ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹೆಣ್ಣು ಚಿರತೆ, ಮರಿಗಳೊಂದಿಗೆ 'ಸೆಲ್ಫಿ' ತೆಗೆದುಕೊಂಡ ಭೂಪ; ಇದೆಂಥ ಹುಚ್ಚು ಧೈರ್ಯ ನೋಡಿ

ಮಧ್ಯ ಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿ ಯುವಕನೊಬ್ಬ ಹೆಣ್ಣು ಚಿರತೆ ಜ್ವಾಲಾ ಮತ್ತು ಅದರ ಮರಿಗಳೊಂದಿಗೆ 'ಸೆಲ್ಫಿ' ತೆಗೆದುಕೊಂಡು ಅದನ್ನು ವಿಡಿಯೊ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಅರಣ್ಯಾಧಿಕಾರಿಗಳು ಮತ್ತು ವೀಕ್ಷಕರಲ್ಲಿ ಕಳವಳವನ್ನುಂಟು ಮಾಡಿದೆ.

ಮರಿಗಳ ಜತೆ ಇದ್ದ ಚಿರತೆ ಬಳಿ ಹೋಗಿ ವಿಡಿಯೊ ಮಾಡಿದ ಭೂಪ

Profile pavithra May 20, 2025 4:22 PM

ಭೋಪಾಲ್‍: ಇತ್ತೀಚೆಗಷ್ಟೇ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯಲ್ಲಿರುವ ರಣಥಂಬೋರ್ ಹುಲಿ ಮೀಸಲು ಪ್ರದೇಶದಲ್ಲಿ ಯುವಕನೊಬ್ಬ ಹುಲಿ ಮರಿಯನ್ನು ಮುದ್ದಾಡಿದರೆ ಮತ್ತೊಬ್ಬ ನೀರು ಕುಡಿಯುತ್ತಿದ್ದ ಹುಲಿಯ ಬಳಿಗೆ ಹೋಗಿ ರೀಲ್ಸ್‌ ಮಾಡಿದ್ದಾನೆ. ಅದೇರೀತಿ ಇದೀಗ ಮಧ್ಯ ಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿ ಯುವಕನೊಬ್ಬ ಹೆಣ್ಣು ಚಿರತೆ ಜ್ವಾಲಾ ಮತ್ತು ಅದರ ಮರಿಗಳೊಂದಿಗೆ 'ಸೆಲ್ಫಿ' ತೆಗೆದುಕೊಂಡು ವಿಡಿಯೊ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಮಾಹಿತಿಯ ಪ್ರಕಾರ, ಈ ವಿಡಿಯೊವನ್ನು ಶಿಯೋಪುರ್ ಜಿಲ್ಲೆಯ ವಿಜಯಪುರದ ಗರ್ಹಿ ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ. ಸೆಲ್ಫಿ ಮತ್ತು ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೊದಲ್ಲಿ ಕೃಷಿ ಹೊಲದ ಮಧ್ಯದಲ್ಲಿ ಮಲಗಿದ್ದ ಚಿರತೆಯ ಬಳಿಗೆ ಆ ವ್ಯಕ್ತಿ ಯಾವುದೇ ಅಂಜಿಕೆ ಇಲ್ಲದೇ ಹೋಗಿದ್ದಾನೆ. ಅಷ್ಟೇ ಅಲ್ಲದೇ ಅದಕ್ಕೆ ಸ್ವಲ್ಪ ಹತ್ತಿರದಲ್ಲಿ ಕುಳಿತು ವಿಡಿಯೊ ಮಾಡಿದ್ದಾನೆ. ಈ ವಿಡಿಯೊವನ್ನು ಅವನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಇದನ್ನು ನೋಡಿ ನೆಟ್ಟಿಗರು ಮತ್ತು ಅರಣ್ಯ ಅಧಿಕಾರಿಗಳು ಶಾಕ್‌ ಆಗಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



ಈ ಪ್ರದೇಶದಲ್ಲಿ ಆಗಾಗ ಚಿರತೆಗಳು ಕಾಣಿಸಿಕೊಳ್ಳುತ್ತವೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಆದರೆ ಅವುಗಳ ಜತೆ ಜನರು ಈ ರೀತಿಯ ನಿಕಟ ಸಂಪರ್ಕದಲ್ಲಿರುವುದು ಅಪಾಯಕಾರಿ. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರಿಗೆ ಕಾಡು ಪ್ರಾಣಿಗಳಿಂದ ಸುರಕ್ಷಿತವಾಗಿ ಅಂತರ ಕಾಯ್ದುಕೊಳ್ಳುವಂತೆ ಪದೇ ಪದೆ ಎಚ್ಚರಿಕೆ ನೀಡುತ್ತಿದ್ದಾರೆ. ಯಾವುದೇ ವನ್ಯಜೀವಿಗಳು ಕಂಡುಬಂದರೆ ತಕ್ಷಣ ವರದಿ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಮನೆಯ ನೆಲಮಾಳಿಗೆಯಲ್ಲಿ ಗೂಡಿನಂತೆ ಸುರುಳಿ ಸುತ್ತಿಕೊಂಡ ಹಾವುಗಳ ರಾಶಿ! ಮೈನವಿರೇಳಿಸುವ ವಿಡಿಯೊ ನೋಡಿ

ಜ್ವಾಲಾ ಹೆಣ್ಣು ಚಿರತೆಯ ವಿಡಿಯೊ ವೈರಲ್ ಆಗಿದ್ದು ಇದು ಮೊದಲಲ್ಲ. ಏಪ್ರಿಲ್‌ನಲ್ಲಿ ತನ್ನ ನಾಲ್ಕು ಮರಿಗಳೊಂದಿಗೆ ನೀರು ಕುಡಿಯುತ್ತಿರುವುದನ್ನು ಸೆರೆಹಿಡಿದ ವಿಡಿಯೊವೊಂದು ವೈರಲ್‌ ಆಗಿತ್ತು. ಆ ವಿಡಿಯೊದಲ್ಲಿ, ಸಟ್ಟು ಗುರ್ಜರ್ ಎಂದು ಗುರುತಿಸಲಾದ ಅರಣ್ಯ ಇಲಾಖೆಯ ಚಾಲಕ, ಡಬ್ಬಿಯಿಂದ ನೀರನ್ನು ಪಾತ್ರೆಗೆ ಸುರಿಯುತ್ತಾ ಚಿರತೆಗಳನ್ನು 'ಕಮ್' ಎಂದು ಇಂಗ್ಲಿಷ್ ಪದವನ್ನು ಬಳಸಿ ಕರೆಯುತ್ತಿರುವುದು ಕಂಡುಬಂದಿತ್ತು. ಜ್ವಾಲಾ ಮತ್ತು ಅದರ ಮರಿಗಳು ಕರೆಗೆ ಪ್ರತಿಕ್ರಿಯಿಸಿ ನೀರು ಕುಡಿಯಲು ಅವನ ಬಳಿಗೆ ಬಂದಿದ್ದವು.