ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijay Shah: ಕರ್ನಲ್‌ ಖುರೇಷಿ ಕುರಿತು ಹೇಳಿಕೆ ಪ್ರಕರಣ; ಭಾಷಾ ದೋಷದಿಂದ ತಪ್ಪಾಗಿದೆ, ವಿಡಿಯೋ ಹಂಚಿಕೊಂಡ ಸಚಿವ

ಕರ್ನಲ್‌ ಸೋಫಿಯಾ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್‌ ಶಾ ಅವರಿಗೆ ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಇದೀಗ ಸಚಿವ ತಮ್ಮ ಹೇಳಿಕೆಯಿಂದ ಉಲ್ಟಾ ಹೊಡೆದಿದ್ದಾರೆ. ವಿಜಯ್ ಶಾ ಶುಕ್ರವಾರ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

ಕರ್ನಲ್‌ ಖುರೇಷಿ ಕುರಿತು ಹೇಳಿಕೆ ;ಭಾಷಾ ದೋಷದಿಂದ ತಪ್ಪಾಗಿದೆ ಎಂದ ಸಚಿವ

Profile Vishakha Bhat May 24, 2025 10:33 AM

ನವದೆಹಲಿ: ಕರ್ನಲ್‌ ಸೋಫಿಯಾ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ (Madhya Pradesh) ಬಿಜೆಪಿ ಸಚಿವ ವಿಜಯ್‌ ಶಾ (Vijay Shah) ಅವರಿಗೆ ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಇದೀಗ ಸಚಿವ ತಮ್ಮ ಹೇಳಿಕೆಯಿಂದ ಉಲ್ಟಾ ಹೊಡೆದಿದ್ದಾರೆ. ವಿಜಯ್ ಶಾ ಶುಕ್ರವಾರ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ತನ್ನ ಹೇಳಿಕೆಗಳು ಯಾರಿಗೂ ನೋವುಂಟು ಮಾಡುವುದಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ ಸಚಿವರಿಗೆ ಚಾಟೀ ಬೀಸಿದ ನಂತರ ಸಚಿವರು ತಮ್ಮ ಎಕ್ಸ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ 45 ಸೆಕೆಂಡುಗಳ ವೀಡಿಯೊದಲ್ಲಿ, "ನಾನು ಇಡೀ ಭಾರತೀಯ ಸೇನೆ , ಸಹೋದರಿ ಕರ್ನಲ್ ಸೋಫಿಯಾ ಮತ್ತು ಎಲ್ಲಾ ದೇಶವಾಸಿಗಳಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ" ಎಂದು ಶಾ ಹೇಳಿದ್ದಾರೆ. ಯಾವುದೇ ಸಮುದಾಯವನ್ನು ನೋಯಿಸುವ ಉದ್ದೇಶ ನನಗಿಲ್ಲ ಎಂದು ಅವರು ಹೇಳಿದರು. ನನ್ನ ಭಾಷಾ ದೋಷದಿಂದ ಈ ಹೇಳಿಕೆ ಬಂದಿದೆ. "ನಾನು ಹೇಳಿದ ಮಾತುಗಳು ನಮ್ಮ ಸಮುದಾಯ, ಧರ್ಮ ಮತ್ತು ದೇಶದ ಜನರಿಗೆ ನೋವುಂಟು ಮಾಡಿದೆ. ಇದು ನಾನು ಮಾಡಿದ ಭಾಷಾ ತಪ್ಪು," ಎಂದು ಅವರು ವೀಡಿಯೊದಲ್ಲಿ ಕೈಜೋಡಿಸಿ ನಿಂತಿದ್ದರು. "ನಾನು ಆ ಮಾತುಗಳನ್ನು ತಪ್ಪಾಗಿ ಉಚ್ಚರಿಸಿದ್ದೇನೆ... ಕೈಜೋಡಿಸಿ, ನಾನು ಮತ್ತೊಮ್ಮೆ ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದ್ದಾರೆ.



ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗೆ ಸುಪ್ರೀಂ ಕೋರ್ಟ್ ತೀವ್ರವಾಗಿ ಪ್ರತಿಕ್ರಿಯಿಸಿತ್ತು. ನ್ಯಾಯಾಲಯವು ಅವರ ಕ್ಷಮೆಯಾಚನೆಯನ್ನು ತಿರಸ್ಕರಿಸಿತು. ಅದನ್ನು ಮೊಸಳೆ ಕಣ್ಣೀರು ಎಂದು ಕರೆದಿತ್ತು. ಇಡೀ ದೇಶವು ನಿಮ್ಮ ಹೇಳಿಕೆಯಿಂದ ನಾಚಿಕೆಪಡುತ್ತಿದೆ ಎಂದು ಹೇಳಿತ್ತು. ಈ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್, ಒಬ್ಬ ಮಹಿಳಾ ಅಧಿಕಾರಿ ಸೇರಿದಂತೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಆದೇಶಿಸಿತ್ತು. ಮೇ 28 ರೊಳಗೆ ಎಸ್‌ಐಟಿ ವರದಿಯನ್ನು ಸಲ್ಲಿಸುವಂತೆ ಮಧ್ಯಪ್ರದೇಶ ಪೊಲೀಸ್ ಮಹಾನಿರ್ದೇಶಕರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಆದಾಗ್ಯೂ, ನ್ಯಾಯಾಲಯವು ವಿಜಯ್ ಶಾ ಬಂಧನಕ್ಕೆ ಸದ್ಯಕ್ಕೆ ತಡೆ ನೀಡಿದೆ. ಆದರೆ ತನಿಖೆಗೆ ಸಹಕರಿಸುವಂತೆ ಆದೇಶಿಸಿದೆ.