ಶ್ರೀರಾಮ್ ಲೈಫ್ ವೈಯಕ್ತಿಕ ಹೊಸ ವ್ಯವಹಾರ ಪ್ರೀಮಿಯಂ: 2025 ರಲ್ಲಿ 46% ಹೆಚ್ಚಳ
ಮಾರ್ಚ್ 2025 ಕ್ಕೆ ಕೊನೆಗೊಳ್ಳುವ ಪೂರ್ಣ ಹಣಕಾಸು ವರ್ಷದಲ್ಲಿ, ಒಟ್ಟು ಪ್ರೀಮಿಯಂ ವರ್ಷ 25 ರಲ್ಲಿ 20.2% ರಷ್ಟು ಏರಿಕೆಯಾಗಿ, ಹಿಂದಿನ ವರ್ಷದಲ್ಲಿನ 3,508 ಕೋಟಿಯಿಂದ ₹ 4,216 ಕೋಟಿ ತಲು ಪಿದೆ. ಎಸ್ಎಲ್ಐಸಿಯ ಸ್ವತ್ತುಗಳು ಆಸೆಟ್ಸ್ ಅಂಡರ್ ಮ್ಯಾನೇಜ್ಮೆಂಟ್ ಅಡಿಯಲ್ಲಿ (ಎಯು ಎಂ) ವರ್ಷ 24 ರಲ್ಲಿನ ₹ 11,282 ಕೋಟಿಯಿಂದ ವರ್ಷ 25 ರಲ್ಲಿ, ₹ 13,207 ಕ್ಕೆ ಏರಿಕೆಯಾಗಿ ವರ್ಷದಿಂದ ವರ್ಷಕ್ಕೆ 1&% ಹೆಚ್ಚಳವನ್ನು ಕಂಡಿದೆ


ಶ್ರೀರಾಮ್ ಜೀವ ವಿಮಾ ಕಂಪನಿ ಲಿಮಿಟೆಡ್ ವೈಯಕ್ತಿಕ ಹೊಸ ವ್ಯವಹಾರ ಪ್ರೀಮಿಯಂನಲ್ಲಿ ವರ್ಷದಿಂದ ವರ್ಷಕ್ಕೆ 46.3% ರಷ್ಟು ಬೆಳವಣಿಗೆಯನ್ನು ವರದಿ ಮಾಡಿದ್ದು, ವರ್ಷ 24 ರಲ್ಲಿ ಇದ್ದ ₹ 938 ಕೋಟಿಯಿಂದ ವರ್ಷ 25 ರಲ್ಲಿ ₹ 1,372 ಕೋಟಿಗೆ ಏರಿಕೆಯಾಗಿರುತ್ತದೆ. ವೈಯಕ್ತಿಕ ಹೊಸ ವ್ಯವಹಾರಕ್ಕೆ ಸಂಬಂಧಿಸಿದಂತೆ ಅದರ ಎಪಿಇ (ವಾರ್ಷಿಕ ಪ್ರೀಮಿಯಂ ಸಮಾನ) ವರ್ಷ 25 ರಲ್ಲಿ ₹ 1,289 ಕೋಟಿ ಕ್ಕೆ ಏರಿಕೆಯಾಗಿದ್ದು, ವರ್ಷ 24 ರ ₹ 887 ಕೋಟಿಗೆ ಹೊಲಿಸಿದಲ್ಲಿ ಇದು ವರ್ಷ ದಿಂದ ವರ್ಷಕ್ಕೆ 45.3% ರಷ್ಟು ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಈ ಬೆಳವಣಿಗೆಯು ಖಾಸಗಿ ಉದ್ಯಮದಲ್ಲಿನ 15% ಹೆಚ್ಚಳವನ್ನು ಕೂಡ ಮೀರಿಸಿದೆ, ಇದು ದೇಶದಲ್ಲಿನ ಜೀವ ವಿಮೆಗಾರರಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಥಾನಕ್ಕೆ ಕೊಂಡೊಯ್ದಿದೆ.
