#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Bhagya Lakshmi Serial: ಅತ್ತೆ-ಮಾವನನ್ನು ಹೀಯಾಲಿಸಿದ ಕನ್ನಿಕಾಳ ಕೆನ್ನೆಗೆ ಬಾರಿಸಿದ ಭಾಗ್ಯಾ

ಕನ್ನಿಕಾ ಆಫೀಸ್‌ ವಿಳಾಸವನ್ನು ಹಿತಾ ಮೂಲಕ ಪೂಜಾ ತೆಗೆಸಿಕೊಡುತ್ತಾಳೆ. ಸಿಕ್ಕ ಕೂಡಲೇ, ಧರ್ಮರಾಜ್ ಬಳಿ ಕಾರ್ ತೆಗೆಯಲು ಕುಸುಮಾ ಹೇಳುತ್ತಾಳೆ. ಕುಸುಮಾ ಕಾರಿನಲ್ಲಿ ಧರ್ಮರಾಜ್ ಜತೆ ಕನ್ನಿಕಾ ಆಫೀಸ್‌ಗೆ ಹೊರಡುತ್ತಾಳೆ. ಯಾರು ಹೇಳಿದರೂ ಕುಸುಮಾ ಕೇಳುವುದಿಲ್ಲ.

ಅತ್ತೆ-ಮಾವನನ್ನು ಹೀಯಾಲಿಸಿದ ಕನ್ನಿಕಾಳ ಕೆನ್ನೆಗೆ ಬಾರಿಸಿದ ಭಾಗ್ಯಾ

Bhagya Lakshmi Serial

Profile Vinay Bhat Feb 11, 2025 12:42 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ( Bhagya Lakshmi Serial ) ಮಹತ್ವದ ಘಟ್ಟದತ್ತ ಸಾಗುತ್ತಿದೆ. ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡಲಾಗುತ್ತಿದೆ. ಭಾಗ್ಯಾಳ ಅತ್ತೆ ಕುಸುಮಾ.. ತನ್ನ ಸೊಸೆಯನ್ನು ಕೆಲಸದಿಂದ ತೆಗೆದವಳಿಗೆ ಬುದ್ದಿ ಕಲಿಸಬೇಕೆಂದು ಹಿತಾಳ ಸಹಾಯದಿಂದ ಕನ್ನಿಕಾ ಮನೆಯ ಅಡ್ರೆಸ್ ಪಡೆದುಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಕುಸುಮಾ ಹಾಗೂ ಧರ್ಮರಾಜ್ ಕಾರಿನಲ್ಲಿ ಕನ್ನಿಕಾಳ ಆಫೀಸ್​ಗೆ ತೆರಳಿ ಹಿಗ್ಗಾ-ಮುಗ್ಗಾ ಬೈದಿದ್ದಾರೆ. ಆದರೆ, ಇದಕ್ಕೆ ಕನ್ನಿಕಾ ಕೂಡ ಆಫೀಸ್​ನಲ್ಲಿರುವ ಎಲ್ಲರನ್ನೂ ಕರೆಸಿ ಅವರೆದುರು ಭಾಗ್ಯಾಳ ಅತ್ತೆ ಮಾವನಿಗೆ ಅವಮಾನ ಮಾಡಿದ್ದಾಳೆ.

ಕನ್ನಿಕಾ ಆಫೀಸ್‌ ವಿಳಾಸವನ್ನು ಹಿತಾ ಮೂಲಕ ಪೂಜಾ ತೆಗೆಸಿಕೊಡುತ್ತಾಳೆ. ಸಿಕ್ಕ ಕೂಡಲೇ, ಧರ್ಮರಾಜ್ ಬಳಿ ಕಾರ್ ತೆಗೆಯಲು ಕುಸುಮಾ ಹೇಳುತ್ತಾಳೆ. ಕುಸುಮಾ ಕಾರಿನಲ್ಲಿ ಧರ್ಮರಾಜ್ ಜತೆ ಕನ್ನಿಕಾ ಆಫೀಸ್‌ಗೆ ಹೊರಡುತ್ತಾಳೆ. ಯಾರು ಹೇಳಿದರೂ ಕುಸುಮಾ ಕೇಳುವುದಿಲ್ಲ, ಇವತ್ತು ಭಾಗ್ಯಾಗೆ ನ್ಯಾಯ ಕೊಡಿಸಿಯೇ ತೀರುತ್ತೇನೆಂದು ಕನ್ನಿಕಾಳ ಆಫೀಸ್​ಗೆ ಹೋಗಿದ್ದಾರೆ. ಆದರೆ, ಕನ್ನಿಕಾ ಇವರು ಬರುವುದನ್ನು ತಿಳಿದುಕೊಂಡು, ಮೊದಲೇ ಎಲ್ಲ ಪ್ಲ್ಯಾನ್ ಮಾಡಿರುತ್ತಾಳೆ.

