ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆರೆಂಜ್- ಫ್ಲೇವರ್ಡ್ ಸಿಎಸ್‌ಡಿ ವಿಭಾಗದಲ್ಲಿ ಶೇ.50 ಮಾರುಕಟ್ಟೆ ಪಾಲನ್ನು ಗಳಿಸಿಕೊಂಡು ಮುಂಚೂಣಿಯಲ್ಲಿ ಸಾಗುತ್ತಿರುವ ಕೋಕಾ-ಕೋಲಾದ ಫಾಂಟಾ

ಇತ್ತೀಚಿಗೆ ಫಾಂಟಾದ ‘ಫಾಂಟಾ ಮಾಂಗ್ತಾ’ ಜಾಹೀರಾತು ಬಿಡುಗಡೆಯಾಗಿದ್ದು, ಅದರಲ್ಲಿ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ನಟಿಸಿದ್ದಾರೆ. ಈ ಜಾಹೀರಾತು ಯುವ ಜನತೆಯ ಡಿಜಿಟಲ್ ಡಿಎನ್ಎ ಜೊತೆ ಸೂಕ್ತವಾಗಿ ಹೊಂದಿಕೊಂಡು ಫಾಂಟಾವನ್ನು ಮತ್ತಷ್ಟು ಯುವಜನರಿಗೆ ಹತ್ತಿರ ವಾಗಿಸಿದೆ.

ಶೇ.50 ಮಾರುಕಟ್ಟೆ ಪಾಲು: ಮುಂಚೂಣಿಯಲ್ಲಿ ಕೋಕಾ-ಕೋಲಾದ ಫಾಂಟಾ

Profile Ashok Nayak May 19, 2025 1:22 PM

ಬೆಂಗಳೂರು: ಕೋಕಾ-ಕೋಲಾ ಇಂಡಿಯಾದ ಜನಪ್ರಿಯ ರುಚಿಕರ ಪಾನೀಯವಾದ ಫಾಂಟಾ, ಆರೆಂಜ್-ಫ್ಲೇವರ್ಡ್ ಕಾರ್ಬೊನೇಟೆಡ್ ಸಾಫ್ಟ್ ಡ್ರಿಂಕ್ (ಸಿಎಸ್‌ಡಿ) ವಿಭಾಗದಲ್ಲಿ ಶೇ.50ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಗಳಿಸಿ ಈ ವಿಭಾಗದಲ್ಲಿ ತನ್ನ ನಾಯಕ ಸ್ಥಾನವನ್ನು ಮತ್ತಷ್ಟು ಗಟ್ಟಿ ಗೊಳಿಸಿದೆ. ರುಚಿಕರವಾದ ಆರೆಂಜ್ ರುಚಿ ಹೊಂದಿರುವ ಆಹ್ಲಾದಕರವಾದ ಫಾಂಟಾ ಭಾರತದ ಯುವಜನರಿಗೆ ಬಹಳ ಇಷ್ಟವಾದ ಪಾನೀಯವಾಗಿದ್ದು, ನಾಸ್ಟಾಲ್ಜಿಯಾ ಜೊತೆ ಆಹ್ಲಾದಕರ ಸ್ಮರಣೀಯ ಅನುಭವ ಒದಗಿಸುತ್ತದೆ.

1940ರಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಾರಂಭವಾದ ಫಾಂಟಾ ಭಾರತದಲ್ಲಿ ಒಂದು ಸಾಂಸ್ಕೃತಿಕ ವಿದ್ಯಮಾನವಾಗಿ ಬೆಳೆದು ಬಂದಿದೆ. ವಿಶೇಷವಾಗಿ ಬೋಲ್ಡ್ ಆಗಿರುವ, ತಮಾಷೆ ಬಯಸುವ ಮತ್ತು ಧೈರ್ಯವಾಗಿರುವ ಯುವ ಜನತೆಗೆ ಹತ್ತಿರವಾಗಿದೆ. ಕಳೆದ 5 ವರ್ಷಗಳಿಂದ ಈ ಬ್ರಾಂಡ್ ಸತತವಾಗಿ ಎರಡಂಕಿಯ ಬೆಳವಣಿಗೆಯನ್ನು ದಾಖಲಿಸುತ್ತಾ ಬಂದಿದ್ದು, ನಗರ ಮತ್ತು ಗ್ರಾಮೀಣ ಮಾರುಕಟ್ಟೆ ಗಳಲ್ಲಿ ತನ್ನ ಉಪಸ್ಥಿತಿಯನ್ನು ಬಲಪಡಿಸಿಕೊಂಡಿದೆ. ಇಂದು, ಫಾಂಟಾ ಸುಮಾರು 20 ಲಕ್ಷ ರಿಟೇಲ್ ಅಂಗಡಿಗಳಲ್ಲಿ ಲಭ್ಯವಿದೆ. ₹10 ಬೆಲೆಯ 200 ಎಂಎಲ್ ಪ್ಯಾಕ್‌ನಿಂದ ಹಿಡಿದು 2.25 ಲೀಟರ್ ಫ್ಯಾಮಿಲಿ ಪ್ಯಾಕ್‌ ಗಳವರೆಗೆ ವಿವಿಧ ವಿಭಾಗಗಳಲ್ಲಿ ಫಾಂಟಾ ದೊರೆಯುತ್ತದೆ. ಜಾಗತಿಕವಾಗಿ ಫಾಂಟಾ 180ಕ್ಕೂ ಹೆಚ್ಚು ಮಾರುಕಟ್ಟೆಗಳಲ್ಲಿ ಲಭ್ಯವಿದ್ದು, ವಿಶ್ವದ ಅತ್ಯಂತ ರುಚಿಕರ ಮತ್ತು ಪ್ರೀತಿಯ ಪಾನೀಯ ಬ್ರಾಂಡ್‌ ಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: Bangalore To Mangalore Train: ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು; ಇಲ್ಲಿದೆ ವೇಳಾಪಟ್ಟಿ

