ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Oscars 2026 new rules: ಆಸ್ಕರ್‌ ರೂಲ್ಸ್‌ ಚೇಂಜ್‌; ಬದಲಾದ ಮಹತ್ವದ ನಿಯಮಗಳೇನು?

ಆಸ್ಕರ್ ಪ್ರಶಸ್ತಿ ನೀಡಲು ಅನೇಕ ನಿಯಮಗಳಿದ್ದು ಪ್ರತೀ ವರ್ಷ ಕೂಡ ನಾಮ ನಿರ್ದೇಶನದ ಆಯ್ಕೆಗೆ ಅನುಗುಣವಾಗಿ ಪ್ರಶಸ್ತಿ ನೀಡಲಾಗುವುದು. ಆದರೆ ಇತ್ತೀಚಿಗೆ ಕೆಲ ನೂತನ ತಂತ್ರಜ್ಞಾನ, ಎಐ ಆಧರಿತ ಸಿನಿಮಾ ನಿರ್ಮಾಣ ಮಾಡುವುದು ಹೆಚ್ಚಾಗಿದೆ. ಇಂತಹ ಸಿನಿಮಾ ಆಸ್ಕರ್ ನಾಮನಿರ್ದೇಶನ ಮಾಡಬಹುದೇ ಎಂಬ ಗೊಂದಲ ಉಂಟಾಗಿತ್ತು. ಇದೀಗ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆಫ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಹಾಗಾದರೆ ಆಸ್ಕರ್ ಪ್ರಶಸ್ತಿಯ ಹೊಸ ನಿಯಮ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ‌.

ಆಸ್ಕರ್ ಪ್ರಶಸ್ತಿ ನಾಮ ನಿರ್ದೇಶನಕ್ಕೆ ಹೊಸ ನಿಯಮ ಜಾರಿ!

Profile Pushpa Kumari Apr 22, 2025 1:21 PM

ನವದೆಹಲಿ: ಸಿನಿಮಾ ಕ್ಷೇತ್ರದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿ ಎಂದರೆ ಅದು ಆಸ್ಕರ್ (Oscars)ಅವಾರ್ಡ್‌. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನೆಸ್ಸ್ ನೀಡುವ ಆಸ್ಕರ್ ಪ್ರಶಸ್ತಿ ಅಸ್ತಿತ್ವಕ್ಕೆ ಬಂದದ್ದು 1922ರಲ್ಲಿ. 1929ರಿಂದ ಪ್ರಶಸ್ತಿ ನೀಡಲು ಕೆಲವು ನಿರ್ದಿಷ್ಟ ನಿಯಮ ಜಾರಿಗೆ ಬಂದಿತ್ತು. ಆಸ್ಕರ್ ಪ್ರಶಸ್ತಿಯನ್ನು ಪಡೆಯಬೇಕು ಎಂಬುದು ಬಹುತೇಕ ಸಿನಿಮಾ ಕಲಾವಿದರು, ನಿರ್ದೇಶಕರ ಬಹುದೊಡ್ಡ ಕನಸಾಗಿರುತ್ತದೆ. ಆದರೆ ಆಸ್ಕರ್ ಪ್ರಶಸ್ತಿ ಎನ್ನುವುದು ಎಲ್ಲರಿಗೂ ಒಲಿಯುವಂತದಲ್ಲ. ಆಸ್ಕರ್ ಪ್ರಶಸ್ತಿ ನೀಡಲು ಅನೇಕ ನಿಯಮಗಳಿದ್ದು ಪ್ರತೀ ವರ್ಷ ಕೂಡ ನಾಮನಿರ್ದೇಶನದ ಆಯ್ಕೆಗೆ ಅನುಗುಣವಾಗಿ ಪ್ರಶಸ್ತಿ ನೀಡಲಾಗುವುದು. ಆದರೆ ಇತ್ತೀಚಿಗೆ ಕೆಲ ನೂತನ ತಂತ್ರಜ್ಞಾನ, ಎಐ ಆಧರಿತ ಸಿನಿಮಾ ನಿರ್ಮಾಣ ಮಾಡುವುದು ಹೆಚ್ಚಾಗಿದೆ. ಇಂತಹ ಸಿನಿಮಾ ಆಸ್ಕರ್ ನಾಮನಿರ್ದೇಶನ ಮಾಡಬಹುದೇ ಎಂಬ ಗೊಂದಲ ಉಂಟಾಗಿತ್ತು. ಇದೀಗ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆಫ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಹಾಗಾದರೆ ಆಸ್ಕರ್ ಪ್ರಶಸ್ತಿಯಲ್ಲಿ ವಿಧಾನದಲ್ಲಿ ಸೇರ್ಪಡೆಯಾದ ಆ ಹೊಸ ನಿಯಮ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ‌.

