ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DC vs SRH: ಡೆಲ್ಲಿ ಕ್ಯಾಪಿಟಲ್ಸ್‌ಗೆ ನೆರವಾದ ಮಳೆರಾಯ, ಪ್ಲೇಆಫ್ಸ್‌ನಿಂದ ಸನ್‌ರೈಸರ್ಸ್‌ ಹೈದರಾಬಾದ್‌ ಔಟ್‌!

DC vs SRH: ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಬೇಕಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವಣ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪಂದ್ಯ ಮಳೆಗೆ ಬಲಿಯಾಯಿತು. ಈ ಹಿನ್ನೆಲೆಯಲ್ಲಿ ಉಭಯ ತಂಡಗಳು ಒಂದೊಂದು ಅಂಕವನ್ನು ಹಂಚಿಕೊಂಡವು. ಆದರೆ, ಈ ಪಂದ್ಯ ರದ್ದಾಗುತ್ತಿದ್ದ ಎಸ್‌ಆರ್‌ಎಚ್‌ ತಂಡದ ಪ್ಲೇಆಫ್ಸ್‌ ಕನಸು ಭಗ್ನವಾಯಿತು.

IPL 2025: ಸನ್‌ರೈಸರ್ಸ್‌ ಪ್ಲೇಆಫ್ಸ್‌ ಕನಸನ್ನು ಭಗ್ನಗೊಳಿಸಿದ ಮಳೆರಾಯ!

ಡೆಲ್ಲಿ vs ಹೈದರಾಬಾದ್‌ ಪಂದ್ಯ ಮಳೆಗೆ ಬಲಿ.

Profile Ramesh Kote May 5, 2025 11:45 PM

ಹೈದರಾಬಾದ್‌: ಡೆಲ್ಲಿ ಕ್ಯಾಪಿಟಲ್ಸ್‌ (Delhi capitals) ವಿರುದ್ದ ಸುಲಭವಾಗಿ ಗೆದ್ದು 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಪ್ಲೇಆಫ್ಸ್‌ ಆಸೆಯನ್ನು ಜೀವಂತವಾಗಿಸಿಕೊಳ್ಳುವ ಸನ್‌ರೈಸರ್ಸ್‌ ಹೈದರಾಬಾದ್‌ (SRH) ತಂಡದ ಕನಸನ್ನು ಮಳೆರಾಯ ಭಗ್ನಗೊಳಿಸಿದೆ. ಸೋಮವಾರ ಇಲ್ಲಿನ ರಾಜೀವ್‌ ಗಾಂಧಿ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಟೂರ್ನಿಯ 55ನೇ ಪಂದ್ಯ ಮಳೆಗೆ ಬಲಿಯಾಯಿತು. ಕಡಿಮೆ ಮೊತ್ತವನ್ನು ಕಲೆ ಹಾಕಿದ್ದ ಅಕ್ಷರ್‌ ಪಟೇಲ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ಸೋಲಿನ ದವಡೆಗೆ ಸಿಲುಕಿತ್ತು. ಆದರೆ, ಮಳೆ ಬಂದ ಕಾರಣ ಪಂದ್ಯದ ಫಲಿತಾಂಶ ಮೂಡಿ ಬರಲಿಲ್ಲ. ಹಾಗಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಮಳೆರಾಯನ ಕೃಪ ಕಟಾಕ್ಷದಿಂದ ಒಂದು ಅಂಕವನ್ನು ತನ್ನ ಖಾತೆಗೆ ಸೇರಿಸಿಕೊಂಡಿತು. ಆದರೆ, ಎಸ್‌ಆರ್‌ಎಚ್‌ಗೆ ಒಂದು ಅಂಕ ಸಿಕ್ಕರೂ ಯಾವುದೇ ಪ್ರಯೋಜನವಾಗಲಿಲ್ಲ. ಟೂರ್ನಿಯಿಂದ ಎಲಿಮಿನೇಟ್‌ ಆಯಿತು.

ತನ್ನ ತವರು ಅಂಗಣದಲ್ಲಿ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಟಾಸ್‌ ಗೆದ್ದಿದ್ದ ಪ್ಯಾಟ್‌ ಕಮನ್ಸ್‌ ನಾಯಕತ್ವದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನ ನೀಡಿತ್ತು. ಅದರಂತೆ ಪ್ಯಾಟ್‌ ಕಮಿನ್ಸ್‌ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಎಸ್‌ಆರ್‌ಎಚ್‌, ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು 20 ಓವರ್‌ಗಳಿಗೆ 133 ರನ್‌ಗಳಿಗೆ ಕಟ್ಟಿ ಹಾಕಿತ್ತು. ಡೆಲ್ಲಿ ಪರ ಟ್ರಸ್ಟನ್‌ ಸ್ಟಬ್ಸ್‌ ಹಾಗೂ ಆಶುತೋಶ್‌ ಶರ್ಮಾ ತಲಾ 41 ರನ್‌ಗಳನ್ನು ಗಳಿಸಿದರು. ಇದರ ಫಲವಾಗಿ ಡೆಲ್ಲಿ 130 ರ ಗಡಿ ದಾಟಲು ಸಾಧ್ಯವಾಯಿತು. ಇಲ್ಲವಾದಲ್ಲಿ ಡಿಸಿ ಕನಿಷ್ಠ 100 ರನ್‌ ಕೂಡ ಗಳಿಸುತ್ತಿರಲಿಲ್ಲ. ಏಕೆಂದರೆ ಸ್ಟಾರ್‌ ಬ್ಯಾಟ್ಸ್‌ಮನ್‌ಗಳಾದ ಕರುಣ್‌ ನಾಯರ್‌, ಫಾಫ್‌ ಡು ಪ್ಲೆಸಿಸ್‌, ಅಭಿಷೇಕ್‌ ಪೊರೆಲ್‌, ಅಕ್ಷರ್‌ ಪಟೇಲ್‌ ಹಾಗೂ ಕೆಎಲ್‌ ರಾಹುಲ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು.

IPL 2025: ಸನ್‌ರೈಸರ್ಸ್‌ ಹೈದರಾಬಾದ್‌ಗೆ ಸೇರ್ಪೆಡಯಾದ ಹರ್ಷ್‌ ದುಬೆ!

ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ನಾಯಕ ಪ್ಯಾಟ್‌ ಕಮಿನ್ಸ್‌ ಮಾರಕ ಬೌಲಿಂಗ ದಾಳಿ ನಡೆಸಿ, ಪ್ರಮುಖ ಮೂವರು ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡಿದರು. ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳನ್ನು ಕಮಿನ್ಸ್‌ ಔಟ್‌ ಮಾಡಿ, ಡೆಲ್ಲಿಗೆ ಆರಂಭಿಕ ಆಘಾತ ನೀಡಿದ್ದರು. ಜಯದೇವ್‌ ಉನಾದ್ಕಟ್‌, ಹರ್ಷಲ್‌ ಪಟೇಲ್‌ ಹಾಗೂ ಇಶಾನ್‌ ಮಾಲಿಂಗ ತಲಾ ಒಂದೊಂದು ವಿಕೆಟ್‌ ಪಡೆದರು.



ಇದೀಗ ಒಂದು ಅಂಕ ಪಡೆಯುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಟೂರ್ನಿಯ ಅಂಕಪಟ್ಟಿಯಲ್ಲಿ 13 ಅ ಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಇನ್ನು ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 7 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.