Akshaya Tritiya 2025: ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನಲ್ಲಿ ವಿಶೇಷ ಆಭರಣಗಳ ಮಾರಾಟಕ್ಕೆ ನಟಿ ಅನುಷಾ ರೈ ಚಾಲನೆ
Akshaya Tritiya 2025: ಬೆಂಗಳೂರಿನ ಬಸವನಗುಡಿಯ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ವಿಶೇಷ ಆಭರಣಗಳ ಮಾರಾಟಕ್ಕೆ ವಿಧಾನ ಪರಿಷತ್ ಸದಸ್ಯ, ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಟಿ.ಎ.ಶರವಣ ಹಾಗೂ ಬಿಗ್ ಬಾಸ್ ಖ್ಯಾತಿಯ ನಟಿ ಅನುಷಾ ರೈ ಬುಧವಾರ ಚಾಲನೆ ನೀಡಿದರು.

ಬಸವನಗುಡಿಯ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನಲ್ಲಿ ವಿಶೇಷ ಆಭರಣಗಳ ಮಾರಾಟಕ್ಕೆ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಹಾಗೂ ನಟಿ ಅನುಷಾ ರೈ ಬುಧವಾರ ಚಾಲನೆ ನೀಡಿದರು. (ಫೋಟೋ-ಸುಧಾಕರ್ ದೇವರಾಜ್)


ಬೆಂಗಳೂರಿನ ಬಸವನಗುಡಿಯ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ವಿಶೇಷ ಆಭರಣಗಳ ಮಾರಾಟಕ್ಕೆ ವಿಧಾನ ಪರಿಷತ್ ಸದಸ್ಯ, ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಟಿ.ಎ.ಶರವಣ ಹಾಗೂ ಬಿಗ್ ಬಾಸ್ ಖ್ಯಾತಿಯ ನಟಿ ಅನುಷಾ ರೈ ಬುಧವಾರ ಚಾಲನೆ ನೀಡಿದರು.

ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನಲ್ಲಿ ನೂರಾರು ಗ್ರಾಹಕರು ಆಭರಣಗಳನ್ನು ಖರೀದಿಸಿದರು. ಉಂಗುರ, ಓಲೆ, ವಿವಿಧ ಬಗೆಯ ಚಿನ್ನಾಭರಣಗಳನ್ನು ಗ್ರಾಹಕರು ಖರೀದಿಸಿದ್ದು ಕಂಡುಬಂತು.

ಅಕ್ಷಯ ತೃತೀಯವು ಧಾರ್ಮಿಕ ಮತ್ತು ಆರ್ಥಿಕ ದೃಷ್ಟಿಯಿಂದ ಮಹತ್ವದ ದಿನವಾಗಿರುವುದರಿಂದ ಈ ಶುಭ ಸಂದರ್ಭದಲ್ಲಿ ಚಿನ್ನ ಖರೀದಿ, ದಾನ ಮತ್ತು ಪೂಜೆಯ ಮೂಲಕ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸಲು ಜನರು ಉತ್ಸುಕರಾಗಿರುತ್ತಾರೆ.

ಅಕ್ಷಯ ತೃತೀಯ (Akshaya Tritiya) ಇದನ್ನು ಅಖಾ ತೀಜ್ (Akha Teej) ಎಂದೂ ಕರೆಯುತ್ತಾರೆ, ಹಿಂದೂ ಸಮುದಾಯಕ್ಕೆ ಅತ್ಯಂತ ಶುಭ ಮತ್ತು ಪವಿತ್ರ ದಿನವಾಗಿದೆ. ಈ ವರ್ಷ ಇದನ್ನು ಏಪ್ರಿಲ್ 30 ಬುಧವಾರದಂದು ಆಚರಿಸಲಾಗಿದೆ.

