Bishnoi gang: ಬಿಗ್‌ಬಾಸ್ ಖ್ಯಾತಿ ಸೆಲೆಬ್ರಿಟಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಜೀವ ಬೆದರಿಕೆ... ಕಾರಣವೇನು?
ಇತ್ತೀಚೆಗಷ್ಟೇ ರ‍್ಯಾಪರ್ ಅಸಿಮ್ ರಿಯಾಜ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಗಾಸಿಪ್ ಸುಳಿಯಲ್ಲಿ ಸಿಲುಕಿದ್ದರು. ಇದೀಗ ಇದರ ಬೆನ್ನಲ್ಲೆ ಖ್ಯಾತ ನಟ ಅಭಿನವ್ ಶುಕ್ಲಾಗೆ(Bishnoi gang) ಕೊಲೆ ಬೆದರಿಕೆ ಆತಂಕ ಎದುರಾಗಿದೆ. ರ‍್ಯಾಪರ್ ಅಸಿಮ್ ರಿಯಾಜ್ ಬಗ್ಗೆ ನೆಗೆಟಿವ್ ಪ್ರತಿಕ್ರಿಯೆ ನೀಡಿದ್ದ ಬೆನ್ನಲ್ಲೆ ಅಸಿಮ್ ಅಭಿಮಾನಿಯೊಬ್ಬರು ಅಭಿನವ್ ಶುಕ್ಲಾಗೆ ಕೊಲೆ ಬೆದರಿಕೆ ಹಾಕಿದ್ದಾರೆ.


ನವದೆಹಲಿ: ಬಿಗ್‌ಬಾಸ್ ಸೀಸನ್ 14 ಸ್ಪರ್ಧಿ, ಅಕ್ಸರ್ 2, ಬರ್ನಿಂಗ್ ಸಿನಿಮಾದ ಖ್ಯಾತ ನಟ ಅಭಿನವ್ ಶುಕ್ಲಾ (Abhinav Shukla) ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ರ‍್ಯಾಪರ್ ಅಸಿಮ್ ರಿಯಾಜ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಗಾಸಿಪ್ ಸುಳಿಯಲ್ಲಿ ಸಿಲುಕಿದ್ದರು. ಇದೀಗ ಇದರ ಬೆನ್ನಲ್ಲೆ ಖ್ಯಾತ ನಟ ಅಭಿನವ್ ಶುಕ್ಲಾಗೆ ಕೊಲೆ ಬೆದರಿಕೆ ಆತಂಕ ಎದುರಾಗಿದೆ. ರ‍್ಯಾಪರ್ ಅಸಿಮ್ ರಿಯಾಜ್ ಬಗ್ಗೆ ನೆಗೆಟಿವ್ ಪ್ರತಿಕ್ರಿಯೆ ನೀಡಿದ್ದ ಬೆನ್ನಲ್ಲೆ ಅಸಿಮ್ ಅಭಿಮಾನಿಯೊಬ್ಬರು ಅಭಿನವ್ ಶುಕ್ಲಾಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಬೆದರಿಕೆಯ ಸಂದೇಶವು 2024 ರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ದಾಳಿ ಮಾಡಿದ ಬೆದರಿಕೆಯನ್ನು ನೆನಪಿಸುವಂತಿದೆ. ಹೀಗಾಗಿ ನಟ ಅಭಿನವ್ ಅವರು ಆತಂಕಕಾರಿ ಪೋಸ್ಟ್‌ವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬಿಗ್‌ಬಾಸ್ ಸೀಸನ್ 13ರರ ಸ್ಪರ್ಧಿ ರ‍್ಯಾಪರ್ ಅಸಿಮ್ ರಿಯಾಜ್ ಬಗ್ಗೆ ಅಭಿನವ್ ಇತ್ತೀಚೆಗೆ ನೆಗೆಟಿವ್ ಪ್ರತಿಕ್ರಿಯೆವೊಂದನ್ನು ನೀಡಿದ್ದರು. ಹೀಗಾಗಿ ಅಸಿಮ್ ಅಭಿಮಾನಿಯೊಬ್ಬರು ತಾನು ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡಿರುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ. ಅಂಕುಶ್ ಗುಪ್ತಾ ಎಂಬ ವ್ಯಕ್ತಿ ನಟನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಂದೇಶದ ಮೂಲಕ ಜೀವ ಬೆದರಿಕೆ ಹಾಕಿದ್ದು ಈ ವಿಚಾರವನ್ನು ಅಭಿನವ್ ತನ್ನ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಬೆದರಿಕೆ ಸಂದೇಶದ ಸ್ಕ್ರೀನ್‌ಶಾಟ್ ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.
ಮೆಸೇಜ್‌ನಲ್ಲಿ ಏನಿದೆ?
