ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bumrah injury update: ಮೊದಲ 5 ಪಂದ್ಯಗಳಿಗೆ ಬುಮ್ರಾ ಗೈರು!

IPL 2025: ಮಾರ್ಚ್​ 23ರಂದು ಮುಂಬೈ ತಂಡ ಕಣಕ್ಕಿಳಿಯಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್​​ಕಿಂಗ್ಸ್​ ಸವಾಲನ್ನು ಎದುರಿಸಲಿದೆ. ಬುಮ್ರ ಅಲಭ್ಯತೆ ಬಗ್ಗೆ ಫ್ರಾಂಚೈಸಿ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ನೀಡಲ್ಲ. ಆದರೆ ತಂಡದ ಬೌಲಿಂಗ್‌ ಕೋಚ್‌ ಶೇನ್‌ ಬಾಂಡ್‌, ಬುಮ್ರಾ ಮತ್ತೊಮ್ಮೆ ಬೆನ್ನುನೋವಿನ ಗಾಯಕ್ಕೆ ತುತ್ತಾದರೆ ಅವರ ಕ್ರಿಕೆಟ್‌ ವೃತ್ತಿಜೀವನ ಅಂತ್ಯಗೊಳ್ಳಬಹುದು ಎಂದು ಹೇಳಿದ್ದಾರೆ.

Bumrah injury update: ಮೊದಲ 5 ಪಂದ್ಯಗಳಿಗೆ ಬುಮ್ರಾ ಗೈರು!

Profile Abhilash BC Mar 14, 2025 1:24 PM

ಮುಂಬಯಿ: ಯಾರ್ಕರ್‌ ಸ್ಪೆಷಲಿಸ್ಟ್‌, ಮುಂಬೈ ಇಂಡಿಯನ್ಸ್(Mumbai Indians) ತಂಡದ ವೇಗಿ ಜಸ್‌ಪ್ರೀತ್‌ ಬುಮ್ರಾ(Bumrah injury update) ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್(IPL 2025) ಋತುವಿನ ಮೊದಲ ಐದು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಬಾರ್ಡರ್​-ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿ ಬಳಿಕ ಬೆನ್ನು ನೋವಿಗೆ ತುತ್ತಾಗಿದ್ದ ಬುಮ್ರಾ ಚಾಂಪಪಿಯನ್ಸ್ ಟ್ರೋಫಿಯಿಂದಲೂ ಹೊರಗುಳಿದಿದ್ದರು. ಕಳೆದ ವಾರ ಬುಮ್ರಾ ಐಪಿಎಲ್​ನಲ್ಲಿ ಆಡುವುದು ಡೌಟ್ ಎಂದು ಹೇಳಲಾಗಿತ್ತು. ಇದೀಗ ಅವರು 5 ಪಂದ್ಯಗಳ ಬಳಿಕ ತಂಡ ಸೇರಲಿದ್ದಾರೆ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಅಭ್ಯಾಸ ಶಿಬಿರದಲ್ಲಿ ಕಾಣಿಸಿಕೊಂಡಿದ್ದ ಬುಮ್ರಾ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವ ಮುನ್ಸೂಚನೆಯನ್ನು ನೀಡಿದ್ದರು. ಆದರೆ, ಫಿಟ್​​ನೆಸ್ ಪರೀಕ್ಷೆಯಲ್ಲಿ ಬುಮ್ರಾ ಸಂಪೂರ್ಣವಾಗಿ ಗುಣಮುಖರಾಗಿಲ್ಲ ಎಂದು ತಿಳಿದು ಬಂದಿದ್ದು, ಮತ್ತೊಂದಿಷ್ಟು ದಿನಗಳ ಕಾಲ ಅವರು ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಅವರು ಅಲಭ್ಯರಾಗುವುದು ಬಹುತೇಕ ಖಚಿತವಾಗಿದೆ.

ಮಾರ್ಚ್​ 23ರಂದು ಮುಂಬೈ ತಂಡ ಕಣಕ್ಕಿಳಿಯಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್​​ಕಿಂಗ್ಸ್​ ಸವಾಲನ್ನು ಎದುರಿಸಲಿದೆ. ಬುಮ್ರ ಅಲಭ್ಯತೆ ಬಗ್ಗೆ ಫ್ರಾಂಚೈಸಿ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ನೀಡಲ್ಲ. ಆದರೆ ತಂಡದ ಬೌಲಿಂಗ್‌ ಕೋಚ್‌ ಶೇನ್‌ ಬಾಂಡ್‌, ಬುಮ್ರಾ ಮತ್ತೊಮ್ಮೆ ಬೆನ್ನುನೋವಿನ ಗಾಯಕ್ಕೆ ತುತ್ತಾದರೆ ಅವರ ಕ್ರಿಕೆಟ್‌ ವೃತ್ತಿಜೀವನ ಅಂತ್ಯಗೊಳ್ಳಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ IPL 2025: ಎಲ್ಲ 10 ಐಪಿಎಲ್‌ ತಂಡಗಳ ನಾಯಕರ ಪಟ್ಟಿ ಇಲ್ಲಿದೆ

ಮುಂಬೈ ಇಂಡಿಯನ್ಸ್‌ ತಂಡ

ಜಸ್‌ಪ್ರೀತ್‌ ಬುಮ್ರಾ, ಸೂರ್ಯಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯ, ರೋಹಿತ್‌ ಶರ್ಮಾ, ತಿಲಕ್‌ ವರ್ಮಾ, ಟ್ರೆಂಟ್​ ಬೌಲ್ಟ್, ನಮನ್​ ಧೀರ್​, ರಾಬಿನ್​ ಮಿಂಜ್​, ಕರ್ಣ್​ ಶರ್ಮ, ದೀಪಕ್​ ಚಹರ್ ,ವಿಲ್​ ಜಾಕ್ಸ್​ , ಮಿಚೆಲ್​ ಸ್ಯಾಂಟ್ನರ್​ , ರ್ಯಾನ್​ ರಿಕೆಲ್​ಟನ್​ , ಅಶ್ವನಿ ಕುಮಾರ್​, ರೀಸ್​ ಟಾಪ್ಲೆ, ಕೆಎಲ್​ ಶ್ರೀಜಿತ್​ , ರಾಜ್​ ಅಂಗದ್​ ಬಾವ , ಸತ್ಯನಾರಾಯಣ ರಾಜು, ಬೆವನ್​ ಜೇಕಬ್ಸ್​, ವಿಘ್ನೇಶ್​ ಪುಥರ್​, ಅರ್ಜುನ್​ ತೆಂಡೂಲ್ಕರ್​, ಲಿಜಾಡ್​ ವಿಲಿಯಮ್ಸ್​.