Haarsh Limbachiyaa: ವಿದೇಶದಲ್ಲಿ ಸ್ಟಾರ್ ನಟ, ನಟಿಯರಿಗೆ ಚಳ್ಳೆ ಹಣ್ಣು ತಿನ್ನಿಸಿದ ಖದೀಮರು; ಕಳ್ಳತನದ ಅನುಭವ ಬಿಚ್ಚಿಟ್ಟ ಆ್ಯಂಕರ್ ಹರ್ಷ್
Haarsh Limbachiyaa: ಕಳ್ಳತನದ ಅನುಭವ ಕೇವಲ ಸಾಮಾನ್ಯ ಜನಕ್ಕೆ ಮಾತ್ರ ಆಗೋದಿಲ್ಲ. ಬೆಳ್ಳಿ ಪರದೆ ಮೇಲೆ ಮಿಂಚುವ ಸಾರ್ಟ್ ನಟ, ನಟಿಯರಿಗೂ ಕೂಡ ಕಳ್ಳರು ಚಳ್ಳೆಹಣ್ಣು ತಿನ್ನಿಸಿ ತಮ್ಮ ಕೈಚಳಕ ತೋರಿಸುತ್ತಾರೆ. ಇಂತದ್ದೇ ಅನುಭವವನ್ನು ಸ್ಟಾರ್ ನಟ, ನಟಿಯರು ಹಂಚಿಕೊಂಡಿದ್ದಾರೆ.

ದಿವ್ಯಾಂಕಾ ತ್ರಿಪಾಠಿ

ಕಳ್ಳತನದ ಅನುಭವ ಕೇವಲ ಸಾಮಾನ್ಯ ಜನಕ್ಕೆ ಮಾತ್ರ ಆಗೋದಿಲ್ಲ. ಬೆಳ್ಳಿ ಪರದೆ ಮೇಲೆ ಮಿಂಚುವ ಸಾರ್ಟ್ ನಟ, ನಟಿಯರಿಗೂ ಕೂಡ ಕಳ್ಳರು ಚಳ್ಳೆಹಣ್ಣು ತಿನ್ನಿಸಿ ತಮ್ಮ ಕೈಚಳಕ ತೋರಿಸುತ್ತಾರೆ. ಇಂತದ್ದೇ ಅನುಭವವನ್ನು ಸ್ಟಾರ್ ನಟ, ನಟಿಯರು ಹಂಚಿಕೊಂಡಿದ್ದಾರೆ. ನಟಿ ದಿವ್ಯಾಂಕಾ ತ್ರಿಪಾಠಿ (Divyanka Tripathi) ಮತ್ತು ಅವರ ಪತಿ ನಟ ವಿವೇಕ್ ದಹಿಯಾ (Vivek Dahiya) ಅವರು ಇಟಲಿಯಲ್ಲಿ (Italy) ಕಳ್ಳತನಕ್ಕೊಳಗಾದ ಆಘಾತಕಾರಿ ಅನುಭವವನ್ನು ಭಾರತೀ ಸಿಂಗ್ (Bharti Singh) ಮತ್ತು ಹರ್ಷ್ ಲಿಂಬಾಚಿಯಾ (Haarsh Limbachiyaa) ಅವರ ಪಾಡ್‌ಕಾಸ್ಟ್‌ನಲ್ಲಿ ತಿಳಿಸಿದ್ದಾರೆ. ಈ ಸಂದರ್ಶನದ ವೇಳೆ, ಹರ್ಷ್ ಕೂಡ ತಾವು ಭಾರತೀ ಜೊತೆ ರೋಮ್‌ಗೆ ಹನಿಮೂನ್‌ಗೆ ತೆರಳಿದಾಗ ಎದುರಾದ ಕಳ್ಳತನದ ಘಟನೆಯನ್ನು ನೆನಪಿಸಿಕೊಂಡರು. ಕಳ್ಳರು ಎಷ್ಟು ಬೇಗ ಕೃತ್ಯ ಎಸಗಿದರು ಎಂದರೆ ನನ್ನ ಸರ ಕಳ್ಳತನವಾಗಿದೆ ಎಂದು ತಿಳಿಯಲು ನನಗೆ ಎರಡು ದಿನ ಬೇಕಾಯ್ತು ಎಂದಿದ್ದಾರೆ. ನಾಲ್ಕೈದು ಜನ ಕಳ್ಳರಿದ್ದ ಸಂದರ್ಭದಲ್ಲಿ ಹೋರಾಡುವುದು ಸಾಧ್ಯವಿಲ್ಲ, ಏನೋ ಸರಿಯಿಲ್ಲ ಎಂದು ಭಾಸವಾಗಿ ಎರಡು ಹೆಜ್ಜೆ ಹಿಂದಕ್ಕೆ ಇಟ್ಟಾಗಲೇ ಕಳ್ಳ ಓಡಿಹೋಗಿದ್ದ ಎಂದು ಹರ್ಷ್ ವಿವರಿಸಿದರು.