ಈ ಕುರಿತು ಮಾತನಾಡಿದ ಕೋಕಾ-ಕೋಲಾ ಇಂಡಿಯಾ ಮತ್ತು ನೈಋತ್ಯ ಏಷ್ಯಾದ ಅಭಿವೃದ್ಧಿಶೀಲ ಮಾರುಕಟ್ಟೆಗಳ ಫ್ರಾಂಚೈಸ್ ಆಪರೇಷನ್ಸ್‌ ವಿಭಾಗದ ಉಪಾಧ್ಯಕ್ಷರಾದ ವಿನಯ್ ನಾಯರ್ ಅವರು , “ಫಾಂಟಾದ ಈ ಗೆಲುವು ಕೇವಲ ಎಲ್ಲಾ ಚಾನೆಲ್‌ ಗಳಲ್ಲಿಯೂ ಲಭ್ಯವಾಗಿಸುವುದರಿಂದ ಮಾತ್ರ ವಲ್ಲ, ಫ್ಲೇವರ್ ಆಧರಿತ ಆವಿಷ್ಕಾರ, ಪೋರ್ಟ್‌ ಫೋಲಿಯೋ ಶಕ್ತಿ ಮತ್ತು ಪ್ರಾದೇಶಿಕ ಪ್ರಸ್ತುತತೆ ಯನ್ನು ಸಾಧಿಸುವ ಮೂಲಕ ಸಾಧ್ಯವಾಗಿದೆ. ಸಾಂಸ್ಕೃತಿಕ ಪ್ರಸ್ತುತತೆಯನ್ನು ಡಿಜಿಟಲ್ ಫಸ್ಟ್ ವಿಧಾನದ ಮೂಲಕ ಮಿಳಿತಗೊಳಿಸುವ ಬ್ರಾಂಡ್‌ ನ ಸಾಮರ್ಥ್ಯದಿಂದ ಯುವ ಗ್ರಾಹಕರ ಜೊತೆ ಸಂಪರ್ಕವನ್ನು ಸಾಧಿಸಲು ಸಹಾಯವಾಗಿದೆ. ಈ ವಿಧಾನವು ಪ್ರಮುಖ ವಿಭಾಗದಲ್ಲಿ ನಮ್ಮ ಸ್ಥಾನ ವನ್ನು ಬಲಪಡಿಸಲು ನೆರವಾಗಿದೆ ಮತ್ತು ಇಂದಿನ ಜೀವನಶೈಲಿ ಹಾಗೂ ನಾಳಿನ ಟ್ರೆಂಡ್‌ ಗಳನ್ನು ಅರಿತುಕೊಂಡು ಗ್ರಾಹಕರ ಬೇಡಿಕೆಯನ್ನು ಊಹಿಸಲು ಮತ್ತು ರೂಪಿಸಲು ಅನುವು ಮಾಡಿ ಕೊಟ್ಟಿದೆ” ಎಂದು ಹೇಳಿದರು.

