ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ತಪ್ಪಾಗಿ ಅಕೌಂಟ್‌ಗೆ ಬಂದ ಹಣ ಹಿಂದಿರುಗಿಸಲು ಹೋಗಿ ಬಾಲಕಿಯ ಓದಿಗೆ ನೆರವಾದರು; ಇಲ್ಲಿದೆ ಕುತೂಹಲಕಾರಿ ಸಂಗತಿ

ಬೆಂಗಳೂರು ಮೂಲದ ಉದ್ಯಮಿ ಮತ್ತು ಕ್ರೀಡಾಪಟು ಚಿನ್ಮಯಿ ಹೆಗ್ಡೆ ಅವರ ಖಾತೆಗೆ ಸೌದಿ ಅರೇಬಿಯಾದಿಂದ ತಪ್ಪಾಗಿ 50,000 ರೂ. ಬಂದಿದೆ. ಈ ಸಂದೇಶ ನೋಡಿ ಅಚ್ಚರಿ ಪಟ್ಟ ಚಿನ್ಮಯಿ ಹೆಗ್ಡೆ ಬ್ಯಾಂಕ್ ವರ್ಗಾವಣೆಯ ಕುರಿತು ವಿಚಾರಿಸಲು ಹೋದಾಗ ಅಪರಿಚಿತರ ಕುಟುಂಬದ ಪರಿಚಯವಾಗಿದೆ. ಬಳಿಕ ಇದು ಬಾಲಕಿಯೊಬ್ಬಳ ಭವಿಷ್ಯವನ್ನೇ ಬದಲಾಯಿಸಿದೆ.

ಆಕಸ್ಮಿಕ ಭೇಟಿ ಬಾಲಕಿಯ ಭವಿಷ್ಯವನ್ನೇ ಬದಲಾಯಿಸಿತು

ಬೆಂಗಳೂರು: ಆಕಸ್ಮಿಕವಾಗಿ ಬ್ಯಾಂಕ್ ಖಾತೆಗೆ ಬಿದ್ದ ಹಣ ಬಾಲಕಿಯೊಬ್ಬಳ ಭವಿಷ್ಯವನ್ನೇ ಬದಲಾಯಿಸಿರುವ ಕಥೆಯಿದು. ಬೆಂಗಳೂರಿನ ಉದ್ಯಮಿಯೊಬ್ಬರ (Bengaluru Entrepreneur) ಖಾತೆಗೆ ಆಕಸ್ಮಿಕವಾಗಿ ಸೌದಿ ಅರೇಬಿಯಾದದಿಂದ (Saudi Arabia) ಹಣ ಬಂದಿತ್ತು. ಇದರ ಜಾಡು ಹಿಡಿಯಲು ಹೋದ ಉದ್ಯಮಿಗೆ ಸೌದಿ ಅರೇಬಿಯಾದಲ್ಲಿರುವ ವ್ಯಕ್ತಿಯ ಕುಟುಂಬ ಸಂಕಷ್ಟದಲ್ಲಿ ಇರುವುದು ತಿಳಿದು ಅವರ ಸಹಾಯಕ್ಕೆ ಮುಂದಾದರು. ಪರಿಣಾಮ ಅವರ ಕುಟುಂಬದ ಬಾಲಕಿ ಈಗ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇ. 97 ಅಂಕ ಗಳಿಸಿದ್ದಾಳೆ. ಬಾಲಕಿ ಈಗ ತನಗೆ ಓದಲು ಸಹಾಯ ಮಾಡಿರುವುದಕ್ಕೆ ಕರೆ ಮಾಡಿ ಕೃತಜ್ಞತೆಯನ್ನು ಸಲ್ಲಿಸಿದ್ದಾಳೆ.

