Rakshak Bullet: ಬಿಬಿಎಂಪಿ ಜೊತೆ ಬೀದಿಗಳಲ್ಲಿ ಕಸ ಗುಡಿಸಿದ ರಕ್ಷಕ್ ಬುಲೆಟ್
ಈ ವಾರ ರಕ್ಷಕ್ ಬಹುಮುಖ್ಯ ಟಾಸ್ಕ್ ಒಂದನ್ನ ನಿರ್ವಹಿಸಿದ್ದಾರೆ. ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ಈ ವಾರ ದುಡಿಮೆಯ ಕಾಣಿಕೆ ಎಂಬ ಟಾಸ್ಕ್ ಅನ್ನು ಬ್ಯಾಚುಲರ್ಸ್‌ಗೆ ನೀಡಲಾಗಿದೆ. ಇದರಲ್ಲಿ ರಕ್ಷಕ್ ಬುಲೆಟ್ ಕೈಯಲ್ಲಿ ಪೊರಕೆ ಹಿಡಿದು ಕಸ ಹೊಡೆದಿದ್ದಾರೆ.

Rakshak Bullet

ಝೀ ಕನ್ನಡದಲ್ಲಿ ಶುರುವಾಗಿರುವ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ಗೆ (Bharjari Bachelors season 2) ಅಮೋಘ ರೆಸ್ಪಾನ್ಸ್ ಕೇಳಿಬರುತ್ತಿದೆ. ಹತ್ತು ಬ್ಯಾಚುಲರ್ಸ್‌ಗೆ ಹತ್ತು ಸುಂದರಿಯರು ಮೆಂಟರ್ಸ್ ಆಗಿರುವ ಈ ಶೋ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದೆ. ಪ್ರತಿ ವಾರ ಈ ಶೋ ಒಂದಲ್ಲ ಒಂದು ದೊಡ್ಡ ವಿಚಾರಕ್ಕೆ ಸುದ್ದಿ ಆಗುತ್ತಲೇ ಇದೆ. ಕಳೆದ ವಾರ ಗಗನಾ ಜೊತೆಗೆ ಜೋಡಿಯಾಗಿರುವ ಡ್ರೋನ್ ಪ್ರತಾಪ್ ಎಲ್ಲರ ಕಣ್ಣುಕುಕ್ಕುವಂತೆ ಮಾಡಿದ್ದರು. ಕಿರುತೆರೆ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರತಾಪ್ ಅವರು 1000 ಅಡಿ ಎತ್ತರದಲ್ಲಿ ಹಾರುವ ಹೆಲಿಕ್ಯಾಪ್ಟರ್ ತಂದು ಗಗನಾಗೆ ಸರ್ಪ್ರೈಸ್ ಕೊಟ್ಟಿದ್ದರು. ಈಗ ರಕ್ಷಕ್ ಬುಲೆಟ್ ಈ ಶೋ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
ಈ ಶೋನಲ್ಲಿ ಬುಲೆಟ್ ಪ್ರಕಾಶ್ ಮಗ ಹಾಗೂ ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ ರಕ್ಷಕ್ ಬುಲೆಟ್ ಕೂಡ ಮಿಂಚುತ್ತಿದ್ದಾರೆ. ರಕ್ಷಕ್ ಬುಲೆಟ್ಗೆ ಕನ್ನಡತಿ ಸೀರಿಯಲ್ ಖ್ಯಾತಿಯ ರೋಮಲ ಅವರು ಜೋಡಿಯಾಗಿದ್ದಾರೆ. ಕಳೆದ ವಾರ 10 ಬ್ಯಾಚ್ಯುಲರ್ಸ್ ಮತ್ತು ಏಂಜಲ್ಸ್ 10 ಸೂಪರ್ ಹಿಟ್ ಸಿನಿಮಾಗಳನ್ನು ಮರುಸೃಷ್ಟಿ ಮಾಡುವ ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ರಕ್ಷಕ್ ಅವರು ತಮ್ಮ ಪಾರ್ಟ್ನರ್ ರಮೋಲಾ ಜೊತೆ ಬುಲ್ ಬುಲ್ ಸಿನಿಮಾದ ಫೇಮಸ್ ಸೀನ್‌ವೊಂದನ್ನು ರೀ-ಕ್ರಿಯೇಟ್ ಮಾಡಿದ್ದರು. ಬಳಿಕ ರಕ್ಷಕ್ ತಂದೆಯನ್ನು ನೆನೆದು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.
