ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Covid 19: ಮತ್ತೆ ವಕ್ಕರಿಸಿದ ಕೊರೋನಾ ಮಹಾಮಾರಿ; ಇಬ್ಬರು ಬಲಿ

ಕಳೆದ ಎರಡು ವರ್ಷಗಳ ಹಿಂದೆ ಜಗತ್ತು ಕೋವಿಡ್‌ ಮಹಾಮಾರಿಯಿಂದ ತತ್ತರಿಸಿ ಹೋಗಿತ್ತು. ಇದೀಗ ಕೊರೋನಾ ಮತ್ತೆ ವಕ್ಕರಿಸಿದೆ. ಮುಂಬೈನ ಕಿಂಗ್ ಎಡ್ವರ್ಡ್ ಮೆಮೊರಿಯಲ್ (KEM) ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಎರಡು ಕೋವಿಡ್ ಸಂಬಂಧಿತ ಸಾವಿನ ಪ್ರಕರಣಗಳು ವರದಿಯಾಗಿವೆ.

ಮತ್ತೆ ಶುರುವಾದ ಕೋವಿಡ್‌ ಹಾವಳಿ ; ಇಬ್ಬರು ಬಲಿ

Profile Vishakha Bhat May 20, 2025 10:19 AM

ಮುಂಬೈ: ಕಳೆದ ಎರಡು ವರ್ಷಗಳ ಹಿಂದೆ ಜಗತ್ತು ಕೋವಿಡ್‌ (Covid 19) ಮಹಾಮಾರಿಯಿಂದ ತತ್ತರಿಸಿ ಹೋಗಿತ್ತು. ಇದೀಗ ಕೊರೋನಾ ಮತ್ತೆ ವಕ್ಕರಿಸಿದೆ. ಮುಂಬೈನ ಕಿಂಗ್ ಎಡ್ವರ್ಡ್ ಮೆಮೊರಿಯಲ್ (KEM) ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಎರಡು ಕೋವಿಡ್ ಸಂಬಂಧಿತ ಸಾವಿನ ಪ್ರಕರಣಗಳು ವರದಿಯಾಗಿವೆ. ಕೊರೋನಾದಿಂದಾಗಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮುಂಬೈನಲ್ಲಿ ಕೊರೋನಾ ಸಂಬಂಧಿಸಿದಂತೆ ಎಚ್ಚರಿಕೆಯನ್ನು ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ಈಗಾಗಲೇ ಆರೋಗ್ಯ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ.

ಮೃತರಲ್ಲಿ ಒಬ್ಬ 14 ವರ್ಷದ ಬಾಲಕನಾಗಿದ್ದು, ನೆಫ್ರೋಟಿಕ್ ಸಿಂಡ್ರೋಮ್‌ನಿಂದ ಉಂಟಾದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಎಂದು ತಿಳಿದು ಬಂದಿದೆ. ಮತ್ತೊಬ್ಬ ವ್ಯಕ್ತಿ 54 ವರ್ಷದ ಕ್ಯಾನ್ಸರ್ ರೋಗಿಯಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಈ ಇಬ್ಬರ ಸಾವಿಗೂ ಕೋವಿಡ್ ಮಾತ್ರ ಕಾರಣವಾಗಿಲ್ಲಇತರ ಆರೋಗ್ಯ ಸಮಸ್ಯೆಗಳ ಜೊತೆಗೆ ಸಂಬಂಧಿಸಿದ್ದಾಗಿವೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಕೊರೊನಾ ಹೆಚ್ಚಳದ ಕುರಿತು ಬ್ರಿಹನ್ ಮುಂಬೈ ಮಹಾನಗರ ಪಾಲಿಕೆ (BMC) ಸಾರ್ವಜನಿಕರಲ್ಲಿ ಆತಂಕದ ಅವಶ್ಯಕತೆ ಇಲ್ಲ ಎಂದು ಹೇಳಿದೆ. ಈ ವರ್ಷದ ಮೇ ತಿಂಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದೆ.

ಕಳೆದ ಕೆಲ ದಿನಗಳ ಹಿಂದೆ ತಾತ್ಕಾಲಿಕ ಕೋವಿಡ್ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗಿದ್ದು, ಭವಿಷ್ಯದಲ್ಲಿ ಅದನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಸರ್ಕಾರ ಇದುವರೆಗೆ ಯಾವುದೇ ಸೂಚನೆಯನ್ನು ಹೊರಡಿಸಿಲ್ಲ.‌ 2020ರಲ್ಲಿ ತುರ್ತು ಪ್ರತಿಕ್ರಿಯೆಯ ಭಾಗವಾಗಿ ನಿರ್ಮಿಸಲಾದ ಈ ಆಸ್ಪತ್ರೆಯಲ್ಲಿ ಸುಮಾರು 1,000 ಸಾಮಾನ್ಯ ಹಾಸಿಗೆಗಳು ಮತ್ತು 200 ವೆಂಟಿಲೇಟರ್‌ಗಳೊಂದಿಗೆ ಐಸಿಯು ಹಾಸಿಗೆಗಳಿದ್ದವು. ಪ್ರತಿ ವೆಂಟಿಲೇಟರ್‌ಗೆ ಸುಮಾರು 7 ಲಕ್ಷ ರೂಪಾಯಿ ವೆಚ್ಚವಾಗಿದ್ದು, ಒಟ್ಟಾರೆ ಥಾಣೆ ಮಹಾನಗರ ಪಾಲಿಕೆಯಿಂದ 10 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗಿ ಈ ಸೌಲಭ್ಯ ನಿರ್ಮಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ: Viral Post: ಈ ವರ್ಷ 3ನೇ ಮಹಾಯುದ್ಧ ಫಿಕ್ಸ್... ಕೊರೋನಾ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದವನಿಂದ ಮತ್ತೊಂದು ಭಯಾನಕ ಭವಿಷ್ಯವಾಣಿ!

ಆದರೆ ಈಗ ಈ ಸ್ಥಳ ಸಂಪೂರ್ಣ ನಿರ್ಲಕ್ಷಿತವಾಗಿದ್ದು, ಧೂಳಿನಿಂದ ಮಸುಕಾದ ಹಾಸಿಗೆಗಳು, ಬಳಕೆಯಾಗದ ಯಂತ್ರೋಪಕರಣಗಳು ಹಾಗೂ ನಿರ್ಗತಿಕ ಆಂಬ್ಯುಲೆನ್ಸ್‌ಗಳು ಹೊರಗೆ ಬಿದ್ದಂತಿವೆ. ಸ್ಥಳೀಯ ಆಡಳಿತದಿಂದ ಯಾವುದೇ ನಿರ್ವಹಣೆ ಅಥವಾ ಮರುಬಳಕೆಯ ಚಟುವಟಿಕೆಗಳು ನಡೆದಿಲ್ಲ. ಈ ಸೌಲಭ್ಯಕ್ಕೆ ಹೊಂದಿದ್ದ ದುಬಾರಿ ಸೌಲಭ್ಯಗಳು ಸೂಕ್ತ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.