ಕಳೆದ ಕೆಲವು ದಶಕಗಳಿಂದ ಫಾಂಟಾ ಕೇವಲ ಪಾನೀಯವಾಗಿ ಮಾತ್ರವೇ ಉಳಿದಿಲ್ಲ, ಮೋಜು ಮಸ್ತಿಗೆ ಆಗಿ ಬರುವ ಮತ್ತು ರುಚಿಕರವಾದ ಆರೆಂಜ್ ಫ್ಲೇವರ್ ಹೊಂದಿರುವ, ಜೀವನದ ಸಣ್ಣ ಸಂತೋಷಗಳನ್ನು ಖುಷಿಯಿಂದ ಆಚರಿಸುವವರ ಪ್ರಮುಖ ಆದ್ಯತೆಯಾಗಿ ಬದಲಾಗಿದೆ. ಇದರ ಆರೆಂಜ್ ಬಣ್ಣ ಮತ್ತು ಪುಟಿದೇಳುವ ಬಬಲ್‌ ಗಳು ಇದನ್ನು ರುಚಿ ಮತ್ತು ಮೋಜಿನ ನಿಜವಾದ ಐಕಾನ್ ಆಗಿ ಮಾಡಿವೆ. ಯಾವುದೇ ಆಚರಣೆ ಅಥವಾ ಸಭೆಗೆ ಫಾಂಟಾ ಹುಮ್ಮಸ್ಸನ್ನು ಒದಗಿಸು ತ್ತದೆ. ಭಾರತದ ಬಣ್ಣಗಳ ಹಬ್ಬವಾದ ಹೋಳಿ ಸಮಯದಲ್ಲಿ ಫಾಂಟಾದ ಸಂಭ್ರಮವನ್ನು ಎಲ್ಲರೂ ನೋಡಬಹುದಾಗಿದೆ. ಫಾಂಟಾ ಸ್ನೇಹಿತರ ಜೊತೆಗಿನ ಹೋಳಿ ಆಚರಣೆಯ ಖುಷಿಯನ್ನು ಹೆಚ್ಚಿಸು ತ್ತದೆ. ಪ್ರತೀ ಗುಟುಕಿನ ಮೂಲಕ ಫಾಂಟಾ ಹಬ್ಬದ ಸಂಭ್ರಮವನ್ನು ಡಾಸ್ತಿ ಮಾಡುತ್ತದೆ.

ಇತ್ತೀಚಿಗೆ ಫಾಂಟಾದ ‘ಫಾಂಟಾ ಮಾಂಗ್ತಾ’ ಜಾಹೀರಾತು ಬಿಡುಗಡೆಯಾಗಿದ್ದು, ಅದರಲ್ಲಿ ಖ್ಯಾತ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ನಟಿಸಿದ್ದಾರೆ. ಈ ಜಾಹೀರಾತು ಯುವ ಜನತೆಯ ಡಿಜಿಟಲ್ ಡಿಎನ್ಎ ಜೊತೆ ಸೂಕ್ತವಾಗಿ ಹೊಂದಿಕೊಂಡು ಫಾಂಟಾವನ್ನು ಮತ್ತಷ್ಟು ಯುವಜನರಿಗೆ ಹತ್ತಿರ ವಾಗಿಸಿದೆ. ಕ್ರಿಯಾಶೀಲವಾಗಿ ರೂಪುಗೊಂಡಿರುವ ಈ ಜಾಹೀರಾತು ರಿಫ್ರೆಶ್‌ಮೆಂಟ್‌ ನ ಸಾಂಸ್ಕೃತಿಕ ಸಂಕೇತವಾಗಿ ಮೂಡಿ ಬಂದಿದೆ. ಮ್ಯಾಕ್ ಮಚಾ ರಂತಹ ಕ್ರಿಯೇಟರ್ ಗಳ ಜೊತೆಗಿನ ಸಹಯೋಗ ಮತ್ತು ಮಾಧ್ಯಮ ಪ್ರಸಾರದ ಮೂಲಕ ಫಾಂಟಾದ ಹೊಸ ತಲೆಮಾರಿನ ಗ್ರಾಹಕರೊಂದಿಗೆ ಮತ್ತಷ್ಟು ಹತ್ತಿರವಾಗಿದೆ.

ಫಾಂಟಾದ ಅಭಿವೃದ್ಧಿಯು ಕೇವಲ ಸಂಖ್ಯೆಗಳಲ್ಲಿ ಮಾತ್ರವೇ ಇಲ್ಲ, ಬದಲಿಗೆ ಸಾಂಸ್ಕೃತಿಕ ಪ್ರಸ್ತು ತತೆ ಹೊಂದಿರುವುದರಲ್ಲಿದೆ. ಜನಪ್ರಿಯ ಬ್ರಾಂಡ್‌ ಗಳನ್ನು ರೂಪಿಸುವ ಕೋಕಾ-ಕೋಲಾದ ಪರಂಪರೆಯ ಬೆಂಬಲದಿಂದ ಫಾಂಟಾ ಆರೆಂಜ್-ಫ್ಲೇವರ್ಡ್ ಸಿಎಸ್‌ಡಿ ವಿಭಾಗದ ಮುಂಚೂಣಿ ಯಲ್ಲಿದೆ ಮತ್ತು ಭಾರತದ ಯುವ ಗ್ರಾಹಕರ ವಿಭಾಗದಲ್ಲಿ ಆಕರ್ಷಕ ಸ್ಥಾನ ಗಳಿಸಿದೆ.