Viral Video: ಸಂಸತ್‌ನ ತಡೆಬೇಲಿ ಹಾರಿದ ಪ್ರತಿಪಕ್ಷ ನಾಯಕ- ಇಲ್ಲಿದೆ ವಿಡಿಯೊ
Viral Video: ಮಾರ್ಷಿಯಲ್ ಕಾನೂನನ್ನು ಘೋಷಿಸಲು ದ.ಕೊರಿಯಾ ಅಧ್ಯಕ್ಷ ಯೂನ್-ಸೂಕ್-ಯೀಲ್ ಭಾರೀ ಪ್ರಮಾಣದಲ್ಲಿ ಸಶಸ್ತ್ರ ಪಡೆಗಳನ್ನು ಸಿಯೋಲ್‌ನ ಬೀದಿಗಿಳಿದು ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಇನ್ನೊಂದೆಡೆ, ಅಲ್ಲಿನ ಶಾಸನಕರ್ತರು ಈ ವಿವಾದಾತ್ಮಕ ಕಾನೂನನ್ನು ವಿರೋಧಿಸಿ ಮತ್ತು ಈ ತುರ್ತು ಪರಿಸ್ಥಿತಿಯನ್ನು ಕೊನೆಯಾಗಿಸಲು ಸಂಸತ್‌ನತ್ತ ಹೆಜ್ಜೆ ಹಾಕಿದ್ದರು.

ಸಿಯೋಲ್: ದಕ್ಷಿಣ ಕೊರಿಯಾ(South Korea)ದಲ್ಲಿ ಇದೀಗ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ. ಅಲ್ಲಿನ ಅಧ್ಯಕ್ಷರು ಜಾರಿಗೊಳಿಸಲುದ್ದೇಶಿಸಿರುವ ವಿವಾದಿತ ಮಸೂದೆಯೊಂದನ್ನು ವಿರೊಧಿಸಿ ವಿರೊಧ ಪಕ್ಷಗಳು ಮತ್ತು ಜನರು ಬೀದಿಗಿಳಿದಿದ್ದಾರೆ. ಈ ನಡುವೆ ಅಲ್ಲಿನ ವಿರೋಧ ಪಕ್ಷದ ನಾಯಕ ಲೀ ಜೇ-ಮಯಾಂಗ್(Lee Jae-myung) ಈ ವಿವಾದಾತ್ಮಕ ಕಾನೂನನ್ನು ವಿರೋಧಿಸಿ ಮತ ಚಲಾಯಿಸಲು ಸಂಸತ್ತಿನ ತಡೆಬೇಲಿಯನ್ನು ಹತ್ತಿ ಒಳಗೆ ಹೋಗುತ್ತಿರುವ ವಿಡಿಯೋ(video) ಒಂದು ಇದೀಗ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಮಾರ್ಷಿಯಲ್ ಕಾನೂನನ್ನು ಘೋಷಿಸಲು ದ.ಕೊರಿಯಾ ಅಧ್ಯಕ್ಷ ಯೂನ್-ಸೂಕ್-ಯೀಲ್ ಭಾರೀ ಪ್ರಮಾಣದಲ್ಲಿ ಸಶಸ್ತ್ರ ಪಡೆಗಳನ್ನು ಸಿಯೋಲ್‌ನ ಬೀದಿಗಿಳಿದು ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಇನ್ನೊಂದೆಡೆ, ಅಲ್ಲಿನ ಶಾಸನಕರ್ತರು ಈ ವಿವಾದಾತ್ಮಕ ಕಾನೂನನ್ನು ವಿರೋಧಿಸಿ ಮತ್ತು ಈ ತುರ್ತು ಪರಿಸ್ಥಿತಿಯನ್ನು ಕೊನೆಯಾಗಿಸಲು ಸಂಸತ್‌ನತ್ತ ಹೆಜ್ಜೆ ಹಾಕಿದ್ದರು.
https://twitter.com/XXIBGOD_/status/1863947837052264519
ಈ ಸಂದರ್ಭದಲ್ಲಿ ಅಲ್ಲಿನ ವಿರೋಧ ಪಕ್ಷದ ನಾಯಕರಾಗಿರುವ ಲೀ ಜೇ-ಮ್ಯೂಂಗ್ ಈ ವಿವಾದಾತ್ಮಕ ಸೇನಾಡಳಿತ ಕಾನೂನಿನ ವಿರುದ್ಧ ಮತ ಚಲಾಯಿಸಲು ಸಂಸತ್ತಿನ ಭದ್ರತಾ ಬೇಲಿಯನ್ನು ಹತ್ತಿ ಅಲ್ಲಿಂದ ಹಾರಿ ಒಳಪ್ರವೇಶಿಸಿದ್ದಾರೆ.
