Thug Life: ಸೌತ್ ಇಂಡಿಯನ್ ಫುಡ್ ಎಂಜಾಯ್ ಮಾಡಿದ ಮಣಿರತ್ನಂ, ಕಮಲ್ ಹಾಸನ್
ಥಗ್ ಲೈಫ್ (Thug Life) ಚಿತ್ರದ ಮೂಲಕ ಸರಿಸುಮಾರು 38 ವರ್ಷಗಳ ಬಳಿಕ ಒಂದಾಗಿರುವ ಖ್ಯಾತ ನಿರ್ದೇಶಕ ಮಣಿ ರತ್ನಂ (Mani Ratnam) ಮತ್ತು ನಟ ಕಮಲ್ ಹಾಸನ್ (Kamal Haasan) ಅವರು ಒಟ್ಟಿಗೆ ಊಟ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶುಕ್ರವಾರ ಚೆನ್ನೈನಲ್ಲಿ (Chennai) ಸುದ್ದಿಗೋಷ್ಠಿ ಬಳಿಕ ಅವರು ದಕ್ಷಿಣ ಭಾರತ (south india) ಶೈಲಿಯ ಊಟವನ್ನು ಒಟ್ಟಿಗೆ ಸವಿದರು. ಇವರೊಂದಿಗೆ ನಟ ಸಿಲಂಬರಸನ್ (Silambarasan ) ಕೂಡ ಇದ್ದರು. ಇವರೆಲ್ಲ ಸಾಂಪ್ರದಾಯಿಕ ರೀತಿಯಲ್ಲಿ ಬಾಳೆ ಎಲೆಯಲ್ಲಿ ಊಟವನ್ನು ಆನಂದಿಸುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು.


ಚೆನ್ನೈ: ಥಗ್ ಲೈಫ್ (Thug Life) ಚಿತ್ರದ ಮೂಲಕ ಸರಿಸುಮಾರು 38 ವರ್ಷಗಳ ಬಳಿಕ ಒಂದಾಗಿರುವ ಖ್ಯಾತ ನಿರ್ದೇಶಕ ಮಣಿರತ್ನಂ (Mani ratnam) ಮತ್ತು ನಟ ಕಮಲ್ ಹಾಸನ್ (kamal haasan) ಅವರು ಒಟ್ಟಿಗೆ ಊಟ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶುಕ್ರವಾರ ಚೆನ್ನೈನಲ್ಲಿ (Chennai) ಸುದ್ದಿಗೋಷ್ಠಿ ಬಳಿಕ ಅವರು ದಕ್ಷಿಣ ಭಾರತ (south india) ಶೈಲಿಯ ಊಟವನ್ನು ಒಟ್ಟಿಗೆ ಸವಿದರು. ಇವರೊಂದಿಗೆ ನಟ ಸಿಲಂಬರಸನ್ (Silambarasan ) ಕೂಡ ಇದ್ದರು. ಇವರೆಲ್ಲ ಸಾಂಪ್ರದಾಯಿಕ ರೀತಿಯಲ್ಲಿ ಬಾಳೆ ಎಲೆಯಲ್ಲಿ ಊಟವನ್ನು ಆನಂದಿಸುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು. ನಟ ಕಮಲ್ ಹಾಸನ್ ಅವರು ತಮ್ಮ ಮುಂಬರುವ ಥಗ್ ಲೈಫ್ ಚಿತ್ರದ ಮೂಲಕ ಅಭಿಮಾನಿಗಳನ್ನು ಅಚ್ಚರಿಗೊಳಿಸಲು ಸಜ್ಜಾಗಿದ್ದಾರೆ. ನಿರ್ದೇಶಕ ಮಣಿರತ್ನಂ ಅವರೊಂದಿಗೆ ನಟ ಕಮಲ್ ಹಾಸನ್ ಅವರು ಕೊನೆಯ ಬಾರಿಗೆ 1987ರಲ್ಲಿ ನಾಯಕನ್ ಚಿತ್ರಕ್ಕಾಗಿ ಕೆಲಸ ಮಾಡಿದೆ.

