Ashita Maria Crasta: ವಿಡಿಯೊ ಮಾಡುತ್ತಲೇ ಬಿಕ್ಕಿಬಿಕ್ಕಿ ಅತ್ತ ʼತವರಿನ ಸಿರಿʼ ನಟಿ ಆಶಿತಾ; ಆಗಿದ್ದೇನು?
ಸೋಷಿಯಲ್ ಮೀಡಿಯಾ ಮೂಲಕ ಸಕ್ರಿಯರಾಗಿರುವ ನಟಿ ಆಶಿತಾ ತನ್ನ ವೈಯಕ್ತಿಕ ವಿಚಾರವನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ವಿಡಿಯೊ ಕಣ್ಣೀರಾಕಿದ್ದಾರೆ. ತಮ್ಮದೇ ಯುಟ್ಯೂಬ್ ಚಾನೆಲ್‌ನಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡು, ತಮ್ಮ ಕಷ್ಟಗಳನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇವರ ವಿಡಿಯೊ ವೈರಲ್ ಆಗುತ್ತಿದ್ದಂತೆ ಫ್ಯಾನ್ಸ್ ನೋಡಿ ಭಾವುಕರಾಗಿದ್ದಾರೆ.

Ashitha Crasta

ಬೆಂಗಳೂರು: ʼಬಾ ಬಾರೋ ರಸಿಕʼ, ʼತವರಿನ ಸಿರಿʼ, ʼಆಕಾಶ್ʼ ಸೇರಿದಂತೆ ಕನ್ನಡದ ಹಲವು ಹಿಟ್ ಸಿನಿಮಾ ನೀಡಿರುವ ನಟ ಆಶಿತಾ ಮಾರಿಯಾ ಕ್ರಾಸ್ತಾ (Ashita Maria Crasta) ಸದ್ಯ ಸಿನಿಮಾರಂಗ ದಿಂದ ದೂರ ಉಳಿದಿದ್ದಾರೆ. ಆದರೂ ಸೋಶಿಯಲ್ ಮೀಡಿಯಾ ಮೂಲಕ ಸಕ್ರಿಯರಾಗಿರುವ ನಟಿ ತನ್ನ ವೈಯಕ್ತಿಕ ವಿಚಾರವನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ದಿಢೀರ್ ಆಗಿ ನಟಿ ಬಿಕ್ಕಿ ಬಿಕ್ಕಿ ಕಣ್ಣೀರಾಕಿದ್ದಾರೆ. ತಮ್ಮದೇ ಯುಟ್ಯೂಬ್ ಚಾನೆಲ್‌ನಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡು, ತಮ್ಮ ಕಷ್ಟಗಳನ್ನು ನೆನೆದು ಬಿಕ್ಕಿ ಬಿಕ್ಕಿ ಕಣ್ಣೀರಾಗಿದ್ದಾರೆ. ಇವರ ವಿಡಿಯೊ ವೈರಲ್ ಆಗುತ್ತಿದ್ದಂತೆ ಫ್ಯಾನ್ಸ್ ನೋಡಿ ಭಾವುಕರಾಗಿದ್ದಾರೆ.
ನಟಿ ಆಶಿತಾ ಸ್ಯಾಂಡಲ್‌ವುಡ್‌ನಲ್ಲಿ ಹಲವು ಹಿಟ್ ಸಿನಿಮಾ ನೀಡಿ ಜನಪ್ರಿಯರಾಗಿದ್ದಾರೆ. ಕೊನೆಯದಾಗಿ ʻರೋಡ್ ರೋಮಿಯೋʼ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ ಮತ್ಯಾವ ಸಿನಿಮಾಗಳಲ್ಲಿಯೂ ನಟಿ ತೆರೆ ಹಂಚಿಕೊಂಡಿಲ್ಲ. ಇದೀಗ ನಟಿ ಆಶಿತಾ ತಮ್ಮ ಕಷ್ಟಗಳನ್ನು ನೆನೆದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಆಶಿತಾ ನನಗೆ ಫುಡ್ ಪಾಯಿಸನ್ ಆಗೋಯ್ತು. ಒಬ್ಬಳೇ ಇದ್ದೆ ನನಗೆ ಏನು ಮಾಡಬೇಕು ಅಂತಲೇ ಗೊತ್ತಾಗಿಲ್ಲ. ಆ ಸಮಯದಲ್ಲಿ ಯಾರಾದರೂ ಸಹಾಯಕ್ಕೆ ಬೇಕಿತ್ತು. ನನ್ನ ಸ್ನೇಹಿತರೊಬ್ಬರಿಗೆ ತಿಳಿಸಿದೆ. ಅವರು ಕೆಲಸ ಬಿಟ್ಟು ನನ್ನ ನೋಡಲು ಬಂದರು ಎಂದು ಆ ದಿನವನ್ನು ನೆನಪಿಸಿಕೊಂಡು ಆಶಿತಾ ಕಣ್ಣೀರು ಹಾಕಿದ್ದಾರೆ.
