ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WhatsApp Features: ಹೊಸ ವರ್ಷಕ್ಕೆ ಭರ್ಜರಿ ಕೊಡುಗೆ! ಜ.3ರವರೆಗೆ ವಾಟ್ಸಾಪ್‌ನಲ್ಲಿ ಫೆಸ್ಟಿವಲ್ ಥೀಮ್‌ ಫೀಚರ್ಸ್‌ ಫ್ರೀ... ಫ್ರೀ...

WhatsApp Features: WhatsApp ತನ್ನ ಬಳಕೆದಾರರಿಗೆ ಹೊಸ ವರ್ಷದ  ವಿಶೇಷ  ಕೊಡುಗೆ ಘೋಷಿಸಿದೆ (WhatsApp Festive Features) ಬಳಕೆದಾರರು  ತಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ತಿಳಿಸಲು ಹೊಸ ವರ್ಷದ ಸಂಭ್ರಮ ಡಬಲ್ ಮಾಡಲು ವ್ಯಾಟ್ಸಪ್ ಫೆಸ್ಟಿವಲ್ ಥೀಮ್‌ನಲ್ಲಿ ಕೆಲವೊಂದು  ಫೀಚರ್‌ ಅನ್ನು ಘೋಷಣೆ ಮಾಡಿದೆ.

Profile Pushpa Kumari Dec 25, 2024 12:08 PM
ನವದೆಹಲಿ: ಹೊಸ ವರ್ಷದ ತಯಾರಿಯ ಸಂಭ್ರಮ  ಜೋರಾಗಿದೆ. ಈ ನಡುವೆ WhatsApp ತನ್ನ ಬಳಕೆದಾರರಿಗೆ ಹೊಸ ವರ್ಷದ  ವಿಶೇಷ  ಕೊಡುಗೆ ಘೋಷಿಸಿದೆ (WhatsApp Features) ಬಳಕೆದಾರರು  ತಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ತಿಳಿಸಲು ಹೊಸ ವರ್ಷದ ಸಂಭ್ರಮ ಡಬಲ್ ಮಾಡಲು ವಾಟ್ಸಾಪ್‌ ಫೆಸ್ಟಿವಲ್ ಥೀಮ್‌ನಲ್ಲಿ ಕೆಲವೊಂದು  ಫೀಚರ್‌ ಅನ್ನು ಘೋಷಣೆ ಮಾಡಿದೆ. ಈ ಸೌಲಭ್ಯ  ಡಿ.20 ರಿಂದ ಜನವರಿ 3ರವರೆಗೆ ಉಚಿತವಾಗಿ ಲಭ್ಯವಿದೆ.
ಯಾವೆಲ್ಲ  ಫೀಚರ್ಸ್ ಇರಲಿದೆ?
ಹೊಸ ವರ್ಷದ ಸಂಭ್ರಮ ಹೆಚ್ಚಿಸಿಕೊಳ್ಳಲು ಬಳಕೆದಾರರು  WhatsApp ವಿಡಿಯೊ ಕರೆಗಳಿಗೆ ವಿಶೇಷ ಫಿಲ್ಟರ್‌ಗಳು ಮತ್ತು ಎಫೆಕ್ಟ್‌ಗಳನ್ನು ಸೇರಿಸುವ ಆಫರ್ ನೀಡಲಿದೆ.
ವಾಟ್ಸ್​​ಆ್ಯಪ್​​ ಕೆಲವು ಹೊಸ ವರ್ಷದ ಥೀಮ್‌ಗೆ ಮ್ಯಾಚ್  ಆಗುವ ಅವತಾರ್ ಸ್ಟಿಕ್ಕರ್, ಕ್ಯುರೇಟೆಡ್ ನ್ಯೂ ಇಯರ್ಸ್ ಈವ್ (NYE) ಸ್ಟಿಕ್ಕರ್ ಪ್ಯಾಕ್ ಹಂಚಿಕೊಳ್ಳುವ ಅವಕಾಶ ನೀಡಿದೆ.
ಬಳಕೆದಾರರು  ಹೊಸ ವರ್ಷದ ಶುಭಾಶಯ ಸಂದೇಶಗಳನ್ನು ಕಳುಹಿಸಲು ಹೊಸ NYE ಸ್ಟಿಕ್ಕರ್  ಮತ್ತು ಅವತಾರ್ ಸ್ಟಿಕ್ಕರ್‌ಗಳನ್ನು  ತಮ್ಮ ಪ್ರೀತಿ ಪಾತ್ರರಿಗೆ  ಶೇರ್ ಮಾಡಬಹುದು.
WhatsApp ಬಳಕೆದಾರರು ಹೊಸ ವರ್ಷದ  ಹಬ್ಬದ ಸಂಭ್ರಮ ಹೆಚ್ಚಿಸಲು  ಎಮೋಜಿಯೊಂದಿಗೆ  ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಹುದು. ಇತರ ಬಳಕೆದಾರರು ಈ  ಸಂದೇಶವನ್ನು ಅನಿಮೇಟೆಡ್ ಸ್ವರೂಪದಲ್ಲಿ ವೀಕ್ಷಿಸಬಹುದು.
ಅಪ್ಡೇಟ್‌ ಮಾಡಬೇಕು
ಈ ಎಲ್ಲಾ ವೈಶಿಷ್ಟ್ಯ ಪಡೆದುಕೊಳ್ಳಲು  ಬಳಕೆದಾರರು  iOS ಸಾಧನಗಳಿಗೆ ಆಪ್ ಸ್ಟೋರ್‌ನಿಂದ ಮತ್ತು Android ಬಳಕೆದಾರರು ಪ್ಲೇ ಸ್ಟೋರ್‌ನಿಂದ WhatsApp ಅಪ್‌ಡೇಟ್ ಮಾಡಿಕೊಳ್ಳುವ ಮೂಲಕ ಈ ಸೌಲಭ್ಯ ಪಡೆದುಕೊಳ್ಳಬಹುದು. ಇನ್ನು ಜನವರಿ 1 ಹೊಸ ವರ್ಷದಿಂದ, ಆಂಡ್ರಾಯ್ಡ್ KitKat ಮತ್ತು ಹಳೆಯ ಆವೃತ್ತಿ ಇರುವ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್​ಆ್ಯಪ್ ಅಪ್ಲಿಕೇಶನ್ ರದ್ದು ಆಗಲಿದೆ ಎನ್ನುವ ಮಾಹಿತಿಯನ್ನು WhatsApp ಸಂಸ್ಥೆ ನೀಡಿದೆ. ಹಾಗಾಗಿ  ಜನವರಿ 1 ರಿಂದ ವಾಟ್ಸ್​ಆ್ಯಪ್ ಬಳಕೆ ಮಾಡಲು ಬಳಕೆದಾರರು  ಹೊಸ ವರ್ಷನ್​ಗೆ ಫೋನ್‌ ಅನ್ನು ಅಪ್‌ಗ್ರೇಡ್ ಮಾಡಬೇಕಾಗುತ್ತದೆ.
ಇದನ್ನು ಓದಿ:ವಾಟ್ಸ್’ಆ್ಯಪ್‌ನ ಹೊಸ ಗೌಪ್ಯತೆ ನೀತಿ: ಬದಲಾವಣೆ, ಏಕೆ?