Anna Konidela: ಬೆಂಕಿ ದುರಂತದಿಂದ ಮಗ ಪಾರು; ತಿಮ್ಮಪ್ಪನಿಗೆ ಮುಡಿ ಕೊಟ್ಟ ನಟ ಪವನ್ ಕಲ್ಯಾಣ್ ಪತ್ನಿ
ನಟ ಪವನ್ ಕಲ್ಯಾಣ್ - ಅನ್ನಾ ಕೊನಿಡೆಲಾ ದಂಪತಿಯ 8 ವರ್ಷದ ಪುತ್ರ ಮಾರ್ಕ್ ಶಂಕರ್ ಏ. ಸಿಂಗಾಪುರದಲ್ಲಿ ನಡೆದ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ. ಸದ್ಯ ಚೇತರಿಸಿಕೊಳ್ಳುತ್ತಿದ್ದಾನೆ. ಹೀಗಾಗಿ ಮಗನ ಆರೋಗ್ಯ ಸುಧಾರಣೆಗಾಗಿ ಹರಕೆ ಹೊತ್ತಿದ್ದ ಅನ್ನಾ ಕೊನಿಡೆಲಾ ತಿರುಪತಿ ದೇಗುಲಕ್ಕೆ ಭೇಟಿ ಮುಡಿ ಕೊಟ್ಟಿದ್ದಾರೆ.

Pawan Kalyan's Wife Performs Head-Tonsuring

ನವದೆಹಲಿ: ಟಾಲಿವುಡ್ ನಟ, ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಪತ್ನಿ ಅನ್ನಾ ಕೊನಿಡೆಲಾ (Anna Konidela) ತಿರುಪತಿಯಲ್ಲಿ ಹರಕೆಯ ಮುಡಿಕೊಟ್ಟಿದ್ದಾರೆ. ನಟ ಪವನ್ ಕಲ್ಯಾಣ್ (Pawan Kalyan) - ಅನ್ನಾ ಕೊನಿಡೆಲಾ ದಂಪತಿಯ 8 ವರ್ಷದ ಪುತ್ರ ಮಾರ್ಕ್ ಶಂಕರ್ (Mark Shankar) ಏ. 8ರಂದು ಸಿಂಗಾಪುರದಲ್ಲಿ ನಡೆದ ಬೆಂಕಿ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ. ಹೀಗಾಗಿ ಸಿಂಗಾಪುರದಲ್ಲಿಯೇ ಬೇಕಾದ ಚಿಕಿತ್ಸೆ ಕೊಡಿಸಲಾಗಿತ್ತು. ಮಗನ ಯೋಗ ಕ್ಷೇಮ ವಿಚಾರಿಸಲು ಅನ್ನಾ ಕೊನಿಡೆಲಾ ಜತೆಗೆ ನಟ ಪವನ್ ಕಲ್ಯಾಣ್ ಕೂಡ ಆಂಧ್ರ ಪ್ರದೇಶದಿಂದ ಸಿಂಗಾಪುರಕ್ಕೆ ಪ್ರಯಾಣಿಸಿ ಅಲ್ಲಿಯೇ ಚಿಕಿತ್ಸೆ ಕೊಡಿಸಿದ್ದರು. ಇದೀಗ ಮಾರ್ಕ್ ಶಂಕರ್‌ನನ್ನು ಅಲ್ಲಿಂದ ಸುರಕ್ಷಿತವಾಗಿ ವಾಪಸ್ ಕರೆತಂದಿದ್ದಾರೆ. ಇದರ ಬೆನ್ನಲ್ಲೇ ಪತ್ನಿ ಅನ್ನಾ ತಿರುಪತಿಗೆ ಭೇಟಿ ನೀಡಿ, ಪುತ್ರನ ಆರೋಗ್ಯ ಕ್ಷೇಮಕ್ಕಾಗಿ ಮುಡಿ ಕೊಟ್ಟಿದ್ದಾರೆ.
ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್ ಸಮ್ಮರ್ ಕ್ಯಾಂಪ್‌ಗಾಗಿ ಸಿಂಗಾಪುರಕ್ಕೆ ತೆರಳಿದ್ದ. ಈ ವೇಳೆ ಶಾಲೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿತ್ತು. ಈ ಅಗ್ನಿ ಅವಘಡದಿಂದ ಮಾರ್ಕ್ ಶಂಕರ್‌ನ ಕೈ ಕಾಲಿನಲ್ಲಿ ಗಂಭೀರ ಸುಟ್ಟ ಗಾಯಗಳಾಗಿದ್ದು ಹೊಗೆಯನ್ನು ಅತಿಯಾಗಿ ಸೇವಿಸಿ ಶ್ವಾಸಕೋಶದ ಅಲರ್ಜಿ ಸಹ ಆಗಿದೆ. ಹೀಗಾಗಿ ಪ್ರಾಥಮಿಕ ಹಂತದಲ್ಲಿ ಸಿಂಗಾಪುರದಲ್ಲಿ ಚಿಕಿತ್ಸೆ ನೀಡಿ ಹೈದರಾಬಾದ್‌ಗೆ ಕರೆ ತರಲಾಗಿದೆ.
ಹರಕೆ ಹೊತ್ತಿದ್ದ ದಂಪತಿ
ನಟ ಪವನ್ ಕಲ್ಯಾಣ್ ಪತ್ನಿ ಅನ್ನಾ ಕೊನಿಡೆಲಾ ಮಗ ಚೇತರಿಕೆ ಕಾಣಬೇಕು ಎಂದು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದರಂತೆ. ಹೀಗಾಗಿ ಸಿಂಗಾಪುರದಿಂದ ಭಾರತಕ್ಕೆ ಮರಳುತ್ತಿದ್ದಂತೆ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ತೆರಳಿ ಮುಡಿ ನೀಡಿ ಹರಕೆ ತೀರಿಸಿದ್ದಾರೆ. ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ, ಮಗನ ಆರೋಗ್ಯ ಸ್ಥತಿ ಚೇತರಿಕೆಯಾಗಲೆಂದು ನಟ ಪವನ್ ಕಲ್ಯಾಣ್ ಪತ್ನಿ ಮುಡಿ ನೀಡಿ, ಪೂಜೆ ಸಲ್ಲಿಸಿದರು.
ಇದನ್ನು ಓದಿ: Pawan Kalyan: ಬೆಂಕಿ ಅವಘಡದ ನಂತರ ಮಗನನ್ನು ಹೈದರಾಬಾದ್‌ಗೆ ಕರೆದುಕೊಂಡು ಬಂದ ಪವನ್ ಕಲ್ಯಾಣ್
ಪವನ್ ಕಲ್ಯಾಣ್ ತಮ್ಮ ವೈಯಕ್ತಿಕ ಮತ್ತು ರಾಜಕೀಯ ಕೆಲಸದಲ್ಲಿ ತುಂಬಾ ಬ್ಯುಸಿ ಇದ್ದ ಕಾರಣ ಪತ್ನಿ ಮಾತ್ರ ತಿರುಪತಿಗೆ ಆಗಮಿಸಿದರು. ನಟ ಪವನ್ ಕಲ್ಯಾಣ್ ಅವರ ಅನುಪಸ್ಥಿತಿಯ ನಡುವೆಯೂ ಅವರ ಪತ್ನಿ ಅನ್ನಾ ಕೊನಿಡೆಲಾ ತಿಮ್ಮಪ್ಪನಿಗೆ ಹರಕೆಯ ಮುಡಿ ನೀಡಿದ್ದಾರೆ. ಪವನ್ ಕಲ್ಯಾಣ್ ಪತ್ನಿ ಅನ್ನಾ ಕೊನಿಡೆಲಾ ಅವರು ರಷ್ಯಾ ಮೂಲದವರಾಗಿದ್ದರು ಮುಡಿ ಕೊಡುವ ಮೂಲಕ ಹಿಂದೂ ಸಂಪ್ರದಾಯ ಪಾಲಿಸಿದ್ದಾರೆ. ಕ್ರಿಶ್ಚಿಯನ್ ಧರ್ಮವರಾಗಿದ್ದರೂ ಮಗನ ಆರೋಗ್ಯಕ್ಕಾಗಿ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಮುಡಿ ನೀಡಿರುವ ವಿಚಾರ ಸದ್ಯ ವೈರಲ್ ಆಗಿದೆ. ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.