ಇದನ್ನು ಓದಿ: Anchor Anushree: ಕೊನೆಗೂ ಮದುವೆ ಬಗ್ಗೆ ಲೈವ್‌ನಲ್ಲೇ ಸೀಕ್ರೆಟ್ ರಿವೀಲ್ ಮಾಡಿದ ಆ್ಯಂಕರ್ ಅನುಶ್ರೀ!
ಮಾತು ಮುಂದುವರಿಸಿರುವ ನಟಿ ಆಶಿತಾ "ದೇವರಲ್ಲಿ ನಾನು ಬಹಳಷ್ಟು ನಂಬಿಕೆ ಇಟ್ಟಿದ್ದೇನೆ. ದೇವರು ನನ್ನ ಯಾವತ್ತು ಕೈ ಬಿಟ್ಟಿಲ್ಲ ಭಗವಂತನಲ್ಲಿ ನಂಬಿಕೆ ಇಲ್ಲದಿದ್ದರೆ ಜೀವನದಲ್ಲಿ ಏನೂ ಸಾಧ್ಯವಿಲ್ಲ. ಈಗ ಅಳುತ್ತಿರುವುದು ದುಃಖದಿಂದ ಅಲ್ಲ, ದೇವರು ನನ್ನ ಕೈಬಿಟ್ಟಿಲ್ಲ ಎನ್ನುವ ಭರವಸೆಯಿಂದ. ಹಾಗಾಗಿ ನಾವು ಕಷ್ಟದಲ್ಲಿ ಇದ್ದಾಗ ದೇವರು ಒಬ್ಬರನ್ನು ಕಳುಹಿಸುತ್ತಾನೆ, ಅದು ಯಾವುದೇ ಸಂದರ್ಭ ಇರಬಹುದುʼʼ ಎಂದು ವಿಡಿಯೊ ಮಾಡಿ ಕಣ್ಣೀರು ಹಾಕಿದ್ದಾರೆ. ಈ ವಿಡಿಯೊ ನೋಡಿದ ಹೆಚ್ಚಿನ ಅಭಿಮಾನಿಗಳು ನಟಿಗೆ ದೈರ್ಯ ತುಂಬಿದ್ದಾರೆ.
ನಟಿ ಆಶಿತಾ ಮಾರಿಯಾ ಕ್ರಾಸ್ತಾ ಪುನೀತ್ ರಾಜ್‌ಕುಮಾರ್ ನಟಿಸಿದ್ದ 'ಆಕಾಶ್', ಶಿವರಾಜ್‌ಕುಮಾರ್ ನಟನೆಯ 'ತವರಿನ ಸಿರಿʼ. ʼಚಾಂದಿನಿʼ, ʼಮೈ ಗ್ರೀಟಿಂಗ್ಸ್ʼನಂತಹ ಹಲವಾರು ಹಿಟ್ ಚಿತ್ರಗಳನ್ನು ನೀಡಿ ಸದ್ಯ ಚಿತ್ರರಂಗದಿಂದ ದೂರವಾಗಿದ್ದಾರೆ. ಉದ್ಯಮಿ ಒಬ್ಬರನ್ನು ನಟಿ ಆಶಿತಾ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದು ದೂರಾಗಿದ್ದರು. ಸದ್ಯ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ.