Sikandar: ಸಿಕಂದರ್ ಚಿತ್ರದ ಡಿಲೀಟೆಡ್ ಸೀನ್ ವೈರಲ್; ದೃಶ್ಯ ನೋಡಿ ಭಾವುಕರಾದ ಫ್ಯಾನ್ಸ್
Sikandar Movie deleted scene: ಹಿರಿಯ ನಿರ್ದೇಶಕ ಎ. ಆರ್. ಮುರುಗದಾಸ್ ನಿರ್ದೇಶನದಲ್ಲಿ ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಸಿಕಂದರ್ ರಿಲೀಸ್ ಆಗಿದ್ದು ಸಿನಿಮಾ ಅಂದುಕೊಂಡ ಮಟ್ಟಕ್ಕೆ ಸಕ್ಸಸ್ ಪಡೆಯಲಿಲ್ಲ. ಇದೀಗ ಸಿನಿಮಾದಲ್ಲಿ ಅಳಿಸಲಾದ ಬಹುತೇಕ ದೃಶ್ಯಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ನಟಿ ಕಾಜಲ್ ಅಗರ್ ವಾಲ್ ಕೂಡ ಸಿಕಂದರ್ ಸಿನಿಮಾದಲ್ಲಿ ಅಭಿನಯಿಸಿದ್ದು ಡಿಲೇಟೆಡ್ ಆದ ಕೆಲ ದೃಶ್ಯಗಳು ಇದೀಗ ಮೆಚ್ಚುಗೆ ಗಳಿಸಿದೆ.


ಮುಂಬೈ: ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ (Salman Khan)’ ಅಭಿನಯದ ಸಿಕಂದರ್ (Sikandar Movie deleted scene) ಸಿನಿಮಾ ರಿಲೀಸ್ ಗೂ ಮುನ್ನವೇ ಸಾಕಷ್ಟು ಫೇಮ್ ಪಡೆದಿತ್ತು. ಹಿರಿಯ ನಿರ್ದೇಶಕ ಎ. ಆರ್. ಮುರುಗದಾಸ್ ನಿರ್ದೇಶನ ದಲ್ಲಿ ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಸಿಕಂದರ್ ರಿಲೀಸ್ ಆಗಿದ್ದು ಸಿನಿಮಾ ಅಂದುಕೊಂಡ ಮಟ್ಟಕ್ಕೆ ಸಕ್ಸಸ್ ಪಡೆಯಲಿಲ್ಲ. ಸಿನಿಮಾದಲ್ಲಿ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ, ಕಾಜಲ್ ಸೇರಿದಂತೆ ಫೇಮಸ್ ನಟ ನಟಿಯರಿದ್ದರೂ ಈ ಸಿನಿಮಾ ಸೋಲಲು ಪೈರೆಸಿ ಮುಖ್ಯ ಕಾರಣ ಎಂಬ ವದಂತಿಗಳು ಹರಿದಾಡುತ್ತಿವೆ. ಇದೀಗ ಸಿನಿಮಾದಲ್ಲಿ ಅಳಿಸಲಾದ ಬಹುತೇಕ ದೃಶ್ಯಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ನಟಿ ಕಾಜಲ್ ಅಗರ್ವಾಲ್ ಕೂಡ ಸಿಕಂದರ್ ಸಿನಿಮಾದಲ್ಲಿ ಅಭಿನಯಿಸಿದ್ದು ಡಿಲೀಟೆಡ್ ಆದ ಕೆಲ ದೃಶ್ಯಗಳು ಇದೀಗ ಮೆಚ್ಚುಗೆ ಗಳಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಸಲ್ಮಾನ್ ಖಾನ್ ಅವರಿಗೆ ನಿರೀಕ್ಷಿತ ಪ್ರಮಾಣದ ಸಕ್ಸಸ್ ಸಿಕ್ಕಿಲ್ಲ. ಬೇರೆ ಹೀರೋಗಳ ಸಿನಿಮಾಗಳು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುವ ಮೂಲಕ ಅಬ್ಬರಿಸಿವೆ. ಆದರೆ ಸಲ್ಮಾನ್ ಖಾನ್ ಅವರು ಅಂಥ ಸಕ್ಸಸ್ ಕಾಣಲು ಸಾಧ್ಯವಾಗಿಲ್ಲ. ಅಭಿಮಾನಿಗಳು ‘ಸಿಕಂದರ್’ ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಪೈರಸಿ ಕಾರಣದಿಂದ ಚಿತ್ರಕ್ಕೆ ಹೊಡೆತ ಬಿದ್ದಿದೆ. ಇದರ ಬೆನ್ನಲ್ಲೆ ಪೈರೆಸಿ ಕಾಪಿಯಲ್ಲಿ ಇದ್ದಂತಹ ನಟಿ ಖಾಜಲ್ ಅಗರ್ವಾಲ್ ಅಭಿನಯದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Why was this scene cut from the Film by Editing??