ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sachin Tendulkar: ಸಚಿನ್ ತೆಂಡೂಲ್ಕರ್ ಶತಕದ ಶತಕಕ್ಕೆ ಇಂದಿಗೆ 13 ವರ್ಷದ ಹರುಷ

On This Day: 2012ರ ಮಾರ್ಚ್‌ 16ರಂದು ಢಾಕಾದಲ್ಲಿ ನಡೆದ ಏಪ್ಯಾಕಪ್‌ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸಚಿನ್ ಶತಕ ಗಳಿಸುವ ಮೂಲಕ 100 ಶತಕ ಪೂರೈಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರೆನಿಸಿಕೊಂಡರು. ಈ ಪಂದ್ಯದಲ್ಲಿ ಸಚಿನ್ 147 ಎಸೆತಗಳಲ್ಲಿ 114 ರನ್ ಗಳಿಸಿದ್ದರು. ಇದರಲ್ಲಿ 12 ಬೌಂಡರಿ, 1 ಸಿಕ್ಸರ್ ಸೇರಿದ್ದವು. ಶತಕಕ್ಕಾಗಿ ಸಚಿನ್ 138 ಎಸೆತಗಳನ್ನು ಆಡಿದರು.

ಸಚಿನ್ ತೆಂಡೂಲ್ಕರ್ ಶತಕದ ಶತಕಕ್ಕೆ ಇಂದಿಗೆ 13 ವರ್ಷ

Profile Abhilash BC Mar 16, 2025 2:55 PM

ಮುಂಬಯಿ: ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್(Sachin Tendulkar) ಅವರು ಹಲವು ದಾಖಲೆಗಳ ಸರದಾರ. ಕ್ರಿಕೆಟ್ ಆಡಿದ ಅತ್ಯುನ್ನತ ಬ್ಯಾಟರ್‌ಗಳ ಪೈಕಿ ಸಚಿನ್ ಹೆಸರು ಎಂದಿಗೂ ಅಗ್ರ ಕ್ರಮಾಂಕದಲ್ಲಿ ಬರುತ್ತದೆ. ಅವರ ಶತಕಕಗಳ ಶತಕಕ್ಕೆ(sachin 100th century) ಇಂದಿಗೆ(On This Day) 13 ವರ್ಷಗಳಾಗಿವೆ,

ಹೌದು, 2012ರ ಮಾರ್ಚ್‌ 16ರಂದು ಢಾಕಾದಲ್ಲಿ ನಡೆದ ಏಪ್ಯಾಕಪ್‌ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸಚಿನ್ ಶತಕ ಗಳಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು. ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರೆನಿಸಿಕೊಂಡರು. ಈ ಪಂದ್ಯದಲ್ಲಿ ಸಚಿನ್ 147 ಎಸೆತಗಳಲ್ಲಿ 114 ರನ್ ಗಳಿಸಿದ್ದರು. ಇದರಲ್ಲಿ 12 ಬೌಂಡರಿ, 1 ಸಿಕ್ಸರ್ ಸೇರಿದ್ದವು. ಶತಕಕ್ಕಾಗಿ ಸಚಿನ್ 138 ಎಸೆತಗಳನ್ನು ಆಡಿದರು.

ಪಂದ್ಯ ಸೋತ ಭಾರತ

ಸಚಿನ್‌ ಈ ಪಂದ್ಯದಲ್ಲಿಯೂ ಶತಕ ಬಾರಿಸಿ ದಾಖಲೆ ನಿರ್ಮಿಸಿದರೂ ಭಾರತ ಪಂದ್ಯ ಸೋತಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಬಾಂಗ್ಲಾ ಪಡೆ 49.2 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು. ಹೀಗಾಗಿ ಸಚಿನ್‌ ಶತಕ ದಾಖಲೆಗಷ್ಟೇ ಸೀಮಿತವಾಯಿತು.

ಸಚಿನ್‌, 2012ರ ಡಿಸೆಂಬರ್‌ನಲ್ಲಿ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. 463 ಏಕದಿನ ಪಂದ್ಯಗಳನ್ನು ಆಡಿರುವ ಅವರು 18,426 ರನ್ ಗಳಿಸಿದ್ದಾರೆ. ಬಳಿಕ 2013ರ ನವೆಂಬರ್‌ನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. 200 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 15,921 ರನ್ ಕಲೆ ಹಾಕಿದ್ದಾರೆ.



ಸಚಿನ್ ತೆಂಡೂಲ್ಕರ್ ಮೊದಲ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದು 1990 ಆಗಸ್ಟ್ 14ರಂದು. ಇಂಗ್ಲೆಂಡ್ ವಿರುದ್ಧ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ119 ರನ್‌ ಬಾರಿಸಿದ್ದರು. ಆಗ ಅವರಿಗೆ ಕೇವಲ 17 ವರ್ಷ ಪ್ರಾಯವಾಗಿತ್ತು.

ಇದನ್ನೂ ಓದಿ Sachin Tendulkar: 51ರ ಹರಯದಲ್ಲೂ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಸಚಿನ್‌

ಹೆಚ್ಚು ಶತಕ ಗಳಿಸಿದ ಆಟಗಾರರು

ಸಚಿನ್ ತೆಂಡೂಲ್ಕರ್:100

ವಿರಾಟ್ ಕೊಹ್ಲಿ: –82*

ರಿಕಿ ಪಾಂಟಿಂಗ್: 71

ಕುಮಾರ ಸಂಗಾಕ್ಕರ: 63

ಜ್ಯಾಕ್ ಕಾಲಿಸ್: 62