ಥಗ್ ಲೈಫ್ ಚಿತ್ರ ನಿರ್ಮಾಪಕರಾದ ಮಣಿರತ್ನಂ ಅವರು ಚೆನ್ನೈನಲ್ಲಿ ನಟ ಕಮಲ್ ಹಾಸನ್ ಮತ್ತು ಸಿಲಂಬರಸನ್ ಜೊತೆಗೂಡಿ ಪತ್ರಿಕಾಗೋಷ್ಠಿ ನಡೆಸಿದರು. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋಗಳಲ್ಲಿ ಒಂದಾದ ಕಮಲ್ ಹಾಸನ್ ಮತ್ತು ಮಣಿರತ್ನಂ ಅಕ್ಕಪಕ್ಕದಲ್ಲಿ ಕುಳಿತು ಬಾಳೆ ಎಲೆಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಬಡಿಸಿದ ರುಚಿಕರವಾದ ದಕ್ಷಿಣ ಭಾರತದ ಊಟವನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಅವರ ಜೊತೆ ಥಗ್ ಲೈಫ್ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಿಲಂಬರಸನ್ ಕೂಡ ಇದ್ದರು.
2024ರ ಅಕ್ಟೋಬರ್‌ನಲ್ಲಿ, ಕಮಲ್ ಹಾಸನ್ ಅವರ 70ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಥಗ್ ಲೈಫ್ ಚಿತ್ರ ನಿರ್ಮಾಪಕರು ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದ್ದರು. ಇದು ಮರಗಳಿಂದ ಕೂಡಿದ ರಸ್ತೆಯಲ್ಲಿ ಕಾರು ಪ್ರಯಾಣದ ಅದ್ಭುತ ದೃಶ್ಯಗಳನ್ನು ಒಳಗೊಂಡಿತ್ತು.
ಇದನ್ನೂ ಓದಿ: Urvashi Rautela: ಊರ್ವಶಿ ರೌಟೇಲಾಗೂ ದೇವಾಲಯ ಇದ್ಯಾ? ಡೆಲ್ಲಿ ವಿವಿಯಲ್ಲೂ ನಟಿಗೆ ಪೂಜೆ ನಡೆಯುತ್ತಾ?
ಇದು ಹಿಮದಿಂದ ಆವೃತವಾದ ಪ್ರದೇಶದಲ್ಲಿ ಓಡುವ ನಿಗೂಢ ವ್ಯಕ್ತಿಯನ್ನು ಕೇಂದ್ರೀಕರಿಸಿತ್ತು. ಇದರಲ್ಲಿ ಕಮಲ್ ಹಾಸನ್ ಅವರು ಶತ್ರುಗಳ ಗುಂಪನ್ನು ಎದುರಿಸುವುದನ್ನು ಕಾಣಬಹುದು. ಸಿಲಂಬರಸನ್ ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ.
ಥಗ್ ಲೈಫ್ ಚಿತ್ರವನ್ನು ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್, ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಮತ್ತು ಮಣಿರತ್ನಂ ಅವರ ಮದ್ರಾಸ್ ಟಾಕೀಸ್ ಜಂಟಿಯಾಗಿ ನಿರ್ಮಿಸಿದ್ದು, ಈ ಚಿತ್ರದಲ್ಲಿ ತ್ರಿಷಾ, ನಾಸರ್, ಜೋಜು ಜಾರ್ಜ್, ಅಲಿ ಫಜಲ್, ಐಶ್ವರ್ಯ ಲಕ್ಷ್ಮಿ ಮತ್ತು ಅಭಿರಾಮಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಥಗ್ ಲೈಫ್ ಚಿತ್ರ ಜೂನ್ 5ರಂದು ತೆರೆಗೆ ಬರಲಿದೆ.