ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಭಾರತ ಟೆಸ್ಟ್‌ ತಂಡದಲ್ಲಿ ಸಾಯಿ ಸುದರ್ಶನ್‌ಗೆ ಸ್ಥಾನ ನೀಡಬೇಕೆಂದ ರವಿ ಶಾಸ್ತ್ರಿ!

Ravi Shastri backs Sai Sudarshan for Test Squad: ಇಂಗ್ಲೆಂಡ್‌ ಪ್ರವಾಸದ ಟೆಸ್ಟ್‌ ಸರಣಿಯ ಭಾರತ ತಂಡದಲ್ಲಿ ಯುವ ಬ್ಯಾಟ್ಸ್‌ಮನ್‌ ಸಾಯಿ ಸುದರ್ಶನ್‌ಗೆ ಸ್ಥಾನ ನೀಡಬೇಕೆಂದು ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ ಆಗ್ರಹಿಸಿದ್ದಾರೆ. ಸಾಯಿ ಸುದರ್ಶನ್‌ ಸದ್ಯ ಗುಜರಾತ್‌ ಟೈಟನ್ಸ್‌ ತಂಡದ ಪರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.

ಭಾರತ ಟೆಸ್ಟ್‌ ತಂಡದಲ್ಲಿ ಸುದರ್ಶನ್‌ಗೆ ಸ್ಥಾನ ನೀಡಬೇಕು: ರವಿ ಶಾಸ್ತ್ರಿ!

ಸಾಯಿ ಸುದರ್ಶನ್‌ಗೆ ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನ ನೀಡಬೇಕೆಂದ ರವಿ ಶಾಸ್ತ್ರಿ.

Profile Ramesh Kote May 2, 2025 1:56 PM

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಬಳಿಕ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡ(India Test Team), ಇಂಗ್ಲೆಂಡ್‌ ಪ್ರವಾಸ ಹಮ್ಮಿಕೊಳ್ಳಲಿದೆ. ಇಲ್ಲಿ ಟೀಮ್‌ ಇಂಡಿಯಾ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು (IND vs ENG) ಆಡಲಿದೆ. ಆ ಮೂಲಕ ನಾಲ್ಕನೇ ಅವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಪಯಣವನ್ನು ಆರಂಭಿಸಲಿದೆ. ಈ ಟೆಸ್ಟ್‌ ಸರಣಿಯ ಭಾರತ ತಂಡದಲ್ಲಿ ಎಡಗೈ ಬ್ಯಾಟ್ಸ್‌ಮನ್‌ ಸಾಯಿ ಸುದರ್ಶನ್‌ ಅವರನ್ನು ಆಯ್ಕೆ ಮಾಡಬೇಕೆಂದು ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ ಆಗ್ರಹಿಸಿದ್ದಾರೆ.

ಭಾರತ ತಂಡ ಕಳೆದ ಎರಡು ಟೆಸ್ಟ್‌ ಸರಣಿಗಳಲ್ಲಿ ಹೀನಾಯವಾಗಿ ಸೋಲು ಅನುಭವಿಸಿತ್ತು. 2024ರ ಅಂತ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ದ ತವರು ಟೆಸ್ಟ್‌ ಸೆರಣಿಯನ್ನು 0-3 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿದ್ದ ಭಾರತ ತಂಡ, ನಂತರ ಆಸ್ಟ್ರೇಲಿಯಾ ವಿರುದ್ದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿಯೂ ಸೋಲು ಅನುಭವಿಸಿತ್ತು. ಇದರ ಪರಿಣಾಮ ಟೀಮ್‌ ಇಂಡಿಯಾ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು.

Sunil Joshi: ಕನ್ನಡಿಗ ಸುನಿಲ್‌ ಜೋಶಿ ಟೀಮ್‌ ಇಂಡಿಯಾಕ್ಕೆ ಸ್ಪಿನ್‌ ಕೋಚ್‌?

ಸಾಯಿ ಸುದರ್ಶನ್‌ ತಮಿಳುನಾಡು ಪರ ದೇಶಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆಗಳನ್ನು ಹೊಂದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 39.93ರ ಸರಾಸರಿಯಲ್ಲಿ 1957 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು ದಿಲ್ಲಿ ವಿರುದ್ದ ರಣಜಿ ಪಂದ್ಯದಲ್ಲಿ ದ್ವಿಶತಕವನ್ನು ಬಾರಿಸಿದ್ದಾರೆ. ಅಲ್ಲದೆ ಇಂಗ್ಲೆಂಡ್‌ನಲ್ಲಿ ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಆಡಿದ ಅನುಭವನ್ನು ಸಾಯಿ ಸುದರ್ಶನ್‌ ಹೊಂದಿದ್ದಾರೆ. 2023, 2024ರಲ್ಲಿ ಅವರು ಸರ್ರೆ ತಂಡದ ಒಂದು ಶತಕ ಹಾಗೂ ಒಂದು ಅರ್ಧಶತಕದ ಮೂಲಕ 281 ರನ್‌ಗಳನ್ನು ಕಲೆ ಹಾಕಿದ್ದರು.

