ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Neha Kakkar: ಮೆಲ್ಬೋರ್ನ್‌ ಸಂಗೀತ ಕಛೇರಿ ವಿಳಂಬಕ್ಕೆ ಗಾಯಕಿ ನೇಹಾ ಕಕ್ಕರ್ ಕಾರಣ ಎಂದ ಆಯೋಜಕರು

ಸಿನಿಮಾ ಹಾಡು, ಲೈವ್ ಶೋ ನೀಡುವ ಮೂಲಕ ಅಭಿಮಾನಿಗಳ ಗಮನ ಸೆಳೆದ ಗಾಯಕಿ ನೇಹಾ ಕಕ್ಕರ್ ಇತ್ತೀಚೆಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಆಯೋಜಿಸಿದ್ದ ಶೋವೊಂದಕ್ಕೆ 3 ಗಂಟೆಗಳ ಕಾಲ ತಡವಾಗಿ ಆಗಮಿಸಿ, ಬಳಿಕ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ್ದ ಘಟನೆ ನಡೆದಿತ್ತು. ಇದರ ಬೆನ್ನಲ್ಲೆ ಗಾಯಕಿ ನೇಹಾ ಕಕ್ಕರ್ ಅವರು ಕಾರ್ಯಕ್ರಮ ವಿಳಂಬವಾಗಿ ಬರಲು ಆಯೋಜಕರು ಕಾರಣ ಎಂದು ದೂರಿದ್ದರು. ಇದೀಗ ಗಾಯಕಿ ವಿರುದ್ಧ ಮೆಲ್ಬೋರ್ನ್ ಕಾರ್ಯಕ್ರಮ ಆಯೋಜಕರು ಗರಂ ಆಗಿದ್ದಾರೆ.

ಗಾಯಕಿ ನೇಹಾ ಬಗ್ಗೆ ಮೆಲ್ಬೋರ್ನ್‌ ಕಾರ್ಯಕ್ರಮ ಆಯೋಜಕರು ಹೇಳಿದ್ದೇನು?

Neha Kakkar

Profile Pushpa Kumari Apr 30, 2025 6:37 PM

ಕ್ಯಾನ್‌ಬೆರ್ರಾ: ಬಾಲಿವುಡ್‌ನ ಜನಪ್ರಿಯ ಹಿನ್ನೆಲೆ ಗಾಯಕಿ ನೇಹಾ ಕಕ್ಕರ್ (Neha Kakkar) ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಸಿನಿಮಾ ಹಾಡು, ಲೈವ್ ಶೋ ನೀಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ಗಾಯಕಿ ನೇಹಾ ಕಕ್ಕರ್ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಇತ್ತೀಚಿಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಆಯೋಜಿಸಿದ್ದ ಶೋವೊಂದಕ್ಕೆ 3 ಗಂಟೆಗಳ ಕಾಲ ತಡವಾಗಿ ಬಂದು, ಬಳಿಕ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ್ದ ಘಟನೆ ನಡೆದಿತ್ತು. ಇದರ ಬೆನ್ನಲ್ಲೆ ಗಾಯಕಿ ನೇಹಾ ಕಕ್ಕರ್ ಅವರು ಕಾರ್ಯಕ್ರಮಕ್ಕೆ ವಿಳಂಬವಾಗಿ ಬರಲು ಆಯೋಜಕರು ಕಾರಣ ಎಂದು ದೂರಿದ್ದರು. ಇದೀಗ ಗಾಯಕಿ ವಿರುದ್ಧ ಮೆಲ್ಬೋರ್ನ್ ಕಾರ್ಯಕ್ರಮ ಆಯೋಜಕರು ಗರಂ ಆಗಿದ್ದಾರೆ.

ಮಾರ್ಚ್‌ನಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ತಮ್ಮ ಸಂಗೀತ ಕಾರ್ಯಕ್ರಮಕ್ಕೆ ನೇಹಾ ಕಕ್ಕರ್ ತಡವಾಗಿ ಬಂದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದ್ದರು. ಆಯೋಜಕರು ಮೂಲಭೂತ ವ್ಯವಸ್ಥೆಗಳನ್ನು ಒದಗಿಸಿಲ್ಲ. ಆಯೋಜಕರ ತಂಡದ ವ್ಯವಸ್ಥೆ ಸರಿಯಾಗಿಲ್ಲದೆ ಅನೇಕ ಅಡೆತಡೆಗಳನ್ನು ಎದುರಿಸುವಂತಾಯ್ತು. ಎಲ್ಲ ಅಡೆತಡೆಗಳ ಹೊರತಾಗಿಯೂ ಪ್ರದರ್ಶನ ನೀಡ ಬೇಕಾಯಿತು ಎಂದು ಗಾಯಕಿ ವೇದಿಕೆಯಲ್ಲಿ ಹೇಳಿಕೆ ನೀಡಿದ್ದರು. ಇದೀಗ ಕಾರ್ಯಕ್ರಮ ಆಯೋಜಕರಾದ ಆಸ್ಟ್ರೇಲಿಯಾದ ಪೇಸ್ ಡಿ ಮತ್ತು ಬಿಕ್ರಮ್ ಸಿಂಗ್ ರಾಂಧವ ಈಗ ಈ ಬಗ್ಗೆ  ಪ್ರತಿಕ್ರಿಯೆ ನೀಡಿ ಅವರ ಹೇಳಿಕೆ ಸುಳ್ಳು ಎಂದು ಆರೋಪಿಸಿದ್ದಾರೆ

