ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Wedding Business: ಊಟ, ಬಟ್ಟೆಗಿಂತ ಭಾರತೀಯರು ಹೆಚ್ಚು ಖರ್ಚು ಮಾಡೋದು ಮದ್ವೆಗಂತೆ!

ಆರ್ಥಿಕ ವರ್ಷ 2024ರ ಅಂಕಿಅಂಶಗಳ ಪ್ರಕಾರ ಭಾರತೀಯರು ವಿವಾಹಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು ಸ್ಪಷ್ಟವಾಗುತ್ತಿದೆ. ಯಾಕೆಂದರೆ ಮನುಷ್ಯನ ಅತ್ಯಂತ ಮೂಲಭೂತ ಅವಶ್ಯಕತೆಗಳಾದ ಆಹಾರ, ಬಟ್ಟೆ ಮತ್ತು ವಸತಿಗಿಂತ ಹೆಚ್ಚು ಹಣವನ್ನು ಒಂದು ಮದುವೆಗಾಗಿ ಖರ್ಚು ಮಾಡುತ್ತಿದ್ದಾರೆ. ಭಾರತೀಯರು (Indian wedding) 2024ರ ಆರ್ಥಿಕ ವರ್ಷದಲ್ಲಿ ಬರೋಬ್ಬರಿ ಒಂದು ಸಾವಿರ ಕೋಟಿ ರೂ. ಗಿಂತಲೂ ಹೆಚ್ಚು ಹಣವನ್ನು ಮದುವೆಗಾಗಿ ಖರ್ಚು ಮಾಡಿದ್ದಾರೆ.

ವಿವಾಹ ಉದ್ಯಮದಲ್ಲಿ ಭಾರತಕ್ಕೆ ವಿಶ್ವದಲ್ಲೇ ಎರಡನೇ ಸ್ಥಾನ

ಬೆಂಗಳೂರು: ಎಷ್ಟೇ ಕಷ್ಟವಾದರೂ ಸರಿ, ಸಾಲಸೋಲ ಮಾಡಿದರೂ ಪರ್ವಾಗಿಲ್ಲ ಅದ್ದೂರಿ ಮದುವೆಯಾಗಬೇಕೆಂಬುದು(Grand Wedding) ಬಹುತೇಕರ ಕನಸು. ಅದಕ್ಕೆ ತಕ್ಕುದಾಗಿ ಕೆಲವೊಂದು ಶಾಸ್ತ್ರ ಸಂಪ್ರದಾಯಗಳು ಇತ್ತೀಚಿನ ದಿನಗಳಲ್ಲಿ ಟ್ರೆಂಟ್‌ ಆಗಿ ಬೆಳೆದು ಬಂದಿದ್ದು, ಮದುವೆ ಕಾರ್ಯಕ್ರಮಗಳನ್ನು ವೈಭವದಿಂದ ನಡೆಸಲೇಬೇಕು ಎನ್ನುವಂತೆ ಮಾಡಿದೆ. ಭಾರತೀಯ ಕುಟುಂಬಗಳು ತಮ್ಮ ಅಗತ್ಯದ ವಸ್ತುಗಳಾದ ಆಹಾರ, ಬಟ್ಟೆ ಮತ್ತು ವಸತಿಗಿಂತ ಹೆಚ್ಚು ಹಣವನ್ನು ಮದುವೆಗೆ (Wedding Business) ಖರ್ಚು ಮಾಡುತ್ತದೆ ಎನ್ನುತ್ತದೆ ಅಂಕಿ ಅಂಶಗಳು. 2024ರ ಆರ್ಥಿಕ ವರ್ಷದಲ್ಲಿ ಭಾರತೀಯರು (Indian wedding) ಬರೋಬ್ಬರಿ ಒಂದು ಸಾವಿರ ಕೋಟಿ ರೂ. ಗಿಂತಲೂ ಹೆಚ್ಚು ಹಣವನ್ನು ಮದುವೆಗಾಗಿ ಖರ್ಚು ಮಾಡಿದ್ದಾರೆ ಎಂದರೆ ನೀವು ನಂಬಲೇಬೇಕು.

