45 ಚರ್ಮ ರೋಗ ಆರೋಗ್ಯ ತಪಾಸಣಾ ಶಿಬಿರದಲ್ಲಿ 5 ಸಾವಿರಕ್ಕೂ ಅಧಿಕ ಜನರಿಗೆ ಚಿಕಿತ್ಸೆ
ನಕಲಿ ಚರ್ಮ ವೈದ್ಯರ ಸಂಖ್ಯೆ ಹೆಚ್ಚಾಗಿದ್ದು, ಜನರು ಚಿಕಿತ್ಸೆ ಪಡೆಯಲು ಆರೋಗ್ಯಕರ ಚರ್ಮ, ಆರೋಗ್ಯಕರ ದೇಹ ಮತ್ತು ಆರೋಗ್ಯಕರ ರಾಷ್ಟ್ರಕ್ಕಾಗಿ ಚರ್ಮ, ಕೂದಲು, ಉಗುರು ಮತ್ತು ಜನನಾಂಗ ದ ಸಮಸ್ಯೆಗಳಿಗೆ ಭಾರತೀಯ ಚರ್ಮರೋಗ ತಜ್ಞರು, ಲೈಂಗಿಕ ವೈದ್ಯಶಾಸ್ತ್ರಜ್ಞರು ಮತ್ತು ಕುಷ್ಠರೋಗ ತಜ್ಞರ ಸಂಘದಲ್ಲಿ ನೊಂದಾಯಿಸಿಕೊಂಡಿರುವ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು


ಬೆಂಗಳೂರು: ಭಾರತೀಯ ಚರ್ಮರೋಗ ತಜ್ಞರು, ಲೈಂಗಿಕ ವೈದ್ಯಶಾಸ್ತ್ರಜ್ಞರು ಮತ್ತು ಕುಷ್ಠರೋಗ ತಜ್ಞರ ಸಂಘದಿಂದ ದೇಶಾದ್ಯಂತ ಇಂದು ಗರಿಷ್ಠ ಸಂಖ್ಯೆಯ ಉಚಿತ ಚರ್ಮ ಆರೋಗ್ಯ ಶಿಬಿರಗಳು ನಡೆದಿವೆ. ರಾಜ್ಯದಲ್ಲಿ ಚರ್ಮ, ಕೂದಲು, ಉಗುರು ಮತ್ತು ಜನನಾಂಗದ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ರಾಜ್ಯಾದ್ಯಂತ 45 ಚರ್ಮರೋಗ ತಪಾಸಣಾ ಶಿಬಿರಗಳನ್ನು ಆಯೋಜಿಸಿ, 5000 ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು.
ಇದನ್ನೂ ಓದಿ: Bangalore Stampede: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟವರ ವಿವರ ಇಲ್ಲಿದೆ
ನಕಲಿ ಚರ್ಮ ವೈದ್ಯರ ಸಂಖ್ಯೆ ಹೆಚ್ಚಾಗಿದ್ದು, ಜನರು ಚಿಕಿತ್ಸೆ ಪಡೆಯಲು ಆರೋಗ್ಯಕರ ಚರ್ಮ, ಆರೋಗ್ಯಕರ ದೇಹ ಮತ್ತು ಆರೋಗ್ಯಕರ ರಾಷ್ಟ್ರಕ್ಕಾಗಿ ಚರ್ಮ, ಕೂದಲು, ಉಗುರು ಮತ್ತು ಜನನಾಂಗದ ಸಮಸ್ಯೆಗಳಿಗೆ ಭಾರತೀಯ ಚರ್ಮರೋಗ ತಜ್ಞರು, ಲೈಂಗಿಕ ವೈದ್ಯಶಾಸ್ತ್ರಜ್ಞರು ಮತ್ತು ಕುಷ್ಠರೋಗ ತಜ್ಞರ ಸಂಘದಲ್ಲಿ ನೊಂದಾಯಿಸಿಕೊಂಡಿರುವ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದು ಕರ್ನಾಟಕ ರಾಜ್ಯ ಚರ್ಮ ರೋಗ ಸಂಘದ ಅಧ್ಯಕ್ಷರಾದ ಡಾ. ಮಂಜು ನಾಥ್ ಹುಲ್ಮಾನಿ, ಗೌರವ ಕಾರ್ಯದರ್ಶಿ ಡಾ. ಮಹೇಶ್ ಕುಮಾರ್ ತಿಳಿಸಿದರು.

ಬೆಂಗಳೂರಿನ ಮಾಚೋಹಳ್ಳಿರುವ ಗಾಂಧಿ ವೃದ್ದಾಶ್ರಮದಲ್ಲಿ ಭಾರತೀಯ ಚರ್ಮರೋಗ ತಜ್ಞರು, ಲೈಂಗಿಕ ವೈದ್ಯಶಾಸ್ತ್ರಜ್ಞರು ಮತ್ತು ಕುಷ್ಠರೋಗ ತಜ್ಞರ ಸಂಘದ ವತಿಯಿಂದ ಚರ್ಮ ರೋಗ ತಜ್ಞರಾದ ಡಾ. ಗಿರೀಶ್ ಎಂ.ಎಸ್ ಅವರ ನೇತೃತ್ವದಲ್ಲಿ 80ಕ್ಕೂ ಹೆಚ್ಚು ವೃದ್ದರಿಗೆ ಉಚಿತ ಚರ್ಮರೋಗ ತಪಾಸಣಾ ಶಿಬಿರ ನಡೆಸಲಾಯಿತು.
ಈ ಸಂದರ್ಭದಲ್ಲಿ ಗಾಂಧಿ ವೃದ್ದಾಶ್ರಮದ ಕಾರ್ಯದರ್ಶಿ ಸಿ. ಉಗ್ರಯ್ಯ, ಸಮಾಜ ಸೇವಕ ರಾಜು, ಕಾರ್ತಿಕ್, ರಾಮಚಂದ್ರ, ಮತ್ತಿತರರು ಉಪಸ್ಥಿತರಿದ್ದರು