ಆಸ್ಕರ್ ಪ್ರಶಸ್ತಿ ನೀಡುವಾಗ ಸಿನಿಮಾ ಕಲಾವಿದರು, ತಂತ್ರಜ್ಞಾನ, ಸಂಗೀತ ನಿರ್ದೇಶನ ಇವೆಲ್ಲದ್ದಕ್ಕೂ ಪ್ರತ್ಯೇಕವಾಗಿ ನಿಯಮ ರೂಪಿಸಲಾಗಿದೆ. ಆಸ್ಕರ್ ಪ್ರಶಸ್ತಿ ನೀಡುವಾಗ ಅಕಾಡೆಮಿಯ ಸಕ್ರಿಯ ಸದಸ್ಯರು ಮತದಾನದ ಮೂಲಕ ತಮ್ಮ ಆಯ್ಕೆ ತಿಳಿಸಬೇಕು ಎನ್ನುವ ನಿಯಮವೂ ಕೂಡ ಇದೆ. ಅತ್ಯುತ್ತಮ ಚಿತ್ರ ವಿಭಾಗಕ್ಕೆ ಎಲ್ಲ ಸದಸ್ಯರು ಮತದಾನ ಮಾಡಿ ಆಯ್ಕೆ ಮಾಡಿದರೆ ಉಳಿದ ಪ್ರತಿಯೊಂದು ವಿಭಾಗಕ್ಕೂ ಆಯಾ ಕ್ಷೇತ್ರದ ಅನುಭವಿ ಸದಸ್ಯರು ಮತದಾನ ಮಾಡುತ್ತಾರೆ. ಆದರೆ ಮತದಾರರು ಕೆಲ ಸಿನಿಮಾವನ್ನು ಸಂಪೂರ್ಣವಾಗಿ ವೀಕ್ಷಿಸದೆ ಇರುವವರು ಇದ್ದಾರೆ. ಇದೀಗ ಬಂದ ಹೊಸ ನಿಯ ಮದ ಪ್ರಕಾರ ಆಸ್ಕರ್ ನಾಮನಿರ್ದೇಶಿತರು ತಮ್ಮ ಅಂತಿಮ ಮತ ಚಲಾಯಿಸುವ ಮೊದಲು ಪ್ರತಿಯೊಂದು ವಿಭಾಗದ ಎಲ್ಲ ಚಲನಚಿತ್ರಗಳನ್ನು ಸರಿಯಾಗಿ ವೀಕ್ಷಿಸಿರು ಬಗ್ಗೆ ಸ್ಪಷ್ಟ ಪಡಿಸಬೇಕಾಗುತ್ತದೆ.

ಹೊಸ ನಿಯಮದಲ್ಲಿ ಏನಿದೆ?.

ಅಕಾಡೆಮಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಮತದಾರರು ಪ್ರತಿಯೊಂದು ಆಸ್ಕರ್ ನಾಮನಿರ್ದೇಶಿತ ಚಲನಚಿತ್ರವನ್ನು ನೋಡಲೇಬೇಕು ಎಂಬ ನಿಯಮ ಈ ಹಿಂದಿನಿಂದಲೂ ಇದೆ. ಆದರೆ ಇತ್ತೀಚಿನ ಕೆಲವರ್ಷದಲ್ಲಿ ನಾಮ ನಿರ್ದೇಶಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಸಂಪೂರ್ಣ ಸಿನಿಮಾ ವೀಕ್ಷಿಸದೆ ಇರುವ ಮತದಾರರು ಇದ್ದಾರೆ. ಹಾಗಾಗಿ ಈ ಸಮಸ್ಯೆ ನಿವಾರಣೆಗೆ ಹೊಸ ರೂಲ್ಸ್ ಜಾರಿಗೆ ತರಲು ಅಕಾಡೆಮಿ ನಿರ್ಧಾರ ಕೈಗೊಂಡಿದೆ. ಹೊಸ ನಿಯಮದ ಅಡಿಯಲ್ಲಿ ಸ್ಟ್ರೀಮಿಂಗ್ ವೇದಿಕೆಯಲ್ಲಿ ಸಂಸ್ಥೆಯ ಸದಸ್ಯರು ಅಷ್ಟು ಸಿನಿಮಾ ವೀಕ್ಷಿಸಿದ್ದಾರೆ ಅಥವಾ ಇಲ್ಲವೇ ಎಂದು ಟ್ರ್ಯಾಕ್ ಮಾಡುವ ವಿಧಾನ ಜಾರಿಗೆ ತರಲಾಗುತ್ತಿದೆ.