ಆರ್ಥಿಕ ವರ್ಷ 2024ರ ಅಂಕಿಅಂಶಗಳ ಪ್ರಕಾರ ಭಾರತೀಯರು ವಿವಾಹಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು ಸ್ಪಷ್ಟವಾಗುತ್ತಿದೆ. ಯಾಕೆಂದರೆ ಮನುಷ್ಯನ ಅತ್ಯಂತ ಮೂಲಭೂತ ಅವಶ್ಯಕತೆಗಳಾದ ಆಹಾರ, ಬಟ್ಟೆ ಮತ್ತು ವಸತಿಗಿಂತ ಹೆಚ್ಚು ಹಣವನ್ನು ಒಂದು ಮದುವೆಗಾಗಿ ಖರ್ಚು ಮಾಡುತ್ತಿದ್ದಾರೆ.

2023ರ ಏಪ್ರಿಲ್ 01ರಿಂದ 2024ರ ಮಾರ್ಚ್ 31ರವರೆಗಿನ ಅಂಕಿ ಅಂಶಗಳ ಪ್ರಕಾರ ಭಾರತೀಯರು ಆಹಾರ ಮತ್ತು ದಿನಸಿಗಾಗಿ 575.50 ಕೋಟಿ ರೂ. ಖರ್ಚು ಮಾಡಿದರೆ ಉಡುಪು ಮತ್ತು ಇತರ ಸಾಮಗ್ರಿಗಳಿಗಾಗಿ 710.09 ಕೋಟಿ ರೂ. ಖರ್ಚು ಮಾಡುತ್ತಾರೆ. ಆದರೆ ಮದುವೆಗಳಿಗೆ ಬರೋಬ್ಬರಿ 109.91 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಜೆಫರೀಸ್ ವರದಿ ಹೇಳಿದೆ.

ವರದಿಯ ಪ್ರಕಾರ ವಿಶ್ವದಲ್ಲಿ ಅತಿ ಹೆಚ್ಚು ವಿವಾಹಗಳು ಭಾರತದಲ್ಲೇ ನಡೆಯುತ್ತಿದೆ. ವಾರ್ಷಿಕವಾಗಿ ಸುಮಾರು 80 ಲಕ್ಷದಿಂದ ಒಂದು ಕೋಟಿ ವಿವಾಹ ಕಾರ್ಯಕ್ರಮಗಳು ನಡೆಯುತ್ತವೆ. ಈ ಮೂಲಕ ಭಾರತೀಯ ವಿವಾಹ ಉದ್ಯಮವು ವಿಶ್ವದಲ್ಲೇ ಎರಡನೇ ದೊಡ್ಡ ವಿವಾಹ ಉದ್ಯಮ ಕ್ಷೇತ್ರವಾಗಿದೆ. ವಿಶ್ವದಲ್ಲೇ ಅತಿದೊಡ್ಡ ವಿವಾಹ ಉದ್ಯಮ ಚೀನಾದ್ದು. ಇಲ್ಲಿ ವಾರ್ಷಿಕವಾಗಿ ಸುಮಾರು 143.73 ಕೋಟಿ ರೂ. ವಿವಾಹಕ್ಕಾಗಿ ಖರ್ಚು ಮಾಡಲಾಗುತ್ತದೆ. ಯುಎಸ್ ನಲ್ಲಿ 59.20 ಕೋಟಿ ರೂ. ಅನ್ನು ಖರ್ಚು ಮಾಡಲಾಗುತ್ತಿದ್ದು, ಇದು ಮೂರನೇ ಸ್ಥಾನದಲ್ಲಿದೆ.

weddi1

ಭಾರತದಲ್ಲಿ ವೆಡ್ಡಿಂಗ್‌ ಬ್ಯುಸಿನೆಸ್‌ ಹೇಗಿದೆ?