ಬೆಂಗಳೂರು ಮೂಲದ ಉದ್ಯಮಿ ಮತ್ತು ಕ್ರೀಡಾಪಟು ಚಿನ್ಮಯಿ ಹೆಗ್ಡೆ ಅವರ ಖಾತೆಗೆ ಸೌದಿ ಅರೇಬಿಯಾದಿಂದ ತಪ್ಪಾಗಿ 50,000 ರೂ. ಬಂದಿದೆ. ಈ ಸಂದೇಶ ನೋಡಿ ಅಚ್ಚರಿ ಪಟ್ಟ ಚಿನ್ಮಯಿ ಹೆಗ್ಡೆ ಬ್ಯಾಂಕ್ ವರ್ಗಾವಣೆಯ ಕುರಿತು ವಿಚಾರಿಸಲು ಹೋದಾಗ ಅವರಿಗೆ ಅಪರಿಚಿತರ ಕುಟುಂಬದ ಪರಿಚಯವಾಗಿದೆ. ಬಳಿಕ ಇದು ಬಾಲಕಿಯೊಬ್ಬಳ ಭವಿಷ್ಯವನ್ನೇ ಬದಲಾಯಿಸಿದೆ.

ಚಿನ್ಮಯ್ ಹೆಗ್ಡೆ ಈ ಕುರಿತು ಇತ್ತೀಚೆಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಾಲಕಿಯ ಜೀವನವನ್ನು ಬದಲಾಯಿಸಲು ಕಾರಣವಾದ ಈ ಘಟನೆಯನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ.

ಎರಡು ವರ್ಷಗಳ ಹಿಂದೆ ಬಾಲಕಿಯ ಕುಟುಂಬವನ್ನು ಅನಿರೀಕ್ಷಿತವಾಗಿ ಭೇಟಿಯಾಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಒಮ್ಮೆ ಅಂತಾರಾಷ್ಟ್ರೀಯ ಖಾತೆಯಿಂದ 50,000 ರೂ.ಗಳನ್ನು ಹೆಗ್ಡೆ ಪಡೆದಿದ್ದಾರೆ. ಇದು ಬ್ಯಾಂಕಿಂಗ್ ದೋಷವಿರಬಹುದು ಎಂದು ಕೊಂಡು ಅವರು ಬ್ಯಾಂಕ್‌ನಲ್ಲಿ ಈ ಕುರಿತು ವಿಚಾರಿಸಿದ್ದಾರೆ. ಆಗ ಅದನ್ನು ತಪ್ಪಾಗಿ ಕಳುಹಿಸಲಾಗಿದೆ ಎಂಬುದು ತಿಳಿಯಿತು.

ಸೌದಿ ಅರೇಬಿಯಾದ ರಿಜ್ವಾನ್ ಎಂಬ ವ್ಯಕ್ತಿ ಈ ಹಣವನ್ನು ಕಳುಹಿಸಿದ್ದರು. ಈ ವಿಷಯದ ಬಗ್ಗೆ ಹೆಗ್ಡೆ ಅವರನ್ನು ಸಂಪರ್ಕಿಸಿದಾಗ ರಿಜ್ವಾನ್ ಅಳುತ್ತಿದ್ದ. ತನ್ನ ಮನೆಗೆ ಹಣವನ್ನು ಹಿಂದಿರುಗಿಸಲು ಬೇಡಿಕೊಂಡ. ಆಗ ನಾನು ಅವರಿಗೆ ಹಣ ಮರಳಿಸುವುದಾಗಿ ಭರವಸೆ ನೀಡಿದೆ.

ಬಳಿಕ ರಿಜ್ವಾನ್ ಕುಟುಂಬವನ್ನು ಭೇಟಿಯಾದಾಗ ಅವರ ಕುಟುಂಬವು ಆರ್ಥಿಕವಾಗಿ ಸಂಕಷ್ಟದಲ್ಲಿರುವುದು ತಿಳಿಯಿತು. ಮನೆ ಯಾವುದೇ ಕ್ಷಣದಲ್ಲಾದರೂ ಕುಸಿಯುತ್ತದೆ ಎನ್ನುವಂತ್ತಿತ್ತು. ಗಾಲಿಕುರ್ಚಿಯಲ್ಲಿದ್ದ ರಿಜ್ವಾನ್ ತಂದೆ ನಿರ್ಮಾಣ ಕೆಲಸಗಾರರಾಗಿದ್ದರು. ಮೂರನೇ ಮಹಡಿಯಿಂದ ಬಿದ್ದು ಕಾಲುಗಳನ್ನು ಕಳೆದುಕೊಂಡಿರುವ ದುಃಖದಾಯಕ ಕಥೆ ಹೇಳಿಕೊಂಡರು.



