ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ayyana Mane: 100 ಮಿಲಿಯನ್ ಮಿನಿಟ್ ವೀಕ್ಷಣೆ ಕಂಡು ದಾಖಲೆ ಬರೆದ ಕನ್ನಡದ ವೆಬ್ ಸೀರಿಸ್

ಜೀ5ನಲ್ಲಿ ಒಟಿಟಿ ಯಲ್ಲಿ ಬಿಡುಗಡೆ ಮಾಡಿರುವ ಅಯ್ಯನ ಮನೆ ವೆಬ್ ಸರಣಿಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಕಳೆದ ತಿಂಗಳ 25 ರಂದು zee5ನಲ್ಲಿ ಸ್ಟ್ರೀಮಿಂಗ್ ಕಂಡ ಅಯ್ಯನ ಮನೆ ಮಿನಿ ವೆಬ್ ಸಿರೀಸ್ ಈಗ ದಾಖಲೆ ಬರೆದಿದೆ. ಜಾಜಿಯ ರೋಚಕ ಕಥೆಯ ಈ ವೆಬ್ ಸರಣಿ ಬರೋಬ್ಬರಿ 100 ಮಿಲಿಯನ್ ಮಿನಿಟ್ ವೀಕ್ಷಣೆ ಕಂಡಿದ್ದು ಸಖತ್‌ ಸೌಂಡ್ ಮಾಡುತ್ತಿದೆ.

ಅಯ್ಯನ ಮನೆ' ವೆಬ್ ಸೀರಿಸ್ ಗೆ ಭರ್ಜರಿ ರೆಸ್ಪಾನ್ಸ್

Profile Pushpa Kumari May 22, 2025 3:48 PM

ಬೆಂಗಳೂರು: ಸದಾ ಹೊಸತನ ಮೂಲಕ ದಾಖಲೆ ಬರೆಯುವ ಜೀ ಕನ್ನಡ ಮೊದಲ ಬಾರಿಗೆ ಜೀ5ನಲ್ಲಿ ಒಟಿಟಿ ಯಲ್ಲಿ ಬಿಡುಗಡೆ ಮಾಡಿರುವ ಅಯ್ಯನ ಮನೆ (Ayyana Mane) ವೆಬ್ ಸರಣಿಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಕಳೆದ ತಿಂಗಳ 25ರಂದು zee5ನಲ್ಲಿ ಸ್ಟ್ರೀಮಿಂಗ್ ಕಂಡ ಅಯ್ಯನ ಮನೆ ಮಿನಿ ವೆಬ್ ಸಿರೀಸ್ ಈಗ ದಾಖಲೆ ಬರೆದಿದೆ. ಜಾಜಿಯ ರೋಚಕ ಕಥೆಯ ಈ ವೆಬ್ ಸರಣಿ ಬರೋಬ್ಬರಿ 100 ಮಿಲಿಯನ್ ಮಿನಿಟ್ ವೀಕ್ಷಣೆ ಕಂಡಿದ್ದು ಸಖತ್‌ ಸೌಂಡ್ ಮಾಡುತ್ತಿದೆ..

7 ಸಂಚಿಕೆಗಳನ್ನು ಒಳಗೊಂಡಿರುವ ಅಯ್ಯನ ಮನೆ ವೆಬ್ ಸರಣಿಯಲ್ಲಿ ದಿಯಾ' ಸಿನಿಮಾ ನಟಿ ಖುಷಿ ರವಿ ಜಾಜಿ ಪಾತ್ರದಲ್ಲಿ ನಟಿಸಿದ್ದಾರೆ. ಒಲವಿನ ನಿಲ್ದಾಣ ಸೀರಿಯಲ್ ನ ನಾಯಕ ನಟ ಅಕ್ಷಯ್ ನಾಯಕ್, ಹಾಗೂ ಕಾಂತಾರ ನಟಿ ಮಾನಸಿ ಸುಧೀರ್ ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಜಾಜಿಯನ್ನು ಅವರ ಪತಿ‌ ಅತೀಯಾಗಿ ಪ್ರೀತಿ ಸುತ್ತಾನೆ. ಜಾಜಿ ಕೂಡ ಸಂಪ್ರದಾಯಿಕ ಹುಡುಗಿಯಾಗಿದ್ದು, ಇವಳ ಭಾವನಾತ್ಮಕ ಪಯಣ ಮನೆಯಲ್ಲಿನ ರಹಸ್ಯಗಳನ್ನು ಬಯಲು ಮಾಡುತ್ತಾ..? ಇಲ್ಲವೇ ಇವಳೇ ರಹಸ್ಯವಾಗಿರುತ್ತಾಳಾ ಎಂಬ ಹಲವು ಕುತೂಹಲಕಾರಿ ಅಂಶಗಳಿವೆ.

ಇದನ್ನು ಓದಿ: Agnyathavasi Movie: Zee5 ಒಟಿಟಿಗೆ ʼಅಜ್ಞಾತವಾಸಿʼ ಎಂಟ್ರಿ; ಯಾವಾಗ ಪ್ರಸಾರ?

ಅಯ್ಯನ ಮನೆ ವೆಬ್ ಸೀರೀಸ್ ಅನ್ನು ನಿರ್ದೇಶಕ ರಮೇಶ್ ಇಂದಿರಾ ಅವರು ನಿರ್ದೇಶಿಸಿದ್ದಾರೆ. ಈ ವೆಬ್ ಸಿರೀಸ್ ನಲ್ಲಿ ರಮೇಶ್ ಇಂದಿರಾ, ಶೋಭರಾಜ್ ಪಾವೂರ್, ಅನಘಾ ನಾಗೇಶ್, ರಮ್ಯಾ ಶಂಕರ್, ಗೌರಿ ಕೃಷ್ಣ, ವಿಜಯ್ ಶೋಭರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ. ಶೃತಿ ನಾಯ್ಡು ಅವರು ವೆಬ್ ಸರಣಿಗೆ ಬಂಡವಾಳ ಹೂಡಿದ್ದಾರೆ.ಸದ್ಯ ʼಅಯ್ಯನ ಮನೆʼ ವೆಬ್ ಸೀರಿಸ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಇಡೀ ತಂಡಕ್ಕೂ ಖುಷಿ ನೀಡಿದೆ.