ಇದನ್ನು ಓದಿ: Oscar 2025 : ಆಸ್ಕರ್‌ ವೇದಿಕೆಯಲ್ಲಿ ಮೊಳಗಿತು ಭಾರತೀಯ ಭಾಷೆ; ಹಿಂದಿಯಲ್ಲಿ ಮಾತನಾಡಿದ ನಿರೂಪಕ!

ಒಂದು ವೇಳೆ ಅಕಾಡೆಮಿ ಸದಸ್ಯರು ನಾಮನಿರ್ದೇಶಿತ ಸಿನಿಮಾವನ್ನು ಚಿತ್ರಮಂದಿರದಲ್ಲಿ ಈ ಹಿಂದೆ ನೋಡಿದ್ದರೆ ಎಲ್ಲಿ? ಯಾವಾಗ? ಯಾವ ಸಮಯಕ್ಕೆ ನೋಡಿದ್ದು ಎಲ್ಲವನ್ನು ದೃಢೀಕರಿಸುವ ಒಂದು ಫಾರ್ಮ್ ಭರ್ತಿ ಮಾಡಿ ಕೆಲವು ದಾಖಲೆಗಳ ಜೊತೆಗೆ ಅಕಾಡೆಮಿಗೆ ಸಲ್ಲಿಸಬೇಕು ಎಂಬ ನಿಯಮ ಜಾರಿಯಾಗಿದೆ. ಸಿನಿಮಾ ಕೇವಲ ಚಿತ್ರಮಂದಿರಗಳಲ್ಲಿ ಅಷ್ಟೇ ಪ್ರದ ರ್ಶನವಾಗಿರಬೇಕು. ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದರೆ ಆಸ್ಕರ್ ಪ್ರಶಸ್ತಿಗೆ ಅಂತಹ ಸಿನಿಮಾಕ್ಕೆ ಯಾವುದೇ ಅವಕಾಶ ಇರಲಾರದು. ಇನ್ನೂ ಟಿವಿಯಲ್ಲಿಯೂ ಚಿತ್ರ ಪ್ರಸಾರವಾಗಿರಬಾರದು ಎಂಬ ನಿಯಮ ಸಹ ಇದೆ.

ಎಐ ಸಿನಿಮಾಕ್ಕೆ ಮಾನ್ಯತೆ ಇದೆಯೇ?

ಎಐ ಆಧರಿತ ಸಿನಿಮಾಕ್ಕೂ ಅಕಾಡೆಮಿಯಲ್ಲಿ ಹೊಸ ಮಾರ್ಗಸೂಚಿ ಜಾರಿಗೆ ತರಲಾಗಿದೆ. ಎಐ ಹಾಗೂ ಇತರ ಡಿಜಿಟಲ್ ಆಧರಿತ ಸಿನಿಮಾಗಳನ್ನು ಕೂಡ ನಾಮನಿರ್ದೇಶನ ಮಾಡಬಹುದೇ ಈ ಬಗ್ಗೆ ಹೊಸ ಮಾರ್ಗ ಸೂಚಿಯನ್ನು ಅಕಾಡೆಮಿ ಸ್ಪಷ್ಟಪಡಿಸಿದೆ. ಈ ಮೂಲಕ ತಂತ್ರಜ್ಞಾನ ಬಳಕೆ ಆಸ್ಕರ್ ಪ್ರಶಸ್ತಿ ಪಡೆಯಲು ಅರ್ಹತೆ ಹೊಂದಿದೆ ಎಂದು ತಿಳಿಸಿದೆ. ಆಸ್ಕರ್ ಪ್ರಶಸ್ತಿಗೆ ಯೋಗ್ಯವಾದ ಸಿನಿಮಾ ಆಯ್ಕೆ ಮಾಡುವಾಗ ತಂತ್ರಜ್ಞಾನವನ್ನು ಬಳಸಿದರೂ ಮಾನವೀಯ ಕ್ರಿಯಾತ್ಮಕತೆಯ ಪಾತ್ರವೇ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಕಾಡೆಮಿ ತಿಳಿಸಿದೆ. ಈ ಹೊಸ ನಿಯಮವನ್ನು ಮುಂಬರುವ 2026ರ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಜಾರಿಯಾಗಲಿದೆ ಎಂದು ಅಕಾಡೆಮಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.