ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aakrosha Short Film: ಗೌರಿಶ್ರೀ ನಿರ್ದೇಶನದ ʼಆಕ್ರೋಶʼ ಕಿರುಚಿತ್ರದ ಮೂಲಕ ಅಭಿನಯ ಆರಂಭಿಸಿದ ನವನಟ ಯಶ್ವಂತ್

Aakrosha Short Film: ಗೌರಿಶ್ರೀ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ 30 ನಿಮಿಷಗಳ ʼಆಕ್ರೋಶʼ ಎಂಬ ಕಿರುಚಿತ್ರದಲ್ಲಿ ಯುವನಟ ಯಶ್ವಂತ್ ನಟಿಸುವ ಮೂಲಕ ಅಭಿನಯ‌ ಆರಂಭಿಸಿದ್ದಾರೆ.‌ ಜಗದೀಶ್ ವರ್ಮ ನಿರ್ಮಾಣದ ಈ ಕಿರುಚಿತ್ರದ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು.

ʼಆಕ್ರೋಶʼ ಕಿರುಚಿತ್ರದ ಮೂಲಕ ಅಭಿನಯ ಆರಂಭಿಸಿದ ನವನಟ ಯಶ್ವಂತ್

Profile Siddalinga Swamy May 20, 2025 6:14 PM

ಬೆಂಗಳೂರು: ಕಿರುಚಿತ್ರ ಎಂಬುದು ಅನೇಕ ಪ್ರತಿಭಾವಂತರ ಪ್ರದರ್ಶನಕ್ಕೆ ಉತ್ತಮ ವೇದಿಕೆ. ಅದರಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು ಹಿರಿತೆರೆಯ ಮೇಲೆ‌ ಲೀಲಾಜಾಲವಾಗಿ ಅಭಿನಯಿಸುತ್ತಾರೆ. ಯಶ್ವಂತ್ ಎಂಬ ಯುವನಟ, ಗೌರಿಶ್ರೀ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ 30 ನಿಮಿಷಗಳ ʼಆಕ್ರೋಶʼ ಎಂಬ ಕಿರುಚಿತ್ರದಲ್ಲಿ (Aakrosha Short Film) ನಟಿಸುವ ಮೂಲಕ ಅಭಿನಯ‌ ಆರಂಭಿಸಿದ್ದಾರೆ.‌ ಜಗದೀಶ್ ವರ್ಮ ನಿರ್ಮಾಣದ ಈ ಕಿರುಚಿತ್ರದ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು.

