತಿರುವ ಟಿಕೆಎಂ, ರಾಯಚೂರಿನ ತಾಯಿ ಮತ್ತು ಮಗುವಿನ ಆರೈಕೆ ಕೇಂದ್ರಕ್ಕೆ ವಿವಿಧ ರೀತಿಯ ಮಹತ್ವದ ಮತ್ತು ರೋಗನಿರ್ಣಯ ವೈದ್ಯಕೀಯ ಉಪಕರಣಗಳನ್ನು ಒದಗಿಸಿ ಈ ಸರ್ಕಾರಿ ಆಸ್ಪತ್ರೆಗಳ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸ ಮಾಡಿದೆ. ಈ ಸೌಲಭ್ಯಗಳಿಂದ ಆರಂಭಿಕ ಹಂತದಲ್ಲಿ ರೋಗನಿರ್ಣಯ ಮಾಡಬಹುದಾಗಿದೆ, ಗರ್ಭಾವಸ್ಥೆಯ ತೊಡಕುಗಳನ್ನು ಕಡಿಮೆ ಮಾಡಬಹುದಾಗಿದೆ, ಮತ್ತು ಗರ್ಭಾವಸ್ಥೆಯ ಮೊದಲು ಮತ್ತು ನಂತರ ಉತ್ತಮ ಗುಣಮಟ್ಟದ ಆರೈಕೆ ನೀಡಬಹುದಾಗಿದೆ. ಈ ಮೂಲಕ ಸಾವಿರಾರು ಕುಟುಂಬಗಳಿಗೆ ನೆರವಾಗಲಿದೆ.
ಸಂಸ್ಥೆಯ ಈ ಯೋಜನೆಯ ಮೂಲತ ಡಿಫಿಬ್ರಿಲೇಟರ್‌ಗಳು, ಐಸಿಯು ಕಾಟ್ ಗಳು, ಸಿರಿಂಜ್ ಪಂಪ್ ಗಳು, ರೀಸಸೈಟೇಷನ್ ಕಿಟ್ ಗಳು, ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳಂತಹ ಹಲವಾರು ಜೀವರಕ್ಷಕ ಸಾಧನಗಳನ್ನು ನೀಡಲಾಗಿದೆ. ಅದರಲ್ಲೂ ಪ್ರಮುಖವಾಗಿ ಹೆಮಾಟಾಲಜಿ ಅನಾಲೈಸರ್, ಡಾಪ್ಲರ್ ಮತ್ತು ಎಕೋ ಫೀಚರ್ ಗಳುಳ್ಳ ಯುಎಸ್‌ಜಿ ಸ್ಕ್ಯಾನರ್, ಹಾರ್ಮೋನ್ ಅನಾಲೈಸರ್, ಇಸಿಜಿ ಯಂತ್ರ ಗಳು, ಮತ್ತು ಶ್ರವಣ ಕಾರ್ಯ ಪರೀಕ್ಷೆ ವ್ಯವಸ್ಥೆ ಸೇರಿದಂತೆ ಹಲವಾರು ರೋಗನಿರ್ಣಯ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಸ್ಟ್ರೆಚರ್ ಟ್ರಾಲಿ, ಓಟಿ ಟ್ರಾಲಿಗಳು, ಐಎಲ್‌ಆರ್, ಬ್ಲಡ್ ಬ್ಯಾಗ್ ಸೀಲರ್, ಎಎಲ್‌ಎಸ್ ಆಂಬ್ಯುಲೆನ್ಸ್, ಮತ್ತು ವೀಲ್‌ಚೇರ್ ನಂತಹ ಸಾಮಾನ್ಯ ಉಪಕರಣಗಳನ್ನೂ ಸಂಸ್ಥೆ ಯು ನೀಡಿದೆ.
ಈ ಯೋಜನೆಗಳ ಮೂಲಕ ಈ ವರ್ಷ ರಾಯಚೂರಿನ 18,000ಕ್ಕೂ ಹೆಚ್ಚು ಜನರಿಗೆ ಪ್ರಯೋಜನ ಒದಗಿಸಲಾಗಿದೆ. ಒಟ್ಟಾರೆಯಾಗಿ 19,20,429 ವ್ಯಕ್ತಿಗಳಿಗೆ ಈ ಯೋಜನೆಗಳ ಮೂಲಕ ನೆರವು ಒದಗಿಸ ಲಾಗಿದೆ.