ವೈಯಕ್ತಿಕ ಮತ್ತು ಗುಂಪು ವ್ಯವಹಾರದಾದ್ಯಂತ ನವೀಕರಣ ಪ್ರೀಮಿಯಂ ವರ್ಷದಿಂದ ವರ್ಷಕ್ಕೆ 18.4% ರಷ್ಟು ಏರಿಕೆಯಾಗಿದ್ದು, ವರ್ಷ 24 ರಲ್ಲಿ ಇದ್ದ ₹ 1,637 ಕೋಟಿಯಿಂದ ವರ್ಷ 25 ರಲ್ಲಿ ₹1,939 ಕೋಟಿಗೆ ತಲುಪಿದೆ.
ಮಾರ್ಚ್ 2025 ಕ್ಕೆ ಕೊನೆಗೊಳ್ಳುವ ಪೂರ್ಣ ಹಣಕಾಸು ವರ್ಷದಲ್ಲಿ, ಒಟ್ಟು ಪ್ರೀಮಿಯಂ ವರ್ಷ 25 ರಲ್ಲಿ 20.2% ರಷ್ಟು ಏರಿಕೆಯಾಗಿ, ಹಿಂದಿನ ವರ್ಷದಲ್ಲಿನ 3,508 ಕೋಟಿಯಿಂದ ₹ 4,216 ಕೋಟಿ ತಲುಪಿದೆ. ಎಸ್ಎಲ್ಐಸಿಯ ಸ್ವತ್ತುಗಳು ಆಸೆಟ್ಸ್ ಅಂಡರ್ ಮ್ಯಾನೇಜ್ಮೆಂಟ್ ಅಡಿಯಲ್ಲಿ (ಎಯು ಎಂ) ವರ್ಷ 24 ರಲ್ಲಿನ ₹ 11,282 ಕೋಟಿಯಿಂದ ವರ್ಷ 25 ರಲ್ಲಿ, ₹ 13,207 ಕ್ಕೆ ಏರಿಕೆಯಾಗಿ ವರ್ಷದಿಂದ ವರ್ಷಕ್ಕೆ 1&% ಹೆಚ್ಚಳವನ್ನು ಕಂಡಿದೆ.
ಇದನ್ನೂ ಓದಿ: E-Commerce: ಇ-ಕಾಮರ್ಸ್ ವೇದಿಕೆಗಳು ಎಪಿಎಂಸಿ ಆಡಳಿತಕ್ಕೆ: ವಿಧೇಯಕ ಅಂಗೀಕಾರ
ಮಾರಾಟವಾದ ವೈಯಕ್ತಿಕ ಪಾಲಿಸಿಗಳ ಸಂಖ್ಯೆಯು ವರ್ಷ 25 ರಲ್ಲಿ 21.1% ರಷ್ಟು ಹೆಚ್ಚಾಗಿದೆ, ಇದು ವರ್ಷ 24 ರಲ್ಲಿದ್ದ 4,46,730. ರಿಂದ 5,41,048 ಕ್ಕೆ ಏರಿದೆ.
ವರ್ಷ 25 ರ ನಾಲ್ಕನೇ ತ್ರೈಮಾಸಿಕದಲ್ಲಿ, ವೈಯಕ್ತಿಕ ಹೊಸ ವ್ಯವಹಾರ ಪ್ರೀಮಿಯಂ ₹ 357 ಕೋಟಿಗೆ ಹೋಲಿಸಿದರೆ ₹ 507 ಕೋಟಿಯಾಗಿದ್ದು, 42% ನಷ್ಟು ಹೆಚ್ಚಾಗಿದೆ. ವೈಯಕ್ತಿಕ ಹೊಸ ವ್ಯವಹಾರ ಎಪಿಇ ವರ್ಷದಿಂದ ವರ್ಷಕ್ಕೆ 40.5% ರಷ್ಟು ಏರಿಕೆಯಾಗಿ 4 ನೇ ತ್ರೈಮಾಸಿಕದಲ್ಲಿ ₹ 343 ಕೋಟಿಯಿಂದ ₹ 482 ಕೋಟಿಗೆ ತಲುಪಿದೆ. ವೈಯಕ್ತಿಕ ಮತ್ತು ಗುಂಪು ವ್ಯವಹಾರಕ್ಕಾಗಿ ನವೀಕರಣ ಪ್ರೀಮಿಯಂ ತ್ರೈಮಾಸಿಕದಲ್ಲಿ ₹ 608 ಕೋಟಿಯಿಂದ ₹ 730 ಕೋಟಿಯಾಗಿದ್ದು, 20% ನಷ್ಟು ಹೆಚ್ಚಾಗಿದೆ.