ಕುಸುಮಾ ಹಾಗೂ ಧರ್ಮರಾಜ್ ಇಬ್ಬರನ್ನೂ ಕ್ಯಾಬಿನ್‌ಗೆ ಕರೆಸುತ್ತಾಳೆ. ಕ್ಯಾಬಿನ್‌ನಲ್ಲಿ ಕನ್ನಿಕಾಗೆ ಮಾತ್ರ ಚೆಯರ್ ಇರುತ್ತದೆ. ಧರ್ಮರಾಜ್ ಮತ್ತು ಕುಸುಮಾ ನಿಂತುಕೊಂಡೇ ಇರಬೇಕಾಗುತ್ತದೆ. ನಿಮಗೆ ಅವಮಾನ ಮಾಡಲೆಂದೇ ಇದನ್ನು ಮಾಡಿದ್ದೇನೆ ಎಂದು ಕನ್ನಿಕಾ ಹೇಳುತ್ತಾಳೆ. ಭಾಗ್ಯಾ ನಿಮ್ಮ ಹೋಟೆಲ್​ಗೋಸ್ಕರ ಎಷ್ಟು ಕೆಲಸ ಮಾಡಿದ್ದಾಳೆ.. ಅವಳಿಂದಲೇ ನಿಮ್ಮ ಹೋಟೆಲ್​ಗೆ ಅಷ್ಟು ದೊಡ್ಡ ಹೆಸರು ಬಂದಿರೋದು ಎಂದು ಧರ್ಮರಾಜ್ ಹೇಳುತ್ತಾರೆ. ಆದರೆ ಇದಕ್ಕೆ ಕನ್ನಿಕಾ ಸೋ ವಾಟ್ ಅವ್ಳು ಮಾಡರೊ ತಪ್ಪನ್ನ ಕ್ಷಮಿಸಬೇಕಾ ನಾನು? ಎಂದಾಗ ಕೋಪಗೊಂಡ ಕುಸುಮಾ, ನನ್ನ ಸೊಸೆ ತಪ್ಪು ಮಾಡಿಲ್ಲ.. ಇದೆಲ್ಲ ನಿನ್ನದೇ ಪಿತೂರಿ ಅಂತ ನನ್ಗೆ ಚೆನ್ನಾಗಿ ಗೊತ್ತಿದೆ ಎಂದಿದ್ದಾರೆ.

ಆಗ ಕನ್ನಿಕಾ, ತನ್ನ ಆಫೀಸ್ ಸಿಬ್ಬಂದಿಗಳನ್ನೆಲ್ಲ ಕರೆದು, ಅವರ ಮುಂದೆಯೇ ಇಬ್ಬರನ್ನೂ ಅವಮಾನ ಮಾಡುತ್ತಾಳೆ. ಇವರಿಬ್ರು ಯಾರು ಗೊತ್ತಾ, ನಮ್ಮ ಹೋಟೆಲ್​ನಲ್ಲಿ ವಿಐಪಿಗಳ ಊಟಕ್ಕೆ ಏನೋ ಹಾಕಿ ಅವರನ್ನು ಹಾಸ್ಪಿಟರ್​ಗೆ ಹೋಗೋ ತರ ಮಾಡಿ ನಮ್ಮ ಹೋಟೆಲ್ ಇಮೇಜ್​ನ ಹಾಳು ಮಾಡದ್ದಾಳಲ್ಲ ಅವಳ ಅತ್ತೆ-ಮಾವ ಇವರು. ಆಫೀಸ್ ಸಿಬ್ಬಂದಿಗಳ ಎದುರು ಕುಸುಮಾ ಬಗ್ಗೆ ಕನ್ನಿಕಾ ತುಂಬಾ ಹೀಯಾಳಿಸಿ ಮಾತನಾಡುತ್ತಾಳೆ.



ಇದರ ಮಧ್ಯೆ ಅತ್ತೆ-ಮಾವ ಕನ್ನಿಕಾ ಆಫೀಸ್​ಗೆ ಹೋಗಿರುವ ವಿಚಾರ ಭಾಗ್ಯಾಗೆ ಗೊತ್ತಾಗಿದೆ. ಭಾಗ್ಯಾ ನೇರವಾಗಿ ಕನ್ನಿಕಾ ಆಫೀಸ್​ಗೆ ಬರುತ್ತಾಳೆ. ಅಲ್ಲಿ ಅತ್ತೆ-ಮಾವನಿಗೆ ಆಗುತ್ತಿರುವ ಅವಮಾನ ಕಂಡು ಕೋಪಗೊಳ್ಳುತ್ತಾಳೆ. ಭಾಗ್ಯಾಳನ್ನ ಕೆಲಸದಿಂದ ಕಿತ್ತಾಗಿದ ಮೇಲೂ ಅವಳ ಅತ್ತೆ-ಮಾವ ಮತ್ತೆ ಕೆಲಸ ವಾಪಾಸ್ ಕೊಡಿ ಎಂದು ಭಿಕ್ಷೆ ಬೇಡೋಕೆ ಬಂದಿದ್ದಾರೆ.. ನೀವು ಗತಿ ಇಲ್ಲದಿರುವ ಜೊತೆಗೆ ಮಾನಗೆಟ್ಟವರು ಎಂದಾಗ ಮತ್ತಷ್ಟು ಕೋಪಗೊಂಡ ಭಾಗ್ಯಾ, ಮಾತಿನ ಮೇಲೆ ನಿಗ ಇರಲಿ ಎಂದು ಹೇಳಿ ಕನ್ನಿಕಾಳ ಕೆನ್ನೆಗೆ ಬಾರಿಸಿದ್ದಾಳೆ. ಸದ್ಯ ಎಲ್ಲ ಆಫೀಸ್ ಮೆಂಬರ್ಸ್ ಎದುರು ಭಾಗ್ಯಾ ತನ್ನ ಕೆನ್ನೆಗೆ ಬಾರಿಸಿರುವುದು ಕನ್ನಿಕಾಗೆ ದೊಡ್ಡ ಅವಮಾನ ಆಗಿದೆ. ಇದಕ್ಕೆ ಹೇಗೆ ಸೇಡು ತೀರಿಸಿಕೊಳ್ಳುತ್ತಾಳೆ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

Anusha Rai-Trivikram: ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಅನುಷಾ ರೈ-ತ್ರಿವಿಕ್ರಮ್: ಹಗ್ ಮಾಡುತ್ತಿರುವ ವಿಡಿಯೋ ವೈರಲ್