ಈ ಕುರಿತು ಮಾತನಾಡಿರುವ ಟಿಕೆಎಂನ ಮುಖ್ಯ ಸಂವಹನ ಅಧಿಕಾರಿ, ಹಿರಿಯ ಉಪಾಧ್ಯಕ್ಷ ಮತ್ತು ರಾಜ್ಯ ವ್ಯವಹಾರಗಳ ಮುಖ್ಯಸ್ಥರಾದ ಶ್ರೀ ಸುದೀಪ್ ದಳವಿ ಅವರು, “ನಿಜವಾದ ಅಭಿವೃದ್ಧಿ ಆರ್ಥಿಕ ಸಾಧನೆಗಳನ್ನು ಮೀರಿದ್ದಾಗಿದ್ದು, ನಾವು ಕಾರ್ಯನಿರ್ವಹಿಸುವ ಸಮಾಜದ ಅಭಿವೃದ್ಧಿಯೇ ನಿಜವಾದ ಪ್ರಗತಿ ಎಂದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನಂಬುತ್ತದೆ. ‘ಒಟ್ಟಿಗೆ ಬೆಳೆಯುವ’ ನಮ್ಮ ಸಿದ್ಧಾಂತದ ಆಧಾರವಾಗಿ ನಮ್ಮ ಸಿಎಸ್‌ಆರ್ ಕಾರ್ಯಗಳು ನಡೆಯುತ್ತಿದ್ದು, ಈ ಮೂಲಕ ಸ್ಥಳೀಯ ಪ್ರದೇಶಗಳ ಅಗತ್ಯತೆಗಳನ್ನು ಪರಿಹರಿಸುವ ಮೂಲಕ ಸುಸ್ಥಿರ ಪರಿಣಾಮವನ್ನು ಸೃಷ್ಟಿಸುವ ಕಡೆಗೆ ಗಮನ ಕೇಂದ್ರೀಕರಿಸಿದ್ದೇವೆ.
ರಾಯಚೂರಿನಲ್ಲಿ ಶಾಲೆಗಳಿಗೆ ಪೀಠೋಪಕರಣ, ಶುದ್ಧ ಕುಡಿಯುವ ನೀರು, ಮತ್ತು ಅಡುಗೆ ಸಾಮಗ್ರಿಗಳಂತಹ ಅಗತ್ಯ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ವೃದ್ಧಿಗೊಳಿಸಿದ್ದೇವೆ. ತಾಯಿ ಮತ್ತು ಮಗು ಆರೈಕೆ ಕೇಂದ್ರಗಳಿಗೆ ಅತ್ಯಾಧುನಿಕ ರೋಗನಿರ್ಣಯ ಮತ್ತು ಜೀವರಕ್ಷಕ ವೈದ್ಯಕೀಯ ಉಪಕರಣಗಳನ್ನು ಒದಗಿಸುವ ಮೂಲಕ ತಾಯಿ ಮತ್ತು ಮಗುವಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವಂತೆ ನೋಡಿಕೊಂಡಿದ್ದೇವೆ. ಈ ಯೋನೆಯು ‘ಅತ್ಯುತ್ತಮ ಕಾರುಗಳ’ ಜೊತೆಗೆ ‘ಅತ್ಯುತ್ತಮ ಸಮಾಜವನ್ನು’ ರೂಪಿಸುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ,” ಎಂದು ಹೇಳಿದರು.
“ಜೊತೆಯಾಗಿ ಬೆಳೆಯುವ” ತತ್ವಕ್ಕೆ ಪೂರಕವಾಗಿ ಟಿಕೆಎಂ ಸಂಸ್ಥೆಯು “ಅತ್ಯುತ್ತಮ ಕಾರುಗಳನ್ನು” ತಯಾರಿಸುವುದರ ಜೊತೆಗೆ “ಅತ್ಯುತ್ತಮ ಸಮಾಜವನ್ನು” ರೂಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿ ಸುತ್ತಿದೆ. ಈ ಮೂಲಕ ಕಂಪನಿಯು ಉತ್ತಮ ಬೆಳವಣಿಗೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ ಮತ್ತು “ಸರ್ವರೂ ಸಂತೋಷದ ಹಾದಿಯಲ್ಲಿ ಸಾಗೋಣ” ತತ್ವದ ಮೂಲಕ ಜನ ಕಲ್ಯಾಣಕ್ಕೆ ಕೊಡುಗೆ ನೀಡುತ್ತದೆ.