Asaduddin Owaisi: ನೀವು ಐಸಿಸ್‌ನ ಉತ್ತರಾಧಿಕಾರಿಗಳು; ಭಯೋತ್ಪಾದಕ ದಾಳಿಯ ಕುರಿತು ಪಾಕ್ ಮೇಲೆ ಹರಿಹಾಯ್ದ ಅಸಾದುದ್ದೀನ್ ಓವೈಸಿ
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಜಗತ್ತಿನಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಭಾನುವಾರ ಪಾಕಿಸ್ತಾನದ ಕರಿತು ಕಿಡಿ ಕಾರಿದ್ದಾರೆ. ಧರ್ಮದ ಹೆಸರಿನಲ್ಲಿ ಭಯೋತ್ಪಾದಕರು ಮುಗ್ಧ ಜನರನ್ನು ಕೊಲ್ಲುವುದನ್ನು ಅವರು ವಿಶೇಷವಾಗಿ ಟೀಕಿಸಿದ್ದಾರೆ.


ಹೈದರಾಬಾದ್: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಜಗತ್ತಿನಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಭಾನುವಾರ ಪಾಕಿಸ್ತಾನದ ಕರಿತು ಕಿಡಿ ಕಾರಿದ್ದಾರೆ. ಧರ್ಮದ ಹೆಸರಿನಲ್ಲಿ ಭಯೋತ್ಪಾದಕರು ಮುಗ್ಧ ಜನರನ್ನು ಕೊಲ್ಲುವುದನ್ನು ಅವರು ವಿಶೇಷವಾಗಿ ಟೀಕಿಸಿದ್ದಾರೆ. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರನ್ನು ಕೊಲ್ಲುವ ಮೊದಲು ಅವರ ಧರ್ಮವನ್ನು ಕೇಳಿದರು ಎಂದು ಅವರು ಹೇಳಿದ್ದಾರೆ. "ನೀವು ಯಾವ ಧರ್ಮದ ಬಗ್ಗೆ ಮಾತನಾಡುತ್ತಿದ್ದೀರಿ? ನೀವು ಖವಾರಿಜ್‌ಗಳಿಗಿಂತ ಕೆಟ್ಟವರು. ಈ ಕೃತ್ಯವು ನೀವು ISIS ನ ಉತ್ತರಾಧಿಕಾರಿಗಳು ಎಂದು ತೋರಿಸುತ್ತದೆ" ಎಂದು ಅವರು ಹೇಳಿದ್ದಾರೆ.
ಭಾರತದ ಪ್ರತೀಕಾರದ ಬಗ್ಗೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಓವೈಸಿ, ಪಾಕಿಸ್ತಾನ ಅಥವಾ ಅದರ ನಾಯಕರು ಭಾರತದೊಂದಿಗೆ ಮಿಲಿಟರಿ ಸಂಘರ್ಷಕ್ಕೆ ಇಳಿಯಲು ಅಥವಾ ಪರಮಾಣು ಯುದ್ಧಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಅದಕ್ಕೆಲ್ಲ ಭಾರತ ಬಗ್ಗಲ್ಲ. ಭಾರತದ ಮಿಲಿಟರಿ ಅಥವಾ ಆರ್ಥಿಕ ಪರಾಕ್ರಮಕ್ಕೆ ಸರಿಸಾಟಿಯಾಗಲು ಪಾಕಿಸ್ತಾನಕ್ಕೆ ಯಾವತ್ತೂ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನ ಭಾರತಕ್ಕಿಂತ ಅರ್ಧ ಗಂಟೆಯಲ್ಲ, ಅರ್ಧ ಶತಮಾನ ಹಿಂದಿದ್ದಾರೆ. ನಮ್ಮ ಮಿಲಿಟರಿ ಬಜೆಟ್ ನಿಮ್ಮ ರಾಷ್ಟ್ರೀಯ ಬಜೆಟ್‌ಗಿಂತ ದೊಡ್ಡದಾಗಿದೆ. ಪಾಕಿಸ್ತಾನಿ ನಾಯಕರು ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆ ಹಾಕಬಾರದು. ಬೇರೆ ದೇಶದಲ್ಲಿ ಮುಗ್ಧ ಜನರನ್ನು ಕೊಂದರೆ ಯಾರೂ ಮೌನವಾಗಿರುವುದಿಲ್ಲ ಎಂಬುದನ್ನು ಅವರು ನೆನಪಿನಲ್ಲಿಡಬೇಕು" ಎಂದು ಓವೈಸಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ವಿಶ್ವಾದ್ಯಂತ ಭಾರತೀಯರಿಂದ ಪ್ರತಿಭಟನೆ
ಪಾಕಿಸ್ತಾನದ ಸಚಿವ ಹನೀಫ್ ಅಬ್ಬಾಸಿ ಭಾರತಕ್ಕೆ ಪರಮಾಣು ಪ್ರತೀಕಾರದ ಬೆದರಿಕೆ ಹಾಕಿದ ನಂತರ ಅಸಾದುದ್ದೀನ್ ಓವೈಸಿ ಅವರಿಂದ ಈ ಹೇಳಿಕೆಗಳು ಬಂದಿವೆ. ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಉತ್ತುಂಗಕ್ಕೇರಿದೆ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ಪ್ರಮುಖ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದೆ, ಪಾಕಿಸ್ತಾನಿ ಪ್ರಜೆಗಳ ವೀಸಾಗಳನ್ನು ರದ್ದುಗೊಳಿಸಿದೆ. ಈಗಾಗಲೇ ಹಲವು ಪಾಕಿಸ್ತಾನಿಗಳನ್ನು ದೇಶದಿಂದ ಹೊರಹಾಕಲಾಗುತ್ತಿದೆ. ಅಷ್ಟೇ ಅಲ್ಲದೆ ದಾಳಿಗೆ ಸಹಾಯ ಮಾಡಿದ್ದ ಉಗ್ರರ ಮನೆಗಳನ್ನು ಭಾರತೀಯ ಸೇನೆ ಧ್ವಂಸ ಮಾಡುತ್ತಿದೆ. ಗಡಿಯಲ್ಲಿ ಕಾರ್ಯಾಚರಣೆ ಮುಂದುವರಿದಿದೆ. ಈ ನಡುವೆ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಪಾಕಿಸ್ತಾನಿ ಪಡೆಗಳು ಸತತ ನಾಲ್ಕನೇ ರಾತ್ರಿಯೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ ಎಂದು ಅಧಿಕಾರಿಗಳು ಸೋಮವಾರ ಬೆಳಿಗ್ಗೆ ತಿಳಿಸಿದ್ದಾರೆ.