ತಮ್ಮ ಹನಿಮೂನ್‌ಗೆ ಯುರೋಪ್‌ಗೆ ತೆರಳಿದ್ದ ವೇಳೆಯ ಅನುಭವವನ್ನು ಸ್ಮರಿಸಿದ ಹರ್ಷ್, “ಯಾರೋ ಒಬ್ಬ ನನ್ನ ಭುಜದ ಮೇಲೆ ಕೈಯಿಟ್ಟು, ‘ಏನು ಬೇಕು, ಬ್ರದರ್?’ ಎಂದು ಕೇಳಿದ. ಅವನ ಸ್ಪರ್ಶದಿಂದ ಅದು ಸಾಮಾನ್ಯವಲ್ಲ ಅಂತ ಅನಿಸಿತು. ನಾಲ್ಕೈದು ಜನರಿದ್ದರು, ಆಗ ಹೋರಾಡಲು ಸಾಧ್ಯವಿಲ್ಲ. ಓಡಿಹೋಗಬೇಕೇ ಹೊರತು ಹೋರಾಡಬಾರದು. ನಾನು ಎರಡು ಹೆಜ್ಜೆ ಹಿಂದಕ್ಕೆ ಇಟ್ಟಾಗ, ಅವನು ಅಷ್ಟರಲ್ಲೇ ಕಣ್ಮರೆಯಾಗಿದ್ದ. ಆ ಕ್ಷಣದಲ್ಲಿ ಅವನು ಏನು ಮಾಡಿದ ಅಂತ ನನಗೆ ಗೊತ್ತಾಗಲಿಲ್ಲ” ಎಂದರು.
“ ಏನಾಯಿತು ಎಂದು ನನಗೆ ತಕ್ಷಣ ಅರ್ಥವಾಗಲಿಲ್ಲ. ನಾವು ಊಟಕ್ಕೆ ಪಿಜ್ಜಾ ತಿನ್ನಲು ಹೋದೆವು, ಎರಡು ದಿನಗಳವರೆಗೆ ಏನೂ ಗಮನಿಸಲಿಲ್ಲ. ಕಳವಾದ ಸರ ತುಂಬಾ ತೆಳ್ಳಗಿತ್ತು, ದೊಡ್ಡದಾಗಿದ್ದರೆ ಬಹುಶಃ ಗಮನಿಸುತ್ತಿದ್ದೆ. ನಾನು ಎಷ್ಟು ಅಜಾಗರೂಕನಾಗಿದ್ದೆಂದರೆ ಅಂದ್ರೆ ವಜ್ರದ ಉಂಗುರವನ್ನೂ ಧರಿಸಿದ್ದೆ” ಎಂದಿದ್ದಾರೆ. ಭಾರತೀಯರು ರೋಮ್‌ಗೆ ಹೋದರೆ ದಯವಿಟ್ಟು ಎಚ್ಚರಿಕೆಯಿಂದಿರಿ, ಏಕೆಂದರೆ ಕಳ್ಳತನಕ್ಕೊಳಗಾಗುವ ಸಾಧ್ಯತೆ ತುಂಬಾ ಹೆಚ್ಚು. ಇದನ್ನು ಹೇಳಿದರೆ ಕೆಲವರು ಟೀಕಿಸಬಹುದು, ಆದರೆ ನನಗಾದ ಅನುಭವವನ್ನು ಮುಚ್ಚಿಡಲು ಸಾಧ್ಯವಿಲ್ಲ,” ಎಂದು ಹರ್ಷ್ ಲಿಂಬಾಚಿಯಾ ಹೇಳಿದರು.