ನಿರ್ದೇಶಕಿ ಗೌರಿಶ್ರೀ ಮಾತನಾಡಿ, ನನಗೆ ರತ್ನಮಾಲ ಅವರ ಮೂಲಕ ನಿರ್ಮಾಪಕ ಜಗದೀಶ್ ವರ್ಮ ಪರಿಚಯವಾದರು. ನನ್ನ ಮಗ ಯಶ್ವಂತ್‌ನನ್ನು ನಾಯಕನಾಗಿ ಚಿತ್ರರಂಗ ಪ್ರವೇಶ ಮಾಡಿಸಬೇಕೆಂದುಕೊಂಡಿದ್ದೇವೆ. ಹಾಗಾಗಿ ಒಂದು ಸಿನಿಮಾ ಮಾಡೋಣ ಎಂದರು. ನಾನು ಮೊದಲು ಕಿರುಚಿತ್ರ ಮಾಡೋಣ. ಹೊಸ ಹುಡುಗ ಮೊದಲು ನಟನೆ ಕಲಿಯಲಿ. ಆನಂತರ ಸಿನಿಮಾ ಮಾಡೋಣ ಅಂತ ಹೇಳಿದೆ. ಹಾಗಾಗಿ ಮೊದಲು ಕಿರುಚಿತ್ರ ಮಾಡಿದ್ದೇವೆ‌.‌ ನಾನು ಇದಕ್ಕೂ ಮೊದಲು ʼಅಮೂಲ್ಯʼ, ʼರೀತುʼ, ʼಜನರಕ್ಷಕʼ, ʼಭಾರತಿ ಐಪಿಎಸ್ʼ ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಅದರಲ್ಲಿ ʼಅಮೂಲ್ಯʼ ಹಾಗೂ ʼಜನರಕ್ಷಕʼ ಚಿತ್ರಗಳು ತೆರೆಗೆ ಬರಲು ಸಿದ್ದವಾಗಿದೆ. ಇನ್ನು ʼಆಕ್ರೋಶʼ ಕಿರುಚಿತ್ರದ ಕಥೆ ಒಂದೇ ದಿನದಲ್ಲಿ ಸಿದ್ಧವಾಯಿತು. ಎರಡೇ ದಿನದಲ್ಲಿ ಚಿತ್ರೀಕರಣ ಕೂಡ ಮಾಡಲಾಯಿತು. ನೂತನ ಪ್ರತಿಭೆ ಯಶ್ವಂತ್ ಈ ಕಿರುಚಿತ್ರದಲ್ಲಿ ಕನ್ನಡ ಕಲಿತು ಅಭಿ‌ಯಿಸಿದ್ದಾರೆ. ಸದ್ಯದಲ್ಲೇ ಇವರೆ ನಾಯಕನಾಗಿ ನಟಿಸಲಿರುವ ಹೊಸ ಚಿತ್ರ ಕೂಡ ಆರಂಭವಾಗಲಿದೆ. ಅದಕ್ಕೆ ನಾಂದಿಯಾಗಿ ಈ ಕಿರುಚಿತ್ರ ನಿರ್ಮಾಣವಾಗಿದೆ‌. ರಾಜಾರವಿ ಛಾಯಾಗ್ರಹಣ, ವಿನು ಮನಸು ಸಂಗೀತ ನಿರ್ದೇಶನ, ಶಿವರಾಜ್ ಮೇಹು ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಯಶ್ವಂತ್, ಗುರುರಾಜ್ ಹೊಸಕೋಟೆ, ಭಾಗ್ಯ, ಪ್ರವಲ್ಲಿಕ, ಪ್ರೇಮ ಮಾಲೂರ್ ಮುಂತಾದವರಿದ್ದಾರೆ. ನಾನು ಕೂಡ ಅಭಿನಯಿಸಿದ್ದೇನೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Fashion Ramp Show Trend: ಫ್ಯಾಷನ್‌ ರ‍್ಯಾಂಪ್‌ ಶೋಗಳಲ್ಲಿ ಟ್ರೆಂಡಿಯಾಯ್ತು ವಾಕ್‌, ಡಾನ್ಸ್‌ ಕಾನ್ಸೆಪ್ಟ್‌

ನಟ ಯಶ್ವಂತ್ ಮಾತನಾಡಿ, ʼಆಕ್ರೋಶʼ ನನ್ನ ಮೊದಲ ಪ್ರಯತ್ನ. ಮುಂದೆ ದೊಡ್ಡಪರದೆಯ ಮೇಲೂ ಅಭಿನಯಿಸಲಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ನಿರ್ಮಾಪಕ ಜಗದೀಶ್ ವರ್ಮ, ನಟಿ ಪ್ರವಲ್ಲಿಕ ಹಾಗೂ ನಟ ಪ್ರೇಮ್ ಮಾಲೂರು ಮುಂತಾದವರು ʼಆಕ್ರೋಶʼ ಕಿರುಚಿತ್ರದ ಕುರಿತು ಮಾತನಾಡಿದರು.

ಹಿರಿಯ ನಿರ್ದೇಶಕರಾದ ಓಂಸಾಯಿಪ್ರಕಾಶ್, ಪುರುಷೋತ್ತಮ್ ಓಂಕಾರ್, ರತ್ನಮಾಲ ಮುಂತಾದವರು ತಮ್ಮ ‌ಪ್ರೋತ್ಸಾಹದ ಮಾತುಗಳ ಮೂಲಕ ಕಿರುಚಿತ್ರ ತಂಡಕ್ಕೆ ಶುಭ ಕೋರಿದರು.