ಸಾಮಾನ್ಯವಾಗಿ ಭಾರತದಲ್ಲಿ ವಿವಾಹ ಸಮಾರಂಭದಲ್ಲಿ ಆಭರಣ, ಉಡುಪು, ಹೊಟೇಲ್, ಅಡುಗೆ, ಅಲಂಕಾರ, ಪ್ರಯಾಣ ಮತ್ತು ಮನರಂಜನೆಯಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಖರ್ಚು ಮಾಡಲಾಗುತ್ತದೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (CAIT) ಪ್ರಕಾರ ಭಾರತದಲ್ಲಿ ಮದುವೆಗೆ ಸರಾಸರಿ 12 ಲಕ್ಷ ರೂ. ಖರ್ಚು ಮಾಡಲಾಗುತ್ತದೆ. ಇದು ಭಾರತೀಯ ಮನೆಯ ಸರಾಸರಿ ವಾರ್ಷಿಕ ಆದಾಯದ ಸುಮಾರು 3 ಪಟ್ಟು ಹೆಚ್ಚಾಗಿದ್ದು, ಭಾರತದ ತಲಾ ಜಿಡಿಪಿಯ ಸುಮಾರು 5 ಪಟ್ಟು ಹೆಚ್ಚಾಗಿದೆ.

ಸಾಮಾನ್ಯವಾಗಿ ಆಭರಣ ಮತ್ತು ಅಡುಗೆ ಸೇವೆಗಳಿಗೆ ಎಲ್ಲರೂ ಹೆಚ್ಚಿನ ಖರ್ಚು ಮಾಡುತ್ತಾರೆ. ಸಾಮಾನ್ಯ ವರ್ಗದ ಕುಟುಂಬಗಳು ಆಭರಣ, ಅಡುಗೆ ಮತ್ತು ಸ್ಥಳಕ್ಕಾಗಿ ಹೆಚ್ಚಿನ ಖರ್ಚು ಮಾಡಿದರೆ ಮಧ್ಯಮ ವರ್ಗವು ಆಭರಣ, ಅಡುಗೆ, ವಸತಿ ಮತ್ತು ಉಡುಪುಗಳಿಗೆ ಹೆಚ್ಚಿನ ಖರ್ಚು ಮಾಡುತ್ತಾರೆ. ಇನ್ನು ಗಣ್ಯರ ವಿವಾಹ ಸಮಾರಂಭಗಳಲ್ಲಿ ಆಭರಣ, ಅಡುಗೆ, ವಸತಿ, ಉಡುಪು, ಪ್ರಯಾಣ ಮತ್ತು ಮನರಂಜನೆಗಾಗಿ ಹೆಚ್ಚಿನ ಖರ್ಚು ಮಾಡಲಾಗುತ್ತದೆ.

ಜೆಫರೀಸ್ ಅಂಕಿ ಅಂಶಗಳ ಪ್ರಕಾರ 2023ರ ಮದುವೆಗಳಿಗೆ ಒಟ್ಟು109.91 ಕೋಟಿ ರೂ. ವೆಚ್ಚದಲ್ಲಿ ಸುಮಾರು 33 ಕೋಟಿ ರೂ. ಅನ್ನು ಆಭರಣಗಳಿಗಾಗಿ ಖರ್ಚು ಮಾಡಲಾಗಿದೆ. ಇದು ವಿವಾಹ ಉದ್ಯಮಕ್ಕೆ ಅತಿ ಹೆಚ್ಚು ಕೊಡುಗೆ ನೀಡುವ ವಸ್ತುವಾಗಿದೆ. ಬಳಿಕ ಅಡುಗೆ ಸೇವೆಗಾಗಿ 22, ಕೋಟಿ ರೂ., ಕಾರ್ಯಕ್ರಮ ಆಯೋಜನೆಗೆ 16 ಕೋಟಿ ರೂ., ಛಾಯಾಗ್ರಹಣಕ್ಕೆ ಸುಮಾರು 8 ಕೋಟಿ ರೂ., ಉಡುಪು ಮತ್ತು ಅಲಂಕಾರಕ್ಕೆ ಸುಮಾರು 8 ಕೋಟಿ ರೂ., ಇತರ ಖರ್ಚು ಸುಮಾರು 21 ಕೋಟಿ ರೂ. ಆಗಿದೆ.

