Katrina Kaif: ಕತ್ರಿನಾ ಅಂಗೈನಲ್ಲಿ ಪ್ರೀತಿಯ ಚಿತ್ತಾರ; ವಿಕ್ಕಿ ಹೆಸರು ಮೆಹೆಂದಿ ಹಾಕಿಸಿಕೊಂಡ ಕ್ಯಾಟ್
ನಟಿ ಕತ್ರಿನಾ ಕೈಫ್ ತಮ್ಮ ಸ್ನೇಹಿತೆಯ ಮೆಹೆಂದಿ ಕಾರ್ಯಕ್ರಮಕ್ಕೆ ತೆರಳಿದ್ದು, ಅಲ್ಲಿ ತಮ್ಮ ಪತಿಯೊಂದಿಗೆ ಕಳೆದ ಕೆಲವೊಂದು ಫೋಟೊವನ್ನು ಇನ್ ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ತಮ್ಮ ಪತಿಗಾಗಿ ವಿಶೇಷ ತರನಾದ "ವಿಕೆ" ವಿನ್ಯಾಸದ ಮೆಹೆಂದಿಯನ್ನು ಹಾಕಿಕೊಂಡಿರುವ ಅವರು, ಒಂದು ಫೋಟೋದಲ್ಲಿ ತಮ್ಮ ಮೆಹೆಂದಿ ಹಚ್ಚಿದ ಎರಡೂ ಕೈಗಳನ್ನು ಸುಂದರವಾಗಿ ಪ್ರದರ್ಶಿಸಿದರು. ಈ ಫೋಟೋ ಇದೀಗ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದ್ದು, ಈ ಕ್ಯೂಟ್ ಜೋಡಿಯ ಪ್ರೀತಿ ಕಂಡು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


ಮುಂಬೈ: ಬಾಲಿವುಡ್ ನ ಮೋಸ್ಟ್ ಕ್ಯೂಟ್ ಕಪಲ್ ಸಾಲಿನಲ್ಲಿ ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಮುಂಚೂಣಿಯಲ್ಲಿದ್ದಾರೆ. ಕತ್ರಿನಾ ಆಗಾಗ ತಮ್ಮ ಪತಿ ಜೊತೆಗಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಪ್ರೀತಿಗೆ ಅಭಿಮಾನಿಗಳು ಸದಾ ಮನಸೋಲುತ್ತಾರೆ. ಇದೀಗ ನಟಿ ಕತ್ರಿನಾ ಕೈಫ್ ತಮ್ಮ ಸ್ನೇಹಿತೆಯ ಮೆಹೆಂದಿ ಕಾರ್ಯಕ್ರಮಕ್ಕೆ ತೆರಳಿದ್ದು ಅಲ್ಲಿ ತಮ್ಮ ಪತಿಯೊಂದಿಗೆ ಕಳೆದ ಕೆಲವೊಂದು ಫೋಟೊವನ್ನು ಇನ್ ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ. ತಮ್ಮ ಪತಿಗಾಗಿ ವಿಶೇಷ ತರನಾದ "ವಿಕೆ" ಎಂದು ಬರೆದಿರುವ ಮೆಹೆಂದಿಯನ್ನು ಹಾಕಿಕೊಂಡಿರುವ ಅವರು, ಒಂದು ಫೋಟೋದಲ್ಲಿ ತಮ್ಮ ಮೆಹೆಂದಿ ಹಚ್ಚಿದ ಎರಡೂ ಕೈಗಳನ್ನು ಸುಂದರವಾಗಿ ಪ್ರದರ್ಶಿಸಿದರು. ಈ ಫೋಟೋ ಇದೀಗ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದ್ದು ಈ ಕ್ಯೂಟ್ ಜೋಡಿಯ ಪ್ರೀತಿ ಕಂಡು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಖ್ಯಾತ ಚಲನಚಿತ್ರ ನಿರ್ಮಾಪಕಿ ಕರಿಷ್ಮಾ ಕೊಹ್ಲಿ ವಿವಾಹಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ಪತಿ ವಿಕ್ಕಿ ಕೌಶಲ್ ಅವರು ಹಾಜರಾಗಿದ್ದರು. ಅವರ ವಿವಾಹದ ಫೋಟೊ ಇದೀಗ ವೈರಲ್ ಆಗುತ್ತಿದೆ. ಕತ್ರಿನಾ ಬೆಸ್ಟ್ ಫ್ರೆಂಡ್ ಕರಿಷ್ಮಾರ ಮದುವೆಯ ಅನೇಕ ಕಾರ್ಯಕ್ರಮಕ್ಕೆ ಈಗಾಗಲೇ ಭಾಗಿಯಾಗಿದ್ದು ಮೆಹೆಂದಿ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನೆರವೇರಿತ್ತು. ಕತ್ರಿನಾ ತಮ್ಮ ಬಲಗೈಯ ತೋಳಿನಲ್ಲಿ ವಿಕೆ ಎಂದು ಬರೆಸಿಕೊಂಡಿದ್ದಾರೆ. ಅವರ ಪ್ರೀತಿಯ ಪತಿ 'ವಿಕ್ಕಿ ಕೌಶಲ್' ಅವರ ಹೆಸರಿನ ಮೊದಲಕ್ಷರಗಳು ಮೆಹೆಂದಿ ವಿನ್ಯಾಸದ ಮೂಲಕ ಬರೆದುಕೊಂಡಿದ್ದಾರೆ. ಈ ಮೂಲಕ ಪತಿಯ ಹೆಸರನ್ನು ತಮ್ಮ ಮೆಹೆಂದಿಯಲ್ಲಿ ಸೇರಿಸುವ ಮೂಲಕ ಕತ್ರಿನಾ ತಮ್ಮ ಪ್ರೀತಿಯನ್ನು ಅತ್ಯಂತ ಸರಳವಾಗಿ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: Mangalapuram Movie: ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಬರ್ತಿದ್ದಾರೆ ನಟ ರಿಷಿ; ಮಂಗಳಾಪುರಂ ಸಿನಿಮಾದ ಫಸ್ಟ್ ಲುಕ್ ರಿಲೀಸ್
ಕತ್ರಿನಾ ಫ್ಲವರ್ ಡಿಸೈನ್ ಇರುವ ರೋಸ್ ಬಣ್ಣದ ಗೌನ್ ನಲ್ಲಿ ಪ್ರಿನ್ಸೆಸ್ ನಂತೆ ಕಾಣಿಸಿದ್ದಾರೆ. ಪತಿ ವಿಕ್ಕಿ ಕೌಶಲ್ ಬ್ಲ್ಯಾಕ್ ಸೂಟ್ ನಲ್ಲಿ ಸಖತ್ ಮಾಡರ್ನ್ ಲುಕ್‌ನಲ್ಲಿ ಮಿಂಚಿದ್ದಾರೆ. ಈ ಜೋಡಿಗಳು ಒಟ್ಟಿಗೆ ಕುಳಿತು ಮದುವೆ ಕಾರ್ಯಕ್ರಮವನ್ನು ಆನಂದಿಸಿ ಸ್ನೇಹಿತರೆಲ್ಲ ಜೊತೆ ಸೇರಿ ಚೀಯರ್ಸ್ ಮಾಡುವುದನ್ನು ವೈರಲ್ ಆದ ಫೋಟೊದಲ್ಲಿ ಕಾಣಬಹುದು. ಇದೀಗ ಈ ಜೋಡಿಯ ಫೋಟೋಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಯೊಬ್ಬರು ಇವರಿಬ್ಬರ ಪ್ರೀತಿಗೆ ಸರಿ ಸಾಟಿಯಾರಿಲ್ಲ, ಇವರ ಜೋಡಿ ಸಖತ್ ಕ್ಯೂಟ್ ಆಗಿದೆ ಎಂದಿದ್ದಾರೆ. ಇದು ಪ್ರೀತಿಯನ್ನು ವ್ಯಕ್ತಪಡಿಸುವ ಸುಂದರ ವಿಧಾನ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.
ಕತ್ರಿನಾ ಮತ್ತು ವಿಕ್ಕಿ ಡಿಸೆಂಬರ್ 9, 2021 ರಂದು ರಾಜಸ್ಥಾನದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ವಿವಾಹವಾಗಿ 3 ವರ್ಷಗಳು ಕಳೆದರೂ ಅವರ ನಡುವಿನ ಪ್ರೀತಿ ಮತ್ತು ಅನ್ಯೋನ್ಯತೆ ಸದಾ ಹಾಗೇ ಇದೆ ಎಂಬುದಕ್ಕೆ ಈ ಫೋಟೊಗಳೇ ಸಾಕ್ಷಿಯಂತಿವೆ. ಕತ್ರಿನಾ ಕೊನೆಯ ಬಾರಿಗೆ ಸೈಕಲಾಜಿಕಲ್ ಥ್ರಿಲ್ಲರ್ 'ಮೆರ್ರಿ ಕ್ರಿಸ್‌ಮಸ್' ನಲ್ಲಿ ಕಾಣಿಸಿಕೊಂಡಿದ್ದರು. ನಟ ವಿಕ್ಕಿ ಕೌಶಲ್ ಅವರು ಇತ್ತೀಚೆಗೆ 'ಛಾವಾ' ಚಿತ್ರದ ಮೂಲಕ ಬ್ಲಾಕ್‌ಬಸ್ಟರ್ ಹಿಟ್ ನೀಡಿದ್ದಾರೆ.