ನೇಹಾ ಕಕ್ಕರ್ ಅವರನ್ನು ಆಸ್ಟ್ರೇಲಿಯಾ ಮೆಲ್ಬೋರ್ನ್‌ನ ಬೀಟ್ ಪ್ರೊಡಕ್ಷನ್ ತಂಡ ಸಂಗೀತ ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು. ಆಸ್ಟ್ರೇಲಿಯಾದ  ಜನಸಮೂಹವು ಗಾಯಕಿ ವೇದಿಕೆಗೆ ಬರುತ್ತಾರೆಂದು ನಿರೀಕ್ಷಿಸುತ್ತಾ ಹರ್ಷೋದ್ಗಾರ ಮಾಡುತ್ತಿತ್ತು. ಕೆಲವರು ಈ ಕಾರ್ಯಕ್ರಮಕ್ಕೆ ಬರಲೆಂದೆ  AUD 300 ಮೌಲ್ಯದ ಟಿಕೆಟ್‌ಗಳನ್ನು ಸಹ ಖರೀದಿಸಿದ್ದರು. ಹೀಗಿದ್ದಾಗ ಗಾಯಕಿ ಕ್ಲಪ್ತ ಸಮಯಕ್ಕೆ ಬರಬೇಕಿತ್ತು.  ಆದರೆ ಅವರು ಬಹಳ ತಡವಾಗಿ ಬಂದಿದ್ದಾರೆ ಎಂದು ಜನರಿಂದ ಆಕ್ರೋಶ ಕೇಳಿ ಬಂದಿತ್ತು.

ಆದರೆ ಗಾಯಕಿ ಕಾರ್ಯಕ್ರಮಕ್ಕೆ ಬಹಳ ತಡವಾಗಿ ಬಂದಿದ್ದಲ್ಲದೆ ಕಾರ್ಯಕ್ರಮದಲ್ಲಿ ಕೇವಲ 700 ಜನ ಮಾತ್ರವೇ ಇದ್ದಾರೆ. ಈ ಸ್ಥಳ ತುಂಬುವವರೆಗೆ, ನಾನು ಪ್ರದರ್ಶನ ನೀಡುವುದಿಲ್ಲ‌ಎಂದು ತಕರಾರು ಎತ್ತಿರುವುದಾಗಿ ಕಾರ್ಯಕ್ರಮ ಆಯೋಜಕರಾದ ಪೇಸ್ ಡಿ ಸಂದರ್ಶನ ಒಂದರಲ್ಲಿ ಬಹಿರಂಗಪಡಿಸಿದ್ದರು.  ಆಯೋಜಕರ ಕುರಿತಾಗಿ ಗಾಯಕಿ ಆರೋಪಿಸಿರುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನು ಓದಿ: Singer Neha Kakkar: ಗೋಬ್ಯಾಕ್‌ ಎಂದ ಪ್ರೇಕ್ಷಕರು; ಕಾನ್ಸರ್ಟ್ ವೇದಿಕೆಯಲ್ಲಿ ಬಿಕ್ಕಿಬಿಕ್ಕಿ ಅತ್ತ ಗಾಯಕಿ ನೇಹಾ ಕಕ್ಕರ್‌

ಬಾಲಿವುಡ್‌ನ ಖ್ಯಾತ ಗಾಯಕಿ  ನೇಹಾ ಇತ್ತೀಚಿಗೆ ಮೆಲ್ಬೋರ್ನ್‌ನಲ್ಲಿ ರಾತ್ರಿ 7-30ಗೆ ಆಯೋಜಿಸಿದ್ದ ಶೋಗೆ ರಾತ್ರಿ 10 ಗಂಟೆಗೆ ಆಗಮಿಸಿದ್ದರು. ಇದರಿಂದ ಗಾಯಕಿಗಾಗಿ ಅಭಿಮಾನಿಗಳು ಗೋ ಬ್ಯಾಕ್  ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದ್ದರು. ಹೀಗಾಗಿ  ನೇಹಾ ಕಕ್ಕರ್ ವೇದಿಕೆಯಲ್ಲಿಯೇ ಕಣ್ಣೀರು ಹಾಕಿದ್ದರು. ಅಭಿಮಾನಿಗಳಲ್ಲಿ ಗಾಯಕಿ ನೇಹಾ ಕ್ಷಮೆಯಾಚಿಸಿದ್ದರು. ನನ್ನ ಜೀವನದಲ್ಲಿ ಯಾರನ್ನೂ ಕಾಯಿಸಲ್ಲ,ಅಭಿಮಾನಿಗಳನ್ನು ನನಗಾಗಿ ಸುಮಾರು ಹೊತ್ತಿನಿಂದ ಕಾದು ಕುಳಿತಿದ್ದೀರಾ. ಇದು ನನಗೂ ಬೇಸರ ತಂದಿದೆ.  ರಾತ್ರಿಯೆಲ್ಲ ಸಂಗೀತದ ಮೂಲಕ ನಿಮ್ಮೆಲ್ಲರನ್ನು ಮನರಂಜಿಸುವುದಾಗಿ ತಿಳಿಸಿ ಅಭಿಮಾನಿಗಳ ಮನವೊಲಿಸಲು ಪ್ರಯತ್ನಿಸಿದ್ದರು.  ಅಭಿಮಾನಿಗಳ ಆಕ್ರೋಶದಿಂದ ಕಂಗೆಟ್ಟು ನೇಹಾ ಕಕ್ಕರ್ ವೇದಿಕೆಯಲ್ಲಿಯೇ ಕಣ್ಣೀರು ಹಾಕುತ್ತಿರುವ ವಿಡಿಯೊ ಸಹ ಇತ್ತೀಚೆಗೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.