Ninaagi serial: ʼನಿನಗಾಗಿʼ ಸೀರಿಯಲ್‌ನಲ್ಲಿ ತೆರೆದುಕೊಳ್ಳಲಿದೆ ಜೀವ - ರಚನಾ ಹೊಸ ಪ್ರಪಂಚ
ಹೊಸ ಪ್ರಪಂಚ ಹೊಸ ಸವಾಲುಗಳೊಂದಿಗೆ ಹತ್ತಾರು ತಿರುವುಗಳನ್ನು ಇದೀಗ 'ನಿನಗಾಗಿʼ ಸಿರಿಯಲ್ ನೀಡುತ್ತಿದೆ. ಪ್ರೊಮೊ ನೋಡಿದಾಗ ಧಾರಾವಾಹಿ ಬೇರೊಂದು ಹೊಸ ಕತೆಯನ್ನು ಹೇಳುತ್ತಿದೆಯೇನೋ ಅನ್ನುವಂತೆ ಭಾಸವಾಗುತ್ತಿದೆ ಎನ್ನುತ್ತಿದ್ದಾರೆ ಪ್ರೇಕ್ಷಕರು. ಇದುವರೆಗೆ ಜೀವಾ -ರಚನಾ, ವಜ್ರೇಶ್ವರಿ ಕತೆಯನ್ನು ಹೇಳುತ್ತಿದ್ದ 'ನಿನಗಾಗಿ' ಇದೀಗ ಹೊಸ ಕಥೆಯಂತೆ ಮೂಡಿ ಬರುತ್ತಿದೆ.

Ninaagi' serial

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಸೀರಿಯಲ್‌ಗಳಲ್ಲಿ ʼನಿನಗಾಗಿʼ (Ninaagi Serial) ಕೂಡ ಒಂದು. ಇದೀಗ ಈ ಧಾರಾವಾಹಿಯ ಕತೆ ಹೊಸತೊಂದು ತಿರುವು ಪಡೆದಿದೆ. ಹೊಸ ಪ್ರಪಂಚ- ಹೊಸ ಸವಾಲುಗಳೊಂದಿಗೆ ಹತ್ತಾರು ತಿರುವುಗಳನ್ನು ಇದೀಗ 'ನಿನಗಾಗಿʼ ಸಿರಿಯಲ್ ನೀಡುತ್ತಿದೆ. ಪ್ರೊಮೊ ನೋಡಿದಾಗ ಧಾರಾವಾಹಿ ಬೇರೊಂದು ಹೊಸ ಕತೆಯನ್ನು ಹೇಳುತ್ತಿದೆಯೇನೋ ಅನ್ನುವಂತೆ ಭಾಸವಾಗುತ್ತದೆ. ಇದುವರೆಗೆ ಜೀವ -ರಚನಾ, ವಜ್ರೇಶ್ವರಿ ಕತೆಯನ್ನು ಹೇಳುತ್ತಿದ್ದ 'ನಿನಗಾಗಿ' ಇದೀಗ ಹೊಸ ಕಥೆಯಂತೆ ಮೂಡಿ ಬರುತ್ತಿದೆ ಎನ್ನುತ್ತಿದ್ದಾರೆ ಪ್ರೇಕ್ಷಕರು.
ಜೀವನ ತಂದೆ ಶ್ರೀಮಂತ ಆಭರಣದ ವ್ಯಾಪಾರಿಯಾಗಿದ್ದು, ಆ ಕುಟುಂಬದ ಕತೆಯನ್ನು ಇದು ಹೇಳುತ್ತಿದೆ. ಪ್ರೋಮೊದಲ್ಲಿ ಜೀವಾ ತನ್ನ ತಂದೆಯ ಆಸೆಯನ್ನು ಈಡೇರಿಸುವ ಶಪಥ ಮಾಡುತ್ತಿರುವಾಗ ರಚನಾ ಕೂಡಾ ಜತೆಯಾಗುತ್ತಾಳೆ. ಹೀಗೆ ಅವರಿಬ್ಬರ ಹೊಸ ಪ್ರಪಂಚ, ಹೊಸ ಸವಾಲುಗಳ ಸಾಧ್ಯತೆಯನ್ನು ಪ್ರೊಮೊದಲ್ಲಿ ತಿಳಿಸಲಾಗಿದೆ.
ಇಲ್ಲಿವರೆಗೂ ಸೂಪರ್‌ಸ್ಟಾರ್ ರಚನಾಗೆ ಮಲತಾಯಿಯ ಹಿಡಿತದಲ್ಲಿ ಇರುತ್ತಾಳೆ. ಅತ್ತ ಜೀವ ಹಾಗೂ ಕೃಷ್ಣಾಇಬ್ಬರೂ ತಂದೆ-ಮಗಳಂತೆ ಇದ್ದಾರೆ. ಸದ್ಯ ಧಾರಾವಾಹಿ ಆಸಕ್ತಿದಾಯಕ ಕಥೆಯತ್ತ ಸಾಗುತ್ತಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ. ʼನಿನಗಾಗಿʼ ಧಾರಾವಾಹಿಯನ್ನು ʼನಮ್ಮನೆ ಯುವರಾಣಿʼ ಖ್ಯಾತಿಯ ಸಂಪೃಥ್ವಿ ನಿರ್ದೇಶನ ಮಾಡುತ್ತಿದ್ದಾರೆ. ಜೀವ ಪಾತ್ರದಲ್ಲಿ ರಿತ್ವಿಕ್ ಮಠದ್, ರಚನಾ ಪಾತ್ರದಲ್ಲಿ ದಿವ್ಯಾ ಉರುಡುಗ, ಕೃಷ್ಣಾ ಪಾತ್ರದಲ್ಲಿ ಸಿರಿ ಸಿಂಚನಾ ನಟಿಸುತ್ತಿದ್ದಾರೆ. ಕಿಶನ್ ಬೆಳಗಳಿ, ಪ್ರಿಯಾಂಕಾ ಕಾಮತ್, ವಿಜಯ್ ಕೌಂಡಿನ್ಯ, ಮಾನಸಾ ಭಟ್ ಮುಂತಾದವರು ತಾರಾಗಣದಲ್ಲಿದ್ದಾರೆ.
ಇದನ್ನು ಓದಿ: Karimani Serial: 'ಕರಿಮಣಿ' ಸೀರಿಯಲ್‌ನಲ್ಲಿ ಹೊಸ ಟ್ವಿಸ್ಟ್: ಬ್ಲಾಕ್ ರೋಜ್ ಬಗ್ಗೆ ಸಾಹಿತ್ಯಾಗೆ ಗೊತ್ತಾಗುವ ಸಮಯ ಬಂದೇ ಬಿಡ್ತು
ಕುತೂಹಲದ ವಿಚಾರವೆಂದರೆ ನಟ ಶ್ರೀನಿವಾಸ ಪ್ರಭು ಬಹಳ ದಿನಗಳ ನಂತರ ಜೀವಾನ ತಂದೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ 'ಇಂಡಿಯನ್' ರಿಯಾಲಿಟಿ ಶೋ ಮತ್ತು 'ಮೇಘ ಮಯೂರಿ' ಧಾರಾವಾಹಿಯಲ್ಲಿ ಮಿಂಚಿದ್ದ ಪ್ರದೀಪ ʼನಿನಗಾಗಿ' ಧಾರಾವಾಹಿಯಿಂದ ಮತ್ತೆ ಕಿರುತೆರೆಗೆ ಮರಳಿದ್ದಾರೆ. ವಾರದ ಏಳೂ ದಿನ ಪ್ರತಿರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.