Rishabh Pant: ಧೋನಿಯ ಶತಕದ ದಾಖಲೆ ಮುರಿದ ಪಂತ್
ಇದುವರೆಗೂ ಪಂತ್ ಮತ್ತು ಧೋನಿ ಜಂಟಿ ದಾಖಲೆ ಹೊಂದಿದ್ದರು. ಇದೀಗ ಪಂತ್ 7 ಶತಕ ಪೂರ್ತಿಗೊಳಿಸುವ ಮೂಲಕ ಧೋನಿ(6) ಯನ್ನು ಹಿಂದಿಕ್ಕಿದ್ದಾರೆ. ಇದಕ್ಕೂ ಮುನ್ನ ಪಂತ್ ಅವರು ಧೋನಿಯನ್ನು ಹಿಂದಿಕ್ಕಿ ಸೆನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಏಷ್ಯನ್ ವಿಕೆಟ್ ಕೀಪರ್ ಎಂಬ ದಾಖಲೆ ನಿರ್ಮಿಸಿದ್ದರು.


ಲೀಡ್ಸ್: ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಧೋನಿಯ ರನ್ ದಾಖಲೆ ಮುರಿದಿದ್ದ ರಿಷಭ್ ಪಂತ್ ಅವರು ದ್ವಿತೀಯ ದಿನದಾಟ ಶನಿವಾರ ಮತ್ತೊಂದು ದಾಖಲೆ ಮುರಿದಿದ್ದಾರೆ. ಇದು ಕೂಡ ಶತಕದ ಮೂಲಕ. 65 ರನ್ ಗಳಿಸಿದ್ದಲ್ಲಿಂದ ಬ್ಯಾಟಿಂಗ್ ಮುಂದುವರಿಸಿದ ಪಂತ್ ಶತಕ ಬಾರಿಸಿ ಸಂಭ್ರಮಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಭಾರತೀಯ ಕೀಪರ್ ಎನಿಸಿಕೊಂಡರು. ಶತಕಕ್ಕೆ ಒಂದು ರನ್ ಬೇಕಿದ್ದಾಗ ಒನ್ ಹ್ಯಾಂಡೆಡ್ ಸಿಕ್ಸರ್ ಮೂಲಕ ಶತಕ ಸಂಭ್ರಮಿಸಿದರು.
ಇದುವರೆಗೂ ಪಂತ್ ಮತ್ತು ಧೋನಿ ಜಂಟಿ ದಾಖಲೆ ಹೊಂದಿದ್ದರು. ಇದೀಗ ಪಂತ್ 7 ಶತಕ ಪೂರ್ತಿಗೊಳಿಸುವ ಮೂಲಕ ಧೋನಿ(6) ಯನ್ನು ಹಿಂದಿಕ್ಕಿದ್ದಾರೆ. ಇದಕ್ಕೂ ಮುನ್ನ ಪಂತ್ ಅವರು ಧೋನಿಯನ್ನು ಹಿಂದಿಕ್ಕಿ ಸೆನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಏಷ್ಯನ್ ವಿಕೆಟ್ ಕೀಪರ್ ಎಂಬ ದಾಖಲೆ ನಿರ್ಮಿಸಿದ್ದರು.
ಭಾರತ ಪರ ವಿಕೆಟ್ ಕೀಪರ್ ಆಗಿ ಅತ್ಯಧಿಕ ಶತಕ
ರಿಷಭ್ ಪಂತ್-7 ಶತಕ
ಎಂ.ಎಸ್ ಧೋನಿ-6 ಶತಕ
ವೃದ್ಧಿಮಾನ್ ಸಾಹಾ-3 ಶತಕ
HUNDRED for Vice-captain Rishabh Pant! 🫡
— BCCI (@BCCI) June 21, 2025
His 7th TON in Test cricket 👏👏
4⃣0⃣0⃣ up for #TeamIndia in the 1st innings 👌👌
Updates ▶️ https://t.co/CuzAEnBkyu#ENGvIND | @RishabhPant17 pic.twitter.com/IowAP2df6L
23 ವರ್ಷಗಳ ಬಳಿಕ ಮೂರು ಶತಕ
2002ರಲ್ಲಿ ಲೀಡ್ಸ್‌ನಲ್ಲಿ ಭಾರತ ತಂಡ ಆಡಿದ್ದಾಗ ಆ ಪಂದ್ಯದಲ್ಲಿ ಒಟ್ಟು ಮೂವರು ಶತಕ ಬಾರಿಸಿ ಮಿಂಚಿದ್ದರು. ಅಲ್ಲದೆ ಭಾರತ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 46 ರನ್ನುಗಳಿಂದ ಗೆದ್ದು ಸಂಭ್ರಮಿಸಿತ್ತು. ಕನ್ನಡಿಗ ರಾಹುಲ್ ದ್ರಾವಿಡ್ 148, ಸಚಿನ್ ತೆಂಡುಲ್ಕರ್ 193, ನಾಯಕ ಗಂಗೂಲಿ 128 ಶತಕ ಬಾರಿಸಿ ಮಿಂಚಿದ್ದರು. ಇದೀಗ 23 ವರ್ಷಗಳ ಭಾರತೀಯ ಆಟಗಾರರು ಒಂದೇ ಪಂದ್ಯದಲ್ಲಿ ಮೂರು ಶತಕ ಬಾರಿಸಿದ ಸಾಧನೆಗೈದಿದ್ದಾರೆ. ಗಿಲ್, ಜೈಸ್ವಾಲ್ ಮತ್ತು ಪಂತ್ ಶತಕ ಬಾರಿಸಿದ ಸಾಧಕರು.
2002ರ ಪಂದ್ಯದಲ್ಲಿ ಭಾರತ ತ್ರಿವಳಿ ಶತಕದ ನೆರವಿನಿಂದ 628 ರನ್ ಪೇರಿಸಿ ಡಿಕ್ಲೇರ್ ಮಾಡಿತ್ತು. ಇಂಗ್ಲೆಂಡ್ 273ಕ್ಕೆ ಆಲೌಟ್ ಆಗಿ ಫಾಲೋಆನ್‌ಗೆ ಸಿಲುಕಿತು. ದ್ವಿತೀಯ ಇನ್ನಿಂಗ್ಸ್‌ನಲ್ಲೂ ಇಂಗ್ಲೆಂಡ್ ಕಳಪೆ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತವರಿನಲ್ಲಿಯೇ ಹೀನಾಯ ಸೋಲು ಕಂಡಿತ್ತು. ಇದೀಗ ಈ ಪಂದ್ಯದ ಲಕ್ಷಣ ನೋಡುವಾಗಲೂ ಅಂದಿನ ಪಂದ್ಯದಂತೆ ಫಲಿತಾಂಶ ಕಾಣುವ ಸಾಧ್ಯತೆಯೊಂದು ಕಂಡುಬಂದಿದೆ.