ನಾನು ಲಾರೆನ್ಸ್ ಬಿಷ್ನೋಯ್ ಗ್ಯಾಂಗ್‌ನವನು. ನಿನ್ನ ವಿಳಾಸ ನನಗೆ ಗೊತ್ತು. ಬರಬೇಕಾ ನಿನ್ನ ಮನೆಗೆ? ಜಸ್ಟ್ ಸಲ್ಮಾನ್ ಖಾನ್ ಮನೆಗೆ ಹೋದಂತೆ, ನಿನ್ನ ಮನೆಗೂ ಬಂದು ದಾಳಿ ನಡೆಸುತ್ತೇವೆ. ಇದು ನಿನ್ನ ಕೊನೆಯ ಎಚ್ಚರಿಕೆ. ಅಸಿಮ್ ಬಗ್ಗೆ ಏನಾದರೂ ಕೀಳಾಗಿ ಹೇಳಿದರೆ, ನಿನ್ನ ಹೆಸರೇ ನ್ಯೂಸ್‌ನಲ್ಲಿ ಬರುತ್ತದೆ. ಲಾರೆನ್ಸ್ ಬಿಷ್ನೋಯ್ ಅಸಿಮ್‌ನ ಬೆಂಬಲದಲ್ಲಿ ದ್ದಾರೆ," ಎಂದು ಬೆದರಿಸಲಾಗಿದೆ. ಅಭಿನವ್‌ಗೆ ಬಂದಿರುವ ಈ ಸಂದೇಶದಲ್ಲಿ, ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್‌ಗೆ ನೀಡಲಾದ ಬೆದರಿಕೆಯಂತೆಯೇ ಇದೆ. ನಟ ಅಭಿನವ್ ಶುಕ್ಲಾ ತಮ್ಮ ಖಾತೆಯಲ್ಲಿ ಬೆದರಿಕೆ ಸಂದೇಶದ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ.
ಈ ಸಂದೇಶವನ್ನು 'ಅಂಕುಶ್ ಗುಪ್ತಾ' ಎನ್ನುವ ವ್ಯಕ್ತಿಯೊಬ್ಬನು ಕಳಿಸಿದ್ದಾನೆ ಎಂದು ನಟ ಹೇಳಿಕೊಂಡಿದ್ದಾರೆ. ಅಭಿನವ್ ಶುಕ್ಲಾ ಅವರು ಈ ಸ್ಕ್ರೀನ್ ಶಾಟ್ ಹಂಚಿಕೊಂಡ ಬಳಿಕ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ. ಲಾರೆನ್ಸ್ ಬಿಷ್ನೋಯ್ ಗ್ಯಾಂಗ್ ಹಿಂದೆಯೂ ಹಲವಾರು ಸೆಲೆಬ್ರಿಟಿಗಳಿಗೆ ಬೆದರಿಕೆ ನೀಡಿದ ಪ್ರಕರಣಗಳಿಂದ ಸುದ್ದಿಯಾಗಿದ್ದು,ಇದೀಗ ಹೆಚ್ಚುತ್ತಿರುವ ಆನ್‌ಲೈನ್ ಕಿರುಕುಳ ಪ್ರಕರಣಗಳು, ಸೈಬರ್ ಸುರಕ್ಷತಾ ಕ್ರಮಗಳ ಅಗತ್ಯತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟು ಹಾಕಿದೆ.
ಅಭಿನವ್ ಪತ್ನಿ ರುಬಿನಾ ಮತ್ತು ಅಸಿಮ್ ಫಿಟ್‌ನೆಸ್ ರಿಯಾಲಿಟಿ ಶೋ ವೊಂದರಲ್ಲಿ ಪ್ಯಾನೆಲಿಸ್ಟ್‌ಗಳಾಗಿದ್ದರು. ಆಗ ಇಬ್ಬರ ನಡುವೆ ವಾಗ್ವಾದ ಸಹ ಏರ್ಪಟ್ಟಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ನಟ ಅಭಿನವ್ ಬಳಿ ಈ ರಿಯಾಲಿಟಿ ಶೋನ ಬಗ್ಗೆ ಕೇಳಲಾಗಿತ್ತು. ಆಗ ಅಭಿನವ್ ಅಸಿಮ್ ಬಗ್ಗೆ ಇರುವ ಅಸಮಾಧಾನ ಹೊರ ಹಾಕಿದ್ದಾರೆ. ಕೆಲವರು ಈ ಶೋನಲ್ಲಿ ಮೆದುಳು ಇಲ್ಲದಂತೆ ವರ್ತಿಸುತ್ತಾರೆ. ಕೆಟ್ಟ ವರ್ತನೆ ಫಿಟ್‌ನೆಸ್‌ನ ಸಂಕೇತವಲ್ಲ ಎಂಬ ಹೇಳಿಕೆ ನೀಡಿದ್ದರು. ಸದ್ಯ ಅಭಿನವ್ ಕಳುಹಿಸಲಾದ ಬೆದರಿಕೆಯ ಮೆಸೇಜ್ ಹಂಚಿಕೊಂಡಿದ್ದು ಪಂಜಾಬ್ ಪೊಲೀಸರನ್ನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.