ಇದನ್ನೂ ಓದಿ: Beer prices hike: ಮತ್ತೆ ಬಿಯರ್‌ ದರ ಹೆಚ್ಚಳಕ್ಕೆ ಮುಂದಾದ ರಾಜ್ಯ ಸರ್ಕಾರ; ಎಷ್ಟು ಏರಿಕೆಯಾಗಲಿದೆ?

2023ರಲ್ಲಿ ಭಾರತದಲ್ಲಿ ನಡೆದ ಒಟ್ಟು ವಿವಾಹಗಳ ಸಂಖ್ಯೆಯಲ್ಲಿ ಗಣ್ಯರ ವಿವಾಹಗಳು ಶೇ. 1ರಷ್ಟಾಗಿದ್ದು, ಇದು ಇಡೀ ದೇಶವು ನಡೆಸಿದ ವಿವಾಹಗಳ ಒಟ್ಟಾರೆ ಖರ್ಚಿನ ಶೇ.12 ರಷ್ಟಿದ್ದವು. ಕಡಿಮೆ ಖರ್ಚಿನ ವಿವಾಹಗಳು ಶೇ. 17ರಷ್ಟಿದ್ದು, ಇವರ ಒಟ್ಟಾರೆ ಖರ್ಚು ಶೇ. 4ರಷ್ಟಾಗಿತ್ತು. ಗಣ್ಯರ ವಿವಾಹದ ವೆಚ್ಚ ಸರಾಸರಿ 1 ಕೋಟಿ ರೂ. ಆಗಿದ್ದರೆ, ಸಾಮಾನ್ಯ ವಿವಾಹದ ಸರಾಸರಿ ವೆಚ್ಚ 3 ಲಕ್ಷ ರೂ. ಗಳಾಗಿದ್ದವು.

ಒಟ್ಟು ವಿವಾಹಗಳ ಸಂಖ್ಯೆಯಲ್ಲಿ ಶೇ. 51ರಷ್ಟಿದ್ದ ಮಧ್ಯಮ ವರ್ಗದ ವಿವಾಹಗಳು ಒಟ್ಟು ಖರ್ಚಿನಲ್ಲಿ ಶೇ. 63ರಷ್ಟನ್ನು ಕೊಡುಗೆ ನೀಡಿವೆ. ಮಧ್ಯಮ ವರ್ಗದ ವಿವಾಹಕ್ಕೆ ಖರ್ಚು ಮಾಡಿದ ಮೊತ್ತ ಸುಮಾರು 10 ಲಕ್ಷದಿಂದ 25 ಲಕ್ಷ ರೂ. ವರೆಗೆ ಆಗಿತ್ತು.

weddi

ಲಾಭ ಯಾರಿಗೆ ?

ಭಾರತದಲ್ಲಿ ಮದುವೆ ವೇಳೆ ವಿಶೇಷವಾಗಿ ಚಿನ್ನಾಭರಣಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಮದುವೆಯ ಆಭರಣಗಳ ಬೇಡಿಕೆಯು ಸುಮಾರು ಶೇ. 50 ರಿಂದ 55ರಷ್ಟಿದೆ. ಕಳೆದ ಆರ್ಥಿಕ ವರ್ಷದಲ್ಲಿ ಟೈಟಾನ್, ಸೆನ್ಕೊ ಗೋಲ್ಡ್ ಮತ್ತು ಕಲ್ಯಾಣ್ ಜ್ಯುವೆಲ್ಲರ್ಸ್‌ನ ಚಿನ್ನದ ಆಭರಣ ಆದಾಯವು ಕ್ರಮವಾಗಿ ಶೇ.24, ಶೇ. 21 ಮತ್ತು ಶೇ.16ರಷ್ಟು ಬೆಳೆದಿದೆ. ಇದರಲ್ಲಿ ಹೆಚ್ಚಿನ ಕೊಡುಗೆ ಮದುವೆಯ ಆಭರಣಗಳಿಂದಾಗಿದೆ.