ಭಾರತ ಟೆಸ್ಟ್‌ ತಂಡಕ್ಕೆ ಸಾಯಿ ಸುದರ್ಶನ್‌ ಆಯ್ಕೆಯಾಗಬೇಕು

ಐಸಿಸಿ ರಿವ್ಯೂವ್‌ನಲ್ಲಿ ಮಾತನಾಡಿದ ರವಿ ಶಾಸ್ತ್ರಿ, "ನಾನು ಸಾಯಿ ಸುದರ್ಶನ್‌ ಅವರನ್ನು ಎಲ್ಲಾ ಸ್ವರೂಪದ ಕ್ರಿಕೆಟ್‌ನಲ್ಲಿ ನಾನು ನೋಡಿದ್ದೇನೆ. ಅವರು ಅಗ್ರ ದರ್ಜೆಯ ಕ್ಲಾಸ್‌ ಬ್ಯಾಟ್ಸ್‌ಮನ್‌ ರೀತಿ ಅವರು ಕಾಣುತ್ತಾರೆ ಹಾಗೂ ನನ್ನ ಕಣ್ಣು ಯಾವಾಗಲೂ ಅವರ ಮೇಲಿರುತ್ತದೆ. ಇಂಗ್ಲೆಂಡ್‌ನಲ್ಲಿ ಎಡಗೈ ಬ್ಯಾಟ್ಸ್‌ಮನ್‌ ಆಗಿ, ಅಲ್ಲಿನ ಕಂಡೀಷನ್ಸ್‌, ಅವರು ಆಡುವ ಹಾದಿ, ಈ ಎಲ್ಲಾ ಅಂಶಗಳಿಂದ ನಾನು ಅವರನ್ನು ಟೆಸ್ಟ್‌ ತಂಡಕ್ಕೆ ಆಯ್ಕೆ ಮಾಡುತ್ತೇನೆ," ಎಂದು ಹೇಳಿದ್ದಾರೆ.

IPL 2025: ರಾಜಸ್ಥಾನ್‌ ವಿರುದ್ದ 48 ರನ್‌ ಗಳಿಸಿ ವಿಶೇಷ ದಾಖಲೆ ಬರೆದ ಸೂರ್ಯಕುಮಾರ್‌ ಯಾದವ್‌!

ಅರ್ಷದೀಪ್‌, ಖಲೀಲ್‌ ಪರ ರವಿ ಶಾಸ್ತ್ರಿ ಬ್ಯಾಟಿಂಗ್‌

ಭಾರತ ಟೆಸ್ಟ್‌ ತಂಡಕ್ಕೆ ಎಡಗೈ ವೇಗಿ ಅರ್ಷದೀಪ್‌ ಸಿಂಗ್‌ ಹಾಗೂ ಖಲೀಲ್‌ ಅಹ್ಮದ್‌ ಅವರನ್ನು ಕೂಡ ಆಯ್ಕೆ ಮಾಡಬೇಕೆಂದು ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್‌ ಸಲಹೆ ನೀಡಿದ್ದಾರೆ.

"ನಾನು ಎಡಗೈ ಫಾಸ್ಟ್‌ ಬೌಲರ್‌ ಅನ್ನು ನಾನು ನೋಡುತ್ತಿದ್ದೇನೆ. ಯಾವ ಎಡಗೈ ಸೀಮರ್‌ ಉತ್ತಮ ಫಾರ್ಮ್‌ನಲ್ಲಿದ್ದಾರೆಂದು ನಾನು ನೋಡುತ್ತಿದ್ದೇನೆ. ಅಂಥಾ ಬೌಲರ್‌ ಅನ್ನು ನಾನು ಆರನೇ ಆಯ್ಕೆಯ ವೇಗದ ಬೌಲರ್‌ ಆಗಿ ಆಯ್ಕೆ ಮಾಡಲು ನಾನು ಬಯಸುತ್ತೇನೆ. ವೈಟ್‌ ಬಾಲ್‌ನಲ್ಲಿ ಯಾವುದೇ ಬೌಲರ್‌ ಆಗಿದ್ದರೂ ಪರವಾಗಿಲ್ಲ. ಅರ್ಷದೀಪ್‌ ಸಿಂಗ್‌ ಅವರನ್ನು ಕೇವಲ ಸೀಮಿತ ಓವರ್‌ಗಳ ವಿಶೇಷ ವೇಗಿ ಎಂಬುದನ್ನು ನಾನು ಒಪ್ಪುವುದಿಲ್ಲ. ಅವರು ರೆಡ್‌ ಬಾಲ್‌ ದಾಖಲೆಗಳನ್ನು ಕೂಡ ನಾನು ನೋಡಿದ್ದೇನೆ. ಅದರಂತೆ ಖಲೀಲ್‌ ಅಹ್ಮದ್‌ ಕೂಡ ಉತ್ತಮ ಲಯದಲ್ಲಿದ್ದಾರೆ ಹಾಗೂ ಚೆನ್ನಾಗಿ ಬೌಲ್‌ ಮಾಡುತ್ತಿದ್ದಾರೆ. ಇವರನ್ನು ಕೂಡ ನೀವು ಪರಿಗಣಿಸಬಹುದು," ಎಂದು ರವಿ ಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.