ಶ್ರೀರಾಮ್ ಲೈಫ್ ಇನ್ಶುರೆನ್ಸ್‌ನ ಎಂಡಿ ಮತ್ತು ಸಿಇಒ ಆದ ಕ್ಯಾಸ್ಪಾರಸ್ ಜೆ.ಎಚ್. ಕ್ರೋಮ್‌ಹೌಟ್ ತಿಳಿಸಿದರು “ಶ್ರೀರಾಮ್ ಜೀವ ವಿಮೆಯು ಉನ್ನತ-ಬೆಳವಣಿಗೆಯ ಕಕ್ಷೆಯತ್ತ ಸಾಗಿದೆ, ಹಾಗೂ ನಾವು ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲಿ ನಿರಂತರ ಮತ್ತು ಸುಸ್ಥಿರ ಆವೇಗವನ್ನು ವೀಕ್ಷಿಸುತ್ತಿದ್ದೇವೆ. ದೀರ್ಘ ಕಾಲೀನ ಬೆಳವಣಿಗೆಗೆ ಗೋಚರತೆಯು ಪ್ರಬಲವಾಗಿದ್ದು, ನಮ್ಮ ಗ್ರಾಹಕರ ಅಗತ್ಯತೆಗಳನ್ನು ಪೂರೈ ಸುವ ನಮ್ಮ ಅಚಲ ಬದ್ಧತೆಯಿಂದ ಅದು ಬೆಂಬಲಿತವಾಗಿದೆ.”
"ನಾವು ಕೇವಲ ಸಂಖ್ಯೆಯಲ್ಲಿ ವಿಸ್ತರಣೆಯನ್ನು ಕಾಣುತ್ತಿಲ್ಲ, ಆದರೆ ಪ್ರಸ್ತುತತೆಯಲ್ಲೂ ಸಹ-ಸಾಂಪ್ರದಾಯಿಕವಾಗಿ ವಿಮಾ ಪಟ್ಟುಗಳಿಂದ ಹೊರಗುಳಿದಿರುವ ಸಮಾಜದ ಭಾಗಗಳ ಕುಟುಂಬ ಗಳಿಗೆ ತಲುಪುತ್ತಿದ್ದೇವೆ. ನಾವು ಮತ್ತಷ್ಟು ಮುಂದುವರೆದಂತೆ, ಅಂತರ್ಗತ ಬೆಳವಣಿಗೆ ಮತ್ತು ದೀರ್ಘ ಕಾಲೀನ ಮೌಲ್ಯ ಸೃಷ್ಟಿಗೆ ನಾವು ಬದ್ಧರಾಗಿರುತ್ತೇವೆ" ಎಂದು ಅವರು ಹೇಳಿದರು.
ಕಂಪನಿಯು ವೈಯಕ್ತಿಕ ಮತ್ತು ಗುಂಪು ಎರಡೂ ಪಾಲಿಸಿಗಳನ್ನು ಪರಿಗಣಿಸಿದಲ್ಲಿ, ಕಳೆದ ಹಣ ಕಾಸು ವರ್ಷದಲ್ಲಿನ 58,800 ಹಕ್ಕು ಬೇಡಿಕೆಗಳಿಗೆ ಹೋಲಿಸಿದರೆ ವರ್ಷ 25 ರಲ್ಲಿ 61,600 ಹಕ್ಕು ಬೇಡಿಕೆಗಳನ್ನು ಇತ್ಯರ್ಥಪಡಿಸಿತು. ಕಂಪನಿಯ ವೈಯಕ್ತಿಕ ಹಕ್ಕು ಬೇಡಿಕೆ ಇತ್ಯರ್ಥದ ಅನುಪಾತವು ವರ್ಷ 25 ರಲ್ಲಿ 98.31% ಆಗಿದ್ದು, ಅದರಲ್ಲಿ 93% ಹಕ್ಕು ಬೇಡಿಕೆಗಳು ದಾಖಲೆಯ 12 ಗಂಟೆಗಳ ಒಳಗೆ ತನಿಖೆಗೆ ಒಳಪಡದೆ ಇತ್ಯರ್ಥವಾಗಿರುತ್ತವೆ. ವರ್ಷ 25 ರಲ್ಲಿ ಸಾಲ್ವೆನ್ಸಿ ಅನುಪಾತವು 1.79 ರಷ್ಟಿದೆ.