ಉಡುಪು ಚಿಲ್ಲರೆ ಮಾರುಕಟ್ಟೆಯಲ್ಲಿ ಸುಮಾರು ಶೇ. 11ರಷ್ಟು ಮದುವೆ ಮತ್ತು ವಿವಿಧ ಆಚರಣೆಯ ಉಡುಗೆಗಳನ್ನು ಒಳಗೊಂಡಿದೆ. ಇದರಲ್ಲಿ ಮಹಿಳೆಯರ ಉಡುಗೆಯ ಕೊಡುಗೆ ಒಟ್ಟು ಮಾರುಕಟ್ಟೆಯ ಸುಮಾರು ಶೇ. 70 ರಿಂದ 75ರಷ್ಟಿದೆ. ಇದರಲ್ಲಿ ವೇದಾಂತ್ ಫ್ಯಾಷನ್ಸ್ (ಮಾನ್ಯವಾರ್), ಆದಿತ್ಯ ಬಿರ್ಲಾ ಫ್ಯಾಷನ್, ಚಿಲ್ಲರೆ ವ್ಯಾಪಾರ, ರೇಮಂಡ್ ಮತ್ತು ಅರವಿಂದ್ ಫ್ಯಾಷನ್ಸ್ ಹೆಚ್ಚಿನ ಲಾಭಗಳಿಸಿದೆ.

ಭಾರತದಲ್ಲಿ ಸುಮಾರು ಶೇ. 90ರಷ್ಟು ಮದುವೆಗಳು 'ಅರೇಂಜ್ಡ್ ಮ್ಯಾರೇಜ್‌ಗಳು' ಆಗಿವೆ. ಇದರಲ್ಲಿ ಶೇ. 6ರಷ್ಟು ಆನ್‌ಲೈನ್ ಮ್ಯಾಚ್‌ಮೇಕಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ನಡೆದಿವೆ. ಮ್ಯಾಟ್ರಿಮೋನಿ.ಕಾಮ್ (ಭಾರತ್ ಮ್ಯಾಟ್ರಿಮೋನಿ) ಮತ್ತು ಇನ್ಫೋ ಎಡ್ಜ್ (ಜೀವನಸಾಥಿ) ಈ ವಿಭಾಗದಲ್ಲಿ ಪ್ರಮುಖ ಸೈಟ್ ಗಳಾಗಿ ಗುರುತಿಸಿಕೊಂಡಿವೆ.

ಇತ್ತೀಚಿಗೆ ಹೆಚ್ಚಿನವರು ಡೆಸ್ಟಿನೇಶನ್ ವೆಡ್ಡಿಂಗ್‌ಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇದರಿಂದ ಐಎಚ್‌ಸಿಎಲ್, ಇಐಹೆಚ್, ಚಾಲೆಟ್ ಹೊಟೇಲ್ ಗಳು, ಲೆಮನ್ ಟ್ರೀ, ಪಾರ್ಕ್ ಹೊಟೇಲ್‌ಗಳು, ಜುನಿಪರ್ ಹೊಟೇಲ್‌ಗಳು ಮತ್ತು ಇಂಡಿಗೋ, ಸ್ಪೈಸ್‌ಜೆಟ್‌ನಂತಹ ವಿಮಾನಯಾನ ಕಂಪೆನಿಗಳು ಹೆಚ್ಚಿನ ಲಾಭಗಳಿಸಿವೆ. ಇನ್ನು ಮದುವೆಗಳಿಗೆ ಸಾಲಗಳನ್ನು ನೀಡುವ ಮೂಲಕ ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ, ಐಸಿಐಸಿಐ, ಕೋಟಕ್ ಮತ್ತು ಆಕ್ಸಿಸ್ ಬ್ಯಾಂಕ್‌ಗಳು ಹೆಚ್ಚಿನ ಲಾಭಗಳಿಸುತ್ತಿವೆ. ಇವಿಷ್ಟೇ ಅಲ್ಲದೇ ದ್ವಿಚಕ್ರ ವಾಹನ, ನಾಲ್ಕು ಚಕ್ರ ವಾಹನ, ಎಲೆಕ್ಟ್ರಾನಿಕ್ಸ್ ವಸ್ತುಗಳು ಕೂಡ ವಿವಾಹ ಉದ್ಯಮಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡುತ್ತಿವೆ.