@BeingSalmanKhan that was a great and important scene for people to see... WHY THIS BAD EDITING??#Sikandar pic.twitter.com/FpV6zdRwR6
— Ldpe414 (@ldpe414) April 20, 2025
ನಟಿ ಕಾಜಲ್ ಅಗರ್ವಾಲ್ ಪಾತ್ರವನ್ನು ಫ್ಯಾಮಿಲಿ ಓರಿಯಂಟೆಡ್ ಆಗಿ ಮಾಡಲಾಗಿದ್ದು ಕಾಜಲ್ ಅಗರ್ ವಾಲ್ ಪಾತ್ರವು ತನ್ನ ಕುಟುಂಬದ ಪರಿಸ್ಥಿತಿಗಳಿಂದ ಹತಾಶೆಯಾಗಿ ಮಹಿಳೆಯೂ ಪ್ರಾಣ ತ್ಯಾಗ ಮಾಡಲು ಹೋಗುವುದನ್ನು ತೋರಿಸ ಲಾಗಿದೆ. ಆಗ ಸಲ್ಮಾನ್ ಖಾನ್ ಪ್ರವೇಶಿಸಿ ಜೀವನ ಮೌಲ್ಯವನ್ನು ತಿಳಿಸುವ ದೃಶ್ಯಗಳಿತ್ತು. ಇದು ಮುಂದಿನ ಸೀನ್ ಗಳಿಗೂ ಲಿಂಕ್ ಆಗಿತ್ತು ಆದರೆ ರಿಲೀಸ್ ಆದ ಸಿನಿಮಾದಲ್ಲಿ ಈ ಎಲ್ಲ ಅಂಶಗಳನ್ನು ಡಿಲೀಟ್ ಮಾಡಲಾಗಿದೆ.
ಇದನ್ನು ಓದಿ: Mankuthimmana Kagga Movie: ಡಿ.ವಿ.ಜಿ ಅವರ ʼಮಂಕುತಿಮ್ಮನ ಕಗ್ಗʼ ಚಿತ್ರದ ಟ್ರೈಲರ್ ಬಿಡುಗಡೆ
ಈ ಡಿಲಿಟೆಡ್ ಸೀನ್ ಸದ್ಯ ವೈರಲ್ ಆಗಿದ್ದು ಅನೇಕ ಜನರ ಗಮನ ಸೆಳೆಯುತ್ತಿದೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ಆತ್ಮಹತ್ಯೆ ಕುರಿತು ಜಾಗೃತಿ ಮೂಡಿಸುವ ಇಷ್ಟೊಳ್ಳೆ ಸೀನ್ ಸಿನೆಮಾದಲ್ಲಿ ಏಕೆ ಅಳವಡಿಕೆಮಾಡಿಲ್ಲ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಬಹುಷಃ ಈ ವಿಡಿಯೊ ಸೇರ್ಪಡೆ ಆಗಿದ್ದರೆ ಚಿತ್ರದ ಭವಿಷ್ಯ ಬದಲಾಗಿ ಬಾಕ್ಸ್ ಆಫೀಸ್ ಲಿಸ್ಟ್ ಸೇರುತ್ತಿತ್ತು ಎಂದು ನೆಟ್ಟಿಗರೊಬ್ಬರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿ ಸಲ್ಮಾನ್ ಖಾನ್ ಸಿಕಂದರ್ ಪಾತ್ರದಲ್ಲಿ ಮಿಂಚಿದ್ದಾರೆ. ಉಳಿದಂತೆ ರಶ್ಮಿಕಾ ಮಂದಣ್ಣ, ಕಾಜಲ್ ಅಗರ್ವಾಲ್, ಸತ್ಯರಾಜ್ ಮತ್ತು ಶರ್ಮಾನ್ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ರಿಲೀಸ್ ಗೂ ಮುನ್ನವೇ ಬಹುನಿರೀಕ್ಷೆ ಹುಟ್ಟಿಸಿದ್ದು ಇದರಲ್ಲಿ ಅಂತದ್ದೇನು ವಿಶೇಷ ಇಲ್ಲ ಎಂದು ಸಾಕಷ್ಟು ನೆಗೆಟಿವ್ ಪ್ರತಿಕ್ರಿಯೆ ಸಹ ಪಡೆದಿದ್ದು ಸಿನಿಮಾ ಸೋಲಿಗೆ ಮುಖ್ಯ ಕಾರಣವಾಗಿದೆ. ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಕೇವಲ 184 ಕೋಟಿ ಗಳಿಸಿದ್ದರೂ ಸಲ್ಮಾನ್ ಖಾನ್ ಸಿನಿಮಾ ನಿರೀಕ್ಷಿಸಿದ್ದ ಮಟ್ಟಕ್ಕೆ ರೀಚ್ ಆಗಿಲ್ಲ ಎನ್ನಬಹುದು.