ಈ ಸುದ್ದಿಯನ್ನು ಓದಿ: Viral News: ತಪ್ಪಾಗಿ ಅಕೌಂಟ್‌ಗೆ ಬಂದ ಹಣ ಹಿಂದಿರುಗಿಸಲು ಹೋಗಿ ಬಾಲಕಿಯ ಓದಿಗೆ ನೆರವಾದರು; ಇಲ್ಲಿದೆ ಕುತೂಹಲಕಾರಿ ಸಂಗತಿ
ದಿವ್ಯಾಂಕಾ ತ್ರಿಪಾಠಿಗೆ ಕಳ್ಳತನದ ಅನುಭವ
ಇಟಲಿಯಲ್ಲಿ ತಮಗಾದ ಕಳ್ಳತನದ ಅನುಭವವನ್ನು ಬಿಚ್ಚಿಟ್ಟ ದಿವ್ಯಾಂಕಾ ತ್ರಿಪಾಠಿ, ಆ ದೇಶದ ಪ್ರಧಾನಮಂತ್ರಿಗೆ ಪತ್ರ ಬರೆದು, ಪ್ರವಾಸಿಗರಿಗೆ ಏಕೆ ಸುರಕ್ಷತೆ ಎಂದು ಪ್ರಶ್ನಿಸಿದೆ ಎಂದು ತಿಳಿಸಿದರು. ಭಾರತೀಯರು ಕಷ್ಟಪಟ್ಟು ಗಳಿಸಿದ ಹಣವನ್ನು ಉಳಿಸಿ, ಎಚ್ಚರಿಕೆಯಿಂದ ಪ್ರವಾಸಕ್ಕೆ ಯೋಜನೆ ರೂಪಿಸಿ, ಸಂತೋಷದ ನೆನಪುಗಳನ್ನು ಸೃಷ್ಟಿಸಲು ಬಯಸುತ್ತಾರೆ. ಆದರೆ, ಪ್ರವಾಸಿಗರಿಗೆ ರಕ್ಷಣೆ ಇಲ್ಲದಿರುವುದು ನಿರಾಸೆಗೆ ಕಾರಣವಾಗುತ್ತದೆ ಎಂದು ಅವರು ವಿವರಿಸಿದರು. ರೆಸಾರ್ಟ್‌ಗೆ ತಲುಪಿದಾಗ ಚೆಕ್-ಇನ್ ಮಾಡುವ ಮೊದಲು ಸಣ್ಣ ಪ್ರವಾಸಕ್ಕೆ ತೆರಳಲು ನಿರ್ಧರಿಸಿದ್ದಾಗ, ತಮ್ಮ ವಸ್ತುಗಳು ಹೊರಗೆ ಇಡುವುದು ಸುರಕ್ಷಿತವೇ ಎಂದು ಸಿಬ್ಬಂದಿಯನ್ನು ಕೇಳಿದ್ದಾಗ, ಅವರು ವಿಶ್ವಾಸದಿಂದ ಸುರಕ್ಷಿತವೆಂದು ತಿಳಿಸಿದ್ದರು ಎಂದು ದಿವ್ಯಾಂಕಾ ಹೇಳಿದರು.
ಹೋಟೆಲ್ ಸಿಬ್ಬಂದಿ ಕಳ್ಳರಿಗೆ ಸಹಾಯ ಮಾಡಿರಬಹುದು ಎಂದು ವಿವೇಕ್ ದಹಿಯಾ ಶಂಕಿಸಿದರು. ಘಟನೆಯ ವೇಳೆ ಒಬ್ಬ ಸಿಬ್ಬಂದಿ ದುಃಖಿತನಂತೆ ನಟಿಸಿ, ತಮ್ಮೊಂದಿಗೆ ಕಣ್ಣೀರು ಹಾಕಿದ್ದ ಎಂದು ಅವರು ತಿಳಿಸಿದರು.