Samantha: ನಾಗ ಚೈತನ್ಯ-ಶೋಭಿತಾ ಮದುವೆ ಮಧ್ಯೆಯೇ ಸಮಂತಾ ಪೋಸ್ಟ್ ವೈರಲ್! ಏನದು..?
Viral Post: ನಟಿ ಸಮಂತಾ(Samantha)ಯಿಂದ ಡಿವೋರ್ಸ್ ಪಡೆದಿದ್ದ ನಾಗ ಚೈತನ್ಯ(Naga Chaitanya) ಇದೀಗ ಎರಡನೇ ಬಾರಿಗೆ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಶೋಭಿತಾ ಧುಲಿಪಾಲ(Sobhita Dhulipala) ಜೊತೆ ನಾಗ ಚೈತನ್ಯ ಹಸೆಮಣೆ ಏರಿದ್ದು, ಡಿಸೆಂಬರ್ 4 ಹೈದರಾಬಾದ್ನಲ್ಲಿ ಈ ಮದುವೆ ನಡೆದಿದೆ. ಕೆಲವು ಗಣ್ಯರು ಮದುವೆಗೆ ಸಾಕ್ಷಿ ಆಗಿದ್ದಾರೆ. ನಾಗ ಚೈತನ್ಯ ತಂದೆ, ಹಿರಿಯ ನಟ ನಾಗಾರ್ಜುನ ಅವರು ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೊಸ ಜೀವನ ಆರಂಭಿಸುತ್ತಿರುವ ಮಗನಿಗೆ ಅವರು ಆಶೀರ್ವಾದ ಮಾಡಿದ್ದಾರೆ. ನಾಗ ಚೈತನ್ಯ ಮತ್ತು ಶೋಭಿತಾ ಅವರ ಮದುವೆಯ ಫೋಟೋಗಳು ಸೋಶಿಯಲ್ ಮಿಡಿಯಾ(Social Media)ದಲ್ಲಿ ವೈರಲ್ ಆಗಿವೆ.

ಹೈದರಾಬಾದ್: ನಟಿ ಸಮಂತಾ(Samantha)ಯಿಂದ ಡಿವೋರ್ಸ್ ಪಡೆದಿದ್ದ ನಾಗ ಚೈತನ್ಯ(Naga Chaitanya) ಇದೀಗ ಎರಡನೇ ಬಾರಿಗೆ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಶೋಭಿತಾ ಧೂಲಿಪಾಲ(Sobhita Dhulipala) ಜೊತೆ ನಾಗ ಚೈತನ್ಯ ಹಸೆಮಣೆ ಏರಿದ್ದು, ಡಿಸೆಂಬರ್ 4 ಹೈದರಾಬಾದ್ನಲ್ಲಿ ಈ ಮದುವೆ ನಡೆದಿದೆ. ಕೆಲವು ಗಣ್ಯರು ಮದುವೆಗೆ ಸಾಕ್ಷಿ ಆಗಿದ್ದಾರೆ. ನಾಗ ಚೈತನ್ಯ ತಂದೆ, ಹಿರಿಯ ನಟ ನಾಗಾರ್ಜುನ ಅವರು ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೊಸ ಜೀವನ ಆರಂಭಿಸುತ್ತಿರುವ ಮಗನಿಗೆ ಅವರು ಆಶೀರ್ವಾದ ಮಾಡಿದ್ದಾರೆ. ನಾಗ ಚೈತನ್ಯ ಮತ್ತು ಶೋಭಿತಾ ಅವರ ಮದುವೆಯ ಫೋಟೋಗಳು ಸೋಶಿಯಲ್ ಮಿಡಿಯಾ(Social Media)ದಲ್ಲಿ ವೈರಲ್ ಆಗಿವೆ.
ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಈ ಜೋಡಿ ದಾಂಪತ್ಯವನ್ನು ಮುರಿದುಕೊಂಡು ಬೇರೆಯಾದರು. ಆ ಬಳಿಕ ನಾಗಚೈತನ್ಯ ಹೆಸರು ಶೋಭಿತಾ ಧೂಲಿಪಾಲ ಜೊತೆ ತಳುಕು ಹಾಕಿಕೊಂಡಿತ್ತು. ಎರಡು ವರ್ಷ ಜೊತೆಯಾಗಿ ಅಡ್ಡಾಡಿದ್ದ ಈ ಜೋಡಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಇದೇ ವೇಳೆ ಸಮಂತಾ ಮಾಡಿದ ಪೋಸ್ಟ್ ಸಾಮಾಜಿಕ ಜಾಲತಾಣ(Social Media)ದಲ್ಲಿ ವೈರಲ್(Viral) ಆಗಿದೆ.