ಇದರಿಂದ ಮನೆಯ ಜವಾಬ್ದಾರಿ ರಿಜ್ವಾನ್ ಹೆಗಲ ಮೇಲೆ ಬಿತ್ತು. ಶೇ. 92 ಅಂಕಗಳೊಂದಿಗೆ ಬಿ.ಕಾಂ ಪದವೀಧರರಾದ ರಿಜ್ವಾನ್ ತಮ್ಮ ಕುಟುಂಬವನ್ನು ಪೋಷಿಸುವ ಸಲುವಾಗಿ ಸೌದಿ ಅರೇಬಿಯಾಕ್ಕೆ ತೆರಳಿದರು. ಕುಟುಂಬದ ಆರ್ಥಿಕ ತೊಂದರೆಗಳಿಂದಾಗಿ ರಿಜ್ವಾನ್ ಅವರ ತಂಗಿಯನ್ನು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಸೇರಿಸಿದ್ದರು ಎಂದು ಹೆಗ್ಡೆ ಹೇಳಿದ್ದಾರೆ.

ಅವರ ಕುಟುಂಬದ ದುಸ್ಥಿತಿ ಕಂಡು ರಿಜ್ವಾನ್ ಕಳುಹಿಸಿದ್ದ 50,000 ರೂ.ಗೆ ತಮ್ಮ ಜೇಬಿನಿಂದ 5,000 ರೂ. ಗಳನ್ನು ಸೇರಿಸಿ ಕೊಟ್ಟರು. ಅಲ್ಲಿಂದ ಹಿಂತಿರುಗಿ ಬಂದ ಮೇಲೆ ರಿಜ್ವಾನ್ ಕುಟುಂಬದ ಹೋರಾಟಗಳ ಬಗ್ಗೆ ತಮ್ಮ ತಂದೆಗೆ ಹೇಳಿದರು.

ಇದನ್ನೂ ಓದಿ: Online Gaming : ಕನ್ನಡ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಿಗೂ ಹರಡಿದ ಆನ್‌ಲೈನ್‌ ಗೇಮಿಂಗ್‌ ಭೂತ

ಮರುದಿನವೇ ಇಬ್ಬರೂ ಮತ್ತೆ ರಿಜ್ವಾನ್ ಅವರ ಕುಟುಂಬವನ್ನು ಭೇಟಿಯಾಗಿ ನಿಮ್ಮ ಮಗಳ ಪೂರ್ಣ ಶಿಕ್ಷಣವನ್ನು ನಾವು ವಹಿಸಿಕೊಳ್ಳುತ್ತೇವೆ. ಅವಳು ಎಲ್ಲಿ ಬೇಕಾದರೂ ಓದಲಿ ಎಂದು ಹೇಳಿದರು. ಬಾಲಕಿಯ ಶಿಕ್ಷಣ ಪೂರ್ಣಗೊಳ್ಳುವವರೆಗೆ ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ನಿರ್ಧರಿಸಿದರು. ಕೂಡಲೇ ಬಾಲಕಿಯ ಪೂರ್ಣ ವರ್ಷದ ಶಿಕ್ಷಣ ಶುಲ್ಕವನ್ನು ಪಾವತಿಸಿದರು.

ಇದೀಗ ಬಾಲಕಿ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 625 ಅಂಕಗಳಲ್ಲಿ 606 ಅಂಕಗಳನ್ನು ಗಳಿಸಿದ್ದಾಳೆ. ಈ ಬಗ್ಗೆ ತಿಳಿಸಲು ಹೆಗ್ಡೆಗೆ ಕರೆ ಮಾಡಿ, ನೀವು ನನ್ನ ಸಹೋದರನಂತೆ ಎಂದು ಹೇಳಿಕೊಂಡಿದ್ದಾಳೆ. ತನ್ನ ನಿಜವಾದ ಸಹೋದರನಿಗಿಂತ ಮೊದಲು ನಿಮಗೆ ಕರೆ ಮಾಡಿ ಈ ವಿಷಯ ತಿಳಿಸಿರುವುದಾಗಿ ಅವಳು ಹೇಳಿದಳು. ಒಟ್ಟಿನಲ್ಲಿ ಒಂದು ತಪ್ಪು ಆ ಮಗುವಿನ ಪಾಲಿಗೆ ವರವಾಯಿತು ಎಂದು ಹೆಗ್ಡೆ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.