ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮದ್ವೆಯಲ್ಲಿ ಊಟ ಕೊಡಲಿಲ್ಲವೆಂದು ಸಿಟ್ಟಿಗೆದ್ದ ಫೋಟೋಗ್ರಾಫರ್‌! ವೆಡ್ಡಿಂಗ್‌ ಫೋಟೋಸ್‌ ಡಿಲೀಟ್‌

ಫೋಟೊಗ್ರಾಫರ್ ಒಬ್ಬ ತನಗೆ ಊಟ, ನೀರು ನೀಡಲಿಲ್ಲ ಎಂಬ ಕಾರಣಕ್ಕೆ ಮದುವೆಯ ಫೋಟೊಗಳನ್ನು ಡಿಲೀಟ್ ಮಾಡಿದ್ದಾನಂತೆ. ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್(Viral News)ಆಗಿದೆ. ಕಷ್ಟಪಟ್ಟು ದುಡಿಯುವಂತಹ ಜನರಿಗೆ ಗೌರವ ನೀಡದಿರುವುದಕ್ಕೆ ಸೋಶಿಯಲ್ ಮೀಡಿಯಾ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ.

ವರನ ಮುಂದೆಯೇ ಫೋಟೊ ಡಿಲೀಟ್‌ ಮಾಡಿದ ಫೋಟೊಗ್ರಾಫರ್;‌ ಕಾರಣವೇನು?

Profile pavithra May 9, 2025 8:18 PM

ಈಗಂತೂ ಫೋಟೊಗ್ರಾಫರ್‌ ಇಲ್ಲದಿದ್ರೆ ಈಗ ಮದುವೆನೇ ನಡೆಯಲ್ಲ! ಫ್ರಿ ವೆಡ್ಡಿಂಗ್‌ ಶೂಟ್‌ನಿಂದ ಹಿಡಿದು ಪೋಸ್ಟ್‌ ವೆಡ್ಡಿಂಗ್‌ ಶೂಟ್‌ವರೆಗೆ ಫೋಟೊಗ್ರಾಫರ್‌ ಬೇಕೆ ಬೇಕು! ಅಂತಹದ್ದರಲ್ಲಿ ಫೋಟೊಗ್ರಾಫರ್‌ ಒಬ್ಬ ಮದುವೆಯ ದಿನ ತನಗೆ ಸರಿಯಾಗಿ ಊಟ, ನೀರು ಕೊಡಲಿಲ್ಲವೆಂದು ದಂಪತಿಯ ಫೋಟೊವನ್ನು ಡಿಲೀಟ್‌ ಮಾಡಿದ್ದಾನಂತೆ. ಈ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್‌ (Viral News)ಆಗಿದೆ. ಪೋಸ್ಟ್ ಪ್ರಕಾರ, ಮದುವೆಯ ಫೋಟೊಗ್ರಾಫರ್ ತುಂಬಾ ಹೊತ್ತು ಪೋಟೊ ತೆಗೆದ ಕಾರಣ ಸುಸ್ತಾಗಿ ಸ್ವಲ್ಪ ಹೊತ್ತು ರೆಸ್ಟ್‌ ತೆಗೆದುಕೊಂಡು ಊಟ, ನೀರು ಕೊಡುವಂತೆ ವಿನಂತಿಸಿದ್ದಾನೆ. ಆದರೆ ಮದುಮಕ್ಕಳ ಕಡೆಯವರು ಅವನ ಬೇಡಿಕೆಗಳನ್ನು ನಿರ್ಲಕ್ಷಿಸಿದ್ದಾರಂತೆ. ಇಷ್ಟು ಶ್ರದ್ಧೆಯಿಂದ ಕೆಲಸ ಮಾಡಿದರೂ ಕೇವಲ 20 ನಿಮಿಷ ರೆಸ್ಟ್‌ ಕೂಡ ನೀಡದೆ ನಿಷ್ಟುರವಾಗಿ ಮಾತನಾಡಿದ್ದಕ್ಕೆ ಕೋಪಗೊಂಡ ಫೋಟೊಗ್ರಾಫರ್ ವರನ ಎದುರಲ್ಲಿಯೇ ತೆಗೆದ ಫೋಟೋಗಳನ್ನು ಡಿಲೀಟ್ ಮಾಡಿ ಅಲ್ಲಿಂದ ಹೊರಟು ಹೋಗಿದ್ದಾನಂತೆ.

ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಷ್ಟಪಟ್ಟು ದುಡಿಯುವಂತಹ ಜನರಿಗೆ ಗೌರವ ನೀಡದಿರುವುದಕ್ಕೆ ಸೋಶಿಯಲ್ ಮೀಡಿಯಾ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವನು ಕೋಪದಿಂದ ಮಾಡಿದ ಕ್ರಮ ಸರಿಯಾಗಿದೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಮದುವೆ ದಿನ ದಂಪತಿಗೆ ಬಹಳ ವಿಶೇಷವಾದುದು ಮತ್ತು ಅದು ಜೀವನದಲ್ಲಿ ಒಮ್ಮೆ ಆಗುವಂತಹುದು, ಇದರಿಂದ ದಂಪತಿಗೆ ತೊಂದರೆಯಾಗಿದೆ ಎಂದಿದ್ದಾರೆ.

"ಪ್ರತಿಯೊಬ್ಬರನ್ನು ಗೌರವಿಸಿ. ಆ ವ್ಯಕ್ತಿಯು ಇದರಿಂದ ಪಾಠವನ್ನು ಕಲಿತ ಎಂಬುದಾಗಿ ಆಶಿಸುತ್ತೇವೆ," ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, "ನಾವು ಫೋಟೋಗ್ರಾಫರ್‌ಗಳ ಸಂಘಗಳ ಬಗ್ಗೆ ತುಂಬಾ ಹೆಮ್ಮೆಯನ್ನು ಹೊಂದಿದ್ದೇವೆ." ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ವರಮಾಲೆ ಹಾಕುವಾಗ ಅಡ್ಡಿಪಡಿಸಿದ ಸ್ನೇಹಿತನಿಗೆ ವಧು ಮಾಡಿದ್ದೇನು? ಸಿಕ್ಕಾಪಟ್ಟೆ ವೈರಲ್‌ ಆಯ್ತು ಈ ವಿಡಿಯೊ

ಆದರೆ ಇನ್ನು ಕೆಲವರು ಪೋಟೊಗ್ರಾಫರ್ ತೆಗೆದುಕೊಂಡ ಕ್ರಮ ಅನ್ಯಾಯವೆಂದು ಹೇಳಿದ್ದಾರೆ. "ಅವರು ತಮ್ಮ ಕೆಲಸವನ್ನು ಮಾಡಲು ಇಲ್ಲಿ ಇರುವುದು , ಪಾರ್ಟಿ ಮಾಡಲು ಅಲ್ಲ. ಹಲವಾರು ಕಂಪನಿಗಳು ಫುಡ್‍ಗಾಗಿ ಹಣವನ್ನು ನೀಡದಿದ್ದಾಗ ನಾವು ಮನೆಗೆ ಹೋಗಿ ಸ್ವತಃ ವ್ಯವಸ್ಥೆ ಮಾಡುತ್ತೇವೆ. ಇದಕ್ಕಾಗಿ ಯಾಕೆ ಕೋಪಗೊಳ್ಳಬೇಕು?” ಎಂದು ಪ್ರಶ್ನಿಸಿದ್ದಾರೆ.