ಮಹ್ವಾಶ್ ಜತೆ ಕಾಣಿಸಿದ ಬೆನ್ನಲ್ಲೇ ಚಹಲ್‌ಗೆ ತಕ್ಕ ತಿರುಗೇಟು ಕೊಟ್ಟ ಮಾಜಿ ಪತ್ನಿ
ಧನಶ್ರೀ ವರ್ಮಾ ಅವರಿಂದ ಚಹಲ್ ವಿಚ್ಛೇದನ ಪಡೆದ ಸುದ್ದಿ ಹರಡಿದ್ದ ವೇಳೆ, ಪಾರ್ಟಿಯೊಂದರಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ಆದರೆ, ಆ ಸಮಯದಲ್ಲಿ ಮಹ್ವಾಶ್, ಚಹಲ್ ತನ್ನ ಒಳ್ಳೆಯ ಸ್ನೇಹಿತ ಮಾತ್ರ ಎಂದು ಸ್ಪಷ್ಟನೆ ನೀಡಿದ್ದರು. ಆದರೆ ದುಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ, ಮತ್ತೊಮ್ಮೆ ಚಹಲ್ ಅವರ ಹೊಸ ಸಂಬಂಧದ ಬಗ್ಗೆ ಚರ್ಚೆ ಪ್ರಾರಂಭವಾಗಿದೆ.

ಮುಂಬಯಿ: ನ್ಯೂಜಿಲೆಂಡ್ ಮತ್ತು ಭಾರತ ನಡುವೆ ಭಾನುವಾರ ದುಬೈನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ವೇಳೆ ಭಾರತದ ಸ್ಪಿನ್ನರ್ ಯಜುವೇಂದ್ರ ಚಹಲ್(Yuzvendra Chahal) ಅವರು ರೇಡಿಯೋ ಜಾಕಿ ಮಹ್ವಾಶ್(RJ Mahvash) ಜತೆ ಕಾಣಿಸಿಕೊಂಡಿದ್ದರು. ಇಬ್ಬರು ಜತೆಯಾಗಿ ಕುಳಿತು ಪಂದ್ಯ ವೀಕ್ಷಿಸುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪಂದ್ಯದ ಮುಕ್ತಾಯಕದ ಬಳಿಕ ಮಹ್ವಾಶ್ ಅವರು ಚಹಲ್ ಜತೆ ಫೋಟೊ ಕ್ಕಿಕ್ಕಿಸಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಹೀಗಾಗಿ ಮಾಜಿ ಪತ್ನಿ ಧನಶ್ರೀ ವರ್ಮಾ(Dhanashree Verma)ಗೆ ವಿಚ್ಛೇದನ ಕೊಟ್ಟ ಕೆಲವೇ ದಿನಗಳಲ್ಲಿ ಚಹಲ್ ಮಹ್ವಾಶ್ ಜತೆ ಡೇಟಿಂಗ್ ಆರಂಭಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಇದೀಗ ಧನಶ್ರೀ ವರ್ಮಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಮಾಡುವ ಮೂಲಕ ಚಹಲ್‌ಗೆ ಪರೋಕ್ಷವಾಗಿ ತಿರುಗೇಟು ನೀಡಿದಂತಿದೆ.
ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಾಕಿರುವ ಧನಶ್ರೀ ವರ್ಮಾ, ಹೆಣ್ಣನ್ನು ದೂಷಿಸುವುದು ಯಾವಾಗಲೂ ಫ್ಯಾಷನ್ ಆಗಿದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಚಹಲ್ ವಿಚಾರದಲ್ಲಿ ಟೀಕೆ ಮಾಡುತ್ತಿದ್ದವರಿಗೆ ತಕ್ಕ ಉತ್ತರ ನೀಡಿದ್ದಾರೆ. ಅಲ್ಲದೆ ವಿಚ್ಛೇದನಕ್ಕೆ ತಾನು ಕಾರಣವಲ್ಲ ಎಂದು ಸ್ಪಷ್ಟನೆ ನೀಡಿದಂತಿದೆ.
ಇದನ್ನೂ ಓದಿ IND vs NZ: ಯುಜ್ವೇಂದ್ರ ಚಹಲ್ ಜೊತೆ ಕಾಣಿಸಿಕೊಂಡ ಸುಂದರಿ ಯಾರು? ಇಲ್ಲಿದೆ ಮಾಹಿತಿ...
ಧನಶ್ರೀ ವರ್ಮಾ ಅವರಿಂದ ಚಹಲ್ ವಿಚ್ಛೇದನ ಪಡೆದ ಸುದ್ದಿ ಹರಡಿದ್ದ ವೇಳೆ, ಪಾರ್ಟಿಯೊಂದರಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ಆದರೆ, ಆ ಸಮಯದಲ್ಲಿ ಮಹ್ವಾಶ್, ಚಹಲ್ ತನ್ನ ಒಳ್ಳೆಯ ಸ್ನೇಹಿತ ಮಾತ್ರ ಎಂದು ಸ್ಪಷ್ಟನೆ ನೀಡಿದ್ದರು. ಆದರೆ ದುಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ, ಮತ್ತೊಮ್ಮೆ ಚಹಲ್ ಅವರ ಹೊಸ ಸಂಬಂಧದ ಬಗ್ಗೆ ಚರ್ಚೆ ಪ್ರಾರಂಭವಾಗಿದೆ.
ಧನಶ್ರೀ ಮತ್ತು ಚಹಲ್ 2020ರ ಡಿಸೆಂಬರ್ 11 ರಂದು ದಾಂಪತ್ಯ ಜೀವನಕ್ಕೆ ಕಾಲಿಲಿಟ್ಟಿದ್ದರು. ಚಹಲ್ ಲಾಕ್‌ಡೌನ್ ಸಮಯದಲ್ಲಿ ಧನಶ್ರೀ ಅವರಿಂದ ನೃತ್ಯ ಕಲಿಯಲು ಇಚ್ಛಿಸಿದ್ದರು. ಈ ಸಮಯದಲ್ಲಿ ಇಬ್ಬರ ನಡುವೆ ಆತ್ಮೀಯತೆ ಮೂಡಿ ಪ್ರೀತಿ ಶುರುವಾಗಿತ್ತು.