ಈ ವಾರ ರಕ್ಷಕ್ ಬಹುಮುಖ್ಯ ಟಾಸ್ಕ್ ಒಂದನ್ನ ನಿರ್ವಹಿಸಿದ್ದಾರೆ. ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ಈ ವಾರ ದುಡಿಮೆಯ ಕಾಣಿಕೆ ಎಂಬ ಟಾಸ್ಕ್ ಅನ್ನು ಬ್ಯಾಚುಲರ್ಸ್‌ಗೆ ನೀಡಲಾಗಿದೆ. ಕಾಯಕವೇ ಕೈಲಾಸ ಅಂತ, ಬೆವರು ಸುರಿಸಿ ದುಡಿದ ಹಣವನ್ನು ಮೆಂಟರ್ಸ್‌ಗೆ, ಬ್ಯಾಚುಲರ್ಸ್ ಕಾಣಿಕೆಯಾಗಿ ಕೊಟ್ಟಿದ್ದಾರೆ. ಈ ಚಾಲೆಂಜ್ ಅನ್ನು ಸ್ವೀಕರಿಸಿ, ಬೀದಿಬದಿ ಕಸ ಕಡ್ಡಿಯನ್ನು ಹಾಯ್ದು, ಸ್ವಚ್ಛತೆಯೆ ರಾಯಭಾರಿಗಳೊಂದಿಗೆ ರಕ್ಷಕ್ ಕೈ ಜೋಡಿಸಿದ್ದಾರೆ.
ಈ ಕುರಿತ ಪ್ರೋಮೋ ರಿಲೀಸ್ ಆಗಿದ್ದು, ರಕ್ಷಕ್ ಕೈಯಲ್ಲಿ ಪೊರಕೆ ಹಿಡಿದು ಕಸ ಹೊಡೆದಿದ್ದಾರೆ. ಈ ಬಗ್ಗೆ ಮಾತನಾಡಿ ‘‘ಬಿಬಿಎಂಪಿ ಅವರ ಜೊತೆ ಕೆಲಸ ಮಾಡಬೇಕು ಅಂತ ಬಂದಿದ್ದೀನಿ. ವೆಟ್ ಮತ್ತು ಡ್ರೈ ಕಸ ಕೊಡುತ್ತಾರೆ. ಅದನ್ನು ವಿಂಗಡಿಸಿ ಬ್ಯಾಗ್‌ಗೆ ತುಂಬ ಬೇಕು. ನನ್ನ ಲೈಫ್‌ನಲ್ಲಿ ಇದೊಂದು ಹೊಸ ಅನುಭವ. ಸಿಕ್ಕಾಪಟ್ಟೆ ಕಷ್ಟ ಆಗುತ್ತಿದೆ. ಕಷ್ಟ ಪಟ್ಟು ದುಡಿದಕ್ಕೂ ಸಾರ್ಥಕ ಅನಿಸುತ್ತಿದೆ’’ ಎಂದಿದ್ದಾರೆ ರಕ್ಷಕ್ ಬುಲೆಟ್. ರಕ್ಷಕ್ ಅವರ ಈ ಕಾರ್ಯಕ್ಕೆ ರಚಿತಾ ರಾಮ್ ಮತ್ತು ರವಿಚಂದ್ರನ್ ಭೇಷ್ ಎಂದಿದ್ದಾರೆ. ಅಲ್ಲದೆ ರಕ್ಷಕ್ ಅವರ ಈ ಕಾರ್ಯದ ಬಗ್ಗೆ ನೆಟ್ಟಿಗರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
Ugramm Manju: ಗೌತಮಿ ಜೊತೆ ಸೇರಿ ಬದಲಾದ ಉಗ್ರಂ ಮಂಜು: ತನ್ನಿಷ್ಟವನ್ನ ತ್ಯಜಿಸಿದ ನಟ