ಇದಕ್ಕೂ ಮೊದಲು ಜೇ-ಮ್ಯೂಂಗ್ ಯೂ-ಟ್ಯೂಬ್ ಲಬ್ ಮೂಲಕ ತಾನು ಸಂಸತ್ತಿನ ತಡೆಗೊಡೆಯನ್ನು ಏರಿ ಒಳಪ್ರವೇಶಿಸುತ್ತಿರುವುದನ್ನು ಲೈವ್ ರೆಕಾರ್ಡ್ ಮೂಲಕ ಜಗತ್ತಿಗೆ ತೋರಿಸಿದ್ದಾರೆ. ಅಲ್ಲಿನ ಅಧ್ಯಕ್ಷರು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು, ವಿರೋಧ ಪಕ್ಷಗಳು ದೇಶ ವಿರೊಧಿ ಶಕ್ತಿಗಳೊಂದಿಗೆ ಕೈಜೋಡಿಸಿ ತನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿವೆ ಎಂದು ಅವರು ಆರೊಪಿಸಿದ್ದಾರೆ.
ಈ ವಿಡಿಯೋದಲ್ಲಿರುವಂತೆ, ಸಂಸತ್ತಿನ ಆವರಣದ ಸುತ್ತ ವಿರೋಧ ಪಕ್ಷದ ನಾಯಕ ನಡೆದುಕೊಂಡು ಬಂದು ಅಲ್ಲಿ ಹಾಕಲಾಗಿದ್ದ ತಂತಿ ಬೆಲಿಯನ್ನು ಏರಿ ಆ ಬದಿಗೆ ಜಂಪ್ ಮಾಡಿ ಲೈವ್ ಆಗುತ್ತಿರುವಂತೆ ಅಲ್ಲಿಂದ ಸಂಸತ್ತಿನ ಒಳಭಾಗಕ್ಕೆ ಪ್ರವೇಶಿದ್ದಾರೆ. ಜೇ-ಮ್ಯೂಂಗ್ ಇದೇ ಸಮಯದಲ್ಲಿ ಅಲ್ಲಿನ ಅಧ್ಯಕ್ಷರ ವಿರುದ್ಧ ಟೀಕಾಪ್ರಹಾರ ನಡೆಸಿದ್ದು, ಈ ಮಾರ್ಷಿಯಲ್ ಕಾನೂನನ್ನು ಕಾನೂನು ಬಾಹಿರ ಎಂದು ಜರೆದಿದ್ದಾರೆ. ಮಾತ್ರವಲ್ಲದೇ ಸಾರ್ವಜನಿಕರು ರಾಷ್ಟ್ರೀಯ ಅಸೆಂಬ್ಲಿ ಆವರಣದಲ್ಲಿ ಒಟ್ಟು ಸೇರುವಂತೆಯೂ ಅವರು ದೇಶದ ಜನರಿಗೆ ಕರೆ ಕೊಟ್ಟಿದ್ದಾರೆ. “ರಿಪಬ್ಲಿಕ್ ಕೊರಿಯಾದ ಆರ್ಥಿಕತೆ ಕುಸಿಯುವ ಹಂತದಲ್ಲಿದೆ, ನನ್ನ ಪ್ರೀತಿಯ ಜನರೇ ಬನ್ನಿ ರಾಷ್ಟ್ರಿಯ ಅಸೆಂಬ್ಲಿ ಕಡೆಗೆʼʼ ಎಂದು ವಿರೋಧ ಪಕ್ಷದ ನಾಯಕ ಜನರಿಗೆ ಕರೆ ಕೊಟ್ಟಿದ್ದಾರೆ.
ದ.ಕೊರಿಯಾದಲ್ಲಿ ಮಾರ್ಷಿಯಲ್ ಕಾನೂನು ಜಾರಿಗೊಂಡ ಒಂದು ಗಂಟೆಯ ಬಳಿಕ ಸುಮಾರು 190 ಶಾಸನಕರ್ತರು ಸಂಸತ್ತಿನೊಳಗೆ ಪ್ರವೇಶಿದ್ದಾರೆ ಮತ್ತು ಎಲ್ಲರೂ ಒಗ್ಗಟ್ಟಾಗಿ ಈ ಕಾನೂನಿನ ವಿರುದ್ಧ ಮತಚಲಾಯಿಸಿ ಇದನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Sambhal Violence: ಗಲಭೆ ಪೀಡಿತ ಸಂಭಾಲ್‌ಗೆ ತೆರಳಿದ ಕಾಂಗ್ರೆಸ್ ನಿಯೋಗಕ್ಕೆ ತಡೆ; ಭಾರೀ ಪ್ರತಿಭಟನೆ