IPL 2025: ಗೆಲುವಿನೊಂದಿಗೆ ದಾಖಲೆ ಬರೆದ ರಜತ್ ಪಾಟೀದಾರ್
ಆವೃತಿಯೊಂದರಲ್ಲಿ ತವರಿನಾಚೆ ಅತ್ಯಧಿಕ ಪಂದ್ಯ ಗೆದ್ದ ದಾಖಲೆ ಮಾಜಿಗಳಾದ ಗೌತಮ್ ಗಂಭೀರ್ ಮತ್ತು ಹರ್ಭಜನ್ ಸಿಂಗ್ ಹೆಸರಿನಲ್ಲಿದೆ. ಉಭಯ ಆಟಗಾರರು 2012ರಲ್ಲಿ ತಮ್ಮ ನಾಯಕತ್ವದಲ್ಲಿ ತಲಾ 7 ಪಂದ್ಯಗಳನ್ನು ಗೆದ್ದಿದ್ದರು. ಪಾಟೀದಾರ್ ಇನ್ನೆರಡು ಪಂದ್ಯಗಳನ್ನು ಗೆದ್ದರೆ ದಾಖಲೆ ತಮ್ಮ ಹೆಸರಿಗೆ ಬರೆಯುವ ಅವಕಾಶವಿದೆ.


ನವದೆಹಲಿ: ಭಾನುವಾರ ನಡೆದಿದ್ದ ಐಪಿಎಲ್ 18ನೇ ಆವೃತ್ತಿಯ 46ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಎದುರು 6 ವಿಕೆಟ್‌ಗಳ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಐಪಿಎಲ್ ಆವೃತ್ತಿಯೊಂದರಲ್ಲಿ ತವರಿನಾಚೆ ಅತ್ಯಧಿಕ ಪಂದ್ಯ ಗೆದ್ದ ಆರ್‌ಸಿಬಿಯ ಮೊದಲ ಮತ್ತು ಒಟ್ಟಾರೆಯಾಗಿ 5ನೇ ನಾಯಕ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಆವೃತಿಯೊಂದರಲ್ಲಿ ತವರಿನಾಚೆ ಅತ್ಯಧಿಕ ಪಂದ್ಯ ಗೆದ್ದ ದಾಖಲೆ ಮಾಜಿಗಳಾದ ಗೌತಮ್ ಗಂಭೀರ್ ಮತ್ತು ಹರ್ಭಜನ್ ಸಿಂಗ್ ಹೆಸರಿನಲ್ಲಿದೆ. ಉಭಯ ಆಟಗಾರರು 2012ರಲ್ಲಿ ತಮ್ಮ ನಾಯಕತ್ವದಲ್ಲಿ ತಲಾ 7 ಪಂದ್ಯಗಳನ್ನು ಗೆದ್ದಿದ್ದರು. ಪಾಟೀದಾರ್ ಇನ್ನೆರಡು ಪಂದ್ಯಗಳನ್ನು ಗೆದ್ದರೆ ದಾಖಲೆ ತಮ್ಮ ಹೆಸರಿಗೆ ಬರೆಯುವ ಅವಕಾಶವಿದೆ. ಸದ್ಯ ಆರ್‌ಸಿಬಿಗೆ ಇನ್ನು ತವರಿನಾಚೆ ಒಂದೇ ಲೀಗ್ ಪಂದ್ಯ ಬಾಕಿ ಇದೆ. ಪ್ಲೇ ಆಫ್ ಪ್ರವೇಶಿಸಿದರೆ ಹೆಚ್ಚಿನ ಪಂದ್ಯ ಸಿಗಲಿದೆ.
ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆದಿದ ಡೆಲ್ಲಿ ಕ್ಯಾಪಿಟಲ್ಸ್ ಕನ್ನಡಿಗ ಕೆಎಲ್ ರಾಹುಲ್ (41 ರನ್, 39 ಎಸೆತ, 3 ಬೌಂಡರಿ) ಹಾಗೂ ಟ್ರಿಸ್ಟಾನ್ ಸ್ಟಬ್ಸ್ (34 ರನ್, 18 ಎಸೆತ, 5 ಬೌಂಡರಿ, 1 ಸಿಕ್ಸರ್) ಬ್ಯಾಟಿಂಗ್ ಹೋರಾಟದಿಂದ 8 ವಿಕೆಟ್‌ಗೆ 162 ರನ್ ಬಾರಿಸಿತು.
Celebrations today. 🤌
— Royal Challengers Bengaluru (@RCBTweets) April 27, 2025
Back to preparations tomorrow. 😤
We March On. ❤️🔥
pic.twitter.com/sjSlU6Im5o
ಇದನ್ನೂ ಓದಿ IPL 2025: ಐಪಿಎಲ್‌ನಲ್ಲಿ ವಿಶೇಷ ದಾಖಲೆ ಬರೆದ ಮುಂಬೈ ಇಂಡಿಯನ್ಸ್
ಜವಾಬಿತ್ತ ಆರ್‌ಸಿಬಿ 26 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿದರೂ, ವಿರಾಟ್ ಕೊಹ್ಲಿ (51 ರನ್, 47 ಎಸೆತ, 4 ಬೌಂಡರಿ) ಹಾಗೂ ಕೃನಾಲ್ ಪಾಂಡ್ಯ ಜೋಡಿಯ ಶತಕದ ಜತೆಯಾಟದ ನೆರವಿನಿಂದ 18.3 ಓವರ್‌ಗಳಲ್ಲಿ 4 ವಿಕೆಟ್‌ಗೆ 165 ರನ್‌ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.