ಹಾಲಿವುಡ್ ತಾರೆ ವಯೋಲಾ ಡೇವಿಸ್ (Viola Davis) ಕಥೆಯ ಕುರಿತು ಸಮಂತಾ ಪೋಸ್ಟ್ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಪುಟ್ಟ ಬಾಲಕ ಹಾಗೂ ಬಾಲಕಿಯ ನಡುವೆ ಫೈಟ್ ನಡೆಯುತ್ತಿದೆ. ಆತ್ಮವಿಶ್ವಾಸದ ಮನೋಭಾವದಿಂದ ಹುಡುಗ ಜಗಳ ಆರಂಭಿಸಿ ನಂತರ ಹುಡುಗಿಯ ಎದುರು ಸೋತು ಅಳಲು ಆರಂಭಿಸುತ್ತಾನೆ. ಈ ವೀಡಿಯೊ ಹಂಚಿಕೊಂಡಿರುವ ಸಮಂತಾ, ‘ಹುಡುಗಿಯಂತೆ ಹೋರಾಡಿ..’ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
‘ನಾಗ ಚೈತನ್ಯ ಮತ್ತು ಶೋಭಿತಾ ಜೀವನದ ಹೊಸ ಅಧ್ಯಾಯ ಆರಂಭಿಸುತ್ತಿರುವುದನ್ನು ನೋಡಲು ಖುಷಿ ಆಗುತ್ತದೆ. ಇದು ನನಗೆ ಒಂದು ಭಾವನಾತ್ಮಕ ಕ್ಷಣ. ನಾಗ ಚೈತನ್ಯಗೆ ಅಭಿನಂದನೆಗಳು. ನಮ್ಮ ಕುಟುಂಬಕ್ಕೆ ಶೋಭಿತಾಗೆ ಸ್ವಾಗತ. ನೀನು ಈಗಾಗಲೇ ನಮ್ಮ ಬದುಕಿನಲ್ಲಿ ಸಾಕಷ್ಟು ಖುಷಿ ತಂದಿರುವೆ’ ಎಂದು ಅಕ್ಕಿನೇನಿ ನಾಗಾರ್ಜುನ ಅವರು ಮದುವೆಯ ಈ ಫೋಟೋಗಳ ಜೊತೆ ಕ್ಯಾಪ್ಷನ್ ನೀಡಿದ್ದಾರೆ.
https://twitter.com/iamnagarjuna/status/1864343119535460744
ಈ ನಡುವೆ ಅಕ್ಕಿನೇನಿ ನಾಗಾರ್ಜುನ ಮಾಜಿ ಸೊಸೆ ಹಾಗೂ ನಾಗ ಚೈತನ್ಯ ಫಾಸ್ಟ್ ವೈಫ್ ಸಮಂತಾ ಇನ್ ಸ್ಟಾಗ್ರಾಮ್ ಅಲ್ಲಿ ಒಂದು ಪೋಸ್ಟ್ ಹಾಕಿದ್ದು, ಸೋಷಿಯಲ್ ಮೀಡಿಯಾ(Social Media)ದಲ್ಲಿ ಆ ಪೋಸ್ಟ್ ಸಖತ್ ವೈರಲ್(Viral) ಆಗಿದೆ. ಇನ್ನು ಇತ್ತೀಚೆಗೆ ಅಂದರೆ ನಾಗಚೈತನ್ಯ ಹಾಗೂ ಶೋಭಿತಾ ಹಳದಿ ಶಾಸ್ತ್ರದ ದಿನವೇ ಸಮಂತಾ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಒಂದು ಕಡೆ ನಾಗಚೈತನ್ಯ ಮದುವೆ ಸಂಭ್ರಮದಲ್ಲಿ ಖುಷಿಯಾಗಿದ್ದರೆ, ಇತ್ತ ಸಮಂತಾ ತಂದೆ ಕಳೆದುಕೊಂಡ ದುಃಖದಲ್ಲಿದ್ದರು. ಸಮಂತಾ ತಂದೆ ಅಂತ್ಯಕ್ರಿಯೆಗೆ ಅಕ್ಕಿನೇನಿ ಕುಟುಂಬದವರು ಭಾಗಿಯಾಗಿರಲಿಲ್ಲ. ತಂದೆ ಅಗಲಿಕೆ ನೋವನ್ನು ಸಮಂತಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.
ಇನ್ನು ಬುಧವಾರ ರಾತ್ರಿ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆದ ಶೋಭಿತಾ-ನಾಗಚೈತನ್ಯ ಮದುವೆಗೆ ಟಾಲಿವುಡ್‌ನ ಅನೇಕ ಗಣ್ಯರು ಹಾಜರಾಗಿದ್ದರು. ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ತೇಜ, ಮಾಜಿ ಎಂಪಿ ಸುಬ್ಬಿರಾಮಿ ರೆಡ್ಡಿ, ತಂಡೇಲ್ ಸಿನಿಮಾ ನಿರ್ದೇಶಕ ಚಂದು ಮುಂಡೇಟಿ, ಸುಹಾಸಿನಿ, ಅಡಿವಿಶೇಷ್, ನಿರ್ದೇಶಕ ಕಲ್ಯಾಣ್ ಕೃಷ್ಣ, ಅಲ್ಲು ಅರವಿಂದ ದಂಪತಿ, ಖ್ಯಾತ ಸಂಗೀತ ನಿರ್ದೇಶಕ ಕೀರವಾಣಿ ಹಾಗೂ ಇನ್ನಿತರರು ಮದುವೆಗೆ ಆಗಮಿಸಿ ಹೊಸ ದಂಪತಿಗೆ ಶುಭ ಹಾರೈಸಿದ್ದಾರೆ.
ಈ ಸುದ್ದಿಯನ್ನೂ ಓದಿ; Pushpa 2 movie: ಪುಷ್ಪ-2 ಸಿನಿಮಾ ನೋಡುವ ಆತುರ; ರೈಲಿಗೆ ಸಿಲುಕಿ ಅಭಿಮಾನಿ ಸಾವು