ಅಕ್ಷಯ ತೃತೀಯವು ಒಳ್ಳೆಯ ಅದೃಷ್ಟ (Good Luck) ಮತ್ತು ಯಶಸ್ಸನ್ನು (Success) ತರುತ್ತದೆ ಎಂಬ ನಂಬಿಕೆಯಿದೆ. ಈ ದಿನ ಬಹಳಷ್ಟು ಜನರು ಚಿನ್ನವನ್ನು ಖರೀದಿಸುತ್ತಾರೆ, ಏಕೆಂದರೆ ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದು ಸಂಪತ್ತು ಮತ್ತು ಭವಿಷ್ಯದಲ್ಲಿ ಆರ್ಥಿಕ ಸಮೃದ್ಧಿಯನ್ನು ತರುತ್ತದೆ ಎಂದು ಭಾವಿಸಲಾಗುತ್ತದೆ. ಈ ದಿನ ಖರೀದಿಸಿದ ಚಿನ್ನವು ಎಂದಿಗೂ ಕ್ಷೀಣಿಸದೆ ಮೌಲ್ಯದಲ್ಲಿ ನಿರಂತರವಾಗಿ ಬೆಳೆಯುತ್ತದೆ ಎಂಬ ನಂಬಿಕೆಯೂ ಇದೆ.

‘ಅಕ್ಷಯ’ ಎಂದರೆ ಎಂದಿಗೂ ಕಡಿಮೆಯಾಗದಿರುವುದು. ಆದ್ದರಿಂದ, ಈ ದಿನ ನಡೆಸುವ ಜಪ, ಯಜ್ಞ, ಪಿತೃ-ತರ್ಪಣ, ದಾನ-ಪುಣ್ಯಗಳ ಫಲವು ಎಂದಿಗೂ ಕ್ಷೀಣಿಸದೆ, ವ್ಯಕ್ತಿಯೊಂದಿಗೆ ಶಾಶ್ವತವಾಗಿ ಉಳಿಯುತ್ತದೆ ಎಂದು ನಂಬಲಾಗುತ್ತದೆ.

ಅಕ್ಷಯ ತೃತೀಯವು ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಬರುತ್ತದೆ. ಈ ದಿನ ರೋಹಿಣಿ ನಕ್ಷತ್ರದೊಂದಿಗೆ ಬುಧವಾರ ಬಂದಿದ್ದು, ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನವನ್ನು ಹಿಂದೂ ತ್ರಿಮೂರ್ತಿಗಳಲ್ಲಿ ಸಂರಕ್ಷಕ ದೇವರಾದ ಶ್ರೀ ವಿಷ್ಣುವಿನ ಒಡೆತನದಲ್ಲಿ ಆಚರಿಸಲಾಗುತ್ತದೆ. ಹಿಂದೂ ಪುರಾಣದ ಪ್ರಕಾರ, ತ್ರೇತಾಯುಗವು ಅಕ್ಷಯ ತೃತೀಯ ದಿನದಂದು ಆರಂಭವಾಯಿತು ಎಂದು ನಂಬಲಾಗಿದೆ.

ಬೆಂಗಳೂರಿನಲ್ಲಿ ಬುಧವಾರ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 5 ರೂ. ಇಳಿಕೆ ಕಂಡಿದ್ದು, 8,975 ರೂ. ಇದೆ. 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 6ರೂ. ಇಳಿಕೆಯಾಗಿದ್ದು 9,791 ರೂ. ಆಗಿದೆ. 22 ಕ್ಯಾರಟ್ನ 8 ಗ್ರಾಂ ಚಿನ್ನ 71,800 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 89,750 ರೂ. ಮತ್ತು 100 ಗ್ರಾಂಗೆ 8,97,500 ರೂ. ನೀಡಬೇಕಾಗುತ್ತದೆ.

ಇನ್ನು 24 ಕ್ಯಾರಟ್ನ 8 ಗ್ರಾಂ ಚಿನ್ನ 78,328 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 97,910 ರೂ. ಮತ್ತು 100 ಗ್ರಾಂಗೆ 9,79,100 ರೂ. ಪಾವತಿಸಬೇಕಾಗುತ್ತದೆ.

ಅಕ್ಷಯ ತೃತೀಯದಂದು ಸಂಪತ್ತನ್ನು ಕೊಳ್ಳುವುದಕ್ಕೆ ಸಕಾಲ, ಈ ದಿನ ಸಂಪತ್ತು ಖರೀದಿಸಿದರೆ ಅಕ್ಷಯವಾಗುತ್ತದೆ ಎಂಬ ನಂಬಿಕೆ ಇದೆ. ಅದರಲ್ಲೂ ವಿಶೇಷವಾಗಿ ಬಂಗಾರ ಮತ್ತು ರಿಯಲ್ ಎಸ್ಟೇಟ್ಗೆ ಈ ದಿನ ಹೆಚ್ಚು ಒತ್ತು ನೀಡಲಾಗುತ್ತದೆ.